ವಿಟ್ಲ: ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆ
ವಿಟ್ಲ ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬ ಸಮಿತಿ ವತಿಯಿಂದ 25 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಉದ್ಘಾಟನೆಗೊಂಡಿತು.
ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಭಕ್ತರ ಸತ್ಸಂಕಲ್ಪಕ್ಕೆ ದೇವರ ಅನುಗ್ರಹ ಸದಾ ಇದೆ. ಧಾರ್ಮಿಕ ಕಾರ್ಯಕ್ರಮಗಳು ಬದುಕಿನ ಸಂಸ್ಕಾರ – ಸಂಸ್ಕೃತಿಯ ಉದ್ದೀಪನಕ್ಕೆ ಪೂರಕವಾಗಿದೆ. ಪ್ರತಿಯೊಬ್ಬರ ಶ್ರದ್ಧಾಭಕ್ತಿಯೊಂದಿಗೆ ಇಚ್ಛಾಶಕ್ತಿಯಿದ್ದಾಗ ಮಾತ್ರ ಇಂತಹ ಬೆಳ್ಳಿಹಬ್ಬ ಕಾರ್ಯಕ್ರಮಗಳು ಯಶಸ್ವಿಯಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಬೆಳ್ಳಿ ಹಬ್ಬ ಸಮಿತಿಯ ಗೌರವಾಧ್ಯಕ್ಷ ಶಂಕರ ಭಟ್ ಬದನಾಜೆ, ಕೃಷ್ಣಯ್ಯ ಕೆ.ವಿಟ್ಲ, ಡಾ.ಮಹೇಶ್ ಬಿ.ಸಿ.ರೋಡ್, ಸಮಿತಿ ಅಧ್ಯಕ್ಷ ಜಯರಾಮ ಪರನೀರು ನಿಡ್ಯ, ಕೋಶಾಧಿಕಾರಿ ನರೇಂದ್ರ. ಸಿ, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ಸಿ. ಸ್ವಾಗತಿಸಿದರು. ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಅಳಿಕೆ ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.