Home ಕರಾವಳಿ Archive by category ಉಡುಪಿ (Page 26)

ಬ್ರಹ್ಮಾವರದಲ್ಲಿ ಶ್ರಾವಣ ಮಾಸದ ಜನಪದ ಆಚರಣೆ “ಹೊಸ್ತಿಲ ಅಜ್ಜಿ” ಸಂಭ್ರಮ

ಬ್ರಹ್ಮಾವರ: ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸೋಣ ತಿಂಗಳಿನಲ್ಲಿ ಆಚರಿಸುವ “ಹೊಸ್ತಿಲ ಅಜ್ಜಿ” ಎಂಬ ಆಚರಣೆ ಮಾಯವಾಗುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಬ್ರಹ್ಮಾವರ ಬಂಟರ ಯಾನೆ ನಾಡವರ ಸಂಘದ ಸಭಾಭವನದಲ್ಲಿ “ಹೊಸ್ತಿಲ ಅಜ್ಜಿ ಶ್ರಾವಣ ಸಂಭ್ರಮ” ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿ ಯುವ ಪೀಳಿಗೆಗೆ ಪರಿಚಯಿಸಲಾಗಿದೆ. ಶ್ರಾವಣ ಮಾಸದಲ್ಲಿ ಮಾತ್ರ ಒಂದು ದಿನ

❌ಪಡುಬಿದ್ರಿ: ವಯೋವೃದ್ದೆಗೆ ಸ್ಕೂಟರ್ ಡಿಕ್ಕಿ ತಲೆಗೆ ಗಾಯ

ಪಾದಚಾರಿ ಮಹಿಳೆಯೋರ್ವರಿಗೆ ಸ್ಕೂಟರೊಂದು ಡಿಕ್ಕಿಯಾಗಿ ತಲೆಗೆ ಗಾಯವಾದ ಘಟನೆ ಕಾರ್ಕಳ ರಸ್ತೆಯ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಗಾಯಗೊಂಡ ವೃದ್ದೆ ಸ್ಥಳೀಯ ನಿವಾಸಿ ಗುಲಾಬಿ (70) ಎಂದು ಗುರುತಿಸಲಾಗಿದೆ. ಮಳೆ ಸುರಿಯುತ್ತಿದ್ದ ವೇಳೆ ಪಕ್ಕದ ಅಂಗಡಿಗೆ ಹೋಗಿದ್ದು, ಪಡುಬಿದ್ರಿ ಕಡೆಯಿಂದ ಪಲಿಮಾರಿನ ಮನೆಗೆ ಹೋಗುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಮಹಿಳೆಯ ತಲೆಗೆ ಗಾಯವಾಗಿದೆ. ಸ್ಕೂಟರ್ ಸವಾರ ಪಕ್ಕಕ್ಕೆ ಬಿದ್ದಿದ್ದು, ಒಂದು ಕಣ್ಣಿಗೆ

ಉಡುಪಿ: ಮಧುರಂ ರೆಸ್ಟೋರೆಂಟ್‍ನಲ್ಲಿ ಡಿನ್ನರ್ ಬಫೆಟ್

ಉಡುಪಿಯ ಮಧುರಂ ರೆಸ್ಟೋರೆಂಟ್‍ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಡಿನ್ನರ್ ಬಫೆಟ್ ಆಯೋಜಿಸಿದ್ದರು.ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಉಡುಪಿಯ ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ಒಂದಾದ ಮಧುರಂ ರೆಸ್ಟೋರೆಂಟ್‍ನಲ್ಲಿ ಡಿನ್ನರ್ ಬಫೆಟ್ ಆಯೋಜಿಸಿದ್ದಾರೆ. ವೆಲ್‍ಕಮ್ ಡ್ರಿಂಕ್ಸ್‍ನಲ್ಲಿ ಪಂಚಾಮೃತ, ಸ್ಟಾರ್ಟರ್ಸ್‍ನಲ್ಲಿ ಬಿಂದಿ ಜೈಪುರ್, ಜೋದ್‍ಪುರಿ ಮಿರ್ಚಿ ವಡ, ಪೊಟೆಟೊ

ಉಡುಪಿ: ಕಾನೂನು ಹೋರಾಟಕ್ಕಿಂತ ರಾಜಿಸಂಧಾನ ಸವಾಲಿನ ಕೆಲಸ-ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್

ಉಡುಪಿ: ಕಾನೂನು ಹೋರಾಟ ನಡೆಸಬಹುದು. ಅದು ವಕೀಲರಿಗೂ ಕಕ್ಷಿದಾರರಿಗೂ ಸುಲಭ. ಆದರೆ ರಾಜಿ ಸಂಧಾನ ಕಷ್ಟ ಮತ್ತು ಸವಾಲಿನ ಕೆಲಸವಾಗಿದೆ. ಅಂತಹ ಸವಾಲಿನ ಕೆಲಸವನ್ನು ಉಡುಪಿ ನ್ಯಾಯಾಲಯ ಮೆಟ್ಟಿನಿಂತು, ಸಹಸ್ರಾರು ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಹೇಳಿದರು. ಅವರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಮೂರನೇ ಲೋಕ ಅದಾಲತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಲೋಕ ಅದಾಲತ್

ಬೈಂದೂರು: ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ

ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗೂ ತಲ್ಲೂರು ಸರಕಾರಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ – ಬಾಲಕಿಯರ ತ್ರೋಬಾಲ್ ಪಂದ್ಯಾಟ ತಲ್ಲೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು-

ಬೈಂದೂರು: ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ

ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬೈಂದೂರು ಆಶ್ರಯದಲ್ಲಿ ಮೊಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೈಂದೂರು ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವತಿ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,ಎಲ್ಲಾ ಶಾಲೆಯ ಮಕ್ಕಳಿಗೆ ಗೆಲ್ಲಲು ಸ್ಫೂರ್ತಿ ನೀಡುವ ಮಾತುಗಳೊಂದಿಗೆ ಮಕ್ಕಳಿಗೆ ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರು ಶ್ರೀಯುತ

ಪಡುಬಿದ್ರಿ: ಜಟಿಲಗೊಂಡ ನಂದಿಕೂರು ರೈಲ್ವೆ ಬ್ರಿಡ್ಜ್ ಸಮಸ್ಯೆ -ಸಾರ್ವಜನಿಕರು ಆಕ್ರೋಶ

ಬಹಳಷ್ಟು ವರ್ಷಗಳಿಂದ ನಂದಿಕೂರು ರೈಲ್ವೆ ಬ್ರಿಡ್ಜ್ ರಸ್ತೆ ಹೊಂಡಮಯವಾಗಿ ಜನರ ಪ್ರಾಣ ಹಿಂಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪಡುಬಿದ್ರಿ-ಕಾರ್ಕಳ ರಾಜ್ಯ ರಸ್ತೆ ಇದ್ದಾಗಿದ್ದು, ದಿನವೊಂದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಾಹನಗಳು ಹಾಗೇನೆ ಪಾದಚಾರಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸುವ ರಸ್ತೆ ಇದಾಗಿದೆ. ಬಸ್ ಚಾಲಕರಂತೂ ಯಾವುದೇ ಮೂಲಾಜಿ ಇಲ್ಲದೆ ಈ

ಮಣಿಪಾಲದಲ್ಲಿ ವಿಸ್ಡಮ್ ಎಡ್ ನೂತನ ಶಾಖೆ ಕಾರ್ಯಾರಂಭ

ಉಡುಪಿಯ ಮಣಿಪಾಲದಲ್ಲಿ ವಿಸ್ಡಮ್ ಎಡ್ ಇದರ ನೂತನ ಶಾಖೆಯು ಕಾರ್ಯಾರಂಭಗೊಂಡಿತು. ಉಡುಪಿ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅವರು ನೂತನ ಶಾಖೆ ಉದ್ಘಾಟಿಸಿದರು. ಈ ಸಂದರ್ಭ ಉಜ್ವಲ್ ಕನ್ಸ್ಟ್ರಕ್ಷನ್ಸ್ ಇದರ ಮಾಲಿಕರಾದ ಪುರುಷೋತ್ತಮ್ .ಪಿ ಶೆಟ್ಟಿ, ಕಾಂಚಾಣ ಹುಂಡೈ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಸಾದ್ ರಾಜ್ ಕಾಂಚನ್, ಉಡುಪಿ ಜಿಲ್ಲೆಯ ನಿವೃತ ಡಿಡಿಪಿಐ ಎಸ್ .ಸದಾನಂದ ಶೆಟ್ಟಿಗಾರ್, ಕೌನ್ಸಿಲಿಂಗ್ ಮತ್ತು ಸೈಕೋಥೆರಪಿಯ ತರಬೇತುದಾರರಾಗಿ ವಿಸ್ಡಮ್ ಎಡ್ ಸಂಸ್ಥೆಯ

ಉಡುಪಿ: ಹುಲಿ ಕುಣಿತ ಬೀಟ್‍ಗೆ ಹೆಜ್ಜೆ ಹಾಕಿದ ನಟ ರಕ್ಷಿತ್ ಶೆಟ್ಟಿ ಮತ್ತು ತಂಡ

ಉಡುಪಿಯ ಮಲ್ಪೆ ಸಮೀಪದ ಕೊಳ ಎಂಬಲ್ಲಿ ನಡೆದ ಹುಲಿ ವೇಷ ಸ್ಪರ್ಧೆಯಲ್ಲಿ ಸಪ್ತಸಾಗರದಾಚೆ ಎಲ್ಲೋ ಚಿತ್ರತಂಡದ ಕಲಾವಿದರು ಭಾಗವಹಿಸಿದ್ದರು. ನಟ ರಕ್ಷಿತ್ ಶೆಟ್ಟಿ ಮತ್ತು ತಂಡ ಭೇಟಿ ನೀಡಿ ಹುಲಿ ಕುಣಿತ ಬೀಟ್‍ಗೆ ಹೆಜ್ಜೆ ಹಾಕಿದರು. ರಕ್ಷಿತ್ ಶೆಟ್ಟಿಗೆ ಚಿತ್ರದ ಹೀರೋಯಿನ್ ರುಕ್ಮಿಣಿ ವಸಂತ್, ನಿರ್ದೇಶಕ ಹೇಮಂತ್ ಸಾಥ್ ನೀಡಿದರು.

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾದ ಸ್ಪೀಕರ್ ಯು.ಟಿ.ಖಾದರ್

ಉಡುಪಿಯ ಶ್ರೀಕೃಷ್ಣ ಮಠಕ್ಕೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿ ಕೃಷ್ಣಾಷ್ಟಮಿಯ ಸಂಭ್ರಮದಲ್ಲಿ ಭಾಗಿಯಾದರು. ಮಠದೊಳಗೆ ಭೇಟಿ ನೀಡಿದ ಯು.ಟಿ.ಖಾದರ್ ಅವರನ್ನು ಸತ್ಯನಾರಾಯಣ ಭಟ್ ಮತ್ತು ಸಮಿತಿಯವರು ಶಾಲು ಹೊದಿಸಿ ಸ್ವಾಗತಿಸಿದರು. ಪ್ರಸಾದವನ್ನು ನೀಡಿ ಹರಸಿದರು. ಬುಧವಾರ ಬೆಳಿಗ್ಗೆ ಬೆಂಗಳೂರು ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಬಂದು ತನ್ನ ಕ್ಷೇತ್ರದಲ್ಲಿ ವಿವಿಧೆಡೆ ಕೃಷ್ಣಾಷ್ಟಮಿ, ಮೊಸರು ಕುಡಿಕೆ ಕಾರ್ಯಕ್ರಮದಲ್ಲಿದ್ದು ನಂತರ ಉಡುಪಿಯ ಕಡಿಯಾಲಿನಲ್ಲಿ ಪ್ರಸಾದ್