Home Posts tagged #udupi (Page 17)

ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದಲ್ಲಿ ಬೆಳಕಿಗಾಗಿ ಪರದಾಟ

ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ನಗರಭಾಗ ಸೇರಿದಂತೆ ಹೇರೂರಿನಿಂದ ಉಪ್ಪಿನಕೋಟೆ ತನಕ ಕೇಂದ್ರ ಭಾಗದಲ್ಲಿ ಚತುಷ್ಪಥ ರಸ್ತೆಗೆ ಹೆದ್ದಾರಿ ಇಲಾಖೆಯಿಂದ ಬೆಳಕಿನ ವ್ಯವಸ್ಥೆಯಿಲ್ಲ. ರಸ್ತೆ ಬದಿ ವಿದ್ಯುತ್ ಕಂಬಗಳು ಮಾತ್ರ ಕಂಡುಬರುತ್ತಿದ್ದು, ವಿದ್ಯುತ್ ದೀಪಗಳು ಮಾತ್ರ ಉರಿಯುತ್ತಿಲ್ಲ. ಬ್ರಹ್ಮಾವರ ಸರ್ವಿಸ್ ರಸ್ತೆ ಆರಂಭವಾಗುವ ಮಹೇಶ್

ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಯುವಕರು ಹಾಗೂ ಟೋಲ್ ಸಿಬ್ಬಂದಿಗಳ ನಡುವೆ ಹೊಡೆದಾಟ

ಉಡುಪಿ ಜಿಲ್ಲೆಯ ಗಡಿಭಾಗದ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಕಳೆದ ರಾತ್ರಿ ಬೆಂಗಳೂರು ಯುವಕರು ಹಾಗೂ ಟೋಲ್ ಸಿಬ್ಬಂದಿಗಳ ನಡುವೆ ಹೊಡೆದಾಟ ನಡೆದಿದೆ. ಬೆಂಗಳೂರಿನ ಐವರು ಯುವಕರ ತಂಡ ಕಾರಲ್ಲಿ ಬಂದಿದ್ದು ಪಾಸ್ಟ್ ಟ್ಯಾಗ್ ಇಲ್ಲದ ಅವರು ಗೇಟನ್ನು ಕೈಯಿಂದ ತೆರೆದು ಮುಂದೆ ಹೋದಾಗ ಟೋಲ್ ಸಿಬ್ಬಂದಿಗಳು ತಡೆದಿದ್ದು ಆಗ ಯುವಕನೊರ್ವ ಟೋಲ್ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಟೋಲ್ ಸಿಬ್ಬಂದಿಗಳು ಯುವಕರಿಗೆ ಚೆನ್ನಾಗಿ ಬಾರಿಸಿದ್ದಾರೆ.

ಶಿರೂರು: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಮೃತ್ಯು

ಶಿರೂರಿನ ಕೈರಂಪಣಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿ ಮೃತಪಟ್ಟ ಘಟನೆ ಅಳ್ವೆಗದ್ದೆಯಲ್ಲಿ ನಡೆದಿದೆ. ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಭ್(22) ಹಾಗೂ ನಝಾನ್(24) ಮೃತಪಟ್ಟ ದುದೈವಿಗಳಾಗಿದ್ದಾರೆ. ಕಳೆದ ಹಲವು ಸಮಯದಿಂದ ಕೈರಂಪಣಿ ಮೀನುಗಾರಿಕೆ ನಡೆಸುತ್ತಿರುವ ಇವರು ಭಾನುವಾರ ಸಂಜೆ ಕೂಡ ಕೈರಂಪಣಿ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರ ಪ್ರಕ್ಷುಬ್ದ ಇರುವ ಕಾರಣ

ಉಡುಪಿ: ಪರಿಸರ ಹೋರಾಟ ಅಭಿವೃದ್ಧಿಯ ಪಥ ತಪ್ಪಿಸದಿರಲಿ – ಜಗದೀಶ್ ಶೆಟ್ಟರ್

ಉಡುಪಿ : ರಾಜ್ಯದ ಎಲ್ಲಾ ಜಿಲ್ಲೆಗಳು ಸಮಗ್ರವಾಗಿ ಅಭಿವೃದ್ಧಿಯಾಗಬೇಕಾಗಿದೆ. ಇಂತಹ ಸಂದರ್ಭದಲ್ಲಿ ಪರಿಸರ ಹೋರಾಟ ಅಭಿವೃದ್ಧಿಯ ಪಥ ತಪ್ಪಿಸುವಂತಾಗಬಾರದು. ನಮ್ಮಲ್ಲಿ ಅಭಿವೃದ್ಧಿಯ ಪರ ಚಿಂತನೆ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರು ಹೇಳಿದರು. ಉಡುಪಿಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಆಯೋಜಿಸಿದ್ದ ಮಾಲಿನ್ಯ ನಿಯಂತ್ರಿತ ಕೈಗಾರೀಕರಣ ಹಾಗೂ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಸಂವಾದ

ಬ್ರಹ್ಮಾವರ: ಚಂದ್ರಯಾನ-3 ಯಶಸ್ಸಿಗೆ ಸಂಭ್ರಮಾಚರಣೆ

ಬ್ರಹ್ಮಾವರ : ವಿಶ್ವಕ್ಕೆ ಅಚ್ಚರಿ ಮೂಡಿಸಿದ ಭಾರತದ ಚಂದ್ರಯಾನದ ಯಶಸ್ಸಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.ಬ್ರಹ್ಮಾವರ ಫ್ರೆಂಡ್ಸ್ ಮತ್ತು ಡೈಮಂಡ್ ಜಿಮ್‍ನ ಸದಸ್ಯರು ಭಾರತದ ಹೆಮ್ಮೆಯ ವಿಜ್ಞಾನಿಗಳ ತಂಡದ ಶ್ರಮಕ್ಕೆ, ಇಸ್ರೋ ಸಂಸ್ಥೆಗೆ, ದೇಶದ ಪ್ರಧಾನಿ ನರೇಂದ್ರ ಮೋದಿಜೀಯವರಿಗೆ ಮತ್ತು ಭಾರತ ಮಾತೆಗೆ ಜೈ ಕಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ತಂಡದ ದೇವಾನಂದ ನಾಯಕ್, ಅರ್ಜುನ ಪ್ರಭು, ಮಧುಸೂಧನ

ಬ್ರಹ್ಮಾವರ: ಸುಜ್ಞಾನ ತೀರ್ಥರ 41ನೇ ಆರಾಧನಾ ಮಹೋತ್ಸವ

ಬ್ರಹ್ಮಾವರದ ಹಾನಸ ಅರೆಮಾದನಹಳ್ಳಿ ಸುಜ್ಞಾನ ತೀರ್ಥ ಮಹಾ ಸ್ವಾಮೀಜಿಯವರ 41 ನೇ ಆರಾಧನಾ ಮಹೋತ್ಸವ ನಡೆಯಿತು. ಉಡುಪಿ ಜಿಲ್ಲೆಯ ಕೊಕ್ಕರ್ಣೆಬಳಿಯ ಶಾಖಾ ಮಠ ಕಜ್ಕೆಯಲ್ಲಿ ಗುರುಪರಂಪರೆಯ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಆಚರಣೆಯ ಸಂದರ್ಭ ಜರುಗಿತು. ಈ ಸಂದರ್ಭ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ಮಾತನಾಡಿ, ಇತಿಹಾಸ ಇರುವ ಗುರು ಪರಂಪರೆಯಲ್ಲಿ, ಮೂಲ ಗುರುಗಳು ದೇಶದಾದ್ಯಂತ ನಡೆದಾಡಿದ ಮತ್ತು ಪವಾಡಗಳ ಕುರಿತು ಮತ್ತು ಹಾಸನದ ಬಳಿಯ

ಚಂದ್ರಯಾನ-3 ಯಶಸ್ವಿ ಉಡಾವಣೆಗೆ, ಕೇಂದ್ರ ಸಚಿವೆ ಶೋಭಾ, ಶಾಸಕ ಯಶ್ಪಾಲ್ ಶುಭ ಹಾರೈಕೆ

ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ-3 ಯಶಸ್ವೀಗೆ ದೇಶಾದ್ಯಂತ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಚಂದ್ರಯಾನ-3 ಯಶಸ್ವಿಗೆ ಶುಭ ಹಾರೈಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಅವರು, ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ.

ಉಡುಪಿ: ವಂಡ್ಸೆ ಗ್ರಾ.ಪಂ.ಗೆ ತ್ಯಾಜ್ಯ ವಿಲೇವಾರಿಯ ತಲೆನೋವು..!

ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ವಂಡ್ಸೆ ಗ್ರಾಮ ಪಂಚಾಯಿತಿ ಸದ್ಯ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಯಾವುದೇ ಪ್ರಶಸ್ತಿಯಿಂದ ಪಂಚಾಯತ್ ಗುರುತಿಸಿಕೊಳ್ಳುತ್ತಿಲ್ಲ ಬದಲಿಗೆ ತ್ಯಾಜ್ಯ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆ ವಿಚಾರವಾಗಿ ಸುದ್ದಿಯಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಉತ್ತಮ ತ್ಯಾಜ್ಯ ವಿಲೇವಾರಿ ಮಾಡಿದ್ದ ವಂಡ್ಸೆ ಗ್ರಾಮ ಪಂಚಾಯತ್ ಎಸ್ ಎಲ್ ಆರ್ ಎಂ ಘಟಕದ ನಿರ್ವಹಣೆಯ ಲೋಪದ ಕುರಿತು ಆರೋಪ ಕೇಳಿ ಬಂದಿದೆ. ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ

ಬ್ರಹ್ಮಾವರ: ಅಗ್ನಿಪಥ್ ತರಬೇತಿಗೆ ರಾಜ್ಯ ಸರಕಾರ ಅಸ್ತು- ಗೊಂದಲ ಕಡೆಗೂ ದೂರವಾಯ್ತು!

ಬ್ರಹ್ಮಾವರ: ಹಿಂದಿನ ಬಿಜೆಪಿ ರಾಜ್ಯ ಸರಕಾರದ ಅವಧಿಯಲ್ಲಿ ಆರಂಭವಾಗಿದ್ದ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ “ಅಗ್ನಿ ಪಥ್” ಸೇನಾಪೂರ್ವ ತರಬೇತಿಯ ಮರು ಚಾಲನೆಗೆ ಕಾಂಗ್ರೆಸ್ ರಾಜ್ಯ ಸರಕಾರ ಅಸ್ತು ಎಂದಿದೆ. ರಾಜ್ಯದ ಕರಾವಳಿಯ 3 ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡದಲ್ಲಿ ಕಳೆದ ವರ್ಷ “ಅಗ್ನಿ ಪಥ್” ಸೇನಾ ಪೂರ್ವ ತರಬೇತಿಗೆ ಚಾಲನೆ ನೀಡಲಾಗಿದ್ದು, ಈಗಾಗಲೇ 2 ತಂಡ ತರಬೇತಿ ಮುಗಿಸಿ ಅವರಲ್ಲಿ ಅನೇಕರು ಸೇನೆ

ಉಗ್ಗೆಲ್ ಬೆಟ್ಟು ಗರಡಿ ಬಳಿ “ಕೆಸರ್ಡ್ ಕುಸಲ್” ಕಾರ್ಯಕ್ರಮ

ಬ್ರಹ್ಮಾವರ : ಕಮಾಂಡರ್ ಸ್ಪೋರ್ಡ್ಸ್ ಮತ್ತು ಆರ್ಟ್ ಕ್ಲಬ್ ಉಗ್ಗೇಲ್ ಬೆಟ್ಟು ಮತ್ತು ಸಹೋದರ ಸಂಘಟನೆಗಳ ವತಿಯಿಂದ ಕೆಸರ್ಡ್ ಕುಸಲ್ ಎಂಬ ಕಾರ್ಯಕ್ರಮವವು ಉಗ್ಗೆಲ್ ಬೆಟ್ಟು ಗರಡಿಬಳಿಯ ಗದ್ದೆಯಲ್ಲಿ ಜರುಗಿತು. ಉಡುಪಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಸಾಂಪ್ರದಾಯಕವಾಗಿ ಕಳಸೆಗೆÀ ಭತ್ತವನ್ನು ಸುರಿದು ಹಣತೆ ದೀಪ ಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ಜನಾಂಗದ ಮಕ್ಕಳಿಗೆ ಮಣ್ಣು, ಕೃಷಿ ಇದನ್ನು ಪರಿಚಯಿಸಲು ಇಂತಹ