ಆಗಸ್ಟ್ 12 : ವಿಸ್ಡಮ್ ಎಡ್ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಂಗಳೂರಿನ ಕೊಡಿಯಾಲ್ ಬೈಲ್‍ನಲ್ಲಿರುವ ವಿಸ್ಡಮ್ ಎಡ್ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ಡಬ್ಲ್ಯುಇ ತಂಡದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಗಸ್ಟ್ 12ರಂದು ಆಯೋಜಿಸಿದ್ದಾರೆ.ವಿಸ್ಡಮ್ ಕಚೇರಿಯಲ್ಲಿ ಉಚಿತ ದಂತ ತಪಾಸಣೆ, ರಕ್ತ ತಪಾಸಣೆ ಮತ್ತು ಕಣ್ಣಿನ ಪರೀಕ್ಷೆಯನ್ನು ಮಾಡಿಕೊಳ್ಳಲು ಅವಕಾಶವಿದೆ. ಆಗಸ್ಟ್ 12ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಆರೆಂಜ್ ಡೆಂಟಲ್ ಕ್ಲೀನಿಕ್, ಟೈಟನ್ ಐಪ್ಲಸ್ ಮತ್ತು ಹರ್ಷ ಮೋರ್ಡನ್ ಡೈಯಾಗ್ನಸ್ಟಿಕ್ ಸರ್ವೀಸ್ ನವರು ಸಹಕಾರ ನೀಡಲಿದ್ದಾರೆ. ಉಚಿತ ತಪಾಸಣೆ ಮಾಡಿಸಿಕೊಳ್ಳುವವರು 8169600408ಗೆ ನೋಂದಾವಣೆ ಮಾಡಿಕೊಳ್ಳಬಹುದು.