Home Articles posted by v4team (Page 39)

ದಿಲ್ಲಿ: ಮೈತ್ರಿ, ಸೀಟು ಹಂಚಿಕೆ ಬಗೆಗೆ ಸ್ಪಷ್ಟನೆ

ದಿಲ್ಲಿಯ ದಿಲ್ಲಿ ಪಶ್ಚಿಮ, ದಿಲ್ಲಿ ದಕ್ಷಿಣ, ದಿಲ್ಲಿ ಪೂರ್ವ ಮತ್ತು ನವದೆಹಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಈಶಾನ್ಯ ದಿಲ್ಲಿ, ವಾಯುವ್ಯ ದಿಲ್ಲಿ ಮತ್ತು ಚಾಂದಿನಿ ಚೌಕ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.ಎಎಪಿಯವರೂ ಇದ್ದ ಮಾಧ್ಯಮ ಮಾತುಕತೆಯಲ್ಲಿ ಕಾಂಗ್ರೆಸ್ಸಿನ ಪ್ರಧಾನ

ಟಿವಿ ನಿರೂಪಕನನ್ನು ಅಪಹರಿಸಿದ ತರುಣಿ

ಮದುವೆ ಪ್ರಸ್ತಾಪ ತಿರಸ್ಕರಿಸಿದ ಟಿವಿ ನಿರೂಪಕನನ್ನು ಅಪಹರಿಸಿ ಮದುವೆಗೆ ಒತ್ತಾಯಿಸಿದ ಮಹಿಳಾ ಉದ್ಯಮಿ ಒಬ್ಬರು ಈಗ ಪೋಲೀಸು ಕಸ್ಟಡಿ ಸೇರಿರುವ ಘಟನೆಯು ಹೈದರಾಬಾದ್‌ನಲ್ಲಿ ನಡೆದಿದೆ.ಬಂಧಿತ ಯುವತಿ ಭೋಗಿರೆಡ್ಡಿ ತ್ರಿಶಾ. ಈಕೆ ಐದು ಸ್ಟಾರ್ಟಪ್ ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕಿ ಆಗಿದ್ದಾರೆ. ಮ್ಯಾಟ್ರಿಮೊನಿ ಜಾಲ ತಾಣದ ಮೂಲಕ ಟಿವಿ ಸಂಗೀತ ಚಾನಲ್ ಒಂದರ ನಿರೂಪಕ ಪ್ಣವ್ ಪ್ರೊಫೈಲ್ ನೋಡಿ ಆತನಲ್ಲಿ ತ್ರಿಶಾ ಮದುವೆಯ ಪ್ರಸ್ತಾಪ ಮಾಡಿದ್ದಾಳೆ. ಆದರೆ ಆತ ಮದುವೆಗೆ

ಉಳ್ಳಾಲ: ಗಾಂಜಾ ಮಾರಾಟ ಯತ್ನ, ಓರ್ವನ ಬಂಧನ

ಉಳ್ಳಾಲ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಎಸಿಪಿ ನೇತೃತ್ವದ ಮಾದಕ ದ್ರವ್ಯ ವಿರೋಧಿ ತಂಡ ಬೆಳ್ಮ ಗ್ರಾ.ಪಂ ವ್ಯಾಪ್ತಿಯ ಖಾಲಿ ಜಾಗದಿಂದ ಬಂಧಿಸಲಾಗಿದೆ.ಕೋಟೆಕಾರು ಬೀರಿ ನಿವಾಸಿ ಮಹಮ್ಮದ್ ಇರ್ಫಾನ್ (22) ಬಂಧಿತ.ಬಂಧಿತನಿಂದ ರೂ. 9,660 ಬೆಲೆಯ 322 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾರ್ಯಾಚರಣೆಯಲ್ಲಿ ಎಸಿಪಿ ಧನ್ಯಾ ನಾಯಕ್, ಕೊಣಾಜೆ ಠಾಣಾ ಉಪನಿರೀಕ್ಷಕ ನಾಗರಾಜ್ ಹಾಗೂ

ಅಯೋಧ್ಯೆಯಲ್ಲಿ ಪಲ್ಲಕಿ ಸೇವೆಗೈದ ಮೂಡುವೇಣುಪುರದೊಡೆಯನ ಸೇವಕರು

ಮೂಡುಬಿದಿರೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲ ಪೂಜೆ ಮತ್ತು ಉತ್ಸವದಲ್ಲಿ, ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದ ಸ್ವಯಂಸೇವಕರ ತಂಡ ನಿರಂತರ 3 ದಿನಗಳ ಕಾಲ ಪಲ್ಲಕ್ಕಿ ಹೊರುವ ಸೇವೆಯಲ್ಲಿ ಪಾಲ್ಗೊಂಡರು. ಮದ್ವ ನವಮಿ ಶುಭ ಸಂದರ್ಭದಲ್ಲಿ ಮೂಲ ಮೂರ್ತಿ ಶ್ರೀ ಬಾಲ ರಾಮನಿಗೆ ಭೋಗ ನೈವೇದ್ಯವನ್ನು ನೀಡುವ ಅವಕಾಶವನ್ನೂ ಪಡೆದು

ರಾಜಕೀಯ ಇಂದು ಸಂಪಾದನೆಗೆ ದಾರಿ || Politian’s earn today || V4NEWS

2004ರಿಂದ 2019ರ ನಡುವೆ ಸಂಸದರ ಸಂಪತ್ತು ಏರಿಕೆಯಲ್ಲಿ ಕರ್ನಾಟಕದ ಸಂಸದ ರಮೇಶ ಜಿಗಜಿಣಗಿ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರ ಸಂಪತ್ತು 2004ರಲ್ಲಿ 54.8 ಲಕ್ಷ ಇದ್ದುದು 2019ಕ್ಕೆ 51.41 ಕೋಟಿಗೆ ಎಂದರೆ 9,098 ಶೇಕಡಾ ಏರಿಕೆ ಆಗಿತ್ತು. ಇಂದೆಲ್ಲ ಬಡವರು ಚುನಾವಣೆಗೆ ನಿಲ್ಲುವುದು ಸಾಧ್ಯವಿಲ್ಲ. 1975ರವರೆಗೆ ಕಾಸಿಲ್ಲದವರು ಕೂಡ ಚುನಾವಣೆಗೆ ನಿಂತುದಿದೆ. ಗೆದ್ದುದೂ ಇದೆ. ಶಾಂತವೇರಿ ಗೋಪಾಲಗೌಡರು ಜನರಿಂದಲೇ ಚಿಲ್ಲರೆ ಸಂಗ್ರಹಿಸಿ ಚುನಾವಣೆ ಗೆಲ್ಲುತ್ತಿದ್ದರು.

 ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿ ಬಂಟ್ವಾಳದ ಅನಿಲ್ ಸಿಕ್ವೇರಾ ಆಯ್ಕೆ

ಬಂಟ್ವಾಳ ತಾಲೂಕಿನ ಅನಿಲ್ ಜಾನ್ ಸಿಕ್ವೇರಾ ತನ್ನ 25ನೇ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಅತ್ಯಂತ ಚಿಕ್ಕ ವಯಸ್ಸಿನ ನ್ಯಾಯಾಧೀಶ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕರಾವಳಿ ಜಿಲ್ಲೆಯ ಅನಿಲ್ ಅಪರೂಪದ ಸಾಧಕರಾಗಿ ಗುರುತಿಸಲ್ಪಟ್ಟಿದ್ದಾರೆ. ಅನಿಲ್ ಜಾನ್ ಸಿಕ್ವೇರಾ ಅವರು ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನ ಹೀಗೆ 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸದ್ಯ ಸಿವಿಲ್ ನ್ಯಾಯಧೀಶರಾಗಿ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್: ಕಬಡ್ಡಿ ಚಾಂಪಿಯನ್‌ಶಿಫ್ :ಮಂಗಳೂರು ವಿವಿಗೆ ಚಾಂಪಿಯನ್ಸ್ ಪಟ್ಟ

ಮೂಡುಬಿದಿರೆ: ಅಸ್ಸಾಂನ ಗೌಹಾಟಿಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿರ್ಸಿಟಿ ಗೇಮ್ಸ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕಬಡ್ಡಿ ತಂಡವು ಚಿನ್ನದ ಪದಕವನ್ನು ಗಳಿಸಿದೆ. ಅಂತರ್ ವಿಶ್ವಿದ್ಯಾಲಯಗಳ ಕಬಡ್ಡಿ ಚಾಂಪಿಯನ್‌ಶಿಫ್‌ನಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಆಯ್ಕೆಯಾದ ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದಲ್ಲಿ ಮಂಗಳೂರು ವಿವಿಯು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಸೆಮಿಫೈನಲ್ ಲಗ್ಗೆ ಇಟ್ಟಿತ್ತು. ಸೆಮಿಫೈನಲ್‌ನಲ್ಲಿ ಹರಿಯಾಣದ ಚೌಧರಿ ಬನ್ಸಿಲಾಲ್ ವಿವಿಯ

ದುಬೈ ರಸ್ತೆ ಅಪಘಾತಕ್ಕೆ ತಾ.ಪಂ ಮಾಜಿ ಉಪಾಧ್ಯಕ್ಷೆ ಏಕೈಕ ಪುತ್ರಿ ದಾರುಣ ಸಾವು

ಉಳ್ಳಾಲ : ದುಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರ ಏಕೈಕ ಪುತ್ರಿಯಾಗಿರುವ ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ವರುಷ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. 2019ರಲ್ಲಿ ದುಬಾಯಿಗೆ

ನಾಪತ್ತೆಯಾದ ವಿವಾಹಿತನ ಮೃತದೇಹ ಪತ್ತೆ

ಉಳ್ಳಾಲ: ಕಳೆದ ಸೋಮವಾರದಿಂದ ಮನೆಯಿಂದ ನಾಪತ್ತೆಯಾಗಿದ್ದ ಸೋಮೇಶ್ವರದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಉಳ್ಳಾಲ ತಾಲೂಕಿನ ಸೋಮೇಶ್ವರ ಮೂಡ ಬಡಾವಣೆ ನಿವಾಸಿ ಗೌತಮ್ ಎಮ್(30) ಮೃತ ಯುವಕ. ಫೈನಾನ್ಸ್ ಸೀಸರ್ ಆಗಿದ್ದ ಗೌತಮ್ ಕಳೆದ ಸೋಮವಾರ ಸಂಜೆ ತೊಕ್ಕೊಟ್ಟಿನಲ್ಲಿ ನಡೆದಿದ್ದ ಬಬ್ಬುಸ್ವಾಮಿ ದೈವದ ಪುನರ್ ಪ್ರತಿಷ್ಠೆ , ಕಲಶಾಭಿಷೇಕದ ಹೊರೆಕಾಣಿಕೆಯಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದ. ರಾತ್ರಿ ವೇಳೆ ಮನೆ ಮಂದಿಯಲ್ಲಿ ಕಿರಿಕ್ ಮಾಡಿದ್ದ ಗೌತಮ್ ಮನೆ

ಮೂಡುಬಿದಿರೆ: ನಿಮೋನಿಯಾಕ್ಕೆ ವಿದ್ಯಾರ್ಥಿನಿ ಬಲಿ

ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಒಂದನೇ ತರಗತಿಯ ವಿದ್ಯಾರ್ಥಿನಿ ಅಶ್ರಿಜಾ ನಿಮೋನಿಯಾಕ್ಕೆ ತುತ್ತಾಗಿ ಮೃತಪಟ್ಟಿದ್ದಾಳೆ.ಬೆಳ್ತಂಗಡಿ ತಾಲೂಕಿನ ನಿವಾಸಿ ಮರೋಡಿ ನಿವಾಸಿಗಳಾದ ಜಯಾನಂದ ರಾಜಶ್ರೀ ದಂಪತಿಯ ಪುತ್ರಿಯಾಗಿರುವ ಈಕೆ ನಿಮೋನಿಯಾಕ್ಕೆ ತುತ್ತಾಗಿ ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ತುರ್ತುನಿಗಾ ವಿಭಾಗದಲ್ಲಿ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶಲಾಗಿದ್ದಾಳೆ.ವಿದ್ಯಾರ್ಥಿನಿಯ ನಿಧನದ ಸಂತಾಪ ಸೂಚಕವಾಗಿ