Home Posts tagged #v4news karnataka (Page 18)

ಉಡುಪಿ ಜಿಲ್ಲಾ ಫಲಾನುಭವಿಗಳ ಬೃಹತ್ ಸಮಾವೇಶ

ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಕಟಪಾಡಿ ಗ್ರೀನ್ ವ್ಯಾಲಿಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶವು ಉದ್ಘಾಟನೆ ಗೊಂಡಿತು. ಸಮಾವೇಷವನ್ನು ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಎಸ್ ಅಂಗಾರ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಒಟ್ಟು 155 ಗ್ರಾಪಂನ ವಿವಿಧ ಯೋಜನೆಗಳಡಿ ಸುಮಾರು 15 ಸಾವಿರ ಫಲಾನುಭವಿಗಳು ಪಾಲ್ಗೊಂಡಿದ್ದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೃದಯಾಘಾತದಿಂದ ನಿಧನ

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ (60) ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೈಸೂರಿನ ಮನೆಯಲ್ಲಿ ಶುಕ್ರವಾರ ತಡರಾತ್ರಿಯಲ್ಲಿ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಮೂಲಗಳು ತಿಳಿಸಿವೆ. 1983 ರಲ್ಲಿ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದ ಅವರು, ಸಂತೇಮರಹಳ್ಳಿ ಕ್ಷೇತ್ರದಿಂದ ಒಂದು ಶಾಸಕರಾಗಿ ಆಯ್ಕೆಯಾಗಿ, ಎರಡನೇ ಬಾರಿ ಕೊಳ್ಳೇಗಾಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಚಾಮರಾಜನಗರ ಕ್ಷೇತ್ರದಿಂದ

ಕೊನೆಗೂ ಉದ್ಘಾಟನೆಗೊಂಡ ಗುಣನಾಥ್ ಅವರ ಭಾರ್ಗವಿ ಬಿಲ್ಡರ್ಸ್‍ನ ಕೈಲಾಶ ಅಪಾರ್ಟ್‍ಮೆಂಟ್…!

ಗುಣನಾಥ್ ಪ್ರಮ್ ದುಬೈ ಅವರ ಕನಸು ಕೊನೆಗೂ ನನಸಾಗಿದೆ. ಭಾರ್ಗವಿ ಬಿಲ್ಡರ್ಸ್‍ನವರ ಕೈಲಾಶ್ ಅಪಾರ್ಟ್‍ಮೆಂಟ್‍ನ್ನು ಆಯ್ಕೆ ಮಾಡಿಕೊಂಡ ಗುಣನಾಥ್ ಅವರು, ತಮ್ಮ ಕನಸಿನ ಲಕ್ಷುರಿ ಅಪಾರ್ಟ್‍ಮೆಂಟ್ ಸುಂದರವಾಗಿ ನಿರ್ಮಾಣಗೊಂಡಿದ್ದು, ಇಂದು ಪ್ರತಿಷ್ಠಿತ ಗಣ್ಯರ ಸಮ್ಮುಖದಲ್ಲಿ ಮೊಕ್ ಅಪ್ ಪ್ಲಾಟ್ ಉದ್ಘಾಟನೆಗೊಂಡಿತು. ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಗುಣನಾಥ್ ಅವರು ತನ್ನ ಪ್ರೀತಿಯ ಶಿಲ್ಪನಿಗಾಗಿ ಹೈ ಲಿವಿಂಗ್ ಐಷಾರಾಮಿ

ಕೇಂದ್ರದ ಬಿಜೆಪಿ ಆಡಳಿತದ ಜನವಿರೋಧಿ ನೀತಿಗೆ ಖಂಡನೆ : ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಮಂಜೇಶ್ವರ: ಭಾರತದ ಆಯಕಟ್ಟಿನ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಭಾರೀ ಬಂಡವಾಳದ ಕುಳಗಳಾದ ಅದಾನಿ ಮತ್ತು ಅಂಬಾನಿ ಎಂಬ ಆಧುನಿಕ ಕುಬೇರರ ಪಾದಗಳಿಗೆ ಸಮರ್ಪಿಸಿ ದೇಶದ ಆರ್ಥಿಕತೆಯನ್ನು ಪಾತಾಳಕ್ಕಿಳಿಸಿದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನಹಿತವನ್ನು ಸಂಪೂರ್ಣವಾಗಿ ಮರೆತಿದೆ. ಜನವಿರೋಧಿ, ಭ್ರಷ್ಟ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ಹೋರಾಟ ಮುಂದುವರಿಸಲಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ

ಮೂಡುಬಿದಿರೆ ಮೆಸ್ಕಾಂ ಬಳಿ ಅವೈಜ್ಞಾನಿಕ ವೃತ್ತ ತೆರವಿಗೆ ಆಗ್ರಹ

ಮೂಡುಬಿದಿರೆ-ವೇಣೂರು, ಮೂಡುಬಿದಿರೆ-ಬಿಸಿರೋಡನ್ನು ಸಂಧಿಸುವ ಮೆಸ್ಕಾಂ ಬಳಿ ರಾಜ್ಯ ಹೆದ್ದಾರಿಯಲ್ಲಿ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಸರ್ಕಲ್ ತೆರವುಗೊಳಿಸುವಂತೆ ಆಗ್ರಹಿಸಿದೆ. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಶಾಸಕರ ನಿಧಿಯಿಂದ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ.

ಉಜಿರೆ ಎಸ್.ಡಿ.ಎಂ.ಗೆ ಬೆಸ್ಟ್ ಜರ್ನಲಿಸಂ ಡಿಪಾರ್ಟ್‍ಮೆಂಟ್
ಅವಾರ್ಡ್

ಉಜಿರೆ, : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಬೆಂಗಳೂರಿನ ದಿ ನ್ಯೂ ಇಂಡಿಯನ್ ಟೈಮ್ಸ್ಸಂ ಸ್ಥೆಯು ಕರ್ನಾಟಕದ ಅತ್ಯುತ್ತಮ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಎಂದು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಾರ್ಚ್ 6ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವರ್ಣರಂಜಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಜಿರೆಯ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ

ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ತೀರ್ಪುಗಾರರಾಗಿ
ವೀರೇಶ್ ಮಠಪತಿ ಆಯ್ಕೆ

ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವೀರೇಶ್ ಮಠಪತಿ ಅವರು ಅಂತರ್ ರಾಷ್ಟ್ರೀಯ ಟೇಬಲ್ ಟೆನ್ನಿಸ್ ತೀರ್ಪುಗಾರರಾಗಿ ಅಯ್ಕೆಯಾಗಿದ್ದಾರೆ. ಅವರು ಮಾರ್ಚ್ 20ರಿಂದ 27ರ ವರಗೆ ಜಮ್ಮುವಿನಲ್ಲಿ ನಡೆಯಲಿರುವ 84ನೇ ಹಿರಿಯ ರಾಷ್ಟ್ರೀಯ ಮತ್ತು ಅಂತರ್ –ರಾಜ್ಯ ಟೇಬಲ್ ಟೆನ್ನಿಸ್ ಚಾಂಪಿಯನ್ ಶಿಪ್‍ಗೆ ತೀರ್ಪುಗಾರರಾಗಿ ಆಯ್ಕೆಯಾಗಿರುತ್ತಾರೆ. ವೀರೇಶ್ ಮಠಪತಿ ಅವರಿಗೆ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆ

ಅನಂತಾಡಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ.

ಬಂಟ್ವಾಳ: ಅನಂತಾಡಿ ಗ್ರಾ.ಪಂ.ಬಿಜೆಪಿಯ ಬಲಿಷ್ಠ ಶಕ್ತಿಕೇಂದ್ರವಾಗಿದ್ದು, ಅದಕ್ಕೆ ಪೂರಕವಾಗಿ ಹೆಚ್ಚಿನ ಅನುದಾನಗಳ ಮೂಲಕ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದೆ. ಜತೆಗೆ ಕೋಟ್ಯಂತರ ರೂಪಾಯಿ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ ಬಂದಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು. ಅವರು ಅನಂತಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 1.50 ಕೋ.ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ- ಶಿಲಾನ್ಯಾಸ ನೆರವೇರಿಸಿ ಬಳಿಕ ಮಂದಿರದಲ್ಲಿ

ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್‍ನಿಂದ ಪ್ರತಿಭಟನೆ : ಗ್ಯಾಸ್ ಸಿಲಿಂಡರ್ ಮತ್ತು ಕಟ್ಟಿಗೆಯ ಅಣುಕು ಶವ ಯಾತ್ರೆ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯ ವನ್ನು ಖಂಡಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತಲ್ಲದೆ, ಗ್ಯಾಸ್ ಸಿಲಿಂಡರ್ ಮತ್ತು ಕಟ್ಟಿಗೆಯ ಅಣಕು ಶವ ಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ `ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾದರೂ ಕೂಡ ಬಿಜೆಪಿಗರು ತಲೆ

ಮಾ.11ಕ್ಕೆ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಹೇಳಿಕೆ

ಪುತ್ತೂರು: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿಯಿಂದ ಹಮ್ಮಿಕೊಂಡಿರುವ ಪ್ರಜಾ ಧ್ವನಿ ಯಾತ್ರೆ ಮಾ.11ರಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದ್ದು, ಬೆಳಿಗ್ಗೆ ಉಪ್ಪಿನಂಗಡಿ, ವಿಟ್ಲ, ಮಧ್ಯಾಹ್ನ ಕುಂಬ್ರ ಜಂಕ್ಷನ್ ಸಂಜೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಬೇರೆ ಬೇರೆ ಆಶ್ವಾಸನೆಗಳಿಂದ ಕೋಮು ಭಾವನೆ