Home Posts tagged #bainduru (Page 5)

ಬೈಂದೂರು ಶ್ರೀ ಭದ್ರಕಾಳಿ ದೇವಸ್ಥಾನ ಚಣಕ್ಕಳಿ ಬಡಾಕೆರೆ ಶರನ್ನವರಾತ್ರಿ ಉತ್ಸವ

ಬೈಂದೂರು ತಾಲೂಕಿನ ಸುಪ್ರಸಿದ್ಧ ದೇವಸ್ಥಾನ ಶ್ರೀ ಭದ್ರಕಾಳಿ ದೇವಸ್ಥಾನ ಚಣಕ್ಕಳಿ ಬಡಾಕೆರೆ ಇಂದು ವಿಜಯ ದಶಮಿ ಪ್ರಯುಕ್ತ ಮಂಜುನಾಥ್ ಅಡಿಗ ಬಡಾಕೆರೆ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನದ ಮೂಲಕ ಇಂದು ದೇವಿಯ ಸನ್ನಿಧಾನದಲ್ಲಿ ದುರ್ಗಾ ಹೋಮ ವಿಶೇಷ ಮಹಾಪೂಜೆ ಅನ್ನದಾನ ಸೇವೆ ಸಂಪನ್ನಗೊಂಡಿದೆ. ಸಂಜೆ 6:00 ರಿಂದ 8.30 ರವರೆಗೆ ಶ್ರೀ ರಾಮ ಭಜನಾ ಮಂಡಳಿ ಬಡಾಕೆರೆ

ಬೈಂದೂರು :ಚಾಲಕ-ಮಾಲಕರ ಸಂಘದ ಉದ್ಘಾಟನಾ ಸಮಾರಂಭ

ಬೈಂದೂರು: ತಾಲೂಕು ರಿಕ್ಷಾ, ಟೆಂಪೋ, ಟ್ಯಾಕ್ಸಿ, ಚಾಲಕ ಹಾಗೂ ಮಾಲಕರ ಸಂಘ (ರಿ) ಉದ್ಘಾಟನಾ ಸಮಾರಂಭ ದೇವಕಿ ನಂದವನ ಪರಿಚಯ ಉಪ್ಪುಂದ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.. ಉದ್ಘಾಟನಾ ಸಮಾರಂಭ ಶ್ರೀ ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿ ಏಳಜಿತ್ ಬೈಂದೂರು ಇವರ ದಿವ್ಯ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು. ಆಶೀರ್ವಚನದಲ್ಲಿ ಸ್ವಾಮೀಜಿಗಳು ಕರ್ತವ್ಯವೇ ಪೂಜೆ ,ಸಾರ್ವಜನಿಕ ಸೇವೆಯೇ ಯಜ್ಞ ಯಾಗಾದಿಗಳು ಸಂಸ್ಥೆ ನೂರಾರು ವರ್ಷ ಉಳಿದು ಬೆಳೆದು ತನ್ನೆಲ್ಲ

ಬೈಂದೂರು: 49ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಂಭ್ರಮ

ಬೈಂದೂರಿನ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 49ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು.ಈ  ಪುಣ್ಯ ಕಾರ್ಯಕ್ಕೆ  ಬೈಂದೂರು ಭಾಗದ ಸಾರ್ವಜನಿಕರು ಪಾಲ್ಗೊಂಡು ಶ್ರೀದೇವಿ ಕೃಪಾಕಟಾಕ್ಷಕ್ಕೆ ಹಾಜರಿದ್ದು ಇನ್ನು ಮೂರು ದಿನ ನಡೆಯುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಉತ್ಸವದಿಂದ ಪಾಲ್ಗೊಂಡು ಸೇವೆಯಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ,

ಅಜ್ಜಿಯ ಮನೆ ನಿರ್ಮಾಣಕ್ಕೆ ಬೇಕಿದೆ ಸಂಕಲ್ಪ

ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೈಲು ಗೋಳಿಹಕ್ಲು ನಿವಾಸಿ ಚಂದು ಪೂಜಾರ್ತಿ (73) ಎನ್ನುವ ಇಳಿ ವಯಸ್ಸಿನ ಅಜ್ಜಿ ಏಕಾಂಗಿ ಆಗಿ ಬದುಕುತ್ತಿದ್ದು ಅವರ ವಾಸದ ಮನೆ ಶಿಥಿಲಾವಸ್ಥೆಯಲ್ಲಿದೆ ಅಜ್ಜಿಗೊಂದು ಸೂರೊಂದನ್ನು ಕಲ್ಪಿಸುವ ಕಾರ್ಯಕ್ಕೆ ಸಮಾಜ ಬಾಂಧವರುಮ,ದಾನಿಗಳು ಕೈ ಜೋಡಿಸಬೇಕಾಗಿದೆ.ನಾಡ ಗ್ರಾಮದ ತೆಂಕಬೈಲು ಗೋಳಿಹಕ್ಲು 5.ಸೆಂಟ್ಸ್ ಕಾಲೋನಿಯಲ್ಲಿ ವಾಸಮಾಡುತ್ತಿರುವ ಚಂದು ಅಜ್ಜಿಗೆ ಮಕ್ಕಳಿಲ್ಲ,ಅವರ ಪತಿ ನಿಧನರಾಗಿ 30 ವರ್ಷಗಳು ಕಳೆದು

ಬಡ ದಂಪತಿಗಳಿಗೆ ಮನೆ ನಿರ್ಮಿಸಿಕೊಟ್ಟ ಆಶ್ರಯದಾತ ಡಾ. ಗೋವಿಂದ ಬಾಬು ಪೂಜಾರಿ

ಬೈಂದೂರು :ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ )ಉಪ್ಪುಂದ ಶೈಕ್ಷಣಿಕ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ ಟ್ರಸ್ಟ್ ಮೂಲಕ ತೀರಾ ಅಗತ್ಯ ಉಳ್ಳವರಿಗೆ ಹಾಗೂ ಕಡು ಬಡವರಿಗೆ ಸೂರು(ಮನೆ) ನಿರ್ಮಿಸಿ ಕೊಡುವ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬಂದಿರುತ್ತದೆ . ಬೈಂದೂರು ಗಂಗಾನಾಡು ನಿರೋಡಿ ರಾಮ ಮರಾಠ ದಂಪತಿಗಳಿಗೆ ಸುಸಜ್ಜಿತ ಮನೆಯನ್ನು ಶ್ರೀ ಡಾ ಗೋವಿಂದ ಬಾಬು ಪೂಜಾರಿಯವರು ನಿರ್ಮಿಸಿ ಫಲಾನುಭವಿಗಳಿಗೆ ಮನೆಯ ಕೀಯನ್ನು ಹಸ್ತಾಂತರಿಸಿದರು. ವರಲಕ್ಷ್ಮಿ ನಿಲಯದ

ಬೈಂದೂರು ವಲಯ ವತಿಯಿಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವಲಯ ವತಿಯಿಂದ ನಾವು ಕಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ವಹಿಸಿದ್ದರು.ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು ಶುಭ ಹಾರೈಸಿದರು. ಸುಮಾರು 10

ಆಯತಪ್ಪಿ ನದಿಗೆ ಬಿದ್ದ ವಿದ್ಯಾರ್ಥಿನಿಗೆ ಶೋಧ

ಬೈಂದೂರು : ಸೋಮವಾರ ಸಂಜೆ ಶಾಲೆಯಿಂದ ಮನೆಗೆ ವಾಪಾಸ್ಸಾಗುವಾಗ ಕಾಲುಸಂಕದಿಂದ ಆಕಸ್ಮಿಕ ಕಾಲು ಜಾರಿ ಹರಿಯುವ ನದಿಗೆ ಬಿದ್ದು ನಾಪತ್ತೆದ ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಚಪ್ಪರಿಕೆ ಸರಕಾರಿ ಹಿ.ಪ್ರಾ.ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಮೃತದೇಹ ಮಂಗಳವಾರ ಸಂಜೆ 6 ಗಂಟೆ ತನಕ ಪತ್ತೆಯಾಗಿಲ್ಲ. ಸನ್ನಿಧಿ ಮೃತದೇಹ ಪತ್ತೆಗೆ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು, ಈಜುಪಟುಗಳು ಹಾಗೂ ಮುಳುಗು ತಜ್ಞರು ನಿರಂತರವಾಗಿ ಶೋಧ ಕಾರ್ಯದಲ್ಲಿ

ಕಡಲ್ಕೊರೆತ, ಸೌಪರ್ಣಿಕಾ ನದಿ ನೆರೆಹಾವಳಿ : ಸಂಕಷ್ಟ ನಿವಾರಣೆಗೆ ವರಾಹ ದೇವರಲ್ಲಿ ಪ್ರಾರ್ಥನೆ

ಬೈಂದೂರು: ಬೈಂದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ವಿಪರೀತ ರಕ್ಕಸ ಅಲೆಗಳ ಕಡಲ್ಕೊರೆತ ಸೌಪರ್ಣಿಕಾ ನದಿಯ ನೆರೆಹಾವಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತವಾಗಿ ಸಾಕಷ್ಟು ಮುಗ್ಧ ಜೀವಗಳು ಮತ್ತು ಜಾನುವಾರುಗಳು ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿವೆ. ಅಪಘಾತಗಳು ಹೆಚ್ಚುತ್ತಿರುವುದರಿಂದ ಜನರು ಭೀತರಾಗಿದ್ದು ಸಂಕಷ್ಟದ ನಿವಾರಣೆಗೆ ಜುಲೈ 28ರಂದು ನಡೆಯುವ ಬೃಹತ್ ಜಾತ್ರಾ ಮಹೋತ್ಸವದಲ್ಲಿ ಮಾರಸ್ವಾಮಿ ವರಾಹ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದರ

ಬೈಂದೂರು: ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಸಹಿತ ಇಬ್ಬರ ಆರೋಪಿಗಳ ಬಂಧನ

ಬೈಂದೂರು: ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ಅವರಿಗೆ ಬಂದ ಖಚಿತ ಮಾಹಿತಿಯಂತೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರ ಉಪಸ್ಥಿತಿಯಲ್ಲಿ ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಸಹಿತ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಬೈಂದೂರು ರಾಹುತನಕಟ್ಟೆ ಎಂಬಲ್ಲಿ ಮಂಗಳವಾರ ನಡೆದಿದೆ. ಭಟ್ಕಳ ನಿವಾಸಿ ಅಬ್ದುಲ್ ರೆಹಮಾನ್ (31), ಶಿರ್ವ ನಿವಾಸಿ ಅಬ್ದುಲ್ ಸಮದ್ (30) ಬಂಧಿತರಾಗಿದ್ದು, ಇವರಿಬ್ಬರು ಮಾದಕ ವಸ್ತುವನ್ನು ಸಲೀಮ್ ಮಂಚಿ ಎಂಬಾತನಿಂದ ಖರೀದಿಸಿ

ಬೈಂದೂರಿನ ನಾವುಂದಲ್ಲಿ ಅಪಘಾತದಲ್ಲಿ ಮೂವರಿಗೆ ಗಾಯ ಒರ್ವನ ಸ್ಥಿತಿ ಗಂಭೀರ

ಬೈಂದೂರು: ಬೈಂದೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಸಂಭವಿಸಿದೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ಬಸ್‍ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತು. ಕಾರು ಕುಂದಾಪುರದಿಂದ ಭಟ್ಕಳ ಕಡೆಗೆ ಸಾಗುತ್ತಿತ್ತು. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಠಾಣೆ ಪಿ.ಎಸ್.ಐ ಪವನ್