Home ಕರಾವಳಿ Archive by category ಉಡುಪಿ (Page 30)

ಕಾರ್ಕಳ ತಾಲೂಕಿನಾದ್ಯಾಂತ ಸಂಭ್ರಮದ ನಾಗರ ಪಂಚಮಿ

ಕಾರ್ಕಳ ತಾಲೂಕಿನ ವಿವಿಧ ನಾಗ ಸಾನಿಧ್ಯಗಳಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ನಾಗಬನಗಳಲ್ಲಿ ಭಕ್ತಾದಿಗಳು ನಾಗನಿಗೆ ಹಾಲು, ಸೀಯಾಳ ಸಮರ್ಪಿಸುವ ದೃಶ್ಯ ಕಂಡು ಬಂತು. ನಾಗರ ಪಂಚಮಿ ಪ್ರಯುಕ್ತ ದನದ ಶುದ್ಧ ಹಾಲಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಕಾರ್ಕಳದ ಪೆರುವಾಜೆ ಬಳಿ ಇರುವ ಹಾಲು ಮಾರಾಟ ಕೇಂದ್ರದ

ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ SCDCC ಬ್ಯಾಂಕ್ ನ ಸಾಧನ ಪ್ರಶಸ್ತಿ

ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೆ ಸತತ 3 ನೆ ಬಾರಿ SCDCC ಬ್ಯಾಂಕ್ ನ ಸಾಧನ ಪ್ರಶಸ್ತಿ ದಿನಾಂಕ. 19-08-2023 ರಂದು ನಡೆದ SCDCC ಬ್ಯಾಂಕ್ ನ ಮಹಾಸಬೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಕರ್. ಕೆ ಹಾಗೂ ಸಿ.ಇ.ಒ ಪದ್ಮನಾಭ್ .ಎಂ ಇವರನ್ನು ಸನ್ಮಾನಿಸಿ scdcc ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಇವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು .ಸೊಸೈಟಿಯು ಕಳೆದ 3 ವರ್ಷದಿಂದ ಈ ಪ್ರಶಸ್ತಿಯನ್ನು ಪಡೆಯುತ್ತಿದೆ.

ಬಾರಕೂರು ಬಂಡಿಮಠ: ಕುಲಾಲ ಸಮಾಜದ ದೈವಸ್ಥಾನಕ್ಕೆ ಬೇಕು ಕಾಯಕಲ್ಪ..!

ಬಾರಕೂರು ಬಳಿಯ ಬಂಡೀಮಠದಲ್ಲಿರುವ ಕುಂಬಾರ ಸಮಾಜದವರ ದೈವಸ್ಥಾನ ತೀರಾ ಜೀರ್ಣಾವಸ್ಥೆಯಲ್ಲಿದ್ದು, ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಕುಂಬಾರಿಕೆ ಮಾಡುವ ಕುಲಾಲ ಸಮುದಾಯದವರಿಗೆ ಮೂಲ ಸ್ಥಾನ ಎನ್ನುವುದಕ್ಕೆ ಸಾಕ್ಷಿಯಾಗಿ ತಲತಲಾಂತರದಿಂದ ಇಲ್ಲಿ ಅರ್ಚನೆ, ಪೂಜೆ ಮತ್ತು ದರ್ಶನ ಕುಲಾಲ ಸಮುದಾಯದವರಿಂದ ನಡೆಯುತ್ತಾ ಬರುತ್ತಿದೆ. ಇಲ್ಲಿ ಪ್ರಧಾನ ದೈವ ಹಾೈಗುಳಿ ಜೊತೆ ಹಲವಾರು ಪರಿವಾರ ಶಕ್ತಿಗಳ ಸಾನಿಧ್ಯವಿದೆ. ಸುತ್ತ ಕಾನನದ ನಡುವೆ ಮುಳಿ ಹುಲ್ಲಿನ ಚಿಕ್ಕ ಗುಡಿಯೊಂದು ಇದ್ದು

ನಿವೃತ್ತ ಮುಖ್ಯ ಶಿಕ್ಷಕ ಸುರೇಶ ಭಂಡಾರಿಗೆ ಬೀಳ್ಕೊಡುಗೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳ್ಳಬೈಲು ಇಲ್ಲಿನ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಸಂಪನ್ಮೂಲ ವ್ಯಕ್ತಿ ಸುರೇಶ ಭಂಡಾರಿ ಮತ್ತು ಅವರ ಪತ್ನಿ ಶಾಂತಾ ಶೆಟ್ಟಿಯರವರನ್ನು ವೇದಮೂರ್ತಿ ಕೊಡಕಟ್ಟು ಮಂಜುನಾಥ ಉಪಾಧ್ಯಾಯ ಶಾಲಾ ವತಿಯಿಂದ ಹಾಗೂ ಊರವರ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನಿತರು ಬೈಂದೂರು, ಕಮಲಶಿಲೆ ಮತ್ತಿತರ ಕಡೆಗಳಲ್ಲಿ ಶಿಕ್ಷಕರಾಗಿ, ಬ್ರಹ್ಮಾವರ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದು ವಿದ್ಯಾರ್ಥಿಗಳ ಮೆಚ್ಚುಗೆಗೆ

ಬೇಲೂರು ಕಸಬಾ ಹೋಬಳಿ ಎ ಮಟ್ಟದ ಕ್ರೀಡಾ ಕೂಟ

ಬೇಲೂರು ಕಸಬಾ ಹೋಬಳಿ ಎ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟವು ವಿದ್ಯಾವಿಕಾಸ್ ಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ನಡೆಯಿತು. ಕ್ರೀಡಾ ಕೂಟದಲ್ಲಿ ವಿದ್ಯಾವಿಕಾಸ ಶಾಲೆಯ ಬಾಲಕರು ವೈಯುಕ್ತಿಕ ಪ್ರಶಸ್ತಿ ಮತ್ತು ಸಮಗ್ರ ಪ್ರಶಸ್ತಿಯನ್ನು ವಿದ್ಯಾವಿಕಾಸ ಹಾಗೂ ಸರ್ವೋದಯ ಶಾಲೆಗಳು ಸಮನಾಗಿ ಪಡೆದುಕೊಂಡಿವೆ. ಬಾಲಕರ ವಿಭಾಗದಲ್ಲಿ ವಿದ್ಯಾವಿಕಾಸ ಶಾಲೆ, ಬಾಲಕೀಯರ ವಿಭಾಗದಲ್ಲಿ ಸರ್ವೋದಯ ಶಾಲೆ ತನ್ನದಾಗಿಸಿಕೊಂಡಿದೆ. ಈ ಕ್ರಿಡಾ ಕೂಟದ

ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆ-ಡಿ.ವೈ.ರಾಘವೇಂದ್ರ ಹುಟ್ಟು ಹಬ್ಬ ಆಚರಣೆ

ನಾರಾಯಣ ವಿಶೇಷ ಮಕ್ಕಳ ಶಾಲೆ ತಲ್ಲೂರು ಇಲ್ಲಿ ಬೈಂದೂರು ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಅವರ ನೇತೃತ್ವದಲ್ಲಿ ಶಿವಮೊಗ್ಗ ಸಂಸದರಾದ ಡಿ. ವೈ. ರಾಘವೇಂದ್ರ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭ ಮಕ್ಕಳಿಗೆ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ ವಿಶೇಷ ಮಕ್ಕಳ ಸಂಸ್ಥೆ ನಡೆಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಬಧ್ಧತೆ ಬೇಕು ಮತ್ತು ವಿಶೇಷ ಮಕ್ಕಳಿಗೆ ಬದುಕು ರೂಪಿಸಿಕೊಳ್ಳಲು

ಬೈಂದೂರು: ಅಶಕ್ತರ ಬಾಳಿಗೆ ಬೆಳಕಾದ ಬೆಂಕಿ ಮಣಿ ಸಂತು: ಜಾತ್ರೆಗಳಲ್ಲಿ ವೇಷ ಹಾಕಿ ಹಣ ಸಂಗ್ರಹ

ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮರವಂತೆ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆಯಲ್ಲಿ ಅಶಕ್ತರ ಚಿಕಿತ್ಸಾ ಸಹಾಯಾರ್ಥವಾಗಿ ಹಣ ಸಂಗ್ರಹಿಸುವ ಮೂಲಕ ಅಶಕ್ತಿರ ಬಾಳಿಗೆ ಬೆಳಕಾದ ಬೆಂಕಿ ಮಣಿ ಸಂತು ಅವರು. ಬೆಂಕಿ ಮಣಿ ಸಂತು ಅಶಕ್ತರ ಚಿಕಿತ್ಸಾ ಸಹಾಯರ್ಥ ವಿಶೇಷ ವೇಷ ಧರಿಸಿ ಹಣಸಂಗ್ರಹಣೆ ಮಾಡುತ್ತಿರುವುದು ಇದೆ ಮೊದಲೇನಲ್ಲ… ಅದೆಷ್ಟೋ ಅನಾರೋಗ್ಯ ಪೀಡಿತರಿಗೆ ವಿವಿಧ ಜಾತ್ರೆಯಲ್ಲಿ ವೇಷ ಹಾಕುವುದರ ಮೂಲಕ ಹಣವನ್ನು

ಬ್ರಹ್ಮಾವರ ; ಅಟೋ ಚಾಲಕರು ಸೂಕ್ತ ದಾಖಲೆ ಅಟೋದಲ್ಲಿರಿಸಿಕೊಳ್ಳಿ – ಠಾಣಾಧಿಕಾರಿ ರಾಜಶೇಖರ

ಬ್ರಹ್ಮಾವರ ರಥ ಬೀದಿಯ ಬಳಿ ಆರ್. ಕೆ. ಶೆಟ್ಟಿಯರಿಂದ ಕೊಡುಗೆಯಾಗಿ ನೂತನವಾಗಿ ರಚನೆಯಾದ ಅಯ್ಯಪ್ಪ ರಿಕ್ಷಾ ನಿಲ್ದಾಣವನ್ನು ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ರಾಜಶೇಖರ ವಂದಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಟೋ ಚಾಲಕರು ಯಾವತ್ತೂ ಸೂಕ್ತ ದಾಖಲೆಯನ್ನು ಅಟೋದಲ್ಲಿ ಇರಿಸಿಕೊಳ್ಳಿ. ದೇಶದ ಬಹತೇಕ ಜನರು ಅಟೋ ರಿಕ್ಷಾವನ್ನು ನಂಬಿಕೊಂಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ನಿಮ್ಮ ಕುಟುಂಬದ ಸುರಕ್ಷೆಗೆ ಇದು ಸಹಕಾರಿ ಎಂದರು. ಬ್ರಹ್ಮಾವರ ವ್ಯವಸಾಯ ಸೇವಾ

ಬೈಂದೂರಿನ ವಿಹಿಂಪ ಮತ್ತು ಭಜರಂಗದಳದಿಂದ ಅಖಂಡ ಭಾರತ ಸಂಕಲ್ಪ ದಿನ ಪ್ರಯುಕ್ತ ಪಂಜಿನ ಮೆರವಣಿಗೆ

ವಿಶ್ವಹಿಂದೂ ಪರಿಷತ್ ಭಜರಂಗದಳ ಬೈಂದೂರು ಪ್ರಖಂಡ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಪ್ರಯುಕ್ತ ಪಂಜಿನ ಮೆರವಣಿಗೆ ಬೈಂದೂರಿನಲ್ಲಿ ನಡೆಯಿತು. ಯೋಜನಾನಗರದ ನಾಗಬನ ಸಮಿತಿ ಅಧ್ಯಕ್ಷರಾದ ಕೃಷ್ಣದೇವಾಡಿಗ ಬೈಂದೂರು ಪಂಜಿನ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಸಭಾಕಾರ್ಯಕ್ರಮದಲ್ಲಿ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ದಿಕ್ಸುಚಿ ಭಾಷಣಕಾರರಾಗಿ

ಕಾರ್ಕಳ : ಕೊಳಚೆ ನೀರಿನ ದುರ್ವಾಸನೆಯಿಂದ ಸ್ಥಳೀಯ ಜನತೆಗೆ ಸಂಕಷ್ಟ

ಕಾರ್ಕಳ ಪುರಸಭೆ ವ್ಯಾಪ್ತಿಯ ಗಾಂಧಿ ಮೈದಾನದ ಮುಖ್ಯ ರಸ್ತೆಯಲ್ಲಿ ಸುಮಾರು 20 ದಿನಗಳಿಂದ ಒಳ ಚರಂಡಿಯ ನೀರು ಹರಿಯುತ್ತದೆ. ಈ ನೀರು ದುರ್ವಾಸನಿಂದ ಕೂಡಿದ ಪರಿಣಾಮ ಸ್ಥಳೀಯ ವಸತಿ ಸಂಕೀರ್ಣದಲ್ಲಿ ವಾಸಿಸುವ ಜನತೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ಅದಲ್ಲದೆ ಪಕ್ಕದಲ್ಲಿ ಕ್ರೈಸ್ ಕಿಂಗ್ ಚರ್ಚ್ ಹಾಗೂ ಕಾನ್ವೆಂಟ್ ಮತ್ತು ಸಾವಿರಾರು ಮಕ್ಕಳು ಓದುತ್ತಿರುವ ಶಾಲೆಯೂ ಇದೆ. ಎಲ್ಲರೂ ಈ ತ್ಯಾಜ್ಯ ನೀರಿನ ದುರ್ವಾಸನೆಯನ್ನು ಸಹಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.