Home Posts tagged #kasaragodu (Page 3)

ಕಾಸರಗೋಡು ಶಾಲೆಯಲ್ಲಿ ಕನ್ನಡಕ್ಕಾಗಿ ಹೋರಾಟ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾ ನೆನಪಿಸುವ ನೈಜ ದೃಶ್ಯ

ಕನ್ನಡ ಸರಿಯಾಗಿ ಬಾರದ ಶಿಕ್ಷಕಿಯೋರ್ವರನ್ನು ಕನ್ನಡ ಮಾಧ್ಯಮ ಶಾಲೆಗೆ ನಿಯುಕ್ತಿಗೊಳಿಸಿರುವುದನ್ನು ವಿರೋಧಿಸಿ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಅಡೂರು ಸರಕಾರಿ ಶಾಲೆಯಲ್ಲಿ ನಡೆದಿದೆ. ಇತ್ತೀಚೆಗೆ ಈ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗೆ ಬೇರೆ ಶಾಲೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಕೇರಳ ಶಿಕ್ಷಣ

ಕಾಸರಗೋಡು: ಸನ್‌ಡ್ರೋಪ್ಸ್ ಸಂಸ್ಥೆಯ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಸೊಲ್ಯೂಶನ್ಸ್ ಶುಭಾರಂಭ

ಕಾಸರಗೋಡಿನ ಶಾಂತಿನಗರದಲ್ಲಿ ಸನ್‌ಡ್ರೋಪ್ಸ್ ಸಂಸ್ಥೆಯ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಸೊಲ್ಯೂಶನ್ಸ್ ಶುಭಾರಂಭಗೊಂಡಿತು. ಸಂಸ್ಥೆಯ  ಮಾಲಕರಾದ ಅಜಯ್ ರೈ ಅವರ ತಾಯಿ, ನಿವೃತ್ತ ಮುಖ್ಯೋಪಾದ್ಯಾಯಿನಿ ವಿಮಲ ರೈ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ನಂತರ ಪೂಜಾ ಕಾರ್ಯಕ್ರಮಗಳು ನಡೆದವು. ಉದ್ಘಾಟನಾ ಕಾರ್ಯಕ್ರಮದಲ್ಲಿ ಅಜಯ್ ರೈ ಅವರ ಹೆತ್ತವರು, ಸ್ನೇಹಿತರು , ಹಿತೈಷಿಗಳು ಪಾಲ್ಗೊಂಡಿದ್ದರು. ಸನ್‌ಡ್ರೋಪ್ಸ್ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್

ಮಂಜೇಶ್ವರದ ಕುಂಡು ಕೊಳಕೆ ಬೀಚ್‍ನಲ್ಲಿ ಸಮ್ಮರ್ ಬೀಚ್ ಉತ್ಸವ : ಮೇ 8ರಂದು ಸಮಾಪ್ತಿ

ಮಂಜೇಶ್ವರ : ಉದ್ಯಾವರ ಎಎಚ್‍ಎಸ್ ತಂಡದ ಪ್ರಾಯೋಜಕತ್ವದಲ್ಲಿ ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಕುಂಡು ಕೊಳಕೆ ಬೀಚ್‍ನಲ್ಲಿ ಆರಂಭಗೊಂಡ ಸೀಸನ್ 3 ಸಮ್ಮರ್ ಬೀಚ್ ಉತ್ಸವದಲ್ಲಿ ಹಿಂದೆಂಂದೂ ಕಾಣದ ವೈವಿಧ್ಯತೆ ಕಂಡು ಬರುತ್ತಿದೆ. ಇನ್ನು ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿದ್ದು ಇದೇ ತಿಂಗಳು ಅಂದ್ರೆ ಇದೇ ತಿಂಗಳು ಮೇ 8 ಕ್ಕೆ ಸಮ್ಮರ್ ಫೈಸ್ಟ್ ಸಮಾಪ್ತಿಗೊಳ್ಳಲಿದೆ. ಎ ಎಚ್ ಎಸ್ ತಂಡ ಈ ಸಲದ ಸಮ್ಮರ್ ಫೆಸ್ಟ್ ಗೆ ಉಚಿತ ಪ್ರವೇಶವನ್ನೇ ಊರವರ

ಕಾಸರಗೋಡು ಆರ್ಯ ಸಮುದಾಯ ಸಂಘದ ಪ್ರಥಮ ಮಹಾಸಭೆ

ಕಾಸರಗೋಡು ಆರ್ಯ ಸಮುದಾಯ ಸಂಘ ಇದರ ಪ್ರಥಮ ಮಹಾಸಭೆಯು ಮುಳ್ಳೇರಿಯ ಶ್ರೀ ಗಣೇಶ ಕಲಾ ಮಂದಿರದಲ್ಲಿ ನಡೆಯಿತು. ಆರ್ಯ ಸಮಾಜ ಸಂಘ ಮಂಗಳೂರು – ಕಾಸರಗೋಡು ಇದರ ಅಧ್ಯಕ್ಷ ವಾಮನ ರಾವ್ ಮುಳ್ಳಂಗೋಡು ನೂತನ ಸಂಘಟನೆಯನ್ನು ಉದ್ಘಾಟಿಸಿದರು. ಆರ್ಯ ಸಮುದಾಯದ ಸಂಘದ ಅಧ್ಯಕ್ಷೆ ಪ್ರೇಮಲತಾ ವೈ ರಾವ್ ಅಧ್ಯಕ್ಷತೆ ವಹಿಸಿದ್ದರು. ಯತೀಶ್ ಕುಮಾರ್ ಪರಂಗೋಡು ಪ್ರಾಸ್ತಾವಿಕ ಭಾಷಣ ಮಾಡಿದರು. ಆರ್ಯ ಸಮುದಾಯ ಸಂಘದ ಕಾರ್ಯದರ್ಶಿ ಕೃಷ್ಣೋಜಿ ಮಾಸ್ಟರ್ ವರದಿ ವಾಚಿಸಿದರು. ಕೋಶಾಧಿಕಾರಿ

ಪೀಲಿತಡ್ಕ ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವ ಸನ್ನಿಧಿ : ತುಳು ಲಿಪಿ ನಾಮಫಲಕ ಅನಾವರಣ

ಕಾಸರಗೋಡಿನ ಬದಿಯಡ್ಕದ ವಿದ್ಯಾಗಿರಿಯ ಪೀಲಿತಡ್ಕ ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವ ಸನ್ನಿಧಿಯಲ್ಲಿ ತುಳು ಲಿಪಿ ನಾಮಫಲಕವನ್ನು ಅಳವಡಿಸಲಾಯಿತು. ಕಾರ್ಯಕ್ರಮದಲ್ಲಿ ಬದಿಯಡ್ಕದ ಗ್ರಾಮ ಪಂಚಾಯತ್ ಮೆಂಬರ್ ಶ್ರೀ ಬಾಲಕೃಷ್ಣ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಿದ್ದರು, ಇವರು ತಮ್ಮ ಭಾಷಣದಲ್ಲಿ ತುಳು ಬಾಷೆಯು ಶೀಘ್ರದಲ್ಲಿ 8ನೇ ಪರಿಚ್ಚೆದಕ್ಕೆ ಸೇರುವಂತಾಗಲಿ ಎಂದರು. ಸ್ಥಳದ ಹಿರಿಯ ದೈವ ಪಾತ್ರಿ ಶ್ರೀ ನಿಟ್ಟೋನಿ ಇವರು ತುಳು ಲಿಪಿ ನಾಮಫಲಕವನ್ನು ಉದ್ಘಾಟಿಸಿದರು.

ಅಡುಗೆ ಅನಿಲ ದರ ಏರಿಕೆ : ದೊಂದಿ ಮೆರವಣಿಗೆ

ಕಾಸರಗೋಡು ಜಿಲ್ಲೆಯ ಪೆರ್ಲದ ಬೆದ್ರಂಪಳ್ಳದಲ್ಲಿ ಡಿ.ವೈ.ಎಫ್.ಐ ನೇತೃತ್ವದಲ್ಲಿ ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ದೊಂದಿ ಮೆರವಣಿಗೆ ನಡೆಯಿತು. ಅಡುಗೆ ಅನಿಲ ದರ ಏರಿಕೆಯನ್ನು ವಿರೋಧಿಸಿ ಬೆದ್ರಂಪಳ್ಳದಲ್ಲಿ ನಡೆದ ದೊಂದಿ ಮೆರವಣಿಗೆಯನ್ನು ಡಿ.ವೈ.ಎಫ್.ಐ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯೆ ಸಚಿತಾ ಬಿ ಪೆರ್ಲ ಉದ್ಘಾಟಿಸಿದರು. ವಾಣಿಜ್ಯ ಸಿಲಿಂಡರ್ ಗೆ 350 ರೂಪಾಯಿ ಹಾಗೂ ಗೃಹ ಬಳಕೆಯ ಸಿಲಿಂಡರ್ ಗೆ 50 ರೂಪಾಯಿ ಏರಿಕೆ ಮಾಡುವ ಮೂಲಕ ಕೇಂದ್ರ ಸರಕಾರವು ಜನರ ಮೇಲೆ

ಗ್ರೈಂಡರ್‍ ಗೆ ಶಾಲು ಸಿಲುಕಿ ಯುವತಿ ದಾರುಣ ಸಾವು

ಮಂಜೇಶ್ವರ: ಹುಟ್ಟು ಹಬ್ಬದಂದೇ ಗ್ರೈಂಡರ್ ಗೆ ಶಾಲು ಸಿಲುಕಿ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ. ತೂಮಿನಾಡು ಲಕ್ಷಂ ವೀಡು ಕಾಲನಿ ನಿವಾಸಿ ರಂಜನ್ ಕುಟ್ಟ ಎಂಬವರ ಪತ್ನಿ ಜಯಶೀಲ ಚುಮ್ಮಿ (20) ಸಾವನ್ನಪ್ಪಿದ ದುರ್ದೈವಿ. ಈಕೆ ತೂಮಿನಾಡಿನಲ್ಲಿರುವ ಬೇಕರಿಯೊಂದರ ನೌಕರಿಯಾಗಿದ್ದು ಎಂದಿನಂತೆ ಬೇಕರಿಗೆ ತೆರಳಿ ಗ್ರೈಂಡರ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮಧ್ಯೆ ಶಾಲು ಗ್ರೈಂಡರ್ ಗೆ ಸಿಲುಕಿ ದುರಂತ ಸಂಭವಿಸಿದೆ. ಹುಟ್ಟು ಹಬ್ಬದ ದಿನವಾದ ಹಿನ್ನೆಲೆಯಲ್ಲಿ

ಮಂಜೇಶ್ವರ : ವಿವಿಧ ಬೇಡಿಕೆ ಮುಂದಿಟ್ಟು ಪಡಿತರ ವರ್ತಕರಿಂದ ಧರಣಿ

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಡಿತರ ವರ್ತಕರು ಮಂಜೇಶ್ವರಂ ತಾಲೂಕು ಕಚೇರಿಯಲ್ಲಿ ಧರಣಿ ನಡೆಸಿದರು.ಇ-ಪೆÇೀಸ್ ಮಿಷನ್ ಸರಿಯಾಗಿ ಕೆಲಸ ಮಾಡಲು ವ್ಯವಸ್ಥೆ ಕಲ್ಪಿಸಬೇಕು, ಪಡಿತರ ವರ್ತಕರು ಇ- ಪೋಸ್ ಮಿಷನ್ ಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಕೇರಳ ವಿಧಾನಸಭೆಯಲ್ಲಿ ಸಚಿವರ ದಿಕ್ಕು ತಪ್ಪಿಸುವ ಹೇಳಿಕೆ ಹಿಂಪಡೆಯಬೇಕು, ಪಡಿತರ ವರ್ತಕರ ವೇತನ ಪರಿಷ್ಕರಣೆ ಮಾಡಬೇಕು, ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಕಮಿಷನ್ ನೀಡದೆ ಕಿಟ್ ಕಮಿಷನ್ ವಿಳಂಬ ಮಾಡುವುದನ್ನು

ಕೇರಳಕ್ಕಿಂತ ಕಡಿಮೆ ದರದಲ್ಲಿ ಇಂಧನ ಸಿಗುತ್ತಿದೆ ಎಂಬ ಪ್ಲೆಕ್ಸ್ : ಕೇರಳದಲ್ಲಿ ಭಾರೀ ಪ್ರತಿಭಟನೆ

ಮಂಜೇಶ್ವರ: ಗಡಿಪ್ರದೇಶವಾದ ಕರ್ನಾಟಕ ಪೆಟ್ರೋಲ್ ಪಂಪ್ ಎದುರು ಹಾಕಿರುವ ಪ್ಲೆಕ್ಸ್ ಬೋರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೇರಳಕ್ಕಿಂತ 8 ರೂಪಾಯಿ ಕಡಿಮೆ ದರದಲ್ಲಿ ಇಂಧನ ಸಿಗುತ್ತದೆ ಎಂಬುದಾಗಿ ಫಲಕ ಹಾಕಿರುವುದು ಇದೀಗ ವೈರಲಾಗುತ್ತಿದೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಡೀಸೆಲ್ ದರ 8 ರೂ. ಹಾಗೂ ಪೆಟ್ರೋಲ್ 5 ರೂಪಾಯಿ ಕಡಿಮೆಯಾಗಿದೆ. ಕೇರಳ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಎರಡು ರೂಪಾಯಿ ಸೆಸ್ ಹೇರಲಾಗಿದೆ. ಇದು ಏಪ್ರಿಲ್ ನಿಂದ

ಕಾಸರಗೋಡು ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತುಳು ಲಿಪಿ ನಾಮಫಲಕ ಅನಾವರಣ

ಕಾಸರಗೋಡು ಜಿಲ್ಲೆಯ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತುಳು ಲಿಪಿ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು. ತುಳು ಸಾಹಿತಿ, ತುಲು ಲಿಪಿ ಸಂಶೋಧಕರಾದ ದಿ| ಡಾ.ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಹುಟ್ಟೂರು ಸಮೀಪ ಕಾಸರಗೋಡು ಜಿಲ್ಲೆಯ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ತುಲು ಲಿಪಿ ನಾಮಫಲಕ ಅನಾವರಣ ಮಾಡಲಾಯಿತು. ದೇವಸ್ಥಾನದಲ್ಲಿ ತುಲು ಲಿಪಿ ನಾಮಫಲಕದ ಉದ್ಘಾಟನೆಯನ್ನು ಪುಂಡೂರು ಪುರುಷೋತ್ತಮ ಪುಣಿಂಚತ್ತಾಯ ನಿವೃತ್ತ ಉಪನ್ಯಾಸಕ, ಮೃದಂಗ ವಾದಕರು