Home 2021 August

ಮಹಿಳೆಯರಿಂದ ಗಣೇಶ ವಿನ್ಯಾಸ ಇರುವ ಚಿನ್ನದ ಆಭರಣ ಉತ್ಸವ : ಸೆ.3ರಂದು ಸಚಿವ ಡಾ. ಸುಧಾಕರ್ ಚಾಲನೆ

ಬೆಂಗಳೂರು, ಆ 31; ಕೋವಿಡ್ ಸಂಕಷ್ಟದಿಂದ ಜನತೆ ಹೊರ ಬರುತ್ತಿರುವ ಸಂದರ್ಭದಲ್ಲೇ ಈ ಬಾರಿ ಗೌರಿ – ಗಣೇಶ ಹಬ್ಬಕ್ಕಾಗಿ ವಿಶೇಷವಾಗಿ ಯಲಹಂಕದ ಜಕ್ಕೂರಿನ ಮಧುರ ಮಿಲನ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 3 ರಿಂದ 5 ರ ವರೆಗೆ ಮಹಿಳೆಯರಿಂದಲೇ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಈ ಬಾರಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಲು ಎಲ್ಲೆಡೆ

ಪಡುಬಿದ್ರಿಯಲ್ಲಿ ಎರ್ರಾ ಬಿರ್ರಿ ಚಲಿಸಿದ ಲಾರಿ:ಮೂರು ದ್ವಿಚಕ್ರ ವಾಹನ ಸಹಿತ ಒಂದು ಕಾರು ಜಖಂ

ಲಾರಿ ಚಾಲಕನೊರ್ವನ ಅಜಾಗರೂಕತೆಯ ಚಾಲನೆಯಿಂದಾಗಿ ರಸ್ತೆಯಂಚಿನಲ್ಲಿ ಪಾರ್ಕ್ ಮಾಡಲಾದ ದ್ವಿಚಕ್ರ ವಾಹನಗಳು, ಕಾರೊಂದರ ಸಹಿತ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ತಗ್ಗು ಪ್ರದೇಶದಲ್ಲಿ ನಿಂತಿದೆ. ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ಪಡುಬಿದ್ರಿ ಬಂಟರ ಸಂಘದ ಮುಂಭಾಗದ ಹೊಟೇಲೊಂದರ ಮುಂಭಾಗ ರಸ್ತೆಯಂಚಿನಲ್ಲಿ ಹೊಟೇಲ್ ಗ್ರಾಹಕರುನಿಲ್ಲಿಸಿದ ಎರಡು ಬೈಕ್ ಒಂದು ಸ್ಕೂಟರ್

ತೆಂಕನಿಡಿಯೂರು ಕಾಲೇಜು : ರಾಷ್ಟ್ರೀಯ ಕ್ರೀಡಾ ದಿನ ಪ್ರಯುಕ್ತ ರಕ್ತದಾನ ಶಿಬಿರ

ಉಡುಪಿ : ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಪ್ರಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ, ಇದರ ದೈಹಿಕ ಶಿಕ್ಷಣ ವಿಭಾಗ, ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ (ರಿ), ಲಯನ್ಸ್ ಮತ್ತು ಲಿಯೋ ಕ್ಲಬ್ ಮಲ್ಪೆ, ಉಡುಪಿ ಜಿಲ್ಲಾ ಅಮೆಚೂರ್ ಅತ್ಲೆಟಿಕ್ ಅಸೋಸಿಯೇಶನ್ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ

ಜಾತಿವಾರು ಜನಗಣತಿ ಅರ್ಹರಿಗೆ ಮೀಸಲಾತಿ ಒದಗಿಸಲು ಸಾಧ್ಯವಾಗುತ್ತದೆ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ‌ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿವಾರು ಜನಗಣತಿ ನಡೆಸುವುದರಿಂದ ವೈಜ್ಞಾನಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲು, ಅರ್ಹರಿಗೆ ಮೀಸಲಾತಿ ಒದಗಿಸಲು ಸಾಧ್ಯವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 90 ವರ್ಷಗಳ ಹಿಂದಿನ ಜಾತಿ ಜನಗಣತಿ ವರದಿ

ಕೋವಿಡ್ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ : ಮೂಡುಬಿದರೆಯಲ್ಲಿ ಕಾಂಗ್ರೆಸ್‍ನಿಂದ ಪ್ರತಿಭಟನೆ

ಮೂಡುಬಿದಿರೆ: ತಾಲೂಕಿನ ವಿವಿಧ ಕಡೆ ಕೋವಿಡ್ ಲಸಿಕೆ ಕೊಡುವಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ಶಾಸಕರು, ಬಿಜೆಪಿ ಮುಖಂಡರು ತಾರತಮ್ಯ

ಕಾರ್ಮಿಕ ಇಲಾಖೆ ನೀಡುವ ಆಹಾರ ಕಿಟ್‍ನಲ್ಲಿ ತಾರತಮ್ಯ : ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ

ಬಂಟ್ವಾಳ: ಕೆಎಸ್‍ಆರ್‍ಟಿಸಿಯ ಐಸಿಯು ಬಸ್ ಸೇವೆ, ಕೋವಿಡ್ ವ್ಯಾಕ್ಸಿನ್ ನೀಡಿಕೆ ಹಾಗೂ ಕಾರ್ಮಿಕ ಇಲಾಖೆಯಿಂದ ನೀಡುವ ಆಹಾರದ ಕಿಟ್‍ನಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬಿ.ಸಿ. ರೋಡಿನ ಮಿನಿವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ದಿಢೀರ್

ಬದುಕು ಭಾರವಲ್ಲ ಕೃತಿ ಬಿಡುಗಡೆ

ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಪ್ರಕಟಿಸಿರುವ ಲೇಖನಗಳ ಸಂಕಲನ ‘ಬದುಕು ಭಾರವಲ್ಲ’ ಕೃತಿಯನ್ನು ನಗರದ ಪ್ರೆಸ್‍ಕ್ಲಬ್‍ನಲ್ಲಿ ಇಂದು ಜಾನಪದ ವಿದ್ವಾಂಸ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಬಿಡುಗಡೆಗೊಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹರೀಶ್

ತುಳು ಭವನದಲ್ಲಿ ತುಳು ಹಾಗೂ ಕನ್ನಡ ಚಲನಚಿತ್ರ ನಟನಾ ತರಗತಿ ಉದ್ಘಾಟನೆ

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಭಾಗಿತ್ವದಲ್ಲಿ ಲೆನ್ಸ್ ಕ್ಯಾಪ್ ಪಿಕ್ಚರ್ಸ್ ನಡೆಸುವ ತುಳು ಹಾಗೂ ಕನ್ನಡ ಚಲನಚಿತ್ರ ನಟನಾ ತರಗತಿ ಸೆ.5ರಂದು ತುಳು ಭವನದಲ್ಲಿ ಉದ್ಘಾಟನೆಗೊಳ್ಳಲಿದೆ. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ತುಳು ಹಾಗೂ ಕನ್ನಡ ಭಾಷೆಯಲ್ಲಿ

ಕಲ್ಲಿಕೋಟೆಯಿಂದ ನೇಪಾಳಕ್ಕೆ ಬೈಕ್ ಯಾತ್ರೆ

ಉಳ್ಳಾಲ: ಡಬ್ಬದಲ್ಲಿ ಹಣವನ್ನು ಕೂಡಿಟ್ಟು, ಸಮಾಜಕ್ಕೆ ಸೌಹಾರ್ದದ ಸಂದೇಶ ಹಾಗೂ ಸಾಯುವ ಮುನ್ನ ಅನಿಸಿದ್ದನ್ನು ಸಾಧಿಸು ಅನ್ನುವ ಉದ್ದೇಶವನ್ನು ಮುಂದಿಟ್ಟು ಕೇರಳದ ಹವ್ಯಾಸಿ ಬೈಕ್ ರೈಡರ್‍ಗಳ ಒಂಭತ್ತು ಮಂದಿಯ ತಂಡ ಕಲ್ಲಿಕೋಟೆಯಿಂದ – ನೇಪಾಳ ಪ್ರವಾಸವನ್ನು ಆರಂಭಿಸಿದೆ. ಆ.27 ರಂದು ಪ್ರವಾಸವನ್ನು ಆರಂಭಿಸಿದ ತಂಡ ಇಂದು ದೇರಳಕಟ್ಟೆಯನ್ನು ತಲುಪಿದೆ. ಅಲ್ಲಿಂದ

ಮಂಗಳೂರಿನಲ್ಲಿ ವಿಶ್ವಹಿಂದು ಪರಿಷತ್, ದುರ್ಗಾವಾಹಿನಿ ವತಿಯಿಂದ ಪ್ರತಿಭಟನೆ

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಲೈಂಗಿಕ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧಿಸಿದ್ದು ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೂ ಮಹಿಳೆಯರಿಗೆ ರಕ್ಷಣೆಯನ್ನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿ ದುರ್ಗಾವಾಹಿನಿ ವತಿಯಿಂದ ಪ್ರತಿಭಟನೆ ನಡೆಸಿದರು.