ಪೆಟ್ ಝೋನ್ ಸಾಕು ಪ್ರಾಣಿ ಪಕ್ಷಿಗಳ ಮಾರಾಟ ಮಳಿಗೆ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಇಂಟರ್ ಸಿಟಿ ಕಟ್ಟಡಲ್ಲಿ ಶುಭಾರಂಭಗೊಂಡಿತು. ಇಬ್ರಾಹಿಂ ಶಕೀಲ್ ಇಸ್ಮಾಯಿಲ್ ಮತ್ತು ಸಫ್ವಾನ್ ಇಸ್ಮಾಯಿಲ್ ಮಾಲಕತ್ವ ಪೆಟ್ ಝೋನ್ ಮಳಿಗೆಯನ್ನು ಉದ್ಯಮಿ ಕೆ.ಇಸ್ಮಾಯಿಲ್ ಸಂತೋಷ ನಗರ ಉದ್ಘಾಟಿಸಿದರು. 6 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ
ಸ್ಪಂದನ ಫ್ರೆಂಡ್ಸ್ ಅಶೋಕನಗರ ಮಂಗಳೂರು ಇದರ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಮ ಕಿರೋಡಿಯನ್ ರಸ್ತೆಯ ಮುಂಭಾಗದಲ್ಲಿ ಆಚರಿಸಲಾಯಿತು. ಸಂಸ್ಥೆಯ ಗೌರವ ಅಧ್ಯಕ್ಷರಾದ ಜೋಸ್ಸಿ ಸೋನ್ಸ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ಸಾರ್ವಜನಿಕರು ಭಾಗವಹಿಸಿ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಮ ಕಿರೋಡಿಯನ್ ರಸ್ತೆ ಅಶೋಕ ನಗರ ಇಲ್ಲಿಯ 2 ತಿರುವುಗಳಲ್ಲಿ ವಾಹನ ಚಾಲಕರ ಹಾಗೂ ಸಾರ್ವಜನಿಕರ
ಮಂಗಳೂರು: ಆಟಿ ಆಚರಣೆಯಲ್ಲ, ಅದು ಪ್ರಕೃತಿ ಸಹಜ ಬದುಕು. ಅಂದಿನ ಬಡತನದ ಬದುಕನ್ನು ಇಂದು ಕೆಲವೆಡೆ ಆಚರಣೆಯ ಹೆಸರಿನಲ್ಲಿ ವೈಭವೀಕರಿಸಲಾಗುತ್ತಿದೆ. ಅಂದಿನ ಆಟಿಯ ಬಡತನದ ಬದುಕಿನ ಹಿಂದಿರುವ ವಾಸ್ತವಾಂಶವನ್ನು ಇಂದಿನ ಜನಾಂಗಕ್ಕೆ ತಿಳಿಯಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಪ್ರಕೃತಿಯೆಡೆಗೆ ಮುಖ ಮಾಡಿ ಬದುಕಿದರೆ ಮಾತ್ರ ಮಾನವನ ಎಲ್ಲಾ ಸಮಸ್ಯೆಗಳಿಗೂ ಪ್ರಕೃತಿಯಲ್ಲೇ ಪರಿಹಾರ ಇದೆ ಎಂಬ ಸಂದೇಶವನ್ನು ಅಂದಿನ ಆಟಿಯ ಬದುಕು ನಮಗೆ ನೀಡುತ್ತದೆ ಎಂದು ಕರ್ನಾಟಕ ತುಳು
ನಾಗನಿಗೆ ಪ್ರಿಯವಾದ ಕೇದಗೆಗೆ ನಾಗರ ಪಂಚಮಿಯಂದು ಭಾರೀ ಬೇಡಿಕೆಯಿದ್ದು ಇದೀಗ ಮಂಗಳೂರಿನ ಕಾರ್‍ಸ್ಟ್ರೀಟ್‍ನಲ್ಲಿ ಕೇದಗೆಯ ಬದಲಿಗೆ ಮುಂಡೇವು ಎಲೆಯನ್ನು ಭಕ್ತರಿಗೆ ಮಾರಾಟ ಮಾಡಿ ಯಾಮಾರಿಸಿದ ಕುರಿತ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಪಂಚಮಿ ದಿನದಂದು ನಾಗಾರಾಧನೆಗೆ ಕೇದಗೆ ಎಂದು ಖರೀದಿಸಿ ತಂದ ಬಳಿಕ ಭಕ್ತರೊಬ್ಬರು ಇದನ್ನು ಮುಂಡೇವು ಎಲೆಯೆಂದು ಖಚಿತಪಡಿಸಿದ್ದು ಗ್ರಾಹಕರು ಜಾಗೃತರಾಗಿರುವಂತೆ
ತುಳುನಾಡ ಭಾರ್ಗವ ಎಂದು ಬಿರುದು ಪಡೆದ ಚಿನ್ನು ಕೊಟ್ಟಾರಿಯವರು ತುಳು ಚಿತ್ರರಂಗ ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಹೆಸರುವಾಸಿಯಾಗಿದ್ದು, ತನ್ನದೇ ಆದ ವಿಶಿಷ್ಟ ಕೇಶವಿನ್ಯಾಸದಿಂದ ಗುರುತಿಸಲ್ಪಟ್ಟಿದ್ದ ಚಿನ್ನು ಕೊಟ್ಟಾರಿ ಅವರು, 2018 ಮಿಸ್ಟರ್ ಬಿಯಾರ್ಡ್ ಟೈಟಲ್‍ನ್ನು ಮುಡಿಗೇರಿಸಿಕೊಂಡಿದ್ದರು. ಸರಿಸುಮಾರು 10 ವರ್ಷಗಳಿಂದ ತಾನು ಬಿಟ್ಟ ಕೇಶವನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ವಿಶ್ವಹಿಂದೂ ಪರಿಷತ್ ಮುಖಾಂತರ ಕೇಶದಾನ ಮಾಡಿ ಮೆಚ್ಚುಗೆಗೆ
ಬೆಂಗ್ರೆ: ಬೇಂಗ್ರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಎಸ್.ಐ.ಓ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಬೆಂಗ್ರೆಯ ಶಾಲೆಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಶಾಲೆಯ ಸುತ್ತಮುತ್ತಲಿನ ಜನರು ಮತ್ತು ಆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೆÇೀಷಕರು ಭಾಗವಹಿಸಿ ತಮ್ಮ ಮಕ್ಕಳ ಶೈಕ್ಷಣಿಕ ಹಕ್ಕಿನ ಲಭಿಸುವಿಕೆಗೆ ಎಸ್.ಐ.ಓ ಸಂಘಟನೆಯೊಂದಿಗೆ ಜೊತೆಗೂಡಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಸುರತ್ಕಲ್ ಬ್ಲಾಕ್ ಕಿಸಾನ್ ಘಟಕದ ವತಿಯಿಂದ ಸುರತ್ಕಲ್ ಪಡ್ರೆಯಲ್ಲಿ ಸೌಹಾರ್ದ ಆಟಿಕೂಟ, ಗ್ರಾಮೀಣ ಆಟೋಟ ಸ್ಪರ್ಧೆ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು ಸೌಹಾರ್ದ ಆಟಿಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪರಿಸ್ಪರ ಅರಿತು ಬಾಳುವ, ಸೌಹಾರ್ದತೆಯಿಂದ ಬಾಂಧವ್ಯವನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಸುರತ್ಕಲ್ ಬ್ಲಕ್ ಕಾಂಗ್ರೆಸ್ ಅಧ್ಯಕ್ಷ
ಮಂಗಳೂರು ನಗರದ ಪಚ್ಚನಾಡಿ ದೇವಿನಗರದಲ್ಲಿ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಸಹಕಾರದಲ್ಲಿ ಶ್ರೀ ದೇವಿ ಮಾತೃ ಮಂಡಳಿ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪಚ್ಚನಾಡಿ ಇವರ ವತಿಯಿಂದ ಪಚ್ಚನಾಡಿ ದೇವಿನಗರದ ಕೇಂದ್ರ ಮೈದಾನದಲ್ಲಿ ಮಹಿಳೆಯರಿಗಾಗಿ ನಡೆದ ವಿಶೇಷ ಆಟೋಟ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಿತು. ಕುಮಾರಿ ತನಿಷ್ಕ ಆರ್ ಕುಲಾಲ್ ಹಾಗೂ ಸಾನ್ವಿ ಎಮ್ ಇವರು ಶ್ರೀ ಗಣೇಶನ ಸ್ತುತಿಃ ಮಾಡಿದರು. ಶ್ರೀಮತಿ ಭವ್ಯಾ ಅವರು ದೀಪ ಬೆಳಗಿಸಿ ಕಾರ್ಯಕ್ರಮ
ಮಂಗಳೂರು ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ , ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ವೀಡಿಯೊ ಮಾಡಿದ ಪ್ರಕರಣಕ್ಕೆ ಬಗ್ಗೆ ಮಾತನಾಡಿ, ಪಕ್ಕದ ಮನೆಯ ಮಹಿಳೆಯು ರಾತ್ರಿ 11.30-12 ಗಂಟೆಯ ಸಮಯದಲ್ಲಿ ತನ್ನ ಮನೆಯ ಬಚ್ಚಲಿನಲ್ಲಿ ಸ್ನಾನ ಮಾಡುತಿದ್ದ ವೇಳೆ ಮೊಬೈಲ್ ಕ್ಯಾಮರಾ ಗಮನಿಸಿದ ಮಹಿಳೆ ಕಿರುಚಾಡಿದ್ದು, ಈ ವೇಳೆ ಸ್ಥಳೀಯರು ನೆರೆಮನೆಯ
ಮಂಗಳೂರು ಜಂಕ್ಷನ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ಆಗಸ್ಟ್ 6ರಂದು ಶಿಲಾನ್ಯಾಸ ನೆರವೇರಲಿದೆ.\ ರೈಲು ನಿಲ್ದಾಣದಲ್ಲಿ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ರವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಈ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು ಸುಮಾರು ರೂ. 19.32




























