ವಾಮಂಜೂರಿನ ಮಂಗಳಾಜ್ಯೋತಿ ಶಾಲಾ ಮಕ್ಕಳಿಗೆ ಉಚಿತ ಭಗವದ್ಗೀತೆ ಪುಸ್ತಕ ವಿತರಣೆ

ಮೂಡಬೆಟ್ಟು ಕುಳಾಯಿಯ ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನದ ವತಿಯಿಂದ ವಾಮಂಜೂರಿನ ಮಂಗಳಾಜ್ಯೋತಿ ಶಾಲಾ ಮಕ್ಕಳಿಗೆ ಭಗವದ್ಗೀತೆ ಪುಸ್ತಕ ಉಚಿತವಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಇಸ್ಕಾನ್‍ನ ಸಚ್ಚಿದಾನಂದ ಅದೈತದಾಸ ಅವರು ಭಗವದ್ಗೀತ ತರಗತಿ, ಕೀರ್ತನೆ ನಡೆಸಿಕೊಟ್ಟರು. ನಂತರ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಸುಬೋದ್ ಮಾರ್ತ, ಪ್ರದೀಪ್ ಮೆಂಡನ್, ಮಾಧವ ಭಂಡಾರಿ, ಅಶ್ವಿನ್ ಅವರು ಭಾಗವಹಿಸಿದ್ದರು.
