ಟಿವಿ ನಿರೂಪಕನನ್ನು ಅಪಹರಿಸಿದ ತರುಣಿ
ಮದುವೆ ಪ್ರಸ್ತಾಪ ತಿರಸ್ಕರಿಸಿದ ಟಿವಿ ನಿರೂಪಕನನ್ನು ಅಪಹರಿಸಿ ಮದುವೆಗೆ ಒತ್ತಾಯಿಸಿದ ಮಹಿಳಾ ಉದ್ಯಮಿ ಒಬ್ಬರು ಈಗ ಪೋಲೀಸು ಕಸ್ಟಡಿ ಸೇರಿರುವ ಘಟನೆಯು ಹೈದರಾಬಾದ್‌ನಲ್ಲಿ ನಡೆದಿದೆ.
ಬಂಧಿತ ಯುವತಿ ಭೋಗಿರೆಡ್ಡಿ ತ್ರಿಶಾ. ಈಕೆ ಐದು ಸ್ಟಾರ್ಟಪ್ ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕಿ ಆಗಿದ್ದಾರೆ. ಮ್ಯಾಟ್ರಿಮೊನಿ ಜಾಲ ತಾಣದ ಮೂಲಕ ಟಿವಿ ಸಂಗೀತ ಚಾನಲ್ ಒಂದರ ನಿರೂಪಕ ಪ್ಣವ್ ಪ್ರೊಫೈಲ್ ನೋಡಿ ಆತನಲ್ಲಿ ತ್ರಿಶಾ ಮದುವೆಯ ಪ್ರಸ್ತಾಪ ಮಾಡಿದ್ದಾಳೆ. ಆದರೆ ಆತ ಮದುವೆಗೆ ಒಪ್ಪಿಲ್ಲ. ಇಲ್ಲಿ ಪ್ರಣವ್ ಹೆಸರಿನಲ್ಲಿ ಫೋಟೋ ಬಳಸಿ ಯಾರೋ ನಕಲಿ ಮ್ಯಾಟ್ರಿಮೊನಿ ಹಾಕಿದ್ದರು. ಅದಾದ ಮೇಲೆ ನಿಜ ಪ್ರಣವ್‌ನನ್ನು ನೇರ ಭೇಟಿ ಮಾಡಿ ತ್ರಿಶಾ ಮದುವೆ ಪ್ರಸ್ತಾಪ ಮಾಡಿದಾಗಲೂ ಆತ ನಿರಾಕರಿಸಿದ್ದಾನೆ. ಕೊನೆಗೆ ಸ್ನೇಹಿತರ ಸಂಗಡ ಪ್ರಣವ್‌ನನ್ನು ಅಪಹರಿಸಿ ಈಗ ಬಂಧಿಯಾಗಿದ್ದಾಳೆ. ಮ್ಯಾಟ್ರಿಮೊನಿಯಲ್ಲಿ ನಕಲಿ ಪ್ರೊಫೈಲ್ ಹಾಕಿ ವಂಚಿಸಿದ್ದಾನೆ ಎಂದು ಈಗ ತ್ರಿಶಾ ದೂರು ನೀಡಿದ್ದಾಳೆ.