ಉಡುಪಿ: ಅಮಾವಸೆಬೈಲಿನಲ್ಲಿ ನಾಪತ್ತೆಯಾಗಿದ್ದ ಯುವಕ ಕಾಡಲ್ಲಿ ಪತ್ತೆ
ಕಳೆದ ಎಂಟುದಿನಗಳ ಹಿಂದೆ ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದ ಯುವಕ ಇಂದು ತೊಂಬಟ್ಟು ಸಮೀಪದ ಕಬ್ಬಿನಾಲೆ ಕಾಡಂಚಿನಲ್ಲಿ ಪತ್ತೆಯಾಗಿದ್ದಾನೆ.
ಇರ್ಕಿಗದ್ದೆಯ ಶೀನಪ್ಪ ನಾಯ್ಕ್ ಎನ್ನುವವರ ಪುತ್ರ ಇಪ್ಪತ್ತೆಂಟು ವರ್ಷದ ವಿವೇಕನಂದ ಮನೆಯಿಂದ ಹೊರ ಹೋಗಿದ್ದ ,ಆ ಬಳಿಕ ನಾಪತ್ತೆಯಾಗಿದ್ದ ,ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಬ್ಬಿನಾಲೆ ಸಮೀಪ ಯುವಕ ಪತ್ತೆಯಾಗಿದ್ದು ಕಳೆದ ಎಂಟು ದಿನಗಳಿಂದ ನೀರು ಆಹಾರವಿಲ್ಲದೇ ಕಾಡಲ್ಲಿಯೇ ಅಲೆದಾಡಿದ್ದ ಎನ್ನಲಾಗಿದೆ ,ಆಹಾರವಿಲ್ಲದೇ ತೀರ ನಿಶಕ್ತನಾಗಿದ್ದು, ಅತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.