Home Posts tagged #v4newskarnataka (Page 67)

ಎಪ್ರಿಲ್‍ನಲ್ಲಿ ಬಿರ್ದ್ ದ ಕಂಬುಲ ತುಳು ಚಿತ್ರ ಬಿಡುಗಡೆ

ಮೂಡುಬಿದಿರೆ : ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಮುಂದಿಟ್ಟುಕೊಂಡು ತಯಾರಾಗುತ್ತಿರುವ ಚಲನಚಿತ್ರ ತುಳುವಿನ ಬಿರ್ದ್‍ದ ಕಂಬುಲದ ಚಿತ್ರೀಕರಣವು ಮುಕ್ತಾಯದ ಹಂತದಲ್ಲಿದೆ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳಿದರು.ಅವರು ಮಂಗಳೂರಿನ ಉರ್ವ ಮೈದಾನದಲ್ಲಿ ಬಿರ್ದ್‍ದ ಕಂಬುಲ ಚಿತ್ರೀಕರಣದ ಸಂದರ್ಭದಲ್ಲಿ ನಡೆಸಿದ

ಕುಟ್ರುಪ್ಪಾಡಿ ಗ್ರಾ.ಪಂ.ನ ಜಾಗಕ್ಕೆ ಅಗಳು ನಿರ್ಮಾಣಕ್ಕೆ ವಿರೋಧ : ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ಕಾರ್ಯಾಚರಣೆ

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಹೊಸ್ಮಠ ಬಲ್ಯದಲ್ಲಿರುವ ಕಾಡಿಗೆ ಮನ್ನಾ ಜಾಗಕ್ಕೆ ಬೇಲಿ ನಿರ್ಮಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಅಗಳು ನಿರ್ಮಾಣಕ್ಕೆ ಮುಂದಾದಾಗ ಇಲ್ಲಿನ ಇನ್ನೊಂದು ಗುಂಪು ಅದಕ್ಕೆ ತೀವೃ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಪಂಚಾಯಿತಿಯವರು ಪಂಚಾಯಿತಿ ಅಧ್ಯಕ್ಷ ಮೋನಪ್ಪ ಗೌಡ(ಮೋಹನ ಗೌಡ) ಕೆರೆಕೋಡಿ ಅವರ ನೇತೃತ್ವದಲ್ಲಿ

ನ್ಯಾಯಾಲಯದಿಂದ ಸ್ಟೇ ತಂದರೂ ಜೆಸಿಬಿಯಲ್ಲಿ ಅಗೆದು ಕೃಷಿಗೆ ಹಾನಿ : ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಮೂಲಕ ಹೋರಾಟ

ಸುಮಾರು ಮೂರು ಎಕ್ರೆ ಜಾಗ ಹೊಂದಿರುವ ನನ್ನ ವರ್ಗ ಜಾಗದಲ್ಲಿ ಕಾಮಗಾರಿ ಮಾಡಲು ನ್ಯಾಯಾಲಯದಿಂದ ಸ್ಟೇ ತಂದರೂ ಕೆಲವೊಂದು ವ್ಯಕ್ತಿಗಳು ಈ ಜಾಗದಲ್ಲಿ ಜೆಸಿಬಿಯಿಂದ ಅಗೆದು ತನ್ನ ಕೃಷಿ ಭೂಮಿಯನ್ನು ಹಾಳು ಮಾಡುತ್ತಿದ್ದಾರೆ. ಈ ಕುರಿತು ಮಹಿಳಾ ಆಯೋಗ, ಹಿಂದುಳಿದ ವರ್ಗಗಳ ಆಯೋಗ ಸಹಾಯವಾಣಿಯ ಮೂಲಕ ಹೋರಾಟ ಮುಂದುವರಿಸಲಾಗುವುದು ಎಂದು ಮುಂಡೂರು ಗ್ರಾಮದ ರವೀಂದ್ರ ಎಂ. ಮುಳಾರು ಮನೆ ಎಂಬವರು ತಿಳಿಸಿದ್ದಾರೆ. ಅವರು ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ

ತಲೆನೋವು,ಜ್ವರದಿಂದ ಬಳಲುತ್ತಿದ್ದ ಆರನೇ ತರಗತಿ ವಿದ್ಯಾರ್ಥಿ ಸಾವು.

ಉಳ್ಳಾಲ: ಕಳೆದೆರಡು ದಿವಸಗಳಿಂದ ತಲೆನೋವು,ಜ್ವರದಿಂದ ಬಳಲುತ್ತಿದ್ದ ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಶ್ವಿತ್ ಇಂದು ಸಾವನ್ನಪ್ಪಿದ್ದು,ಬಾಲಕ ಮೆದುಳು ಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಎರಡು ದಿನಗಳಿಂದ ಜ್ವರ ,ತಲೆನೋವು ಎನ್ನುತ್ತಿದ್ದ ಅಶ್ವಿತ್ ನಾಳೆ ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಸ್ಕಿಟ್ ನಲ್ಲೂ ಭಾಗವಹಿಸಲು ತಯಾರಿ ನಡೆಸಿದ್ದನಂತೆ. ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಶಾಲಾ ಆಡಳಿತ ಮಂಡಳಿ ,ಕುಟುಂಬ

ಭಜನೆ ಮತ್ತು ಭಜಕರ ಬಗ್ಗೆ ನಿಂದನಾ ಪೋಸ್ಟ್ ವಿಚಾರ : ಸಂಜೀವ ಪೂಜಾರಿಯನ್ನು ಬಂಧಿಸದಿದ್ದರೆ ಬೀದಿಗಿಳಿದು ಹೋರಾಟ

ಕಡಬ: ಭಜನೆ ಮತ್ತು ಭಜಕರ ಹಾಗು ಹಿಂದೂ ಧರ್ಮದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಪೋಸ್ಟ್ಗಳನ್ನು ಹಾಕುತ್ತಿರುವ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲಾದರೂ ಆವರನ್ನು ಇನ್ನೂ ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷದ್ ಭಜರಂಗದಳ ಕಡಬ ಪ್ರಖಂಡ ನೇತೃತ್ವದಲ್ಲಿ ಕಡಬ ಠಾಣಾ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿಜೆಪಿ

ಮೂಡುಬಿದಿರೆ: ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ದಳ

ಮೂಡುಬಿದಿರೆ: ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ವ್ಯಕ್ತಿಯನ್ನು ಮೂಡುಬಿದಿರೆ ಅಗ್ನಿಶಾಮಕದ ದಳದ ಸಿಬಂಧಿಗಳು ರಕ್ಷಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳುವಾಯಿಯಲ್ಲಿ ನಡೆದಿದೆ. ಪಡುಮಾರ್ನಾಡಿನ ನಿವಾಸಿ ಅರವತ್ತರ ಹರೆಯದ ಶ್ರೀನಿವಾಸ ಎಂಬವರು ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಶ್ರೀನಿವಾಸ ಅವರು ಕೂಲಿ ಕೆಲಸಕ್ಕೆಂದು ಬೆಳುವಾಯಿಗೆ ಹೋಗಿದ್ದು ಅಲ್ಲಿ ಗೀತಾ ಕ್ಲಿನಿಕ್ ನ ಮುಂಭಾಗದಲ್ಲಿರುವ ಬಾವಿಗೆ ಅಕಸ್ಮಿಕವಾಗಿ ಕಾಲು ಜಾರಿ

ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಕಾರು ಅಪಘಾತ

ಪುತ್ತೂರು ಬೈಪಾಸ್ ರಸ್ತೆಯಲ್ಲಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರ ಕಾರು ಅಪಘಾತ ಪ್ರಾಣಪಾಯದಿಂದ ಪಾರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರ ಖಾಸಗಿ ಒಡೆತನದ ಕಾರೊಂದು ಪುತ್ತೂರು ಬೈಪಾಸ್ ರಸ್ತೆ ನೂಜಿ ಎಂಬಲ್ಲಿ ಡಿ.29 ರಂದು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಡಾ.ದೀಪಕ್ ರೈ ದಂಪತಿ ಸಮೇತ ಮಂಗಳೂರು ಕಡೆಯಿಂದ ಕಾರಿನಲ್ಲಿ ಬರುತ್ತಿದ್ದ ವೇಳೆ ಬೈಪಾಸ್ ರಸ್ತೆಯ ನೂಜಿ ಎಂಬಲ್ಲಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೆ

ಅಳಿಕೆ ಗ್ರಾಮದ ಕೋಟೆತ್ತಡ್ಕದಲ್ಲಿ ನಡೆಯುತ್ತಿರುವ ಕೆಂಪು ಕಲ್ಲುಗಣಿಗಾರಿಕೆ, ಪರವಾನಗಿ ಪಡೆದು ಕಲ್ಲು ತೆಗೆಯಲಾಗುತ್ತಿದೆ : ಮಾಲೀಕ ರಂಜಿತ್ ಕುಮಾರ್

ವಿಟ್ಲ: ಅಳಿಕೆ ಗ್ರಾಮದ ಕೋಟೆತ್ತಡ್ಕದಲ್ಲಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆಯ ಸಂಪೂರ್ಣ ಸಕ್ರಮವಾಗಿದ್ದು, ಗಣಿಗಾರಿಕೆ ನಡೆಸುವ ಜಾಗ ಸಂಪೂರ್ಣ ವರ್ಗ ಜಮೀನಾಗಿದೆ. ಅದನ್ನು ಲೀಸ್ ಗೆ ಪಡೆದು ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆದು ಕಲ್ಲು ತೆಗೆಯಲಾಗುತ್ತಿದೆ. ಈ ಭಾಗದಲ್ಲಿ ಪಾಂಡವರ ಕೋಟೆಯಿಲ್ಲ, ಪಾಂಡವರ ಒಲೆಯ ಕುರುಹು ಇದ್ದು ಆ ಸ್ಥಳವನ್ನು ಸಂರಕ್ಷಣೆ ಮಾಡಲಾಗಿದೆ ಎಂದು ಕೊಟೆತ್ತಡ್ಕ ಕೆಂಪು ಕಲ್ಲು ಕ್ವಾರಿ ಮಾಲೀಕ ರಂಜಿತ್ ಕುಮಾರ್ ಹೇಳಿದ್ದಾರೆ.

ಭಜನೆ ಹಾಗೂ ಭಜಕರ ವಿರುದ್ಧ ಫೇಸ್ಬುಕ್ ಪೋಸ್ಟ್ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಇದರ ವತಿಯಿಂದ ಪ್ರತಿಭಟನೆ

ಸುಳ್ಯ . ಸರಕಾರದ ಅರಣ್ಯ ಇಲಾಖೆ ಯಲ್ಲಿ ಇದ್ದುಕೊಂಡು ಭಜನೆ ಮತ್ತು ಬಜಕರ ಬಗ್ಗೆ ಹಿಂದೂ ದೇವರ ಬಗ್ಗೆ ನಿಂದನೆಯ ಪೋಸ್ಟುಗಳನ್ನು ತನ್ನ ಫೇಸ್ಬುಕ್ ನಲ್ಲಿ ಹರಿಯ ಬಿಟ್ಟು ಹಿಂದುಗಳ ಭಾವನೆಗೆ ದಕ್ಕೆ ತಂದಿರುವ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಪ್ರಕರಣ ದಾಖಲಾಗಿದ್ದರು ಕೂಡ ಬಂಧನ ಮಾಡದ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಇಂದು ಬೆಳ್ಳಾರೆ ಪೊಲೀಸ್ ಠಾಣಾ ಎದುರು ಬೃಹತ್ ಪ್ರತಿಭಟನೆ ನಡೆಸಿದರು ಮುಂದಿನ ದಿನದಲ್ಲಿ ಉಪ ವಲಯ ಅರಣ್ಯ

ಜ.5ರಂದು ಪದವು ಬಂಟರ ಭವನಕ್ಕೆ ಶಿಲಾನ್ಯಾಸ.

ಬಂಟ್ಚಾಳ: ತಾಲೂಕಿನ ವಾಮದಪದವು ವಲಯ ಬಂಟರ ಸಂಘದ ವತಿಯಿಂದ ಆಲದಪದವಿನ ನಿವೇಶನದಲ್ಲಿ ನಿರ್ಮಿಸಲು ಉದ್ಧೇಶಿಸಿರುವ “ಪದವು ಬಂಟರ ಭವನ” ದ ಶಿಲಾನ್ಯಾಸ ಸಮಾರಂಭವು ಜ.5ರಂದು ನಡೆಯಲಿದೆ ಎಂದು ಸಂಘದ ಗೌರವ ಸಲಹೆಗಾರ ಅಶೋಕ ಪಕ್ಕಳ ಶ್ರೀ ಸನ್ನಿಧಿಗುತ್ತು ತಿಳಿಸಿದ್ದಾರೆ. ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಲದಪದವಿನಲ್ಲಿ‌ರುವ 1.61 ಎಕ್ರೆ ನಿವೇಶನದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಬಂಟರ ಭವನ