ಎಸ್.ಡಿ.ಎಂ ಕಾಲೇಜಿನಲ್ಲಿ ಪರಿಸರ-ಕೃಷಿ ಜಾಗೃತಿ ಅಭಿಯಾನ
ಉಜಿರೆ, ಸೆ.13: ತಾಪಾಮಾನ ಹೆಚ್ಚುವಿಕೆಯಿಂದ ಪ್ರಾಣಿ, ಪಕ್ಷಿ, ಹಾವಿನ ಸಂತತಿ ಅಳಿದು ಹೋಗತ್ತಿದೆ ಇದರಿಂದ ಆಹಾರ ಸರಪಳಿಗೆ ಮತ್ತು ಕೃಷಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಕ್ಲೈಮೇಟ್ ಚೇಂಜ್ ಅಂಡ್ ಯೂತ್, ಕರೆಸ್ಪಾಂಡೆಂಟ್ ನಾಗರಾಜ್ ಕೂವೆ ಹೇಳಿದರು.
ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಅತಿಥಿ ಉಪನ್ಯಾಸ ಮತ್ತು ಪರಿಸರ ಕೃಷಿ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹವಾಮಾನ ಬಲಾವಣೆ ಮತ್ತು ತಾಪಮಾನ ಹೆಚ್ಚುವಿಕೆಯಿಂದ ದ್ಯುತಿಸಂಶ್ಲೇಷಣೆಯು ಸರಿಯಾಗಿ ನಡಯುತ್ತಿಲ್ಲ, ಮರಗಳಿಗೆ ಹಾನಿಯಾಗುತ್ತಿರುವುದಲ್ಲದೆ ಯುವಜನತೆಗೆ ಭವಿಷ್ಯದಲ್ಲಿ ಕಷ್ಟವಾಗಲಿದೆ ಎಂದು ಹೇಳಿದರು. ಅವರ ಈ ಸಂವಾದದ ನಡುವೆ ವೈಲ್ಡ್ ಕರ್ನಾಟಕ ಎಂಬ ಸಾಕ್ಷ್ಯಚಿತ್ರವನ್ನು ತೋರಿಸಿ ಹವಾಮಾನ ಮತ್ತು ಕಾಲದ ಬದಲಾವಣೆ ಅದರಿಂದಾಗುವ ಹಾನಿಯನ್ನು ವಿಧ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪರಿಸರ ಪ್ರೇಮಿ, ಗಾಳಿಪಟ ರಚನೆಕಾರ ದಿನೇಶ್ ಹೊಳ್ಳರವರು ಪಶ್ಚಿಮ ಘಟ್ಟದಲ್ಲಿ ಉಂಟಾಗುವ ಕಾಡ್ಗಿಚ್ಚು ಹಾಗು ಭೂ-ಕುಸಿತ ಹೇಗೆ ಸಂಭವಿಸುತ್ತದೆ, ತುಳುನಾಡಿನ ಜೀವನದಿಯಾದ ನೇತ್ರಾವತಿಯನ್ನು ನಮಗೆ ತಿಳಿಯದಂತೆ ಕೊಲ್ಲುತ್ತಿದ್ದೇನೆ. ಆದ್ದರಿಂದ ಪರಿಸರಕ್ಕೆ ಹಾನಿಯಾಗುವ ಕೆಲಸಗಳನ್ನು ಮಾಡಬೇಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಂಶುಪಾಲರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎ.ಕುಮಾರ್ ಹೆಗ್ಡೆ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಿದರು. ಸಚಿನ್ ಭಿಡೆ, ಪ್ರಗತಿಪರ ಕೃಷಿಕರು, ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಕು.ಶಕುಂತಲಾ, ಅಭಿಲಾಷ್.ಕೆ.ಎಸ್., ಸ್ವಾತಿ, ಮಂಜುಶ್ರೀ ಉಪಸ್ಥಿತರಿದ್ದರು. ವಿಧ್ಯಾರ್ಥಿನಿಯಾದ ಮಂದಾರ ಸ್ವಾಗತಿಸಿ, ಸುದನ್ವ ವಂದಿಸಿ. ಶರಣ್ಯ ನಿರೂಪಿಸಿದರು.