Home Archive by category ಕರಾವಳಿ (Page 32)

ಕುಂದಾಪುರ: ಕೊಲ್ಲೂರು ದೇವಳಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭೇಟಿ

ಕುಂದಾಪುರ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಕೊಲ್ಲೂರು ಶ್ರೀ ಮೂಕಾಂಬಿಕ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬ ಸಮೇತರಾಗಿ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ವೀರಭದ್ರ ದೇವರಿಗೆ ಕಾಯಿ ಸಮರ್ಪಿಸಿದದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ, ಯಾವಾಗಲೂ ಕೊಲ್ಲೂರಿಗೆ ಆಗಮಿಸಿತಾಯಿಯ

ಪುತ್ತೂರು : ನಿವೃತ್ತ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ನಿಧನ

ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದ ಇಂಜಿನಿಯರ್ ಗೋಪಿನಾಥ್ ಶೆಟ್ಟಿ(60)ಯವರು ದಿಡೀರ್ ಅಸ್ವಸ್ಥಗೊಂಡು ಮಾ 13ರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ. ರಾತ್ರಿ ಊಟ ಮಾಡಿ ಮಲಗಿದ ಅವರ ಆರೋಗ್ಯದಲ್ಲಿ ನಸುಕಿನ ಜಾವ 2 ಗಂಟೆ ಸುಮಾರಿಗೆ ಏರು ಪೇರು ಉಂಟಾಗಿದ್ದು, ಬಳಿಕ ಕೆಲವೇ ಕ್ಷಣಗಳಲ್ಲಿ ನಿಧನ ಹೊಂದಿರುವುದಾಗಿ ಅವರ ಆಪ್ತ ವಲಯದವರು ತಿಳಿಸಿದ್ದಾರೆ.ನಿನ್ನೆ ರಾ ತ್ರಿಯವರೆಗೂ ಕ್ರಿಯಾಶೀಲರಾಗಿ ವಿವಿಧ ಚಟುವಟಿಕೆಗಳಲ್ಲಿ

ಮೂಡುಬಿದಿರೆ : ಶಿರ್ತಾಡಿ ಕಜೆ- ಹೊಸಂಗಡಿ ಸೇತುವೆ ಲೋಕಾರ್ಪಣೆ

ಮೂಡುಬಿದಿರೆ : ಗ್ರಾಮಸ್ಥರ ಬಹುಕಾಲದ ಬೇಡಿಕೆಯಾದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಿರ್ತಾಡಿ ಕಜೆ ಗುಂಡಡಪ್ಪು – ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಹೊಸಂಗಡಿಗೆ ಸಂಪರ್ಕ ಕಲ್ಪಿಸುವ ಕೇಂದ್ರೀಯ ರಸ್ತೆ ನಿಧಿಯಿಂದ ರೂ.5 ಕೋಟಿ ವೆಚ್ಚದ ತಡೆಗೋಡೆ, ಕೂಡು ರಸ್ತೆ ಸಹಿತ ನಿರ್ಮಿಸಲಾದ ಸೇತುವೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಸಂಸದ ಕಟೀಲ್ ದ.ಕ.ಜಿಲ್ಲೆಗೆ ಗ್ರಾಮ ಸಡಕ್ ಯೋಜನೆಯ ಮೂಲಕ 400 ಕೋಟಿ ರೂ.

ನೆಲ್ಯಾಡಿಯ ಶಿಕ್ಷಕಿ ಮೇರಿ ಜಾನ್ ಕಾರ್ಮಲ್ ಭವನ್ ಗೆ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ

ಪ್ರತಿಷ್ಟಿತ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿಯನ್ನು ಹಿರಿಯ ಶಿಕ್ಷಕಿ ಹಾಗೂ ಜಾನಪದ ಕಲಾವಿದೆ ಮೇರಿ ಜಾನ್ ಗೆ ಮಂಗಳೂರಿನಲ್ಲಿ ನಡೆದ ಜಾನಪದ ಪರಿಷತ್ ನ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು ನೆಲ್ಯಾಡಿ ಯ ಪಿ ಎಂ ಶ್ರೀ ಉನ್ನತ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಶಿಕ್ಷಕಿಯಾಗಿದ್ದಾರೆ. ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಶ್ರೀಮತಿ ಮೇರಿ ಜಾನ್ ಅವರನ್ನು ಅಭಿನಂದಿಸಿ ಚರ್ಚ್ ನ ಧರ್ಮಗುರುಗಳಾದ ಫಾ.ಶಾಜಿ ಮ್ಯಾಥ್ಯು ಶಿಕ್ಷಣ

ಮಂಗಳೂರು-ತಿರುವನಂತಪುರಂ ವಿಸ್ತರಿತ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

ಮಂಗಳೂರು: ಮಂಗಳೂರು ಸೆಂಟ್ರಲ್- ತಿರುವನಂತಪುರ ವಿಸ್ತರಿತ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ನ ಅಹಮ್ಮದಾಬಾದ್ ನಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಿದರು. ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ವಂದೇ ಭಾರತ್ ರೈಲು ಇನ್ನು ಮುಂದೆ ಮಂಗಳೂರು ತಿರುವನಂತಪುರ ನಡುವೆ ಸಂಚರಿಸಲಿದೆ. ಮಂಗಳೂರಿನಿಂದ ಬೆಳಿಗ್ಗೆ 6.15ಕ್ಕೆ ಹೊರಟು ಅಪರಾಹ್ನ 3.5ಕ್ಕೆ ತಿರುವನಂತಪುರ

ಮಂಗಳೂರು : ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶ

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ವಿಫಲವಾಗಿದ್ದು, ಜನರಿಗೆ ನರೇಂದ್ರ ಮೋದಿ ಗ್ಯಾರಂಟಿ ಮೇಲೆ ಮಾತ್ರ ವಿಶ್ವಾಸ ಮೂಡಿದೆ. ಹೀಗಾಗಿ ರಾಜ್ಯದ ಜನರು ನರೇಂದ್ರ ಮೋದಿ ಜೊತೆಗಿದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಂಘನಿಕೇತನದಲ್ಲಿ ನಡೆದ ಬಿಜೆಪಿ ಬೂತ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಇಂದು ನಮ್ಮ ಪ್ರಮುಖ ಬೂತ್ ಕಾರ್ಯಕರ್ತರು ಜೊತೆಗಿದ್ದೀರಿ.

ಮುಡಿಪು : ಕುರ್ನಾಡು ಗ್ರಾ.ಪಂ ಎದುರು ಪ್ರತಿಭಟನೆ

ಮುಡಿಪು : ಪೌರಕಾರ್ಮಿಕನಾಗಿ ಕಳೆದ 20 ವರ್ಷಗಳಿಂದ ದುಡಿಯುತ್ತಿದ್ದ ಬಾಬಣ್ಣ ಅವರನ್ನು ಏಕಾಏಕಿ ಕೆಲಸದಿಂದ ತೆಗೆದು, ಯಾವುದೇ ಸರಕಾರಿ ಸೌಲಭ್ಯವನ್ನು ನೀಡದ ಕುರ್ನಾಡು ಗ್ರಾಮದ ಅಭಿವೃದ್ಧಿ ಅಧಿಕಾರಿ ಹಾಗೂ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಮುಡಿಪು ಕುರ್ನಾಡುವಿನ ಗ್ರಾ.ಪಂ ಕಚೇರಿಯೆದುರು ಪ್ರತಿಭಟನೆ ನಡೆಯಿತು. ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಪ್ರತಿಭಟೆನೆ ಉದ್ದೇಶಿಸಿ ಮಾತನಾಡಿ, ಕೊರಗ ಸಮುದಾಯದ ಬಾಬಣ್ಣ

ವಿಟ್ಲ: ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ : ಮೂವರ ಬಂಧನ

ವಿಟ್ಲ: ಕರ್ಣಾಟಕ ಬ್ಯಾಂಕ್ ಕಿಟಕಿ ಮೂಲಕ ಒಳ ನುಸುಳಿ ಕೋಟ್ಯಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ ನಾಲ್ಕು ಮಂದಿ ಆರೋಪಿಗಳ ಪೈಕಿ ಮೂವರನ್ನು ಸೋಮವಾರ ಸ್ಥಳ ಮಹಜರಿಗೆ ಅಡ್ಯನಡ್ಕ ಪೊಲೀಸರು ಕರೆದುಕೊಂಡು ಬಂಧಿಸಿದ್ದಾರೆ. ಕಾಸರಗೋಡು ಮೂಲದ ಖಲಂದರ್, ರಫೀಕ್, ಬಾಯಾರು ಮೂಲದ ದಯಾನಂದ ಕಳ್ಳತನದ ಪ್ರಮುಖ ರುವಾರಿಗಳು ಎನ್ನಲಾಗಿದೆ. ಫೆ.೨೮ ರಂದು ಈ ಆರೋಪಿಗಳನ್ನು ಪೊಲಿಸರು ವಶಕ್ಕೆ ಪಡೆಯುವ ಕಾರ್ಯವನ್ನು ಮಾಡಿದ್ದು, ಮಾ.೧೦ರಂದು ಬಂಧನವನ್ನು

ಮೂಡುಬಿದಿರೆ: ಆಘಾತ ತರಂಗ ಮಾಪನ ವ್ಯವಸ್ಥೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಪೇಟೆಂಟ್

ಮೂಡುಬಿದಿರೆ: ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸ್ಮಾರ್ಟ್ ಶಾಕ್‌ವೇವ್ ವೆಲಾಸಿಟಿ ಮೆಷರ್‌ಮೆಂಟ್ ಸಿಸ್ಟಮ್ (ಸ್ಮಾರ್ಟ್ ಆಘಾತ ತರಂಗಗಳ ವೇಗ ಮಾಪನ ವ್ಯವಸ್ಥೆ) ಪೇಟೆಂಟ್ ಪಡೆದುಕೊಂಡಿದೆ.ಈ ಆವಿಷ್ಕಾರವು ಕೇವಲ ಆಘಾತ ತರಂಗಗಳ ವೇಗ ಮಾಪನ ಮಾತ್ರವಲ್ಲ, ವಿವಿಧ ಅನುಷ್ಠಾನಗಳು ಹಾಗೂ ಅಗ್ನಿ ಸಂಬಂಧಿತ ಹಾಗೂ ಬೆಳಕಿನ ತಂತ್ರಜ್ಞಾನದಲ್ಲಿ ವಿಶೇಷವಾಗಿ ಕ್ರಾಂತಿಕಾರಿ ಕೊಡುಗೆ

ಪ್ರಥಮ ಪ್ರದರ್ಶನದಲ್ಲೇ ಪ್ರೇಕ್ಷಕರ ಮನಗೆದ್ದ “ಮಾಯೊದ ಮಹಾಶಕ್ತಿಲು”

ಎಂ.ಕೆ. ಬಾಲರಾಜ್‌ ಸಾರಥ್ಯದ “ಎಂಕಲ್ನ ಕಲಾವಿದೆರ್” ಮಟ್ಟು ಕಟಪಾಡಿ ಅಭಿನಯಿಸಿದ “ಮಾಯೊದ ಮಹಾಶಕ್ತಿಲು” ಎಂಬ ತುಳು ಭಕ್ತಿ ಪ್ರಧಾನ ಅದ್ಧೂರಿ ನಾಟಕ ಪ್ರಥಮ ಪ್ರಯೋಗದಲ್ಲೇ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಳೆದ ಏಳನೇ ತಾರೀಕಿನಂದ್ದು ಉಡುಪಿಯ ಅಜ್ಜರಗಾಡು ಭುಜಂಗ ಪಾರ್ಕಿನ ಬಯಲು ರಂಗಮಂದಿರಲ್ಲಿ ನಡೆದ ನಾಟಕ ವೀಕ್ಷಿಸಲು ಕಲಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ನಾಟಕದ ಪ್ರತಿಯೊಂದು ಮಜಲುಗಳನ್ನು ಆಡಿಕೊಂಡಾಡಿ ನಾಟಕ