Home Archive by category ಕರಾವಳಿ (Page 22)

ಉಳ್ಳಾಲ: ಬೈಕ್ ಢಿಕ್ಕಿ- ಪಾದಚಾರಿ ಬೇಕರಿ ಮಾಲೀಕ ಸಾವು

ಉಳ್ಳಾಲ: ಪಾದಚಾರಿಗೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಲಪಾಡಿಯಲ್ಲಿ ನಡೆದಿದೆ. ತಲಪಾಡಿ ಹಳೆಯ ಬಸ್ಸು ತಂಗುದಾಣ ಬಳಿಯ ನಿವಾಸಿ ರಾಜೇಶ್ ಶೆಟ್ಟಿ(49)ಮೃತರು. ರಾಜೇಶ್ ಅವರಿಗೆ ತಲಪಾಡಿ ಹಳೆ ಬಸ್ಸು ತಂಗುದಾಣದ ಬಳಿ ಬೇಕರಿ ಇದ್ದು, ಎದುರಿನ ಹೆದ್ದಾರಿ ಬದಿಯಲ್ಲೇ ಮನೆಯಿದೆ. ಭಾನುವಾರದಂದು ತಲಪಾಡಿ

ಮಂಗಳೂರು : “ದಾಸ ನಮನ”- ಸಂಗೀತ ಕಾರ್ಯಾಗಾರ

ಮಂಗಳೂರು: ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ಸಂಗೀತ ವಿದ್ಯಾರ್ಥಿಗಳಿಗಾಗಿ ಮತ್ತು ಸಂಗೀತಾಸಕ್ತರಿಗಾಗಿ  “ದಾಸ ನಮನ” ಸಂಗೀತ ಕಾರ್ಯಾಗಾರವು  ಮಂಗಳೂರು ವಿಟಿ ರಸ್ತೆಯ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ  ನಡೆಯಿತು.  ಕಲಾವಿದರಾದ ಹುಬ್ಬಳ್ಳಿಯ ಪಂಡಿತ್ ಮಲ್ಲಿಕಾರ್ಜುನ ಸಂಶಿ  ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡಿದರು. ದಾಸಪರಂಪರೆಯಲ್ಲಿ ಬಂದ ಅಪರೂಪದ ಹಾಡುಗಳಿಗೆ ಹಿಂದೂಸ್ತಾನಿ ರಾಗ ಆಧಾರಿತ ಸ್ವರಸಂಯೋಜನೆ ಮತ್ತು ಕಲಿಕಾ ವಿಧಾನದ

ಉಳ್ಳಾಲ: ಮೂಲಭೂತ ಸಮಸ್ಯೆಗಳಿಗೆ ಶೀಘ್ರ ಪರಿಹಾರ : ಯು.ಟಿ ಖಾದರ್

ಉಳ್ಳಾಲ: ಚುನಾವಣಾ ಸಂದರ್ಭದಲ್ಲಿ ಅಭಿವೃದ್ಧಿ ಗೆ ಸಂಬಂಧಿಸಿದಂತೆ ಯಾವುದೆಲ್ಲ ಭರವಸೆ ನೀಡಿದ್ದೇನೆ ಯೊ ಅದನ್ನು ಮುಂದಿನ ವರ್ಷದಲ್ಲಿ ಕಾರ್ಯಗತ ಗೊಳಿಸಲಾಗುವುದು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.ಅವರು ಕೋಟೆಕಾರ್ ಪ.ಪಂ‌ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ರಸ್ತೆಗಳ ಅಭಿವೃದ್ಧಿ ಆಗಿದೆ.ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಗೆ 70 ಕೋಟಿ ರೂ. ಮಂಜೂರು ಮಾಡಲಾಗಿದೆ.ಈ ಪೈಕಿ 25 ಕೋಟಿ ರೂ

ನರಿಂಗಾನದ ಕಲ್ಲರಕೋಡಿಯಲ್ಲಿ ಅಂಗನವಾಡಿ ಕೇಂದ್ರದ ಡಿಜಿಟಲ್ ವ್ಯವಸ್ಥೆ ಉದ್ಘಾಟನೆ

ಸ್ವಂತ ಕಟ್ಟಡಗಳು ಇರುವ ಅಂಗನವಾಡಿಗಳಿಗೆ ಡಿಜಿಟಲ್ ವ್ಯವಸ್ಥೆ ಆಗಿದೆ. ಉಳಿದ ಕೇಂದ್ರಗಳಿಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಬೇಕಿದೆ. ನರಿಂಗಾನದಲ್ಲಿ ಗ್ರಾಮ ಪಂಚಾಯಿತಿ ಮುತುವರ್ಜಿ ವಹಿಸಿರುವುದು ಉತ್ತಮ ಬೆಳವಣಿಗೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.ನರಿಂಗಾನದ ಕಲ್ಲರಕೋಡಿಯಲ್ಲಿ ಅಂಗನವಾಡಿ ಕೇಂದ್ರದ ಡಿಜಿಟಲ್ ವ್ಯವಸ್ಥೆ ಶನಿವಾರ ಉದ್ಘಾಟಿಸಿ ಮಾತನಾಡಿದರು.ಸ್ಥಳದಾನಿಗಳಾದ ಮಹಮ್ಮದ್ ಪಾರೆ, ರಝಾಕ್ ಪಾರೆ, ಮಜೀದ್ ಪಾರೆ, ಜನಶಿಕ್ಷಣ

ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ

ರಾಜ್ಯ ಸರಕಾರವು ತುಳು, ಬ್ಯಾರಿ, ಕೊಂಕಣಿ ಅಕಾಡಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಗೊಳಿಸಿ ಶನಿವಾರ ಆದೇಶ ಹೊರಡಿಸಿದೆ. ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ತಾರನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಉಮರ್ ಯು.ಎಚ್. ಹಾಗೂ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರನ್ನು ನೇಮಿಸಿದೆ.

ಹೊಕ್ಕಾಡಿಗೋಳಿ : ವೀರ-ವಿಕ್ರಮ ಜೋಡುಕರೆ ಕಂಬಳಕ್ಕೆ ಚಾಲನೆ

ಮೂಡುಬಿದಿರೆ: ಶ್ರೀ ಮಹಿಷಮರ್ಧಿನಿ ಕಂಬಳ ಸಮಿತಿ ಹೊಕ್ಕಾಡಿಗೋಳಿ ಇದರ ವತಿಯಿಂದ ನಡೆಯುವ ಶ್ರೀ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವನ್ನು ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣರಾದ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳದ ಕರೆಗೆ ಪ್ರಸಾದ್ ಅರ್ಪಿಸಿ, ದೀಪ ಬೆಳಗಿಸುವ ಮೂಲಕ ಚಾಲನೆಯನ್ನು ನೀಡಿದರು.ನಂತರ ಮಾತನಾಡಿದ ಅವರು ಈ ಹಿಂದೆ ನಡೆಯುತ್ತಿದ್ದ ಕಂಬಳಗಳ ಸಂದರ್ಭದಲ್ಲಿ ಎಲ್ಲರೂ ಕಂಬಳಕ್ಕಾಗಿ ಕಾಯುತ್ತಿದ್ದ ಸಂದರ್ಭವಿತ್ತು ಆದರೆ ಈ ಬಾರಿಯ ಕಂಬಳವು ಎರಡೆರಡು ಕಡೆಗಳಲ್ಲಿ

ಆಳುವವನಿಗೇ ದೊಡ್ಡ ಗಂಟು

ತಾನು ಕಳ್ಳ ಪರರ ನಂಬ ಎಂಬ ಸ್ಥಿತಿ ಯಾರದ್ದು ಎಂದು ನೀವೇ ಲೆಕ್ಕ ಹಾಕಿಕೊಳ್ಳಿ. ಒಳಾಡಳಿತ ಮಂತ್ರಿಗಳಾದ ಅಮಿತ್ ಶಾ ಹೇಳುವುದು ಕೇಳಿ. ನಾವು ಚುನಾವಣಾ ಬಾಂಡ್ ಮೂಲಕ ಮಾತ್ರ ಪಕ್ಷದ ನಿಧಿ ಪಡೆದಿದ್ದೇವೆ. ಆದರೆ ಕಾಂಗ್ರೆಸ್ ಮತ್ತಿತರ ಪಕ್ಷಗಳು ನಗದು ದೇಣಿಗೆ ಪಡೆದು ಸಾವಿರ ರೂಪಾಯಿ ಕಿಸೆಗೆ ಹಾಕಿಕೊಂಡು, ನೂರು ರೂಪಾಯಿ ಮಾತ್ರ ಪಕ್ಷದ ಖಾತೆಗೆ ಜಮಾ ಮಾಡಿವೆ. ಅಮಿತ್ ಶಾ ಅವರ ಈ ಹೇಳಿಕೆಗೆ ಬಪ್ಪರೆ ಭಳಿರೇ ಎನ್ನದೆ ವಿಧಿಯಿಲ್ಲ.ಭಾರ್ತಿ ಏರ್‍ಟೆಲ್‍ನವರು ಬಿಜೆಪಿ ಪಕ್ಷಕ್ಕೆ

ಮಂಗಳೂರು: ಮಾ.17ರಂದು ಗುರು-ಶಿಷ್ಯರ ಸಮ್ಮಿಲನ

ಮಂಗಳೂರು: ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಅಲ್ಯುಮ್ನಿ ಅಸೋಸಿಯೇಷನ್ ಆಶ್ರಯದಲ್ಲಿ ಮಾರ್ಚ್ 17ರಂದು ಬೆಳಗ್ಗೆ 9.30ರಿಂದ ಸಂಜೆ 4ರ ತನಕ ಗುರು -ಶಿಷ್ಯರ ಸಮ್ಮಿಲನ ‘ಗುರುಭ್ಯೋ ನಮಃ’ ಕಾರ್ಯಕ್ರಮ ನಡೆಯಲಿದೆ.1982ರಿಂದ 2024ರವರೆಗಿನ 41 ವರ್ಷಗಳ ಸುದೀರ್ಘ ಕಾಲದಲ್ಲಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳ ಹಾಗೂ ಕಲಿಸಿದ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯನ್ನು ಒಂದೇ ಕಡೆ ಕಲೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ

ಕೊಯಮತ್ತೂರಿನ ಲಾಟರಿ ಮತ್ತು ಹೋಟೆಲ್ ಲಾಬಿ : ಭಾರತದ ಲಾಟರಿ ದೊರೆ ಮಾರ್ಟಿನ್ ಸಾಮ್ರಾಜ್ಯ

ಸಿಕ್ಕಿಂ ಸರಕಾರಕ್ಕೆ ರೂ. 4,500 ಕೋಟಿ ವಂಚಿಸಿರುವನು ಎನ್ನಲಾದ ಕೊಯಮತ್ತೂರು ಮೂಲದ ಸ್ಯಾಂಟಿಯಾಗೋ ಮಾರ್ಟಿನ್ ಮ್ಯಾನ್ಮಾರ್‌ನಲ್ಲಿ ಕೆಲಸ ಮಾಡಿ ಭಾರತಕ್ಕೆ ಹಿಂತಿರುಗಿದವನು. ನಾನಾ ದಾರಿಯಿಂದ ಲಾಟರಿ ರಾಜ ಎನಿಸಿ, ಫ್ಯೂಚರ್ ಗೇಮಿಂಗ್ ಹಾಗೂ ಹೋಟೆಲ್‌ಗಳ ಮಾಲಕನಾಗಿರುವನು. 1,368 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಕೊಂಡಿರುವ ಈತ ರಾಜಕೀಯ ಪಕ್ಷಗಳಿಗೆ ತನ್ನ ಇಷ್ಟಾನುಸಾರವಾಗಿ ಹಂಚಿಕೆ ಮಾಡಿದ್ದಾನೆ. ಮಾರ್ಟಿನ್ ಸಾಮ್ರಾಜ್ಯವು ಮಹಾರಾಷ್ಟ್ರ, ಸಿಕ್ಕಿಂ, ಪಂಜಾಬ್, ಪಡುವಣ

ಮಂಗಳೂರು: ಫಾದರ್ ಮುಲ್ಲರ್ ರೋಟರಿ ಸ್ಕಿನ್ ಬ್ಯಾಂಕ್ ಉದ್ಘಾಟನೆ

ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಮಂಗಳೂರು ವತಿಯಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ‘ಫಾದರ್ ಮುಲ್ಲರ್-ರೋಟರಿ ಸ್ಕಿನ್ ಬ್ಯಾಂಕ್’ ಉದ್ಘಾಟಿಸಲಾಯಿತು. ಸ್ಕಿನ್ ಬ್ಯಾಂಕ್‌ನ್ನು ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ಕಿನ್ ಬ್ಯಾಂಕ್ ಅನೇಕ ವರ್ಷಗಳ ಹಿಂದಿನ ಕನಸಾಗಿದ್ದು, ಅದಿಂದು ನನಸಾಗಿದೆ. ಇತರ