Home Posts tagged #mudabidre (Page 4)

ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷಾ ಫಲಿತಾಂಶ,ಆಳ್ವಾಸ್ ನ ಸಾಧನೆ.

ಮೂಡುಬಿದಿರೆ: ನವೆಂಬರ್ 2022 ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ 10 ಜನ ವಿದ್ಯಾರ್ಥಿಗಳು ಗ್ರೂಪ್ -01 ಮತ್ತು ಗ್ರೂಪ್-02 ವಿಭಾಗದಲ್ಲಿ ಉತ್ತೀರ್ಣರಾಗಿ, 32.25% ಫಲಿತಾಂಶ ಪಡೆದಿದ್ದಾರೆ. ಕಾಲೇಜಿನ ಬಿ.ಕಾಂ. ಪ್ರೊಫೆಶನಲ್ ವಿದ್ಯಾರ್ಥಿಗಳಾದ ಆರನ್ ರೇಗೋ(486), ಚೇತನಾ ಕೋಡಿಹಳ್ಳಿ(471), ತುಳಸಿ(446), ಲೋಹಿತ್ ಈಶ್ವರ್

ಬಳಕೆದಾರರ ಜಾಗೃತಿ ವೇದಿಕೆ-ಅಧ್ಯಕ್ಷರಾಗಿ ಅರುಣ್ ಪ್ರಕಾಶ್ ಶೆಟ್ಟಿ ಆಯ್ಕೆ

ಮೂಡುಬಿದಿರೆ: ಮೂಲ್ಕಿ ತಾಲೂಕು ಹಾಗೂ ಮೂಡುಬಿದಿರೆ ತಾಲೂಕುಗಳನ್ನು ಒಳಗೊಂಡ ಬಳಕೆದಾರರ ಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಮೂಡುಬಿದಿರೆಯ ಅರುಣ್ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಡಾ.ಶಿವರಾಜ್ ಅರಸು ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳು: ಯು ಪದ್ಮನಾಭ ಶೆಟ್ಟಿ( ಗೌರವಾಧ್ಯಕ್ಷರು), ಕೆ.ವೇದವ್ಯಾಸ ಉಡುಪ, ಜೈಸನ್ ತಾಕೋಡೆ(ಉಪಾಧ್ಯಕ್ಷರು), ಡಾ.ರವೀಶ್ ಕುಮಾರ್ ಎಂ.( ಸಂಚಾಲಕರು), ದಯಾನಂದ ನಾಯ್ಕ್( ಜೊತೆ ಕಾರ್ಯದರ್ಶಿ), ಅಶೋಕ್ ಕಟೀಲ್( ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ.

ಮೂಡುಬಿದರೆ – ಮಾರ್ಕೆಟ್‍ನಲ್ಲಿ ರಾಶಿ ಹಾಕಿರುವ ಗುಜರಿ ವಸ್ತು ತೆರವುಗೊಳಿಸಲು ಕ್ರಮ : ಪುರಸಭಾ ಸದಸ್ಯ ರಾಜೇಶ್ ನಾಯ್ಕ್

ಮೂಡುಬಿದಿರೆ: ಸ್ವರಾಜ್ಯ ಮೈದಾನದ ಮಾರ್ಕೆಟ್ ನಲ್ಲಿ ಗುಜರಿ ಅಂಗಡಿಯಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ರಾಶಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗಿದೆ. ರಾಶಿ ಹಾಕಿರುವ ಗುಜರಿ ವಸ್ತುಗಳನ್ನು ತೆರವುಗೊಳಿಸುವಂತೆ ಸದಸ್ಯ ರಾಜೇಶ್ ನಾಯ್ಕ್ ಪುರಸಭಾ ಸಾಮಾನ್ಯ ಸಭೆಯಲ್ಲಿ ತಿಳಿಸಿದರು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಪುರಸಭಾ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದರು.

ಮಂಗಳೂರಿನಿಂದ ಬೆಂಗಳೂರಿಗೆ ಭಾವೈಕ್ಯತಾ ಜಾಥ

ಮೂಡುಬಿದಿರೆ: ಬಿ.ಜೆ.ಪಿ ಶಾಸಕರು, ಸಚಿವರುಗಳಿಗೆ ಈ ದೇಶದ, ರಾಜ್ಯದ, ಜಿಲ್ಲೆಯ ಮೂಲಭೂತ ಸಮಸ್ಯೆಗಳಾದ ಬೆಲೆ ಏರಿಕೆಯನ್ನು ತಡೆಯಲಾಗುತ್ತಿಲ್ಲ, ಕೋಟ್ಯಾಂತರ ರೂಪಾಯಿ ಕಾಮಗಾರಿ, ಭ್ರಷ್ಟಚಾರಗಳನ್ನು ಮಾಡುವ ಮೂಲಕ ಜನರ ಸಮಸ್ಯೆಯನ್ನು ಬಗೆಹರಿಸಲಾಗದೇ ಜನರ ನಡುವೆ ಭಾವನಾತ್ಮಕ ವಿಷಯಗಳಾದ ಲವ್ ಜಿಹಾದ್, ಗೋಹತ್ಯೆಯಂತಹ ವಿಷ ಬೀಜವನ್ನು ಬಿತ್ತುವ ಕೆಲಸ ಸ ಮಾಡುತ್ತಿದ್ದಾರೆಂದು ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಕಿಡಿಕಾರಿದರು. ಅವರು ಜನಾಂದೋಲನಾಗಳ

ಮಂಗಳೂರು ವಿವಿ ಅಂತರ ಕಾಲೇಜು ಸಾಂಸ್ಕøತಿಕ ವೈವಿಧ್ಯ ಸ್ಪರ್ಧೆ “ಧವಲಾ ಸಿರಿ-2023”

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಮಹಾವಿದ್ಯಾಲಯ ಹಾಗೂ ಲಲಿತಸಂಘ ಇದರ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಸಾಂಸ್ಕ್ರತಿಕ ವೈವಿಧ್ಯ ಸ್ಪರ್ಧೆ “ಧವಲಾ ಸಿರಿ-2023” ನ್ನು ಶಾಸಕ ಉಮಾನಾಥ್ ಎ ಕೋಟ್ಯಾನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮಲ್ಲಿರುವ ಸಾಮರ್ಥ್ಯವನ್ನು ಇನ್ನೂ ಉತ್ತಮ ಪಡಿಸಲು ಇರುವಂತಹ ಅವಕಾಶವೇ ಸ್ಪರ್ಧೆ. ಕೇವಲ ಸ್ಪರ್ಧಿಸಿ ಬಹುಮಾನ ಪಡೆಯುವುದೊಂದೇ ಸ್ಪರ್ಧೆಗಳ ಉದ್ದೇಶವಾಗಿರಬಾರದು ಎಂದ ಅವರು

ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್

ಮೂಡುಬಿದಿರೆ: ಮಹಾರಾಷ್ಟ್ರ ದ ಪುಣೆಯಲ್ಲಿರುವ ನೇತಾಜಿ ಸುಭಾಸ್ ಚಂದ್ರ ಬೋಸ್ ಮಿಲಿಟರಿ ಸ್ಕೂಲ್ ಸ್ಟೇಡಿಯಂ ನಲ್ಲಿ ನ್ಯಾಷನಲ್ ಕರಾಟೆ ಫೆಡರೇಶನ್ ಒಫ್ ಇಂಡಿಯಾ ಇತ್ತೀಚೆಗೆ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮೂಡುಬಿದಿರೆಯ ಆಲ್ ಬಿರ್ರ್ ಆಂಗ್ಲ ಮಾಧ್ಯಮ ಶಾಲೆ ಯ ವಿದ್ಯಾರ್ಥಿ ಮೊಹಮ್ಮದ್ ನಹ್ ಯಾನ್ 8 ವರ್ಷ ವಯೋಮಿತಿಯ 20 ಕೆಜಿ ಕುಮಿಟೆ ವಿಭಾಗ ದಲ್ಲಿ ಚಿನ್ನದ ಪದಕ ಹಾಗೂ ಕಟ ವಿಭಾಗ ದಲ್ಲಿ ಬೆಳ್ಳಿ ಪಡೆದು ರಾಜ್ಯಕ್ಕೆ ಹಾಗೂ ಶಾಲೆ

ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಕಾರು ಅಪಘಾತ : ಕಾರು ಚಾಲಕ ದಿವಾಕರ್ ಶೆಟ್ಟಿ ಮೃತ್ಯು

ಮೂಡುಬಿದಿರೆ: ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಕಾರೊಂದು ರಸ್ತೆಯಲ್ಲಿ ಪಲ್ಟಿಯಾಗಿ 15 ಅಡಿ ಆಳದಲ್ಲಿದ್ದ ಶಾಲಾ ಮೈದಾನಕ್ಕೆ ಬಿದ್ದ ಪರಿಣಾಮವಾಗಿ ಚಾಲಕ ಮೃತಪಟ್ಟ ಘಟನೆ ನಿನ್ನೆ (ಭಾನುವಾರ) ರಾತ್ರಿ ತಾಲೂಕಿನ ಕಡಂದಲೆಯಲ್ಲಿ ನಡೆದಿದೆ. ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಗಂದಾಡಿ ನಿವಾಸಿ ದಿವಾಕರ ಶೆಟ್ಟಿ (58ವ) ಮೃತಪಟ್ಟ ದುರ್ದೈವಿ. ಕಡಂದಲೆ ಗ್ರಾಮದ ಜೋಡಿಕಟ್ಟೆ ಮುಕ್ಕಡಪ್ಪು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಿ ಬಿ. ರಸ್ತೆಯ ಬಳಿಯಲ್ಲಿ ಘಟನೆ ನಡೆದಿದ್ದು

ಗುತ್ತಿಗೆದಾರನನ್ನು ಹೊಗಳಿದ ಸುಪ್ರಿಂ ಕೋಟ್ ೯ನ ಮುಖ್ಯ ನ್ಯಾಯಾಧೀಶರು

ಮೂಡುಬಿದಿರೆಯ ವಕೀಲರ ಸಂಘದ ವತಿಯಿಂದ ರೂ 3 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಕೀಲರ ಭವನದ ಕಾಮಗಾರಿ ಅಚ್ಚುಕಟ್ಟಾಗಿ ಒಳ್ಳೆಯ ರೀತಿಯಲ್ಲಿ ನಡೆದಿದೆ ನಿಮಗೆ ಅಭಿನಂದನೆಗಳು ಎಂದು ಕಟ್ಟಡ ನಿರ್ಮಾಣದ ಗುತ್ತಿಗೆದಾರ, ಬಿಮಲ್ ಕನ್ಟ್ರಕ್ಷನ್ ನ ಪ್ರವೀಣ್ ಅವರನ್ನು ಸುಪ್ರಿಂ ಕೋಟ್ ೯ನ ಮುಖ್ಯ ನ್ಯಾಯಾಧೀಶ ಅಬ್ದುಲ್ ನಝೀರ್ ಅವರು ಅಭಿನಂದಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಡಿಸೆಂಬರ್ 30ರಂದು ವಕೀಲರ ಭವನವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ

ಹಿರಿಯ ಯಕ್ಷಗಾನ ಕಲಾವಿದ ಕಟ್ಟಣಿಗೆ ಸಂಜೀವ ಪ್ರಭು ನಿಧನ

ಮೂಡುಬಿದಿರೆ: ಹಿರಿಯ ಯಕ್ಷಗಾನ ಕಲಾವಿದ ಪ್ರಸಂಗಕರ್ತ ಇರುವೈಲು ಕಟ್ಟಣಿಗೆ ಸಂಜೀವ ಪ್ರಭು(83) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ಇರುವೈಲು ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿ, ಸೇವಾ ರೂಪದಲ್ಲಿ ಕಟೀಲು ಮತ್ತು ಸುರತ್ಕಲ್ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಇರುವೈಲು ಕ್ಷೇತ್ರ ಮಹಾತ್ಮೆ, ನಾಗಲಿಂಗೇಶ್ವರ ಮಹಿಮೆ, ರಕ್ತೇಶ್ವರಿ ಕಾರ್ಣಿಕ ಸೇರಿದಂತೆ ಹಲವು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಸಂಜೀವ ಪ್ರಭು ಅವರು ವೃತ್ತಿಯಲ್ಲಿ

ಜಾಂಬೂರಿಯಲ್ಲಿ ಜೀವನ್‍ರಾಂ ಸುಳ್ಯ ಅವರಿಂದ ರಂಗ ತರಬೇತಿ

ವಿದ್ಯಾಗಿರಿ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022 ಕಾರ್ಯಕ್ರಮದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ಸಾರಥ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಶ್ರೀಲಂಕಾ , ಕೊರಿಯಾ, ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ರಂಗ ವ್ಯಾಯಾಮ, ಗೀತಾಭಿನಯ , ರಂಗ ಚಾಲನೆ ,