Home Posts tagged #udupi (Page 18)

ಕಾರ್ಕಳ ತಾಲೂಕಿನಾದ್ಯಾಂತ ಸಂಭ್ರಮದ ನಾಗರ ಪಂಚಮಿ

ಕಾರ್ಕಳ ತಾಲೂಕಿನ ವಿವಿಧ ನಾಗ ಸಾನಿಧ್ಯಗಳಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ನಾಗಬನಗಳಲ್ಲಿ ಭಕ್ತಾದಿಗಳು ನಾಗನಿಗೆ ಹಾಲು, ಸೀಯಾಳ ಸಮರ್ಪಿಸುವ ದೃಶ್ಯ ಕಂಡು ಬಂತು. ನಾಗರ ಪಂಚಮಿ ಪ್ರಯುಕ್ತ ದನದ ಶುದ್ಧ ಹಾಲಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಕಾರ್ಕಳದ ಪೆರುವಾಜೆ ಬಳಿ ಇರುವ ಹಾಲು ಮಾರಾಟ ಕೇಂದ್ರದ

ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ SCDCC ಬ್ಯಾಂಕ್ ನ ಸಾಧನ ಪ್ರಶಸ್ತಿ

ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೆ ಸತತ 3 ನೆ ಬಾರಿ SCDCC ಬ್ಯಾಂಕ್ ನ ಸಾಧನ ಪ್ರಶಸ್ತಿ ದಿನಾಂಕ. 19-08-2023 ರಂದು ನಡೆದ SCDCC ಬ್ಯಾಂಕ್ ನ ಮಹಾಸಬೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಕರ್. ಕೆ ಹಾಗೂ ಸಿ.ಇ.ಒ ಪದ್ಮನಾಭ್ .ಎಂ ಇವರನ್ನು ಸನ್ಮಾನಿಸಿ scdcc ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಇವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು .ಸೊಸೈಟಿಯು ಕಳೆದ 3 ವರ್ಷದಿಂದ ಈ ಪ್ರಶಸ್ತಿಯನ್ನು ಪಡೆಯುತ್ತಿದೆ.

ಬಾರಕೂರು ಬಂಡಿಮಠ: ಕುಲಾಲ ಸಮಾಜದ ದೈವಸ್ಥಾನಕ್ಕೆ ಬೇಕು ಕಾಯಕಲ್ಪ..!

ಬಾರಕೂರು ಬಳಿಯ ಬಂಡೀಮಠದಲ್ಲಿರುವ ಕುಂಬಾರ ಸಮಾಜದವರ ದೈವಸ್ಥಾನ ತೀರಾ ಜೀರ್ಣಾವಸ್ಥೆಯಲ್ಲಿದ್ದು, ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಕುಂಬಾರಿಕೆ ಮಾಡುವ ಕುಲಾಲ ಸಮುದಾಯದವರಿಗೆ ಮೂಲ ಸ್ಥಾನ ಎನ್ನುವುದಕ್ಕೆ ಸಾಕ್ಷಿಯಾಗಿ ತಲತಲಾಂತರದಿಂದ ಇಲ್ಲಿ ಅರ್ಚನೆ, ಪೂಜೆ ಮತ್ತು ದರ್ಶನ ಕುಲಾಲ ಸಮುದಾಯದವರಿಂದ ನಡೆಯುತ್ತಾ ಬರುತ್ತಿದೆ. ಇಲ್ಲಿ ಪ್ರಧಾನ ದೈವ ಹಾೈಗುಳಿ ಜೊತೆ ಹಲವಾರು ಪರಿವಾರ ಶಕ್ತಿಗಳ ಸಾನಿಧ್ಯವಿದೆ. ಸುತ್ತ ಕಾನನದ ನಡುವೆ ಮುಳಿ ಹುಲ್ಲಿನ ಚಿಕ್ಕ ಗುಡಿಯೊಂದು ಇದ್ದು

ಬೈಂದೂರು: ಅಶಕ್ತರ ಬಾಳಿಗೆ ಬೆಳಕಾದ ಬೆಂಕಿ ಮಣಿ ಸಂತು: ಜಾತ್ರೆಗಳಲ್ಲಿ ವೇಷ ಹಾಕಿ ಹಣ ಸಂಗ್ರಹ

ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮರವಂತೆ ಶ್ರೀ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆಯಲ್ಲಿ ಅಶಕ್ತರ ಚಿಕಿತ್ಸಾ ಸಹಾಯಾರ್ಥವಾಗಿ ಹಣ ಸಂಗ್ರಹಿಸುವ ಮೂಲಕ ಅಶಕ್ತಿರ ಬಾಳಿಗೆ ಬೆಳಕಾದ ಬೆಂಕಿ ಮಣಿ ಸಂತು ಅವರು. ಬೆಂಕಿ ಮಣಿ ಸಂತು ಅಶಕ್ತರ ಚಿಕಿತ್ಸಾ ಸಹಾಯರ್ಥ ವಿಶೇಷ ವೇಷ ಧರಿಸಿ ಹಣಸಂಗ್ರಹಣೆ ಮಾಡುತ್ತಿರುವುದು ಇದೆ ಮೊದಲೇನಲ್ಲ… ಅದೆಷ್ಟೋ ಅನಾರೋಗ್ಯ ಪೀಡಿತರಿಗೆ ವಿವಿಧ ಜಾತ್ರೆಯಲ್ಲಿ ವೇಷ ಹಾಕುವುದರ ಮೂಲಕ ಹಣವನ್ನು

ಬ್ರಹ್ಮಾವರ ; ಅಟೋ ಚಾಲಕರು ಸೂಕ್ತ ದಾಖಲೆ ಅಟೋದಲ್ಲಿರಿಸಿಕೊಳ್ಳಿ – ಠಾಣಾಧಿಕಾರಿ ರಾಜಶೇಖರ

ಬ್ರಹ್ಮಾವರ ರಥ ಬೀದಿಯ ಬಳಿ ಆರ್. ಕೆ. ಶೆಟ್ಟಿಯರಿಂದ ಕೊಡುಗೆಯಾಗಿ ನೂತನವಾಗಿ ರಚನೆಯಾದ ಅಯ್ಯಪ್ಪ ರಿಕ್ಷಾ ನಿಲ್ದಾಣವನ್ನು ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ರಾಜಶೇಖರ ವಂದಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಟೋ ಚಾಲಕರು ಯಾವತ್ತೂ ಸೂಕ್ತ ದಾಖಲೆಯನ್ನು ಅಟೋದಲ್ಲಿ ಇರಿಸಿಕೊಳ್ಳಿ. ದೇಶದ ಬಹತೇಕ ಜನರು ಅಟೋ ರಿಕ್ಷಾವನ್ನು ನಂಬಿಕೊಂಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ನಿಮ್ಮ ಕುಟುಂಬದ ಸುರಕ್ಷೆಗೆ ಇದು ಸಹಕಾರಿ ಎಂದರು. ಬ್ರಹ್ಮಾವರ ವ್ಯವಸಾಯ ಸೇವಾ

ಕಟಪಾಡಿ: ಕಾರು ಡಿಕ್ಕಿ ದಂಪತಿಗೆ ಗಾಯ

ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಗಾಯಗೊಂಡ ಘಟನೆ ಕಟಪಾಡಿ ಬಳಿ ನಡೆದಿದೆ. ತೆಂಕ ಎರ್ಮಾಳು ನಿವಾಸಿಗಳಾದ ದೀರಜ್ ಹಾಗೂ ಅವರ ಪತ್ನಿ ಪವಿತ್ರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಪರಿಣಾಮ ಕಟಪಾಡಿ ಪೇಟೆ ಬಳಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕವನ್ನು ಏರಿ ನಂತರ ದ್ವಿಚಕ್ರ ವಾಹನಕ್ಕೆ

ಉಡುಪಿ ಜಿಲ್ಲಾ ಬಿಜೆಪಿ ಎಸ್ಸಿ, ಎಸ್ಟಿ ಮೋರ್ಚಾದಿಂದ ದಲಿತ ವಿರೋಧ ನೀತಿ ಖಂಡಿಸಿ ಪ್ರತಿಭಟನೆ

ಉಡುಪಿ ಜಿಲ್ಲೆಯ ಬಿಜೆಪಿ ಎಸ್‍ಸಿ ಮತ್ತು ಎಸ್.ಟಿ. ಮೋರ್ಚಾದ ವತಿಯಿಂದ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂಪಾಯಿ ಹಣವನ್ನು ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಉಡುಪಿಯ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಪ್ರತಿಭಟನೆಯಲ್ಲಿ ಬಿಜೆಪಿಯ ಪ್ರಮುಖರು

ಉಡುಪಿ : ಕೈಮಗ್ಗ ಸೀರೆಗಳ ಉತ್ಸವ

ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಆಶ್ರಯದಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ಉಡುಪಿ, ತಾಳಿಪಾಡಿ, ಶಿವಳ್ಳಿ, ಬ್ರಹ್ಮಾವರ, ಪಡುಪಣಂಬೂರು, ಮಂಗಳೂರು, ಬಸ್ರೂರು ಮತ್ತು ಮಿಜಾರು ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳ ಜಂಟಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಿತು. ಮೂರು ದಿನದ ಕೈಮಗ್ಗ ಸೀರೆಗಳ ಉತ್ಸವಕ್ಕೆ ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಚಾಲನೆ ನೀಡಿದರು.ಉದ್ಯಮಿ

ಮಲ್ಪೆ: ನೀರಿನಲ್ಲಿ ಮುಳುಗಿ ಬಾಲಕಿ ಸಾವು: ಇನ್ನೋರ್ವ ಬಾಲಕಿಯ ರಕ್ಷಣೆ

ಉಡುಪಿಯ ಮಲ್ಪೆ ಬೀಚ್‌ನ ಸಮುದ್ರ ತೀರದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ಮಡಿಕೇರಿ ಮೂಲದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ಇದೇ ವೇಳೆ ಇನ್ನೋರ್ವ ಬಾಲಕಿಯನ್ನು ರಕ್ಷಿಸಲಾಗಿದೆ.   ಮೃತರನ್ನು ಮಡಿಕೇರಿ ನಿವಾಸಿ ಮಾನ್ಯ(16) ಎಂದು ಗುರುತಿಸಲಾಗಿದೆ. ಈಕೆಯೊಂದಿಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಆಕೆಯ ಗೆಳತಿ ಯಶಸ್ವಿನಿ(16) ಎಂಬವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.   ಇವರಿಬ್ಬರೂ ಮೂರು ದಿನಗಳ ಹಿಂದೆ ಮನೆ ಬಿಟ್ಟು ಮಂಗಳೂರು ಕಡೆಗೆ

ಆ.5ರಂದು – ಬ್ರಹ್ಮಾವರದಲ್ಲಿ ನೂತನ ನ್ಯಾಯಾಲಯ ಉದ್ಘಾಟನೆ

ಬ್ರಹ್ಮಾವರದಲ್ಲಿ ನೂತನ ತಾಲೂಕು ಕೇಂದ್ರವಾದ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯವನ್ನು ಆಗಸ್ಟ್ 5ರಂದು ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಬಳಿಕ ಭಂಟರ ಭವನದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಐ ಅರುಣ್ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ರಾಷ್ಟ್ರೀಯ ಹೆದ್ದಾರಿ 66 ಬಳಿಯ ಹಳೆ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ನ್ಯಾಯಾಲಯವಾಗಿ ಪರಿವರ್ರ್ತಿಸಲು