‘ದಿ ಕೇರಳ ಸ್ಟೋರಿ’ : ಉಡುಪಿಯಲ್ಲಿ ಮಹಿಳೆಯರಿಗೆ ಉಚಿತ ಪ್ರದರ್ಶನ

ದಿ ಕೇರಳ ಸ್ಟೋರಿ, ರಾಷ್ಟ್ರಾದ್ಯಂತ ಹೊಸ ಸಂಚಲನ ಮೂಡಿಸಿರುವ ಈ ಸಿನಿಮಾದ ಉಚಿತ ಪ್ರದರ್ಶನ ಉಡುಪಿ ಜಿಲ್ಲೆಯ ಅಲ್ಲಲ್ಲಿ ಏರ್ಪಟ್ಟಿದೆ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪರ್ಕಳ, ಉಡುಪಿ ಸಂಘಟಕರು ಜಂಟಿಯಾಗಿ ಮೇ 23 ರಂದು ಮಣಿಪಾಲದ ಐನಾಕ್ಸ್ ಸಿನಿಮಾಸ್ ಮತ್ತು ಕೆನರಾ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ 18 ವರ್ಷ ಮೇಲ್ಪಟ್ಟ ಯುವತಿಯರಿಗೆ ಉಚಿತವಾಗಿ ‘ದಿ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನ ನೀಡಿತು. ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿ, ಸಿನಿಮಾ ಮಂದಿರದ ಎರಡು ಹಾಲ್ ನಲ್ಲಿ ಸಿನಿಮಾ ಸುಮಾರು 280 ಯುವತಿಯರು, ಮಹಿಳೆಯರಿಂದ ಸಿನಿಮಾ ವೀಕ್ಷಣೆ ನಡೆಯಿತು. ಚಲನಚಿತ್ರ ನೋಡಿ ಬಂದ ಮಹಿಳೆಯರು ಭಾವುಕರಾದರು. ಈ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಲು ಪ್ರತಿಭಟನೆ ನಡೆಯಬಹುದು ಎಂಬ ಸೂಚನೆಯಿದ್ದ ಹಿನ್ನೆಲೆಯಲ್ಲಿ, ಪೊಲೀಸ್ ಭದ್ರತೆ ನೀಡಿ ಉಚಿತ ಚಲನಚಿತ್ರ ಪ್ರದರ್ಶನ ನಡೆಸಲಾಗಿದೆ. ಈ ಸಂದರ್ಭದಲ್ಲಿ ಯುವತಿಯರಿಗೆ ಜಾಗೃತಿ ಮಾಹಿತಿ ನೀಡಿ ಮಾಜಿ ಶಾಸಕ ರಘುಪತಿ ಭಟ್ ಮಾಹಿತಿ ನೀಡಿದರು. ಎರಡು ದಿನಗಳ ಕಾಲ ಉಚಿತ ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಅಭಿಯಾನದ ರೀತಿಯಲ್ಲಿ ಜಿಲ್ಲೆಯಾದ್ಯಂತ ಪ್ರದರ್ಶನ ನಡೆಸಲಾಗುತ್ತಿದೆ.
