Home Posts tagged #padubidre (Page 4)

ಮೀನಿನ ನೀರು ಚೆಲ್ಲಿಕೊಂಡು ಹೋಗುತ್ತಿದ್ದ ವಾಹನಗಳಿಗೆ ದಂಡ

ಮೀನು ಸಾಗಾಟ ವಾಹನಗಳು ಹೆದ್ದಾರಿ ಎಲ್ಲೆಡೆ ಮೀನಿನ ನೀರನ್ನು ಚೆಲ್ಲಿಕೊಂಡು ಹೋಗುತ್ತಿದ್ದ ವಾಹನಗಳನ್ನು ಉಚ್ವಿಲದಲ್ಲಿ ತಡೆದ ಪೊಲೀಸರು ದಂಡ ವಿಧಿಸಿದ್ದಾರೆ.ಕೇರಳ ರಾಜ್ಯದಲ್ಲಿ ಹೆದ್ದಾರಿಯಲ್ಲಿ ಮೀನಿನ ನೀರು ಚೆಲ್ಲಿಕೊಂಡು ಹೋಗುವ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಯಲ್ಲಿ ಇರುವುದರಿಂದ ಅಲ್ಲಿ ಯಾವುದೇ ಕಾರಣಕ್ಕೆ ಹೆದ್ದಾರಿಗೆ ಚೆಲ್ಲದ ಮೀನಿನ ನೀರು ಇಲ್ಲಿ

ಪಡುಬಿದ್ರಿಯಲ್ಲಿ ಈದ್ ಮಿಲಾದ್ ಸಂಭ್ರಮ…

ಪ್ರವಾದಿಯವರ ಜನ್ಮ ದಿನಾಚರಣೆಯ ಅಂಗವಾಗಿ ಪಡುಬಿದ್ರಿಯ ಕಂಚಿನಡ್ಕದಿಂದ ಆರಂಭಗೊಂಡ ಜಾಥದಲ್ಲಿ ನೂರಾರು ಮುಸ್ಲಿಂ ಭಾಂದವರು ಭಾಗವಹಿಸಿದ್ದು, ದ್ವಿಚಕ್ರ ವಾಹನ ಸಹಿತ ಅಟೋ ರಿಕ್ಷಾಗಳು ಈ ಜಾಥದಲ್ಲಿ ಪಾಲ್ಗೊಂಡಿದ್ದವು. ಈ ಬಗ್ಗೆ ಮಾಹಿತಿ ನೀಡಿದ ಉರ್ದು ಶಾಲಾ ಮುಖ್ಯ ಶಿಕ್ಷಕ ಶಫಿಯುಲ್ಲಾ ಎಂಬವರು, ಲೋಕಕ್ಕೆ ಒಳ್ಳೆಯ ವಿಚಾರಗಳನ್ನು ಸಾರಿದ ಪ್ರವಾದಿಯವರ ಜನ್ಮ ದಿನಾಚರಣೆಯನ್ನು ಪಡುಬಿದ್ರಿ ಜಮಾತ್ ಮುಖಾಂತರ ಬಹಳ ಅದ್ಧೂರಿಯಾಗಿ ಆಚರಿಸುತ್ತಿದ್ದು, ಈ ದಿನವೂ ಕಂಚಿನಡ್ಕದಿಂದ

ಪಡುಬಿದ್ರಿ ಬಾಲ ಗಣಪನ ಭವ್ಯ ಶೋಭಾಯಾತ್ರೆ: ಎಲ್ಲೆಲ್ಲೋ ಭಜನಾ ನೃತ್ಯಗಳದ್ದೇ ಕಲರವ

ಎಲ್ಲಾ ಕಡೆ ವಿಜಯದಶಮಿಯಂದು ತಾಯಿ ಶಾರದೆಯ ವಿಜ್ರಂಃಣೆಯ ಶೋಭಾಯಾತ್ರೆಗಳು ನಡೆಯುತ್ತಿದ್ದರೆ ಪಡುಬಿದ್ರಿಯಲ್ಲಿ ಮಾತ್ರ ಬಾಲಗಣಪನ ಶೋಭಾಯಾತ್ರೆ ವಿವಿಧ ಧಾರ್ಮಿಕ ಚಿಂತನೆಯ ತಂಡಗಳಿಂದ ಭಜನಾ ಕುಣಿತಗಳು ಭಕ್ತ ಸಮೂಹವನ್ನು ಮಂತ್ರ ಮುಗ್ದರನ್ನಾಗಿಸಿದೆ. ಗುಡ್ಡಕ್ಕೆ ದನ ಕಾಯಲು ಹೋದ ಮಕ್ಕಳು ಸಮಯ ಕಳೆಯಲು ಆಟಕ್ಕಾಗಿ ಪ್ರತಿಷ್ಠೆ ಮಾಡಿದ ಗಣಪನೇ ಇಂದು ಗುಡ್ಡ ಗಣಪನಾಗಿಯೂ…ಮಕ್ಕಳು ಪೂಜಿಸಿದ್ದರಿಂದ ಬಾಲ ಗಣಪನಾಗಿಯೂ ಲಕ್ಷಾಂತರ ಭಕ್ತಾಧಿಗಳ ಕಷ್ಟ ಕಾರ್ಪಣ್ಯಗಳನ್ನು ದೂರ

ಉಚ್ಚಿಲದಲ್ಲಿ ಪಾನಮತ್ತರ ವಿರುದ್ಧ ಪೊಲೀಸ್ ಕ್ರಮ

ಮೇಲಾಧಿಕಾರಿಗಳ ಸೂಚನೆಯಂತೆ ಫೀಲ್ಡ್ ಗೆ ಇಳಿದ ಪಡುಬಿದ್ರಿ ಪೊಲೀಸರಿಗೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರನ್ನು ಪತ್ತೆ ಹಚ್ಚಿದ್ದಾರೆ. ಪಡುಬಿದ್ರಿ ಎಸ್ಸೈ ಪುರುಷೋತ್ತಮ ತಂಡ ತಡರಾತ್ರಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ಯಚರಣೆ ಆರಂಭಿಸಿದಾಗ ಬಹುತೇಕ ದ್ವಿಚಕ್ರ ಸವಾರರು ಮದ್ಯ ಸೇವನೆ ಮಾಡಿರುವುದು ಪರೀಕ್ಷೆಯಿಂದ ಕಂಡು ಬಂದಿದೆ. ಇದೀಗ ಹಲವರ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪಘಾತ ಪ್ರಕರಣಗಳ ಸಂಖ್ಯೆ ಈ ಪ್ರದೇಶದಲ್ಲಿ

ಪಡುಬಿದ್ರಿ ಕೆಪಿಎಸ್ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ : ಪರಿಶೀಲನೆ

ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರೇಗೌಡ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪಡುಬಿದ್ರಿಯ ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಮೂಲಸೌಕರ್ಯಗಳಿಲ್ಲದೆ ನೆಲದಲ್ಲಿ ಕುಳಿತುಕೊಂಡು ಪಾಠ ಕೇಳುವ ಪರಿಸ್ಥಿತಿ ಇದೆ. ಅಲ್ಲದೆ ಈ ಶಾಲೆಯ ಕಟ್ಟಡ ತೀರ ಹಳೆಯದಾಗಿದ್ದು, ನಾದುರಸ್ಥಿಯಲ್ಲಿದೆ. ಕೂಡಲೇ ಸೂಕ್ತ ಹೊಸ ಕಟ್ಟಡವನ್ನು ರಚಿಸುವಂತೆ ಆಗ್ರಹಿಸಿ ಸಾಮಾಜಿಕ

ಅನಾರೋಗ್ಯ ಪೀಡಿತ ವಯೋವೃದ್ದೆಯ ನೋವಿಗೆ ಸ್ಪಂದಿಸಿದ ಯುವಕರು

ಕಾಪು :ಪುರಾಸಭಾ ವ್ಯಾಪ್ತಿಯ ಮಲ್ಲಾರಿನ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಅನಾರೋಗ್ಯ ಪೀಡಿತ ವಯೋವೃದ್ದೆಯ ನೋವಿಗೆ ಸ್ಪಂದಿಸುವ ಮೂಲಕ ಯುವಕರು ಮಾದರಿಯಾಗಿದ್ದಾರೆ. ಕೊಂಬಗುಡ್ಡೆ ಪ್ರಶಾಂತ್ ಪೂಜಾರಿ, ಪುರಸಭಾ ಸದಸ್ಯ ಉಮೇಶ್ ಪೂಜಾರಿ, ಶಿವಾನಂದ ಪೂಜಾರಿ ಸಹಿತ ಯುವಕರ ತಂಡ ಒಂಟಿ ಮಹಿಳೆಯ ಅನಾರೋಗ್ಯ ಪರಿಸ್ಥಿತಿಯನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕುಟುಂಬ ವರ್ಗದಿಂದ ದೂರವಾಗಿದ್ದ ಲೀಲಾ ಪೂಜಾರ್ತಿ ತೀವ್ರ ಅನಾರೋಗ್ಯದಿಂದ

ಮೋದಿ ಮಂಗಳೂರು ಭೇಟಿ ಹಿನ್ನಲೆ: ಪಡುಬಿದ್ರಿಯಿಂದ ಘನ ವಾಹನಗಳಿಗೆ ಪ್ರವೇಶ ನಿಷೇಧ

ಉಡುಪಿ ಕಡೆಯಿಂದ ಮಂಗಳೂರು ಕಡೆ ಪ್ರಯಾಣಿಸುವ ಘನ ವಾಹನಗಳ ಸಹಿತ ಗೂಡ್ಸ್ ವಾಹನಗಳಿಗೆ ಪ್ರವೇಶ ನಿರಾಕರಿಸಿ ಕಾರ್ಕಳ ರಸ್ತೆಯಾಗಿ ಪ್ರಯಾಣ ಮುಂದುವರಿಸಲು ಪೊಲೀಸರು ಸೂಚನೆ ನೀಡಿದ್ದರೂ ಸುತ್ತು ಬಳಸಿ ಹೋಗುವುದನ್ನು ತಪ್ಪಿಸಲು ಬ್ರಹತ್ ಟ್ರಕ್ ಗಳು ಕಾರ್ಕಳ ರಸ್ತೆಯುದ್ಧಕ್ಕೂ ಹೆದ್ದಾರಿಗಂಟಿಕೊಂಡೇ ನಿಂತಿರುವುದರಿಂದ ಮತ್ತೊಂದು ಸಮಸ್ಯೆ ಸೃಷ್ಠಿಗೆ ಸಿದ್ದತೆ ನಡೆಸಿದಂತ್ತಿದೆ.ಮುಂಜಾನೆ ಆರು ಗಂಟೆಯಿಂದ ಸಂಜೆ ಆರರ ವರಗೆ ಈ ಪ್ರಕೃಯೆ ನಡೆಯಲಿರುವುದರಿಂದ ಪಡುಬಿದ್ರಿ

ಶತ ದಿನೋತ್ಸವದ ಸಂಭ್ರಮದಲ್ಲಿ ರಾಜ್ ಸೌಂಡ್ಸ್ ಮತ್ತು ಲೈಟ್ಸ್

ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ ಇದರ ವತಿಯಿಂದ “ರಾಜ್ ಸೌಂಡ್ಸ್ ಮತ್ತು ಲ್ಯೆಟ್ಸ್” ತುಳು ಚಲನಚಿತ್ರದ ಶತದಿನೋತ್ಸವದ ಸಂಭ್ರಮ ವನ್ನು ಪಡುಬಿದ್ರಿ ಭಾರತ್ ಮಾಲ್ ಮುಂಭಾಗದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಪಡುಬಿದ್ರಿ ಪೇಟೆಯಿಂದ ಭಾರತ್ ಮಾಲ್ ವರಗೆ ಕಾಲ್ನಡಿಗೆ ಜಾಥ ನಡೆಯಿತು..ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದರು.. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿಮಲ ಕೆ ಸಾಲ್ಯಾನ್,

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಟಫ್ ರೂಲ್ಸ್

ಎಲ್ಲೆಲ್ಲೋ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆಗಳು ಆಗುತ್ತಿದಂತೆ, ಅಮಲು ಪದಾರ್ಥ ಸೇವಿಸುವವರಿಗೆ ಹಾಗೂ ಸಂಘಟಕರಿಗೆ ಪೊಲೀಸ್ ಎಚ್ಚರಿಕೆ ನೀಡಿದ್ದು, ಯಾವುದೇ ಸಂದರ್ಭದಲ್ಲಿ ಅಮಲು ಪದಾರ್ಥ ಸೇವಿಸಿ ಕಾರ್ಯಕ್ರಮಕ್ಕೆ ಭಾಗವಹಿಸುವಂತಿಲ್ಲ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ನೀಡಿದ್ದಾರೆ. ಗಣೇಶೋತ್ಸವ ಹಿನ್ನಲೆಯಲ್ಲಿ ಪಡುಬಿದ್ರಿ ಠಾಣೆಯಲ್ಲಿ ಕರೆದ ಸರ್ವದರ್ಮಿಯರ ಸಭೆಯಲ್ಲಿ

ತೆಂಕ ಎರ್ಮಾಳು ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಮುಕ್ತಾರ್

ಪಡುಬಿದ್ರಿ: ತೆಂಕ ಎರ್ಮಾಳು ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ಮುಕ್ತಾರ್ ಅಹಮದ್ ಆಯ್ಕೆಯಾಗಿದ್ದಾರೆ.ಗೌರವ ಅಧ್ಯಕ್ಷರಾಗಿ ಪತ್ರಕರ್ತ ಸುರೇಶ್ ಎರ್ಮಾಳ್, ಉಪಾಧ್ಯಕ್ಷರಾಗಿ ರಾಜು ಪೂಜಾರಿ, ಕಾರ್ಯದರ್ಶಿಯಾಗಿ ಭರತ್ ಜಿ. ಶೆಟ್ಟಿಗಾರ್, ಕೋಶಾಧಿಕಾರಿಯಾಗಿ ಶೇಕ್ ಲಿಯಾಕತ್, ಉಪ ಕೋಶಾಧಿಕಾರಿಯಾಗಿ ಅಬ್ದುಲ್ ನದೀಮ್ ಇವರನ್ನು ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ವಾರ್ಷಿಕ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.