Home Articles posted by v4team (Page 37)

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ನೂತನ ಪಧಾದಿಕಾರಿಗಳ ಪದಗ್ರಹಣ ಸಮಾರಂಭ ಕಾವೂರಿನಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ್ಷ ಸತೀಶ್ ಕುಂಪಲ ಅವರು, ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೩ ಲಕ್ಷಕ್ಕೂ ಅಂಕ ಮತಗಳಿಂದ ಜಯ ಗಳಿಸುವುದು ನಿಶ್ಚಿತ. ಇದಕ್ಕೆ ಕಾರ್ಯಕರ್ತರ ಪರಿಶ್ರಮದಿಂದ

ನೆಯ್ಪಿಲಿಯ ನರಳಾಟ

ಭಾರತದಲ್ಲಿ ಚಿರತೆಗಳ ಸಂಖ್ಯೆ ವಾರ್ಷಿಕ 1.08 ಶೇಕಡಾ ಏರಿಕೆ ಕಾಣುತ್ತಿದೆ. ಸದ್ಯ ಭಾರತದಲ್ಲಿ 13,874 ಚಿರತೆಗಳು ಇರುವುದಾಗಿ ಒಕ್ಕೂಟ ಸರಕಾರದ ಪರಿಸರ ಮಂತ್ರಿ ಭೂಪೇಂದ್ರ ಯಾದವ್ ಬಿಡುಗಡೆ ಮಾಡಿರುವ ಚಿರತೆ ಸ್ಥಿತಿಗತಿ ವರದಿಯಲ್ಲಿ ಇದೆ. ಈ ಚಿರತೆ ಎನ್ನುವುದು ಲೆಪರ್ಡ್. ಇದನ್ನು ತುಳುವಿನಲ್ಲಿ ಚಿಟ್ಟೆ ಪಿಲಿ, ನೆಯ್ಪಿಲಿ ಎಂದೆಲ್ಲ ಕರೆಯುತ್ತಾರೆ. ಇದಕ್ಕೆ ನೆಯ್ಪಿಲಿ ಹೆಸರು ಬಂದುದು ಅದರ ಬೇಟೆಯಿಂದ. ಲೆಪರ್ಡ್ ಚಿರತೆಯು ನಾಯಿ ಹಿಡಿಯುವುದರಲ್ಲಿ ಎಕ್ಸ್‍ಪರ್ಟ್.

ಕಾಪು: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಯೊಳಗೆ ಸಿಲುಕಿ ಸಾವು

ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಕ್ಕಿಕೊಂಡು ಸಾವನ್ನಪಿದ ಘಟನೆ ಕಾಪುವಿನ ಪೊಲಿಪು ಕಡಲ ಕಿನಾರೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಕಾಪು ಪೊಲಿಪು‌ ನಿವಾಸಿ ಕಿಶೋರ್ (29) ಮೃತ ದುರ್ದೈವಿ. ಪ್ರತಿದಿನ ಕಯಾಕ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳುತ್ತಿದ್ದ ಕಿಶೋರ್ ಶುಕ್ರವಾರ ಮುಂಜಾನೆ ಕೂಡಾ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳಿದ್ದು ಮೀನುಗಾರಿಕಾ ಬಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಸಮುದ್ರದಲ್ಲಿ ತೇಲುತ್ತಿದ್ದ ಕಯಾಕ್ ಅನ್ನು ಗಮನಿಸಿದ

ಬಾರದ ಲೋಕಕ್ಕೆ ಮನೋಹರ ಪ್ರಸಾದ ಪಯಣ..

ಹಿರಿಯ ಪತ್ರಕರ್ತ, ಖ್ಯಾತ ನಿರೂಪಕ, ಮನೋಹರ ಪ್ರಸಾದ್ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನವಭಾರತದಲ್ಲಿ ಪತ್ರಿಕಾರಂಗ ಪ್ರವೇಶಿಸಿದ್ದ ಅವರು, 1984ರಲ್ಲಿ ಉದಯವಾಣಿಯ ಮಂಗಳೂರು ವರದಿಗಾರರಾಗಿ ಪ್ರಸಿದ್ಧರಾದರು. ಆ ಬಳಿಕ ಪ್ರಧಾನ ವರದಿಗಾರರಾಗಿ, ಸುದ್ದಿ ವಿಭಾಗದ ಮುಖ್ಯಸ್ಥರಾಗಿ, ಸಹಾಯಕ ಸಂಪಾದಕರಾಗಿದ್ದರು. 2020ರಲ್ಲಿ ನಿವೃತ್ತಿ ಹೊಂದುವವರೆಗೆ 36ವರ್ಷ ಉದಯವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು.

ಹಣವಂತರ ನಡುವಣ ಹೆಣವಂತ ಸಮುದಾಯ

ಭಾರತದಲ್ಲಿ ಅತೀ ಸಿರಿವಂತರ ಸಂಖ್ಯೆಯು 13,230ಕ್ಕೆ ಏರಿಕೆಯಾಗಿದೆ. 141 ಕೋಟಿ ಜನಸಂಖ್ಯೆಯ ದೇಶದಲ್ಲಿ ಇದು ದೊಡ್ಡ ಸಂಖ್ಯೆಯೇನೂ ಅಲ್ಲ. ಆದರೆ ಅಭಿವೃದ್ಧಿಶೀಲ ಹೆಸರು ಹಲಗೆ ಕಳಚಿಕೊಳ್ಳಲಾಗದ, 40 ಕೋಟಿಯಷ್ಟು ಬಡವರನ್ನು ಹೊಂದಿರುವ ಭಾರತದಲ್ಲಿ ಬಡವರ ಸಂಖ್ಯೆ ಇಳಿಸಲು ಸಾಧ್ಯವಾಗಿಲ್ಲ. ಬದಲಿಗೆ ಜನಸಂಖ್ಯೆ ಏರಿದಂತೆಯೇ ಬಡವರ ಸಂಖ್ಯೆಯೂ ಏರುತ್ತ ನಡೆದಿದೆ. 1970ನೇ ಇಸವಿಯಲ್ಲಿ ತಿಂಗಳಿಗೆ 300 ರೂಪಾಯಿ ಗಳಿಸುತ್ತಿದ್ದ ವ್ಯಕ್ತಿಯು ಈಗ ತಿಂಗಳಿಗೆ 13,000

ಜಾನಪದ ಕಡಲೋತ್ಸವ: ಜಿಲ್ಲಾ ಪರಿಷತ್ ಪ್ರಶಸ್ತಿಗೆ ಕೊಕ್ಕಡದ ಕಿಟ್ಟ ಮಲೆಕುಡಿಯರವರು ಆಯ್ಕೆ

ಕೊಕ್ಕಡ: ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಹಾಗೂ ಕದಳಿ ಬೀಚ್ ಟೂರಿಸಂ ವತಿಯಿಂದ ಜಾನಪದ ಕಡಲೋತ್ಸವ ಕಾರ್ಯಕ್ರಮದಲ್ಲಿ ಕೊಡಮಾಡುವ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿಗೆ ಕೊಕ್ಕಡದ ಕಿಟ್ಟ ಮಲೆಕುಡಿಯರು ಆಯ್ಕೆಯಾಗಿದ್ದಾರೆ. ಇವರು ಕೊಕ್ಕಡ ಗ್ರಾಮದ ಕುರ್ಲೆ ನಿವಾಸಿಯಾಗಿದ್ದು ತನ್ನ 15ನೇ ವಯಸ್ಸಿನಿಂದ ಸುಗ್ಗಿ ಪುರುಷರ ಕೂಟದಲ್ಲಿ ವೇಷ ಧರಿಸಲು ಆರಂಭಿಸಿದರು, ಧರ್ಮಸ್ಥಳದ ಪುರುಷರ ಕೂಟದಲ್ಲೂ ಸೇವೆ ಸಲ್ಲಿಸಿದ್ದಾರೆ ಮೊದಲು ಪಾರ್ಪಿಕಲ್ಲು ನಂತರ

ಗೋಳಿತಟ್ಟು ಜನಜಾಗೃತಿ ವೇದಿಕೆ ವತಿಯಿಂದ ವೈದ್ಯಕೀಯ ನೆರವು ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕಡಬ ಇವರಿಂದ ಗೋಳಿತಟ್ಟು ವಲಯ ಜನಜಾಗೃತಿ ವಲಯ ಅಧ್ಯಕ್ಷರಾದ ನೋಣಯ್ಯ ಪೂಜಾರಿ ಅಂಭರ್ಜೆ ರಸ್ತೆ ಅಪಘಾತದಲ್ಲಿ ಕಾಲು ಮುರಿತಕ್ಕೆ ಒಳಗಾಗಿದ್ದು ಇವರಿಗೆ ಜನಜಾಗೃತಿ ವೇದಿಕೆಯಿಂದ ಮಂಜೂರಾದ ಹತ್ತು ಸಾವಿರ ರೂಪಾಯಿಯ ಮಂಜೂರಾತಿ ಪತ್ರವನ್ನು ಕಡಬ ತಾಲ್ಲೂಕು ಜನಜಾಗೃತಿ ಅಧ್ಯಕ್ಷ ಮಹೇಶ್ ಸವಣೂರು ಹತ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ, ಗೋಳಿತಟ್ಟು ವಲಯ

ನಿಡ್ಲೆ ವಿಕಲಚೇತನರ ವಿಶೇಷ ಗ್ರಾಮ ಸಭೆ

ನಿಡ್ಲೆ ಗ್ರಾಮದ ವಿಕಲಚೇತನರ ವಿಶೇಷ ಗ್ರಾಮ ಸಭೆ ನಿಡ್ಲೆ ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ಫೆ.27 ರಂದು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲ ಇವರ ಅಧ್ಯಕ್ಷತೆ ಯಲ್ಲಿ ನಡೆಸಲಾಯಿತು.ಮುಖ್ಯ ಅತಿಥಿಗಳಾಗಿ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್.ಎಂ, ಗ್ರಾಮ ಪಂಚಾಯಿತಿನ ಸದಸ್ಯರಾದ ಶ್ರೀಮತಿ ಹೇಮಾವತಿ.ಕೆ, ಮೋಹನ್ ಪೂಜಾರಿ, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.ಬೆಳ್ತಂಗಡಿ ತಾಲೂಕಿನ ಪುನರ್ ವಸತಿ ಸಂಯೋಜಕರಾದ ಜೋನ್ ಬ್ಯಾಪ್ಟಿಸ್ಟ್ ಡಿಸೋಜಾ

ಅಡ್ಡ ಮತದಾನ ಬಿಜೆಪಿಗೆ ಭರ್ಜರಿ ಲಾಭ

ಹದಿನೈದು ರಾಜ್ಯಗಳ 66 ರಾಜ್ಯ ಸಭಾ ಸ್ಥಾನಗಳಿಗೆ ವಿಧಾನ ಸಭೆಯಿಂದ ನಡೆದ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 30 ಸ್ಥಾನ ಗೆದ್ದು 45 ಶೇಕಡಾಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ. ಆದರೆ ಇದರಲ್ಲಿ 6 ಸ್ಥಾನಗಳನ್ನು ಅದು ವಶೀಲಿಬಾಜಿಯಿಂದ, ಖರೀದಿಯಿಂದ, ಹಿಂದಿನ ಬಾಗಿಲಿನಿಂದ ತನ್ನದಾಗಿಸಿಕೊಂಡಿದೆ ಎನ್ನುವುದು ಹಲವರ ಆರೋಪವಾಗಿದೆ. ಆರು ವರುಷ ಸದಸ್ಯಾವಧಿಯ ರಾಜ್ಯ ಸಭೆಯ ಮೂರನೇ ಒಂದು ಭಾಗದ ಸದಸ್ಯರು ಪ್ರತಿ ಎರಡು ವರುಷಕ್ಕೊಮ್ಮೆ

ನಿವೃತ್ತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಬೂಬಕರ್ ವಳಾಲು ಅವರಿಗೆ ಬೀಳ್ಕೊಡುಗೆ

ಕಳೆದ 31 ವರ್ಷಗಳಿಂದ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ(ಕೆಎಸ್‌ಆರ್‌ಟಿಸಿ)ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಉಪ್ಪಿನಂಗಡಿ ಸಮೀಪದ ವಳಾಲು ನಿವಾಸಿ ಎಚ್.ಅಬೂಬಕರ್ ಅವರನ್ನು ಕೆಎಸ್‌ಆರ್‌ಟಿಸಿ ಮಂಗಳೂರು ಕಚೇರಿಯಲ್ಲಿ ಇತ್ತೀಚೆಗೆ ಬೀಳ್ಕೊಡಲಾಯಿತು.ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್.ಅಬೂಬಕರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭ ಇಲಾಖೆಯ