Home Articles posted by v4team

ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ: ಸಂಭ್ರಮದಿಂದ ನಡೆದ ದೇವರ ದರ್ಶನ ಬಲಿ ಉತ್ಸವ

ಸುಳ್ಯ: ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಮುಳುಗೆದ್ದ ಮಂಡೆಕೋಲಿನ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಇದೀಗ ವಾರ್ಷಿಕ ಜಾತ್ರೋತ್ಸವಕ್ಕೆ ಸಿದ್ಧಗೊಂಡಿದ್ದು ಗುರುವಾರ ಬೆಳಿಗ್ಗೆ ಕ್ಷೇತ್ರದಲ್ಲಿ ದರ್ಶನಬಲಿ ಉತ್ಸವ ನಡೆಯಿತು. ದೇವರ ವಿಗ್ರಹ ಹೊತ್ತ ಪ್ರಸಾದ ಅಡಿಗರು ದರ್ಶನ ಬಲಿ ಉತ್ಸವದ ವಿಧಿ ವಿಧಾನಗಳನ್ನು ನೆರವೇರಿಸಿದರು.ದೇಗುಲದ

ಯುಎಸ್‍ಎ ವಿಶ್ವವಿದ್ಯಾನಿಲಯಗಳಲ್ಲಿ ಚಳವಳಿ : ಪ್ಯಾಲೆಸ್ತೀನ್ ಬೆಂಬಲಿಸಿದವರೆಲ್ಲರ ಬಂಧನ

ಅಮೆರಿಕ ಸಂಯುಕ್ತ ಸಂಸ್ಥಾನದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಪ್ಯಾಲೆಸ್ತೀನ್ ಬೆಂಬಲಿಸಿ, ಇಸ್ರೇಲ್ ದಾಳಿ ಖಂಡಿಸಿ ಚಳವಳಿ ಮುಂದುವರಿದಿದೆ. ಇಂದು ಸಿಟಿ ಕಾಲೇಜಿನ 300 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ನ್ಯೂಯಾರ್ಕಿನ ಪೋಲೀಸರು ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಿಟಿ ಕಾಲೇಜಿನ 300 ವಿದ್ಯಾರ್ಥಿಗಳನ್ನು ಗುರುವಾರ ಪ್ರತಿಭಟನೆ ಸಂಘಟಿಸಿದ್ದಕ್ಕಾಗಿ ಬಂಧಿಸಿದರು. ಎಲ್ಲ ವಿವಿ ಕ್ಯಾಂಫಸ್‍ಗಳಲ್ಲೂ ಟೆಂಟ್ ಹಾಕಿ ಪ್ರತಿಭಟನೆ ನಡೆಸುವುದು ವ್ಯಾಪಕಗೊಂಡಿದೆ.

ದುಬಾಯಿಯಲ್ಲಿ ಅಸ್ಥಿರ ಹವಾಮಾನ : ನಾಗರಿಕರಿಗೆ ಎಚ್ಚರಿಕೆ ನೀಡಿದ ಪೋಲೀಸು

ದುಬಾಯಿಯಲ್ಲಿ ಅಸ್ಥಿರ ಹವಾಮಾನ ಮುಂದುವರಿದಿದ್ದು ಸುರಕ್ಷತೆಯ ದೃಷ್ಟಿಯಿಂದ ನಾಗರಿಕರು ಬೀಚ್‍ಗಳಿಗೆ ಹೋಗದಂತೆ ಮತ್ತು ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ದುಬಾಯಿ ಪೋಲೀಸರು ಎಚ್ಚರಿಕೆ ನೀಡಿದ್ದಾರೆ. ಎಎಇ- ಅರಬ್ ಅಮೀರರ ಎಮಿರೇಟ್ಸ್ ಇನ್ನಷ್ಟು ಹವಾಮಾನ ವೈಪರೀತ್ಯಗಳನ್ನು ಕಾಣಲಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಈಗಾಗಲೇ ದುಬಾಯಿಯಲ್ಲಿ ಮಳೆಯಾಗುತ್ತಿದ್ದು, ಅದು ಭಾರೀ ಗಾಳಿ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯು ಹೇಳಿದೆ. ದೊಡ್ಡ

ಭಾರತದಲ್ಲಿ ಕೋವಿಶೀಲ್ಡನ್ನೇ ಮುಖ್ಯವಾಗಿಸಿದ್ದೇಕೆ?

ಕೋವಿಡ್ ಕಾಲದಲ್ಲಿ ಬಾಬಾ ರಾಮದೇವ್ ಕಂಪೆನಿಗೆ ಮತ್ತು ಕೋವಿಶೀಲ್ಡ್ ಲಸಿಕೆ ಕಂಪೆನಿಗೆ ಅನುಕೂಲವಾಗುವಂತೆ ಮೋದಿಯವರ ಸರಕಾರ ನಡೆದುಕೊಂಡಿತು ಎಂಬ ವಿಷಯ ಸುಪ್ರೀಂ ಕೋರ್ಟಿನಲ್ಲೇ ಪ್ರಕಟಗೊಂಡಿದೆ. ಈ ಬಗೆಗೆ ಸರ್ವೋಚ್ಚ ನ್ಯಾಯಾಲಯವು ಜನರ ಒಳಿತಿಗಿಂತ ಲಸಿಕೆ ಕಂಪೆನಿಗಳ ಲಾಭ ಮುಖ್ಯವಾಯಿತೇ ಎಂದು ಬಿಜೆಪಿ ಒಕ್ಕೂಟ ಸರಕಾರವನ್ನು ಹಿಂದೆಯೇ ಪ್ರಶ್ನಿಸಿದ್ದೂ ಆಗಿದೆ. ಸುಪ್ರೀಂ ಕೋರ್ಟ್ ಖಂಡನೆಯ ಬಳಿಕ ಉತ್ತರಾಖಂಡ ಸರಕಾರವು ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಸಹೋದರರ ಕಂಪೆನಿಯ

ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವರಿಗೆ ಅಷ್ಠಬಂಧ ಬ್ರಹ್ಮಕಲಶೋತ್ಸವ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಗ್ರಾಮದೇವರಾದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಏಪ್ರಿಲ್ 13ರಿಂದ ಮೇ 4ರ ವರೆಗೆ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ದೇವರ ಗಂಧ ಮತ್ತು ಅನ್ನ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗಿದ್ದಾರೆ.

ಸುಳ್ಯ: ಮೇ 2ರಂದು ನೆಕ್ಸಾ ಕಾರುಗಳ ಪ್ರದರ್ಶನ ಮಳಿಗೆಯ ಉದ್ಘಾಟನೆ

ಸುಳ್ಯದಲ್ಲಿ ನೆಕ್ಸಾ ಕಾರುಗಳ ಪ್ರದರ್ಶನ ಮಳಿಗೆ ಮೇ 2ರಂದು ಉದ್ಘಾಟನೆಗೊಳ್ಳಲಿದೆ. ಸುಳ್ಯದ ಒಡಬೈಯಲ್ಲಿ ನೆಕ್ಸಾ ಕಾರುಗಳ ಪ್ರದರ್ಶನ ಮಳಿಗೆ ಆರಂಭಗೊಳ್ಳಲಿದೆ. ನೆಕ್ಸಾ ಕಾರುಗಳ ಪ್ರದರ್ಶನ ಮತ್ತು ಮಾರಾಟ, ಹಳೇ ಕಾರುಗಳ ವಿನಿಮಯ ಮತ್ತು ಮಾರಾಟ, ಇನ್ಶೂರೆನ್ ರಿನಿವಲ್ ಹಾಗೂ ಸುಲಭ ವಾಹನ ಸಾಲ ಸೌಲಭ್ಯಗಳು ಲಭ್ಯವಿದೆ  ಹೆಚ್ಚಿನ ಮಾಹಿತಿಗಾಗಿ ನೆಕ್ಸಾ ಮಾಂಡೋವಿ ಮೋಟರ್ಸ್ ಪ್ರೈವೇಟ್ ಲಿಮಿಟೆಡ್, ಸಮಿಟ್ ಅಪಾರ್ಟ್ಮೆಂಟ್ ಬಿಲ್ಡಿಂಗ್, ಏರ್ಪೋರ್ಟ್ ರೋಡ್, ಮೇರಿ ಹಿಲ್,

ಬೈಂದೂರು: ‘ಗೀತಕ್ಕ ಗೆದ್ದರೆ ನಾರಾಯಣಗುರು ವಿಚಾರ ಧಾರೆಗಳು ಗೆದ್ದಂತೆ: ಚಿಂತಕ ನಿಖೇತ್ ರಾಜ್ ಮೌರ್ಯ

ಬೈಂದೂರು:’ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾಕ್ಕ ಗೆದ್ದರೆ ಸಂವಿಧಾನ, ನಾರಾಯಣ ಗುರುಗಳ ವಿಚಾರಧಾರೆ, ಚಿಂತನೆಗಳು ಗೆದ್ದಂತೆ’ ಎಂದು ಕೆಪಿಸಿಸಿ ವಕ್ತಾರ ಹಾಗೂ ಚಿಂತಕರೂ ಆದ ನಿಖೇತ್ ರಾಜ್ ಮೌರ್ಯ ಹೇಳಿದರು. ತಾಲ್ಲೂಕಿನ ಕಿರಿಮಂಜೇಶ್ವರದಲ್ಲಿ ಮಂಗಳವಾರ ಆಯೋಜಿಸಿದ್ದ ಗೀತಾ ಶಿವರಾಜಕುಮಾರ ಪರ  ಸಾತಯಾಚನೆ ಸಭೆ ಹಾಗೂ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಇಲ್ಲಿ ಬಸವಣ್ಣ ಹಾಗೂ ಕುವೆಂಪುರವರ ತತ್ವ ಸಿದ್ಧಾಂತಗಳನ್ನು

ಬೇಸಿಗೆಯಲ್ಲಿ ಬೆವರಿಳಿಸಿ ಬೆಂಡಾಗಿಸುವ ನಿರ್ಜಲೀಕರಣ

ನಮ್ಮ ದೇಹದ ತೂಕದ ಸುಮಾರು 60 ಶೇಕಡಾದಷ್ಟು ನೀರಿನಾಂಶ ಇದ್ದು, ದೇಹದ ಹೆಚ್ಚಿ ಎಲ್ಲಾ ಜೈವಿಕ ಕ್ರಿಯೆಗಳಿಗೆ ನೀರು ಅತೀ ಅಗತ್ಯ. ಸುಮಾರು 70 ಕೆ.ಜಿ ತೂಕದ ವ್ಯಕ್ತಿಯಲ್ಲಿ ಸರಿಸುಮಾರು 40 ಲೀಟರ್‍ಗಳಷ್ಟು ಅಂದರೆ ದೇಹದ ತೂಕದ 60 ಶೇಕಡಾದಷ್ಟು ನೀರು ಇರುತ್ತದೆ. ನಮ್ಮ ದೇಹದಲ್ಲಿನ ನೀರು ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ರೂಪದಲ್ಲಿ (ಬೆವರು, ಮೂತ್ರ ಇತ್ಯಾದಿಯಾಗಿ) ದೇಹದಿಂದ ಹೊರ ಹಾಕಲ್ಪಟ್ಟ ನೀರಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು

ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು : ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಕೆ

ಉತ್ತರಾಖಂಡ ಸರಕಾರವು ರಾಮದೇವ್ ಅವರ ಆಯುರ್ವೇದ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿ ರದ್ದು ಪಡಿಸಿದೆ. ಆ ಬಗೆಗೆ ಸಂಪೂರ್ಣ ಮಾಹಿತಿಯನ್ನು ಇಂದು ಬೆಳಿಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ. ದಿವ್ಯಾ ಫಾರ್ಮಸಿಯ ದೃಷ್ಟಿ ಐ ಡ್ರಾಪ್, ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೇಹ್, ಮುಕ್ತಾ ವಟಿ ಎಕ್ಸ್ಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರಿಟ್, ಮಧುನಾಶಿನಿ ವಟಿ, ಲಿವಾಮೃತ್ ಅಡ್ವಾನ್ಸ್, ಲಿವೋ ಗ್ರಿಟ್ ಈ ಎಲ್ಲ

ನಾನೆಂಬ ಅಹಂಭಾವ ಇರುವಲ್ಲಿ ಶಾಂತಿ ನೆಲೆಸಲು ಅಸಾಧ್ಯ: ಒಡಿಯೂರು ಶ್ರೀ

ಸುಳ್ಯ: ನಾನು ಎಂಬ ಅಹಂಭಾವ ಹಾಗೂ ಆಸೆ ಇರುವಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಮಹಾಸ್ವಾಮೀಜಿ ಹೇಳಿದರು. ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ಆಯೋಜಿಸಲಾದ ಮೂರನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಅವರು ಮಾತನಾಡಿದರು. ಸಂಸ್ಕಾರ, ಶಿಸ್ತು, ಸಂಯಮಗಳು ಜೊತೆಗಿದ್ದರೆ ಭವ್ಯ ಬದುಕಿನಲ್ಲಿ ದಿವ್ಯತೆಯ ಅನುಭವವನ್ನು