Home Posts tagged V4News (Page 368)

ಕಾರ್ಕಳ: ಮಹಿಳೆಯರಿಗೆ ಮೀಸಲಾತಿ ನೀಡಿದ ಮೊದಲ ರಾಜ್ಯ ಕರ್ನಾಟಕ: ಡಾ. ಎಂ. ವೀರಪ್ಪ ಮೊಯಿಲಿ

ಕಾರ್ಕಳ: ಮಹಿಳೆಯರಿಗೆ ಮೀಸಲಾತಿ ನೀಡುವಲ್ಲಿ ಕರ್ನಾಟಕ ಮೊದಲ ರಾಜ್ಯವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಹೇಳಿದರು. ಅವರು ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. 1993 ರಲ್ಲಿಯೆ ಮಹಿಳೆಯರಿಗೆ ಮೀಸಲಾತಿ ಜಿಲ್ಲಾ ಹಾಗೂ

ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ, ರೂ.10.38 ಕೋಟಿ ನಿವ್ವಳ ಲಾಭ, ಶೇಕಡಾ 10 ಡಿವಿಡೆಂಡ್ ಘೋಷಣೆ

ಎಂ.ಸಿ.ಸಿ. ಬ್ಯಾಂಕಿನ ವಾರ್ಷಿಕ ಮಹಾಸಭೆಯು ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಮತ್ತು ವೃತ್ತಿಪರ ನಿರ್ದೇಶಕ ಸಿ.ಜಿ.ಪಿಂಟೊ ಇವರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಆರಂಭಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಸದಸ್ಯರಾದ ಆಲನ್ ಸಿ ಪಿರೇರಾ

ತೊಕ್ಕೊಟ್ಟು : ಸ್ಕೂಟರ್ ನಿಂದ ಬಿದ್ದು ಮಹಿಳೆ ಸಾವು

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕೆರೆಬೈಲು‌ ಬಳಿ ಸ್ಕೂಟರ್ ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ‌ ಕಾಸರಗೋಡು ಮಧೂರು ನಿವಾಸಿ ಸುಮಾ ನಾರಾಯಣ ಗಟ್ಟಿ ( 52) ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂಲತ: ಬಂಟ್ವಾಳ ನೆಟ್ಲದವರಾಗಿದ್ದ ಇವರು ಭಾನುವಾರ ಮಧೂರಿನಿಂದ ಕುಟುಂಬದ ಮನೆ ಪಿಲಾರು ಅರಮನೆಯಲ್ಲಿ‌ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಕಾಸರಗೋಡು ಕಡೆ ತೆರಳಲು ಸಹೋದರನ ಬೈಕ್ ನಲ್ಲಿ

ಬಹರೈನ್ ಕನ್ನಡ ಸಂಘದಿಂದ ಯಕ್ಷ ವೈಭವ-2023

ಕನ್ನಡ ಸಂಘ ಬಹರೈನ್‍ದಿಂದ ಯಕ್ಷ ವೈಭವ –2023ರ ಅಂಗವಾಗಿ ಸಂಘದ ಯಕ್ಷಗಾನ ಕಲಾವಿದರಿಂದ ನಾಟ್ಯಗುರು ದೀಪಕ್ ರಾವ್ ಪೇಜಾವರ ನಿರ್ದೇಶನದಲ್ಲಿ ಶ್ರೀಕೃಷ್ಣ ಲೀಲಾಮೃತ ಎಂಬ ಯಕ್ಷಗಾನ ಪ್ರದರ್ಶನದ ಪೂರ್ವ ತಯಾರಿಗೆ ಮುಹೂರ್ತ ಪೂಜೆಯು ನೆರವೇರಿತು. ಸೆಪ್ಟೆಂಬರ್ 29 ರಂದು ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿರುವ ಈ ಯಕ್ಷಗಾನ ಪ್ರದರ್ಶನದ ಪೆÇೀಸ್ಟರ್ ಬಿಡುಗಡೆ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನೆರವೇರಿತು. ನಾಟ್ಯಗುರು ಶ್ರೀ ದೀಪಕ್ ರಾವ್ ಪೇಜಾವರ, ಸಂಘದ ಹಿರಿಯ

ಕಡಬ : ಬಸ್ಸಿನಿಂದ ಎಸೆಯಲ್ಪಟ್ಟು ವ್ಯಕ್ತಿ ಸಾವು

ಕಡಬ, ಸೆ. 24: ಚಲಿಸುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ಸಿನಿಂದ ವ್ಯಕ್ತಿಯೊಬ್ಬರು ಕೆಳಕ್ಕೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಕಡಬ ಪೇಟೆಯ ಅಂಚೆ ಕಛೇರಿ ಬಳಿ ರವಿವಾರ ಸಂಜೆ ನಡೆದಿದೆ. ಕಡಬ ಸಮೀಪದ ಕಳಾರ ಕುದ್ಕೊಳಿ ನಿವಾಸಿ ಅಚ್ಚುತ ಗೌಡ (63) ಮೃತ ಪಟ್ಟವರು. ಕಡಬದಿಂದ ಮಂಗಳೂರಿನಿಂದ ತೆರಳುತ್ತಿದ್ದ ಬಸ್ಸು ಏರಿ ಮನೆಯ ಕಡೆ ಹೊರಟ ಬಸ್ಸು ಕಡಬ ಅಂಚೆ ಕಛೇರಿ ಬಳಿ ತಲುಪುತ್ತಿದ್ದoತೆಯೇ ತಿರುವಿನಲ್ಲಿ ಆಯತಪ್ಪಿ ಕೆಳಕ್ಕೆ ಎಸೆಯಲ್ಪಟ್ಟಿದ್ದಾರೆ. ಅವರೊಂದಿಗೆ ಬಲ್ಯದ ದೇರಾಜೆ

ಯಕ್ಷಕಲಾ ವಿಭೂಷಣ ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ಗೆ ರಾಷ್ಟ್ರೀಯ ರತ್ನ ಪ್ರಶಸ್ತಿ

ಮಂಗಳೂರು: ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಮೇಳದಲ್ಲಿ ಯಕ್ಷಗಾನ ಕಥೆ ಬರಹಗಾರರಾದಯಕ್ಷಕಲಾ ವಿಭೂಷಣ ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ.24ರಂದು ನವ ದೆಹಲಿಯ ಚಾಣಕ್ಯಪುರದ ಡಾ.ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯುವ 17ನೇ ರಾಷ್ಟ್ರೀಯ ಕನ್ನಡ ಸಂಸ್ಕ್ರತಿ ಸಮ್ಮೇಳನದಲ್ಲಿ ಭಾರತ ಸರಕಾರದ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಎ.ನಾರಾಯಣಸ್ವಾಮಿ ಹಾಗೂ ಕರ್ನಾಟಕದ ಸರಕಾರದ ಕನ್ನಡ

ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆ ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ,ಬಾಲಕಿಯರ ತ್ರೋಬಾಲ್ ಪಂದ್ಯಾಟ

ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ,ಬಾಲಕಿಯರ ತ್ರೋಬಾಲ್ ಪಂದ್ಯಾಟ ನಡೆಯಿತು. ಸುಳ್ಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ ಕ್ರೀಡಾಕೂಟವನ್ನು ದೀಪ ಬೆಳಗಿಸಿವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳು ಕ್ರೀಡಾಮನೋಭಾವ ಬೆಳೆಸುವುದರಿಂದ ಸ್ವಾವಲಂಬಿ ಜೀವನ ನಡೆಸುವ ಶಕ್ತಿ ಮತ್ತು ಧೈರ್ಯ ಬರುವುದು‌. ಪ್ರತಿಯೊಬ್ಬರು ಕ್ರೀಡಾ ಸ್ಪೂರ್ಥಿ ಬೆಳೆಸಿಕೊಳ್ಳಬೇಕು ಎಂದು ಕ್ರೀಡಾಪಟುಗಳಿಗೆ

ಯುಎಇ: ಸಪ್ಟೆಂಬರ್ 24 ರಂದು ಪುಳಿಮುಂಚಿ ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ

ಬಹು ನಿರೀಕ್ಷೆಯ ಪುಳಿಮುಂಚಿ ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಯುಎಇಯ ಅಜ್ಮಾನ್ ನ ಇಂಡಿಯನ್ ಅಸೋಸಿಯೇಷನ್ ಸಭಾಂಗಣದಲ್ಲಿ ಸಪ್ಟೆಂಬರ್ 24 ರಂದು ಜರಗಲಿದೆ. ಮಾರ್ಗದೀಪ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯುಎಇಯ ವತಿಯಿಂದ ನಡೆಯುವ ಒಂಬತ್ತನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವೇದಿಕೆಯಲ್ಲಿ ಮಧ್ಯಾಹ್ನ 12.30 ಕ್ಕೆ ಟಿಕೆಟ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಫೆಮಿನಾ ಮಿಸ್ ಇಂಡಿಯಾ ಗೋವಾ 2019 ಶಾಸ್ತ್ರ ಶೆಟ್ಟಿ ಇವರು

ಉಡುಪಿ: ಅಮಾವಸೆಬೈಲಿನಲ್ಲಿ ನಾಪತ್ತೆಯಾಗಿದ್ದ ಯುವಕ ಕಾಡಲ್ಲಿ ಪತ್ತೆ

ಕಳೆದ ಎಂಟು‌ದಿನಗಳ ಹಿಂದೆ ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದ ಯುವಕ ಇಂದು ತೊಂಬಟ್ಟು ಸಮೀಪದ  ಕಬ್ಬಿನಾಲೆ ಕಾಡಂಚಿನಲ್ಲಿ ಪತ್ತೆಯಾಗಿದ್ದಾನೆ. ಇರ್ಕಿಗದ್ದೆಯ ಶೀನಪ್ಪ ನಾಯ್ಕ್  ಎನ್ನುವವರ ಪುತ್ರ ಇಪ್ಪತ್ತೆಂಟು ವರ್ಷದ ವಿವೇಕನಂದ ಮನೆಯಿಂದ ಹೊರ ಹೋಗಿದ್ದ ,ಆ ಬಳಿಕ ನಾಪತ್ತೆಯಾಗಿದ್ದ ,ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಬ್ಬಿನಾಲೆ ಸಮೀಪ ಯುವಕ  ಪತ್ತೆಯಾಗಿದ್ದು ಕಳೆದ ಎಂಟು ದಿನಗಳಿಂದ ನೀರು  ಆಹಾರವಿಲ್ಲದೇ ಕಾಡಲ್ಲಿಯೇ ಅಲೆದಾಡಿದ್ದ

ನೆಲ್ಯಾಡಿ: ಶಿರಾಡಿ 108 ಆ್ಯಂಬುಲೆನ್ಸ್ ಸಿಬ್ಬಂದಿಗಳ ಸಾಮಾಜಿಕ ಕಳಕಳಿಗೆ ಗ್ರಾಮಸ್ಥರಿಂದ ವ್ಯಾಪಕ ಶ್ಲಾಘನೆ

ನೆಲ್ಯಾಡಿ: ಅನಾರೋಗ್ಯ ಪೀಡಿತ ಮಹಿಳೆಯೋರ್ವರ ಮನೆ ತನಕ 108 ಅಂಬ್ಯುಲೆನ್ಸ್ ಸಂಚರಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ 108 ಸಿಬ್ಬಂದಿಗಳು ಸುಮಾರು 1 ಕಿ.ಮೀ.ದೂರದ ತನಕ ಮಹಿಳೆಯನ್ನು ಸ್ಟ್ರೇಚರ್ ನಲ್ಲಿ ಹೊತ್ತುಕೊಂಡೇ ಬಂದು ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿರುವ ಮಾನವೀಯ ಘಟನೆ ಶಿರಾಡಿ ಗ್ರಾಮದಲ್ಲಿ ನಡೆದಿದೆ. ಶಿರಾಡಿ ಗ್ರಾಮದ ಪದಂಬಳ ಸಮೀಪದ ದೇವರಮಾರು ನಿವಾಸಿ ಕಮಲ(65) ಎಂಬವರ ಆರೋಗ್ಯದಲ್ಲಿ ಏರುಪೇರು ಆದ ಹಿನ್ನೆಲೆಯಲ್ಲಿ ಅವರ ಮಗ ಪ್ರವೀಣ್