Home Posts tagged #bainduru (Page 4)

ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ

ಬೈಂದೂರು: ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಬೈಂದೂರಿನಲ್ಲಿ ನಡೆಯಿತು. ಸಂಸದ ಬಿ. ವೈ ರಾಘವೇಂದ್ರ ಅವರು ನೂತನ ಆಡಳಿತ ಸೌಧದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕು ಘೋಷಷಣೆಯಾದ ಬಳಿಕ ಬೈಂದೂರು ತಾಲೂಕು ಕೇಂದ್ರಕ್ಕೆ ಅವಶ್ಯಕತೆಯಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಪ್ರಮುಖ

ಬೈಂದೂರಿನ ನಾಗೂರಿನಲ್ಲಿ ಹಾರ್ಡ್‍ವೇರ್ ಶಾಪ್‍ಗೆ ಆಕಸ್ಮಿಕ ಬೆಂಕಿ

ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ರಾಷ್ಟ್ರೀಯ ಹೆದ್ದಾರಿ 66 ರ ಮಸೀದಿ ಎದುರು ಉರ್ದು ಶಾಲೆ ಸಮೀಪವಿರುವ ರವಿರಾಜ್ ಶೆಟ್ಟಿ ಚೇರ್ಕಾಡಿ ಅವರ ಒಡೆತನದ ದುರ್ಗಾರಶ್ಮಿ ಹಾರ್ಡವೇರ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸಂಭವಿಸಿದೆ. ದುರ್ಗಾರಶ್ಮಿ ಹಾರ್ಡವೇರ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಕಸ್ಮಾತ್ ಬೆಂಕಿ ತಗುಲಿದೆ ಬೆಂಕಿ ಕೆನ್ನಾಲಿಗೆ

ಬೈಂದೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಅಷ್ಠಬಂಧ ಬ್ರಹ್ಮಕಲಶಾಭಿಷೇಕ

ಇತಿಹಾಸ ಪ್ರಸಿದ್ಧ ಬೈಂದೂರು ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ಶ್ರೀದೇವಿಯ ಸಾನಿಧ್ಯದಲ್ಲಿಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಶ್ರೀಮನ್ಮಹಾ ರಥೋತ್ಸವವು ವಿಜೃಂಭಣೆಯಿಂದ ನಡೆಯಿತುತಂತ್ರಿಗಳಾದ ಮಂಜುನಾಥ ಅಡಿಗ ಹಾಗೂ ಪ್ರಧಾನ ಅರ್ಚಕರಾದ ಪ್ರಕಾಶ್ ಐತಾಳ್ ಇವರ ನೇತೃತ್ವದಲ್ಲಿ ಪ್ರತಿದಿನ ತಂತ್ರಿಗಳಾದ ಧಾರ್ಮಿಕ ವಿಧಿ ವಿಧಾನಗಳು ದೇವಿಯ ಸಾನಿಧ್ಯದಲ್ಲಿ ಸಂಪನ್ನಗೊಂಡಿದೆ. ಅಷ್ಟಬಂದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಬಿ.ಎಸ್ .ಸುರೇಶ್ ಶೆಟ್ಟಿ.ಮಾತನಾಡಿ

ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಮೃತ್ಯು

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಭುಜಂಗ ಶೆಟ್ಟಿ ಅಂಗಡಿ ಮನೆ ಕೋಣ್ಕಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾಡಾ ಗ್ರಾಮದಲ್ಲಿ ನಡೆದಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಭುಜಂಗ ಶೆಟ್ಟಿ ಅವರಿಗೆ ವಿದ್ಯತ್ ಸ್ಮರ್ಶಿಸಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಶವವನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‍ಐ

ಬೈಂದೂರು ಲಾವಣ್ಯ (ರಿ) ಇದರ 46ನೇ ವಾರ್ಷಿಕೋತ್ಸವ

ಬೈಂದೂರು ಇಲ್ಲಿನ ಲಾವಣ್ಯ ರಿ ಇದರ 46ನೇ ವಾರ್ಷಿಕೋತ್ಸವ ಅಂಗವಾಗಿ ರಂಗ ಪಂಚಮಿ 2023 ನಾಟಕೋತ್ಸವ ಹಾಗೂ ಯಕ್ಷಗಾನ ಉದ್ಘಾಟನಾ ಸಮಾರಂಭ ಬೈಂದೂರು ಶಾರದಾ ವೇದಿಕೆ ಸೋಮವಾರ ಸಂಜೆ ನಡೆಯಿತು. ಬೈಂದೂರು ಯು.ಬಿ.ಎಸ್ ಶೈಕ್ಷಣಿಕ ಶಿಕ್ಷಣ ಸಮೂಹ ಸಂಸ್ಥೆಯ ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ನಂದಗೋಕುಲ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಅವರು ಶುಭಾಶಂಸನೆಗೈದರು ಲಾವಣ್ಯ ರಿ ಬೈಂದೂರು ಅಧ್ಯಕ್ಷ ಬಿ. ನರಸಿಂಹ

ಯಡ್ತೆರೆ ಮಂಜಯ್ಯ ಶೆಟ್ಟರ ಕನಸಿನ ಕೂಸು ನೆಂಪು ಪಬ್ಲಿಕ್ ಸ್ಕೂಲ್ :ವಜ್ರ ಸಂಗಮದ ಉದ್ಘಾಟನಾ ಕಾರ್ಯಕ್ರಮ

ಬೈಂದೂರು: ಗ್ರಾಮೀಣ ಭಾಗಗಳ ಅಭಿವೃದ್ಧಿಯ ಬಗ್ಗೆ ಕನಸು ಕನಸು ಕಂಡು ನನಸು ಮಾಡಲು ಹೊರಟಿದ್ದ ಯಡ್ತೆರೆ ಮಂಜುಯ್ಯ ಶೆಟ್ಟಿ ಕರಾವಳಿಯ ಧೀಮಂತ ನಾಯಕ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.ವಂಡ್ಸೆ ಸಮೀಪದ ನೆಂಪುವಿನ ಮಲ್ನಾಡ್ ಸ್ಲೂಲ್, ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ವಜ್ರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಂಡ್ಸೆ ಪಿರ್ಕಾ ಎನ್ನುವುದು ಉಡುಪಿ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಪಿರ್ಕಾ ಆಗಿದೆ. ನಿಜವಾಗಿ ವಂಡ್ಸೆ ಪಿರ್ಕಾ

ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ : ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ

ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನ ಸಭೆಯು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಮಾತನಾಡಿದ ಸಂಸದ ಬಿ. ವೈ ರಾಘವೇಂದ್ರ ಅವರು, “ಸಾಕಷ್ಟು ಅನುದಾನವು ಈ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ನೀಡಿದೆ. ರೂ.1500 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ಶಂಕುಸ್ಥಾಪನೆ ಹಾಗೂ

ಕುಂದಾ ಬಾರಂದಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿ ಸಾನಿಧ್ಯ : ಲೋಕಕಲ್ಯಾಣಾರ್ಥವಾಗಿ ಶತಚಂಡಿಕಾ ಯಾಗ

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರತಾಲೂಕಿನ ಕುಂದಬಾರಂದಾಡಿ ಗ್ರಾಮದ ಮೂಡಾರೆ ಶ್ರೀದುರ್ಗಾಪರಮೇಶ್ವರಿ ದೇವಿ ಕ್ಷೇತ್ರದಲ್ಲಿ ಊರಿನ ಒಳಿತಿಗಾಗಿ ಹಮ್ಮಿಕೊಳ್ಳಲಾದ ವೇ.ಮೂ ರಾಮಕೃಷ್ಣ ಭಟ್ಟ್ ಶಾರ್ಕೆ ನೇತೃತ್ವದಲ್ಲಿ ಶತಚಂಡಿಕಾ ಯಾಗ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂರ್ಣಾಹುತಿ ಆಗುವುದರ ಮುಖೇನ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ದೂರ ದೂರ ಊರಿನಿಂದ ಆಗಮಿಸಿದ ಸಾವಿರಾರು ಭಕ್ತರು ದೇವಿಯ ಅನ್ನ ಪ್ರಸಾದವನ್ನು ಸ್ವೀಕರಿಸಿದರು ಶ್ರೀದೇವಿಯ ಮುಡಿ ಗಂಧ ಪ್ರಸಾದವನ್ನು

ಕುಂದಾಪುರ : ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ

ಬೈಂದೂರು: ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೋಳೂರು ಎಂಬಲ್ಲಿ ಚಿರತೆಯೊಂದು ಆಹಾರ ಹುಡುಕಿಕೊಂಡು ಬಂದು ಮಾಸ್ತಿ ಎಂಬುವವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆಯು ನಾಜೂಕಿನಿಂದ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ಬೋನಿನೊಳಗೆ ಹಾಕಿ ಮೇಲೆಕ್ಕೆತ್ತಿ ರಕ್ಷಿಸಲಾಗಿದೆ. ಇದೀಗ ಗುಡ್ಡಿಹೋಟಲ್, ಜಡ್ಡಾಡಿ ಕೋಣ್ಕಿ, ಬಡಾಕೆರೆ ತಾರೀಬೇರುನಲ್ಲಿ ಮುಂತಾದ ಸ್ಥಳದಲ್ಲಿ ಪದೇ ಪದೇ ಜನ ವಾಸ್ತವ ಸ್ಥಳದಲ್ಲಿ ಚಿರತೆಗಳು ಕಾಣಿಸಿಕೊಂಡು ಜನರು ಭಯ

ಗೋಲ್ಡ್ ಮೊಬೈಲ್ ಮತ್ತು ಎಸ್‍ಎಲ್‍ವಿ ಟ್ರೇಡರ್ಸ್ ಮಳಿಗೆ ಶುಭಾರಂಭ

ರಾಷ್ಟ್ರೀಯ ಹೆದ್ದಾರಿ 66ರ ನಾಯ್ಕನಕಟ್ಟೆ ಸರ್ಕಲ್ ಬಳಿ ನೂತನವಾಗಿ ಗೋಲ್ಡ್ ಮೊಬೈಲ್ ಮತ್ತು ಎಸ್‍ಎಲ್‍ವಿ ಟ್ರೇಡರ್ಸ್ ಮಳಿಗೆ ಶುಭಾರಂಭಗೊಂಡಿತು. ಇಲ್ಲಿ ಎಲ್ಲಾ ತರಹದ ಕಂಪನಿ ಮೊಬೈಲಗಳು ಹಾಗೂ ವಿವಿಧ ಕಂಪನಿಯ ಮೊಬೈಲ್ ರೀಚಾರ್ಜ್‍ಗಳು ಸಿಮ್ ಕಾರ್ಡ್‍ಗಳು, ಗ್ರಾಹಕರಿಗೆ ಪಾನ್ ಕಾರ್ಡ್, ಲ್ಯಾಂಡ್ ಲಿಂಕ್ಸ್, ವಿವಿಧ ಕಂಪನಿಯ ಮೋಟಾರ್ ಸೈಕಲ್‍ಗಳು, ಮಿನಿ ಎಟಿಎಂ ಇನ್ನಿತರ ಎಲ್ಲಾ ಗ್ರಾಹಕರಿಗೆ ಬೇಕಾಗುವ ಸೌಲಭ್ಯಗಳು ಸಿಗುತ್ತದೆ