Home Archive by category ರಾಷ್ಟ್ರೀಯ (Page 7)

ಕುಂದಾಪುರ: ಜರ್ಮನಿಯ ಯುವತಿಯನ್ನು ವರಿಸಿದ ಕುಂದಾಪುರದ ಯುವಕ..!

ಜರ್ಮನಿ ಮೂಲದ ಯುವತಿಯೋರ್ವರು ಕುಂದಾಪುರ ತಾಲೂಕಿನ ಆಜ್ರಿ ಮೂಲದ ಯುವಕ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾದ ಘಟನೆ ಕುಂದಾಪುರದಲ್ಲಿ ನಡೆಯಿತು. ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇವರು ಹಸೆಮಸೆ ಏರಿದ್ದು ಎರಡೂ ಕುಟುಂಬಗಳ ಹಿರಿಯರು ಮದುವೆಗೆ ಸಾಕ್ಷಿಯಾದರು. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ

ಪಂಜಾಬ್ : ಅರ್ಜುನ ಪ್ರಶಸ್ತಿ ವಿಜೇತ ಪೊಲೀಸ್ ಅಧಿಕಾರಿ ಶವವಾಗಿ ಪತ್ತೆ

ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ಪಂಜಾಬಿನ ಡಿಎಸ್‌ಪಿ- ಉಪ ಪೊಲೀಸ್  ವರಿಷ್ಠಾಧಿಕಾರಿ ದಲ್ಬೀರ್ ಸಿಂಗ್ ಡಿಯೋಲ್ ಅವರು ಜಲಂಧರಿನಲ್ಲಿ ಮರ್ಮಮಯ ರೀತಿಯಲ್ಲಿ ಸಾವನ್ನಪ್ಪಿರುವುದು ಸೋಮವಾರ ಬೆಳಕಿಗೆ ಬಂದಿದೆ. ಹೊಸ ವರುಷದ ದಿನವೇ ಈ ದುರಂತ ಬೆಳಕಿಗೆ ಬಂದಿದೆ. ರಾತ್ರಿ ಹೊಸ ವರುಷಾಚರಣೆ ಸಂಬಂಧ ದಲ್ಬೀರ್ ಸಿಂಗ್ ಹೋದವರು ಮನೆಗೆ ವಾಪಾಸು ಆಗಿಲ್ಲ. ಹಾಗಾಗಿ ಇಂದು ಮನೆಯವರು ನಾಪತ್ತೆ ದೂರು ದಾಖಲಿಸಿದ್ದರು. ಪೋಲೀಸರು ಹುಡುಕಾಟ ನಡೆಸಿದಾಗ ಜಲಂಧರ್ ಹೊರ ವಲಯದ ಬಸ್ತಿ

ಆಂಧ್ರಪ್ರದೇಶ : ಎಕ್ಸ್‌ ರೇ ಪೋಲಾರಿಮೀಟರ್ ಉಪಗ್ರಹ ಯಶಸ್ವಿ ಉಡಾವಣೆ

ಎಕ್ಸ್‌ ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿತ ಎಕ್ಸ್‌ ರೇ ಪೋಲಾರಿಮೀಟರ್ ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 9.10ಕ್ಕೆ ‘ಎಕ್ಸ್‌ ಪೊಸ್ಯಾಟ್’ ಸೇರಿದಂತೆ ವಿದ್ಯಾಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಸಂಬಂಧಿಸಿದ ಇತರೆ 9 ಉಪಗ್ರಹಗಳನ್ನು

ನವದೆಹಲಿ : ಹೊಸ ವರುಷದ ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ದೇಶದ ಜನರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ‘ಸಮೃದ್ಧ ರಾಷ್ಟ್ರ ನಿರ್ಮಾಣದ ಸಂಕಲ್ಪ ಕೈಗೊಳ್ಳಿ. ಹೊಸ ಗುರಿ ಮತ್ತು ಉದ್ದೇಶಗಳೊಂದಿಗೆ ಮುನ್ನಡೆಯಲು ಹೊಸವರ್ಷ ಬರುತ್ತಿದೆ’ ಎಂದು ದ್ರೌಪದಿ ಮುರ್ಮು ತಿಳಿಸಿದ್ದಾರೆ. ‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷ ಎಲ್ಲರಿಗೂ ಸಮೃದ್ಧಿ, ಶಾಂತಿ ಮತ್ತು ಉತ್ತಮ ಆರೋಗ್ಯ ದೊರೆಯಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್

ಪಡುವಣ ಬಂಗಾಳದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಕೇಂದ್ರೀಯ ಸ್ಥಾನದಿಂದ ವಜಾ

ಕೊಲ್ಕತ್ತಾದಲ್ಲಿ ಒಂದು ಲಕ್ಷ ನಾಗರಿಕರನ್ನು ಸೇರಿಸಿ ನಡೆದ ಗೀತಾ ಮಂತ್ರ ಪಠಣ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಹಣ ಬಾಚಿದ್ದಾರೆ ಎಂದು ಆರೋಪ ಮಾಡಿದ್ದ ಪಡುವಣ ಬಂಗಾಳದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಅವರನ್ನು ಕೇಂದ್ರೀಯ ಸ್ಥಾನದಿಂದ ವಜಾ ಮಾಡಲಾಗಿದೆ.ಗೀತಾ ಮಂತ್ರ ಪಠಣ ಕಾರ್ಯಕ್ರಮಕ್ಕೆ ಬಿಜೆಪಿಯ ಕೆಲವರು ಹಣವಂತರಿಗೆ ದೊಡ್ಡ ಮೊತ್ತದ ಹಣಕ್ಕೆ ವಿಶೇಷ ಪಾಸ್ ಮಾರಾಟ ಮಾಡಿದ್ದರು. ಅಕ್ರಮ ಹಣ ಮಾಡಿಕೊಂಡಿದ್ದರು ಎಂದು ಅನುಪಮ್ ಆರೋಪ ಮಾಡಿದ್ದರು. ಕೆಲವು ಬಿಜೆಪಿ

ನವದೆಹಲಿ: ಬ್ರಿಟಿಷರ ಕಾಲದ ಕ್ರಿಮಿನಲ್ ಕಾಯ್ದೆಗೆ ತಿದ್ದುಪಡಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ಇತ್ತೀಚೆಗೆ ಸಂಸತ್ತಿನಲ್ಲಿ ಪಾಸಾದ ಮೂರು ಕ್ರಿಮಿನಲ್ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕುವ ಮೂಲಕ ಅವನ್ನು ಕಾನೂನು ಆಗಿಸಿದರು. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆ ಇವೇ ಆ ಮೂರು. 1872ರ ಬ್ರಿಟಿಷರ ಕಾನೂನುಗಳಿಗೆ ಈ ಮೂಲಕ ಇನ್ನಷ್ಟು ತಿದ್ದುಪಡಿ ತರಲಾಗಿದೆ.

ಕುಸ್ತಿ ಆಟಕ್ಕೆ ವಿದಾಯ ಹೇಳಿದ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಸಿ ಮಲಿಕ್

ಆರೋಪಿಯ ಆಪ್ತನೇ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೇ ಸುದ್ದಿಗೊಷ್ಟಿ ನಡೆಸಿದ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಸಿ ಮಲಿಕ್ ಅವರು ಇನ್ನೆಂದೂ ಕುಸ್ತಿ ಆಡುವುದಿಲ್ಲ ಎಂದು ಘೋಷಣೆ ಮಾಡಿದರು. ಭಾರತೀಯ ಕುಸ್ತಿ ಫೆಡರೇಶನ್‍ನಲ್ಲಿ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ಇನ್ನೂ ನಿಲ್ಲುವ ಲಕ್ಷಣ ಇಲ್ಲ. ಮನಸಾಕ್ಸಿಯೊಡನೆ ಕುಸ್ತಿಯಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ ಎಂದು ಸಾಕ್ಸಿ ಮಲಿಕ್ ಹೇಳಿದರು. ಸಾಕ್ಸಿಯವರ ಜೊತೆಗೆ ಬಜರಂಗ್

ಸಾತ್ವಿಕ್ ರೆಡ್ಡಿ – ಚಿರಾಗ್ ಶೆಟ್ಟಿ ಜೋಡಿಗೆ ಖೇಲ್ ರತ್ನ

ಈ ಬಾರಿಯ ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ಕಿರಣ್ ರೆಡ್ಡಿ ಮತ್ತು ಚಿರಾಗ್ ಶೆಟ್ಟಿಯವರಿಗೆ ನೀಡಲಾಗಿದೆ. ಇದೇ ವೇಳೆ 26 ಮಂದಿ ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗಿದೆ. ಜಮ್ಮು ಕಾಶ್ಮೀರದ ಶೀತಲ್ ದೇವಿ ಕಾಲಿನಿಂದಲೇ ಬಿಲ್ಲೆಳೆದು ಬಾಣ ಬಿಟ್ಟು ಅಂತರರಾಷ್ಟ್ರೀಯ ಸಾಧನೆ ಮಾಡಿದವರು. ಅವರ ಜೊತೆಗೆ ಮೊಹಮದ್ ಶಮಿ, ಪಾರುಲ್ ಚೌಧರಿ, ನಸ್ರೀನ್, ಪ್ರಾಚಿ ಯಾದವ್, ವೈಶಾಲಿ, ಅದಿತಿ ಎಂದು 26 ಜನ ಅರ್ಜುನ

ರಾಮ ಮಂದಿರ ಉದ್ಘಾಟನೆಗೆ ಬರಬೇಡಿ: ಅಡ್ವಾಣಿ, ಜೋಶಿಯವರಿಗೆ ಮಂದಿರ ಟ್ರಸ್ಟ್ ಮನವಿ

ರಾಮ ಮಂದಿರ ಉದ್ಘಾಟನೆಗೆ ದಯವಿಟ್ಟು ಬರಬೇಡಿ ಎಂದು ರಾಮ ಮಂದಿರ ಹೋರಾಟದ ಪ್ರಮುಖರು ಮತ್ತು ಬಿಜೆಪಿ ನಾಯಕರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರಿಗೆ ರಾಮ ಮಂದಿರ ಟ್ರಸ್ಟ್. ಇದು ಸ್ವಲ್ಪ ವಿವಾದಕ್ಕೆ ಕಾರಣವಾಗುತ್ತಲೇ ರಾಮ ಮಂದಿರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅವರು ಇಬ್ಬರು ಹಿರಿಯರೂ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಕ್ಷಗಟ್ಟಲೆ ಜನರು ಸೇರುವ ತಾಣದಲ್ಲಿ ಅವರನ್ನು ನೋಡಿಕೊಳ್ಳಲು

ಇಂದು ಲೋಕ ಟೀ ಡೇ

ಡಿಸೆಂಬರ್ 15ನ್ನು 2005ರಿಂದ ಜಾಗತಿಕ ಟೀಡೇ ಆಗಿ ಭಾರತ ಸಹಿತ ಹಲವು ದೇಶಗಳು ಆಚರಿಸುತ್ತಿವೆ. ಚಾ ಬೆಳೆಗೆ ಪೆÇ್ರೀತ್ಸಾಹ, ಗ್ರಾಹಕರ ಮತ್ತು ಚಾ ಕಾರ್ಮಿಕರ, ಮುಖ್ಯವಾಗಿ ಎಲೆ ಕೊಯ್ವ ಮಹಿಳೆಯರ ಒಳಿತನ್ನು ಹುಡುಕುವುದು ಈ ದಿನಾಚರಣೆಯ ವಿಶೇಷವಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಶಿಯಾ, ಕೆನ್ಯಾ, ಮಲಾವಿ, ಮಲೇಶಿಯಾ, ಉಗಾಂಡಾ, ತಾಂಜಾನಿಯಾ, ಭಾರತ ಇವು ಮುಖ್ಯವಾಗಿ ಚಾ ದಿನ ಆಚರಿಸುವ ದೇಶಗಳಾಗಿವೆ.