Home Posts tagged # udupi (Page 2)

ಮಣಿಪಾಲ ಆರೋಗ್ಯ ಕಾರ್ಡ್ 2023ರ ನೋಂದಣಿ ಪ್ರಕ್ರಿಯೆಗೆ ಚಾಲನೆ

ಉಡುಪಿ : ಉಡುಪಿ ಜಿಲ್ಲೆಯ ಮಾಹೆ ಮಣಿಪಾಲದ ಸಂಸ್ಥಾಪಕರಾದ ಡಾ. ಟಿ.ಎಂ.ಎ.ಪೈ ಅವರ 125ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ, ಮಣಿಪಾಲ ಆರೋಗ್ಯ ಕಾರ್ಡ್ 2023ರ ನೋಂದಣಿ ಪ್ರಕ್ರಿಯೆಗೆ ಮಂಗಳವಾರದಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಈ ವರ್ಷ ನಮ್ಮ ದೂರದೃಷ್ಟಿಯ ಸಂಸ್ಥಾಪಕ ನಾಯಕ ಡಾ.

ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ : ಪರಿವಾರ ದೈವಗಳಿಗೆ ಸಿರಿ ಸಿಂಗಾರದ ನೇಮೋತ್ಸವ

ಉಡುಪಿ : ಉಡುಪಿ ಜಿಲ್ಲೆಯ ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪರಿವಾರ ದೈವಗಳಾದ ವಾರ್ತಾಳಿ ಪಾಶಾಣ ಕಲ್ಲುರ್ಟಿ ದೈವಗಳಿಗೆ ಬ್ರಹ್ಮಕಲಶೋತ್ಸವ, ರಾಶಿ ಪೂಜೆ ಮತ್ತು ಸಿರಿ ಸಿಂಗಾರದ ನೇಮೋತ್ಸವದ ಪ್ರಯುಕ್ತ ಬೆಳಿಗ್ಗೆ ನವಕ ಪ್ರಧಾನ ಕಲಶಾಭಿಷೇಕ ನಡೆದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಭಂಡಾರ ಇಳಿದು ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ರಾತ್ರಿ ನೇಮೋತ್ಸವ ನಡೆಯಿತು. ಈ ಸಂದರ್ಭ ದೇಗುಲದ ವ್ಯವಸ್ಥಾಪನ ಸಮಿತಿ ಮತ್ತು ಸಮಿತಿ ಅಧ್ಯಕ್ಷ ಯು.ಎ. ಪ್ರಭಾಕರ

ಉಡುಪಿಯಲ್ಲಿ ಎಪಿಎಂಸಿ ಅಧಿಕಾರಿಗಳಿಂದ ಭ್ರಷ್ಟಚಾರ : ಎಪಿಎಂಸಿ ಆಡಳಿತಾಧಿಕಾರಿ ಕಚೇರಿ ಎದುರು ವರ್ತಕರ ಪ್ರತಿಭಟನೆ

ಉಡುಪಿ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧಿಕಾರಿಗಳು ಭ್ರಷ್ಟಚಾರ ಮತ್ತು ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿ ಉಡುಪಿಯ ಎಪಿಎಂಸಿ ಆಡಳಿತಾಧಿಕಾರಿ ಕಚೇರಿ ಎದುರು ವರ್ತಕರು ಪ್ರತಿಭಟನೆ ನಡೆಸಿದ್ದಾರೆ. ಆಡಳಿತಾಧಿಕಾರಿ ಮಹದೇವ ಈಸಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. “ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು 20-25 ವರ್ಷಗಳಿಂದ ಇಲ್ಲಿಯ ವರ್ತಕರು ವ್ಯಾಪಾರವನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ ಇಲ್ಲಿಯ ಅಧಿಕಾರಿಗಳು ಇಲ್ಲಿನ

ಖ್ಯಾತ ಸ್ಯಾಕ್ಸೋಫೋನ್ ವಾದಕ ಉಡುಪಿಯ ಸುಂದರ ಸೇರಿಗಾರ್ ಇನ್ನಿಲ್ಲ

ಉಡುಪಿ : ಖ್ಯಾತ ಸ್ಯಾಕ್ಸೋಫೋನ್ ವಾದಕ ಮತ್ತು ಸ್ಯಾಕ್ಸೋಫೋನ್ ಗುರು ಉಡುಪಿ ಜಿಲ್ಲೆಯ ಅಲೆವೂರು ಮೂಲದ ಸುಂದರ ಸೇರಿಗಾರ್ ಬುಧವಾರ ಜೂನ್ 14 ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಸುಂದರ ಸೇರಿಗಾರ್ ಅವರು ಉಡುಪಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮತವಾಗಿ ಸ್ಯಾಕ್ಸೋಫೋನ್ ವಾದನದ ಕಲಿಕೆಯನ್ನು ಆರಂಭಿಸಿದ್ದರು. ಉಡುಪಿ ಮಂಗಳೂರು ಭಾಗದಲ್ಲಿ ಸ್ಯಾಕ್ಸೋಫೋನ್ ಗುರುಗಳಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಯಾಕ್ಸೋಫೋನ್ ಕಲಿಸಿಕೊಟ್ಟಿರುವ ಕೀರ್ತಿ ಅವರದ್ದು. ಸುಂದರ ಸೇರಿಗಾರ್

ಉಡುಪಿ ಜಿಲ್ಲಾ ಯುವ ಉತ್ಸವ 2023 : ಸಚಿವೆ ಶೋಭಾ ಕರಂದ್ಲಾಜೆ ಭಾಗಿ

ಉಡುಪಿ : ನೆಹರು ಯುವ ಕೇಂದ್ರ ಉಡುಪಿ ಇದರ ಆಶ್ರಯದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಪೂರ್ಣಪ್ರಜ್ಞ ಕಾಲೇಜಿನ ಆಡಿಟೋರಿಯಂನಲ್ಲಿ ಜಿಲ್ಲಾ ಯುವ ಉತ್ಸವ ಕಾರ್ಯಕ್ರಮವನ್ನು ಜೂನ್ 14 ರಂದು ಜರುಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಕೃಷಿ ಮತ್ತು ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು, ಯುವ ಜನತೆ ತಾವು ಬೆಳೆಯುವುದರ ಜೊತೆಗೆ ದೇಶದ ಬೆಳವಣಿಗೆಯ ಸಂಕಲ್ಪ ಮಾಡಬೇಕು. ಮೊದಲು ಭಾರತ ದೇಶವನ್ನು

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನದ ಆಚರಣೆ

ಉಡುಪಿ : “ಸುರಕ್ಷಿತ ರಕ್ತ ಮತ್ತು ರಕ್ತ ವರ್ಗಾವಣೆಗಾಗಿ ಉತ್ಪನ್ನಗಳ” ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರಕ್ತ ಸಂಬಂಧಿತ ಉತ್ಪನ್ನಗಳು ಜಗತ್ತಿನಾದ್ಯಂತ ಸಾರ್ವಜನಿಕ ಆರೋಗ್ಯಕ್ಕೆ ನಿರ್ಣಾಯಕವಾಗಿವೆ. ಈ ದಿನವು ಸ್ವಯಂಸೇವಕರು ಮತ್ತು ರಕ್ತದಾನಿಗಳಿಗೆ ಅವರ ಕೊಡುಗೆಗಳಿಗಾಗಿ ಧನ್ಯವಾದ ಹೇಳುವ ಅವಕಾಶವನ್ನು ಸೂಚಿಸುತ್ತದೆ. 2023 ರ ಘೋಷ ವಾಕ್ಯ

ಶಕ್ತಿ ಯೋಜನೆಗೆ ಚಾಲನೆ : ಪ್ರಯಾಣಿಕರೊಂದಿಗೆ ಬಸ್ ನಲ್ಲಿ ಸಂಚರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ : ರಾಜ್ಯದ‌ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಆರಂಭಿಸಿರುವ ರಾಜ್ಯ ಸರಕಾರದ ಶಕ್ತಿ ಯೋಜನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿಯ ಕೆ ಎಸ್ ಆರ್ ಟಿ ಸಿ ಡಾ. ವಿ. ಎಸ್. ಆಚಾರ್ಯ ಬಸ್ ನಿಲ್ದಾಣದಲ್ಲಿ ಜೂನ್ 11ರ ರವಿವಾರದಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ […]

ಬ್ರಹ್ಮಾವರ ಹಲಸು ಮೇಳ : ವಿವಿಧ ಬಗೆಯ ಹಲಸಿನ ಖಾದ್ಯಗಳ ಕೂಟ

ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಸ್ ಎಮ್ ಎಸ್ ಸಮುದಾಯ ಭವನದಲ್ಲಿ ಬ್ರಹ್ಮಾವರ ಕೃಷಿ ಇಲಾಖೆಯ ವತಿಯಿಂದ ಹಲಸು ಮೇಳವನ್ನು ಜೂನ್ 10 ರಂದು ಆಯೋಜಿಸಲಾಗಿತ್ತು. ಬ್ರಹ್ಮಾವರ ಕೃಷಿ ಇಲಾಖೆಯಿಂದ ಪ್ರತೀ ವರ್ಷದಂತೆ ನಡೆಸಿಕೊಂಡು ಬರುವ ಹಲಸು ಮೇಳವನ್ನು ಈ ಬಾರಿ ಎಸ್ ಎಮ್ ಎಸ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದು ಹಲಸು ಹಣ್ಣುಗಳು, ಹಲಸಿನ ಹಪ್ಪಳ, ಹಲಸಿನ ಸಂಡಿಗೆ, ಸೇರಿದಂತೆ ವಿವಿಧ ಬಗೆಯ ಹಲಸಿನ ಖಾದ್ಯಗಳು ಜನರನ್ನ ಕೈ ಬೀಸಿ ಕರೆಯುತ್ತಿತ್ತು. ಕೇವಲ ಹಲಸಿನ

ನಡುರಸ್ತೆಯಲ್ಲೇ ಚಪ್ಪಲಿ ಏಟು ತಿಂದ ಯುವಕ : ಅಸಭ್ಯ ವರ್ತನೆಗೆ ವಿದ್ಯಾರ್ಥಿನಿಯಿಂದ ತಕ್ಕ ಪಾಠ

ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರದ ವಕ್ವಾಡಿ ರಸ್ತೆಯಲ್ಲಿ ಎಂದಿನಂತೆ ಹಾಸ್ಟೆಲ್ ನಿಂದ ಕಾಲೇಜಿಗೆ ತೆರಳುತ್ತಿದ್ದ ಸಮಯದಲ್ಲಿ ಆಕೆಯನ್ನು ಉಡುಪಿ ಜಿಲ್ಲೆಯ ಬಾರಕೂರು ಮೂಲದ ನಜೀರ್ (35) ಎಂಬಾತ ಹಿಂಬಾಲಿಸಿ, ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ್ದಾನೆ. ಈ ವಿಚಾರವಾಗಿ ವಿದ್ಯಾರ್ಥಿನಿ ಜೋರಾಗಿ ಕೂಗಿದ್ದು, ಸ್ಥಳೀಯರು ಘಟನಾ ಸ್ಥಳಕ್ಕೆ ಕೂಡಲೇ ಧಾವಿಸಿದರು. ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದಾಗ, ವಿದ್ಯಾರ್ಥಿನಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ

ಡಾ. ಅವನೀಂದ್ರನಾಥ್ ರಾವ್ ಅವರ ಗ್ರಂಥಸೂಚಿ ಸಂಸ್ಕೃತಿ ಸಚಿವರಿಂದ ಬಿಡುಗಡೆ

ಉಡುಪಿ : ಕೇಂದ್ರ ಸಚಿವಾಲಯ ಗ್ರಂಥಾಲಯದ ಹಿರಿಯ ಅಧಿಕಾರಿ, ದೆಹಲಿ ಶಿಕ್ಷಣ ಕನ್ನಡ ಸಂಸ್ಥೆಯ ಉಪಾಧ್ಯಕ್ಷ ಡಾ. ಅವನೀಂದ್ರನಾಥ್ ರಾವ್ ಅವರು ಸಂಕಲಿಸಿದ ವಸ್ತು ಸಂಗ್ರಹಾಲಯ ಕುರಿತ ಸಚಿತ್ರ ಗ್ರಂಥಸೂಚಿಯನ್ನು ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ಜಿ. ರೆಡ್ಡಿ ಅವರು ಇತ್ತೀಚಿಗೆ ಬಿಡುಗಡೆಗೊಳಿಸಿದರು. ಕೊಲ್ಕತ್ತದ ಕೇಂದ್ರ ಸಂದರ್ಭ ಗ್ರಂಥಾಲಯ ಈ ವಿಶೇಷ ಗ್ರಂಥಸೂಚಿಯನ್ನು ಪ್ರಕಟಿಸಿದೆ. ವಸ್ತು ಸಂಗ್ರಹಾಲಯ ಕುರಿತ ಜಾಗತಿಕ ಮಹಾಮೇಳ ಇಂಟರ್ನ್ಯಾಷನಲ್ ಮ್ಯೂಸಿಯಂ ಎಕ್ಷಪೊ-2023