Home Posts tagged V4News (Page 452)

ಕಾರ್ಕಳ : ರಕ್ತದಾನ ಶಿಬಿರ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಶ್ರೇಷ್ಠ ವ್ಯಕ್ತಿಗಳಲ್ಲಿ ದೇವರಂತಹ ಹೃದಯವಿರುತ್ತದೆ. ಆದ್ದರಿಂದ ಉದಯ್ ಶೆಟ್ಟಿ ಮುನಿಯಾಲು ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ಕೆಮಾರು ಸಾಧನ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯಸಿದ್ದಾರೆ. ಉದಯ ಶೆಟ್ಟಿ ಮುನಿಯಲು ಅಭಿಮಾನಿ ಬಳಗ ಮತ್ತು ಬ್ಲಾಕ್ ಕಾಂಗ್ರೆಸ್ ಹೆಬ್ರಿ ಮತ್ತು ಕಾರ್ಕಳದ ವತಿಯಿಂದ ಉದಯ ಶೆಟ್ಟಿ ಮುನಿಯಾಲು ಇವರ 50ನೇ ಹುಟ್ಟು

ಮಂಜೇಶ್ವರ – ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಿಸದ ವಿಚಾರ : ಜನತೆಯ ಆಕ್ರೋಶ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದ ಮೇಲ್ದರ್ಜೆಗೇರಿಸುವಿಕೆ ಪುಟ್ ಓವರ್ ಬ್ರಿಡ್ಜ್ ಹಾಗೂ ಅತ್ಯವಶ್ಯಕ ರೈಲುಗಳ ನಿಲುಗಡೆಗೆ ಸಂಬಂಧಿಸಿದಂತೆ ಮಂಜೇಶ್ವರದ ಜನರಿಗೆ, ಜನಪ್ರತಿನಿಧಿಗಳು ನೀಡಿದ ವಾಗ್ದಾನಗಳು ಕಡತಗಳಲ್ಲೇ ಬಾಕಿ ಉಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ವರ್ಷಗಳ ಹಿಂದೆ ರೈಲು ನಿಲ್ದಾಣದ ಹಳಿ ದಾಟುತ್ತಿದ ವೇಳೆ ಸಂಭವಿಸಿದ ಅಪಘಾತದಲ್ಲಿ ಆಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈ ವಿಚಾರವಾಗಿ ಜನರನ್ನು ಸಮಾಧಾನ ಪಡಿಸಲು ಡಂಗುರ

ಜೂನ್ 17 ಮತ್ತು 18 – ತಾಂಡವ ಪ್ರೀಮಿಯರ್ ಲೀಗ್

ಟೀಮ್ ತಾಂಡವ ಪ್ರಸೆಂಟ್ಸ್ ತಾಂಡವ ಪ್ರೀಮಿಯರ್ ಲೀಗ್ ಉರ್ವ ಮೈದಾನದಲ್ಲಿ ಜೂನ್ 17 ಮತ್ತು 18ರಂದು ನಡೆಯಲಿದೆ.ಟೀಮ್ ತಾಂಡವ ವತಿಯಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಿದ್ದಾರೆ. ಜೂನ್ 18ರಂದು ನಡೆಯಲಿರುವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ವಿ4 ನ್ಯೂಸ್‍ನ ಯೂಟ್ಯೂಬ್ ಚಾನಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ

ಉಳ್ಳಾಲ : 24 ಪುಟಗಳ ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

ಉಳ್ಳಾಲ: ನೂತನ ಮನೆ ಖರೀದಿಸಿದ ಯುವತಿಯೋರ್ವಳು 24 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. ಮೂಲತ: ಫರಂಗಿಪೇಟೆಯ ನಿವಾಸಿಯಾಗಿರುವ ಅಶ್ವಿನಿ ಬಂಗೇರ ಅವರು, ಸದ್ಯ ಕುಂಪಲ ಚಿತ್ರಾಂಜಲಿ ನಗರದಲ್ಲಿ ಮನೆ ಖರೀದಿಸಿದ್ದು, ಅದ್ಧೂರಿ ಗೃಹ ಪ್ರವೇಶಗೈದ ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣು ಬಿಗಿದು ಆತ್ಮ ಹತ್ಯೆಗೆ ಶರಣಾಗಿದ್ದಾಳೆ. ಅಶ್ವಿನಿ ಬರೆದ 24 ಪುಟಗಳ ಡೆತ್ ನೋಟ್ ಪೊಲೀಸರಿಗೆ ದೊರೆತಿದೆ. ಡೆತ್

ಮೀನು ಸಾಗಾಟ ವಾಹನಕ್ಕೆ ಲಾರಿ ಡಿಕ್ಕಿ – ಆಂಧ್ರದಲ್ಲಿ ಉಚ್ಚಿಲದ ಯುವಕ ಬಲಿ

ಮಂಗಳೂರಿನಿಂದ ಆಂಧ್ರ ಪ್ರದೇಶಕ್ಕೆ ಮೀನು ಹೇರಿಕೊಂಡು ಹೋಗಿದ್ದ ವಾಹನ ಹಾಗೂ ಲಾರಿ ಮಧ್ಯೆ ಆಂಧ್ರ ನಾಬೂರ ಎಂಬಲ್ಲಿ ಅಪಘಾತ ನಡೆದಿದೆ. ಮೀನು ಸಾಗಾಟ ವಾಹನ ಚಾಲಕ ಉಚ್ಚಿಲದ ಯುವಕ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೀನು ಸಾಗಾಟ ವಾಹನ ಚಾಲಕ ಕಾಪು ತಾಲೂಕಿನ ಉಚ್ಚಿಲ ಭಾಸ್ಕರ ನಗರ ಬಾಂಗ್ಲಾ ನಿವಾಸಿ ಬಶೀರ್ ಎಂದು ತಿಳಿದು ಬಂದಿದೆ. ಇಂದು ಮುಂಜಾನೆ ವೇಳೆ ಅಪಘಾತ ಸಂಭವಿಸಿದ್ದು, ಕಾಲು ಸಿಲುಕಿಕೊಂಡ ಪರಿಣಾಮ ಅವರನ್ನು ಹೊರ

ಸಕಲೇಶಪುರ : ಮಧ್ಯಾಹ್ನದ ಊಟ ಸವಿದ 35 ಸೈನಿಕರು ಅಸ್ವಸ್ಥ

ಮಧ್ಯಾಹ್ನದ ಊಟ ಸವಿದ 35 ಮಂದಿ ಸೈನಿಕರು ಅಸ್ವಸ್ಥಗೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಡುಗರವಳ್ಳಿ ಗ್ರಾಮದಲ್ಲಿ ಈ ಪ್ರಕರಣ ಜರುಗಿದೆ ಅಸ್ವಸ್ಥಗೊಂಡಂತಹ ಸುಮಾರು 35 ಮಂದಿಯನ್ನು ಸದ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹುಡುಗರ ಒಳ್ಳೆಯ ಕ್ಯಾಂಪ್‍ನಲ್ಲಿರುವ ವಾಹನ ಚಾಲನಾ ತರಬೇತಿ ಸೈನಿಕರು ಮಧ್ಯಾಹ್ನ ಎಂದಿನಂತೆ ಊಟ ಸವಿದಿದ್ದಾರೆ ಕೆಲ ಸಮಯದಲ್ಲಿ ಸುಮಾರು 35

ಬ್ರಹ್ಮಾವರದಲ್ಲಿ ದೇವರ ಆಭಿಷೇಕಕ್ಕೂ ನೀರಿನ ಕೊರತೆ

ಬ್ರಹ್ಮಾವರ : ದೇವಾಲಯಗಳ ನಗರ ಬಾರಕೂರಿನಲ್ಲಿ ದೇವರ ಅಭಿಷೇಕಕ್ಕೆ ಕೂಡಾ ನೀರಿನ ಕೊರತೆ ಕಾಡುತ್ತಿದೆ. ಅತೀ ಪ್ರಾಚೀನ ಸೀಮೆಯ ಅಧಿ ದೇವರಾದ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುರಾತನ ತೀರ್ಥ ಬಾವಿಯಲ್ಲಿ ನೀರು ಬತ್ತಿ ಹೋಗಿ ಅಭಿಷೇಕ ಪ್ರೀಯ ಶಿವನಿಗೆ ಕೂಡಾ ನೀರಿನ ಕೊರತೆ ಉಂಟಾಗಿದೆ. ದೇವಸ್ಥಾನದ ತೀರ್ಥ ಬಾವಿಯಲ್ಲಿ ಬೆಳಿಗ್ಗಿನ ಹೊತ್ತು ಅರ್ದ ಕೊಡಪಾನ ಮುಳುಗುವಷ್ಠು ನೀರು ಇರುವುದನ್ನು ಇಲ್ಲಿನ ಅರ್ಚಕರು ಜೋಪಾನ ಮಾಡಿ ತೆಗೆದು ನಿತ್ಯ ಪೂಜೆಗೆ ಅಭಿಷೇಕ

ಪುತ್ತೂರು : ಆಶ್ರಯ ಮನೆಗಾಗಿ ಇದ್ದ ಮನೆಯನ್ನೂ ಕೆಡವಿ ಬೀದಿಗೆ ಬಿದ್ದ ಕುಟುಂಬ

ಪುತ್ತೂರು: ಆಶ್ರಯ ಮನೆಯ ಆಸೆಯಲ್ಲಿ, ಇದ್ದ ಮನೆಯನ್ನೂ ಕೆಡವಿ ಬೀದಿಗೆ ಬಿದ್ದ ಬಡ ಕುಟುಂಬವೊಂದು ಪುತ್ತೂರು ತಾಲೂಕಿನ ಮುಂಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಡ್ಯಾ ಎಂಬಲ್ಲಿದೆ. ಮನೆ ಇಲ್ಲದ ಕಾರಣ ಕಳೆದ ಮೂರು ತಿಂಗಳಿನಿಂದ ಈ ಕುಟುಂಬ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲೇ ಬದುಕಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ. ಕಡ್ಯ ಗ್ರಾಮದ ಮೋನಪ್ಪ ಎಂಬವರ ಕುಟುಂಬ ಆಶ್ರಯ ಮನೆಗಾಗಿ ಕಳೆದ ವರ್ಷ ಗ್ರಾಮ ಪಂಚಾಯತ್‍ಗೆ ಅರ್ಜಿ ಸಲ್ಲಿಸಿತ್ತು. ಇತ್ತೀಚೆಗಷ್ಟೇ ಮೋನಪ್ಪ

ಮೂಡುಬಿದಿರೆ : “ಹೃದಯ ತಜ್ಞ ಮನೆ ಬಾಗಿಲಿಗೆ” – ಉಚಿತ ತಪಾಸಣಾ ಶಿಬಿರ

ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಕಾರ್ಡಿಯಾಲಜಿ ಡೋರ್‍ಸ್ಟೆಪ್ ಫೌಂಡೇಶನ್ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್ ಹಾಗೂ ತಂಡದಿಂದ ಹೃದಯ ವೈಶಾಲ್ಯ ಯೋಜನೆ “ಹೃದಯ ತಜ್ಞ ಮನೆ ಬಾಗಿಲಿಗೆ” ಹೃದಯ ಸಂಬಂಧಿತ ಕಾಯಿಲೆಗಳಿಗೆ ಉಚಿತ ತಪಾಸಣಾ ಶಿಬಿರ ಮೂಡುಬಿದಿರೆ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಪೊಳಲಿ ಕ್ಷೇತ್ರದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ : ಸಂಜೆಯ ವೇಳೆಗೆ ಮಳೆ ಕರುಣಿಸಿದ ಜಗನ್ಮಾತೆ

ಪೊಳಲಿ ಪರಿಸರದಲ್ಲಿ ನಿನ್ನೆ ಸಂಜೆ ಭಾರಿ ಮಳೆಯಾಗಿದೆ. ಬುಧವಾರ ಬೆಳಿಗ್ಗೆ ಮಳೆಗಾಗಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು. ಸಂಜೆಯ ವೇಳೆಗೆ ದೇವಸ್ಥಾನದ ಆವರಣದಲ್ಲಿ ಧಾರಕಾರವಾಗಿ ಮಳೆ ಸುರಿದಿದೆ. ಮಳೆಯಿಂದ ಭಕ್ತ ಜನ ಪುಳಕಿತರಾಗಿದ್ದು ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಅನುಗ್ರಹದಿಂದ ಮಳೆಯಾಗಿದೆ ಎನದನುವುದು ಭಕ್ತ ಜನರ ನಂಬಿಕೆ.