Home 2023 September

ಪಡುಬಿದ್ರಿ: ಬೀಚ್‌ನಲ್ಲಿ ಸ್ವಚ್ಚತಾ ಪಕ್ವಾಡ ಅಭಿಯಾನ ಕಾರ್ಯಕ್ರಮ

ಪಡುಬಿದ್ರಿಯ ಮುಖ್ಯ ಬೀಚ್‌ನಲ್ಲಿ ವಿಶ್ರುದ್ ಕೋಸ್ಟಲ್ ಡೆವಲಪರ್ಸ್ ವತಿಯಿಂದ  ಸ್ವಚ್ಚತಾ ಪಕ್ವಾಡ್ ಅಭಿಯಾನ ಕಾರ್ಯಕ್ರಮ ನಡೆಯಿತು. ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಸಿ.ಎಸ್.ಬಿ ಸಿಬ್ಬಂದಿಗಳು ಸಹಿತ ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮ ಉತ್ತಮವಾಗಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ

ಮಂಗಳೂರು: ಬಿಎನ್‍ಐ ಮಂಗಳೂರು ಬಿಗ್ ಬ್ರ್ಯಾಂಡ್ಸ್ ಎಕ್ಸ್ ಪೋ – 2023ಕ್ಕೆ ಚಾಲನೆ

ಬಿಎನ್‍ಐ ಮಂಗಳೂರು ವತಿಯಿಂದ ಆಯೋಜಿಸಲಾಗಿರುವ ಬಿಗ್ ಬ್ರ್ಯಾಂಡ್ ಎಕ್ಸ್‍ಪೋ-2023 ಕ್ಕೆ ನಗರದ ಟಿಎಂಎಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಬಿಎನ್‍ಐ ಮಂಗಳೂರು ಬಿಸ್‍ನೆಸ್ ನೆಟ್ವರ್ಕ್‍ನ ಒಂದು ಭಾಗವಾಗಿದೆ. ಇದು ವಿಶ್ವದಾದ್ಯಂತ 79 ದೇಶಗಳಲ್ಲಿ 3.11 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು

ಕಡಬ: ಕಾಡಾನೆ ತುಳಿತಕ್ಕೊಳಗಾದ ಸ್ಥಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ಪರಿಶೀಲನೆ

ಕಡಬದ ಮರ್ದಾಳ ಸಮೀಪ ಕಾಡಾನೆ ತುಳಿತಕ್ಕೊಳಗಾದ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಐತ್ತೂರು ಕೋಕಲಾ ಸ್ಥಳವನ್ನು ಪರಿಶೀಲಿಸಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ನಂತರ ತುಳಿತಕ್ಕೊಳಗಾದ ನೇಲ್ಯಡ್ಕ ನಿವಾಸಿ ಚೋಮ ರವರ ಮನೆಗೆ ಸುಳ್ಯ ಶಾಸಕಿರವರು ಭೇಟಿ ನೀಡಿದರು. ಮನೆಯಲ್ಲಿ ಚೋಮ ರವರ

ಬೈಂದೂರು : ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಲಾರಿ, ಟೆಂಪೋ ಚಾಲಕರ ಮುಷ್ಕರ

ಬೈಂದೂರು ವಲಯ ಲಾರಿ ಮತ್ತು ಟೆಂಪೋ ಮಾಲಿಕರು ಹಾಗೂ ಚಾಲಕರ ಸಂಘದ ವತಿಯಿಂದ 3ಎ ಲೈಸೆನ್ಸ್ ರದ್ದು ಪಡಿಸಿರುವುದನ್ನು ವಿರೋಧಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬೈಂದೂರು ಯಡ್ತರೆ ಸರ್ಕಲ್‍ನಲ್ಲಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಯುತ್ತಿದೆ. ಬೈಂದೂರು ವಲಯ ಲಾರಿ ಮಾಲಿಕರ

ವಿಟ್ಲ: 40 ಅಡಿ ಅಳದ ಹೊಳೆಗೆ ಬಿದ್ದ ವ್ಯಕ್ತಿಯ ರಕ್ಷಣೆ

ವಿಟ್ಲ: ಬೈಕ್ ಸೇತುವೆಗೆ ಡಿಕ್ಕಿ ಸವಾರ 40 ಅಡಿ ಆಳದ ಹೊಳೆಗೆ ಬಿದ್ದಿದ್ದು, ಸ್ಥಳೀಯ ಮುಸ್ಲಿಂ ಯುವಕರು ರಕ್ಷಣೆ ಮಾಡಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿಯಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಪಾಕ ಪ್ರವೀಣ ಹರ್ಷವರ್ಧನ ಭಟ್(55) ಅವರು ಕಾರ್ಯನಿಮಿತ್ತ ಶನಿವಾರ ಮುಂಜಾನೆ 4ಗಂಟೆ ಸುಮಾರಿಗೆ ತನ್ನ ಬೈಕಿನಲ್ಲಿ ವಿಟ್ಲ ಕಡೆ ಹೊರಟಿದ್ದರು.

ಮಂಗಳೂರು: ಎಂಆರ್‌ಪಿಎಲ್‌ನಿಂದ ಒಂದು ಕೋಟಿ ರೂ. ಆರೋಗ್ಯ ನೆರವು

MANGALURU (V4NEWS ) : ಎಂಡೋಸಲ್ಫಾನ್ ಪೀಡಿತ ರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಒಂದು ಕೋಟಿ ರೂಪಾಯಿ ಸಹಾಯಧನ ನೀಡಿದೆ. ಎಂಆರ್‌ಪಿಎಲ್ ಸಿಎಸ್‌ಆರ್ ಫಂಡ್ ವತಿಯಿಂದ ಜಿಲ್ಲಾ ಆರೋಗ್ಯ ಇಲಾಖೆಗೆ ಎಂಡೋಸಲ್ಫಾನ್ ಪೀಡಿತ ರೋಗಿಗಳಿಗೆ ಸಹಾಯ ಆಗುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿಯನ್ನು ಎಂಆರ್‌ಪಿಎಲ್

ಬಂಟ್ವಾಳ: ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 5 ಜೋಡಿ ಟ್ವಿನ್ಸ್ ಮಕ್ಕಳು

ಬಂಟ್ವಾಳ: ತಾಲೂಕಿನ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 5 ಜೋಡಿ ಅವಳಿ ಜವಳಿ ಮಕ್ಕಳು ಒಂದೇ ತರಗತಿಯಲ್ಲಿ ಕಲಿಯುತ್ತಿದ್ದು ಗಮನ ಸೆಳೆದಿದ್ದಾರೆ. ಶಾಲೆಯ ಎಂಟನೇ ತರಗತಿಯಲ್ಲಿ ಈ ಅವಳಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.ಅಯಿಷಾ ಝಿಬಾ-ಖತೀಝಾ ಝಿಯಾ, ಶ್ರಣವಿ-ಜಾನ್ಹವಿ, ಫಾತಿಮತ್ ಕಮಿಲ-ಫಾತಿಮತ್ ಸಮಿಲ, ಆಯಿಷಾ ರೈಫಾ- ಫಾತೀಮಾ ರೌಲ,

ಕಡಬ : ಕಾರು, ಬೈಕ್ ಡಿಕ್ಕಿ-ಬೈಕ್ ಸವಾರರಿಗೆ ಗಾಯ

ಕಡಬ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಮರ್ದಾಳ ಸಮೀಪದ ಕೆಂಚಭಟ್ರೆ ಎಂಬಲ್ಲಿ ನಡೆದಿದೆ. ನೆಕ್ಕಿತ್ತಡ್ಕ ನಿವಾಸಿ ಜಗನ್ನಾಥ ರೈ ಎಂಬವರು ತನ್ನ ಕಾರಿನಲ್ಲಿ ಕಡಬದಿಂದ ಮರ್ದಾಳಕ್ಕೆ ಹೋಗುತ್ತಿದ್ದ ವೇಳೆ ಮರ್ದಾಳದಿಂದ ಕಡಬ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ಅಜಾಗರೂಕತೆ ಮತ್ತು

ಮಂಗಳೂರು:ಕರಾವಳಿ ಮೈದಾನದಲ್ಲಿ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭ

ಕರಾವಳಿಯ ಪ್ರಮುಖ ಜನಾಕರ್ಷಣೆಯ ಮೇಳ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭವಾಗಿದ್ದು, ಕರಾವಳಿಯ ಉತ್ಸವ ಮೈದಾನದಲ್ಲಿ ವೈಭವದ ಚಾಲನೆ ದೊರಕಿದೆ. 17 ವರ್ಷಗಳಿಂದ ಮಂಗಳೂರಿಗೆ ಬರುತ್ತಿರುವ ರಾಷ್ಟ್ರೀಯ ಗ್ರಾಹಕರ ಮೇಳದಲ್ಲಿ ಈ ಬಾರಿ ಅಂತರ್ಜಲ ಸುರಂಗ ಮಾರ್ಗದಲ್ಲಿ ನಾನಾ ಪ್ರಭೇದದ ಮೀನುಗಳೊಂದಿಗೆ ರೋಬಾಟಿಕೆ ಅನಿಮಲ್ ಶೋಗೆ ಆದ್ಯತೆ ನೀಡಲಾಗಿದೆ. ಗ್ರಾಹಕರು ಅಂತರ್ಜಲ ಸುರಂಗ

ಮೂಡುಬಿದಿರೆ ತಾಲೂಕು ದಸರಾ ಕ್ರೀಡಾಕೂಟಕ್ಕೆ ಚಾಲನೆ

ಮೂಡುಬಿದಿರೆ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸ್ವರಾಜ್ಯ ಮೈದಾನದಲ್ಲಿ ನಡೆಯಿತು. ಮಾಜಿ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಮೂಡುಬಿದಿರೆಯಲ್ಲಿರುವ ಸಿಂಥೆಟಿಕ್ ಟ್ರ್ಯಾಕ್ ನ ಪ್ರಯೋಜನವನ್ನು ಪಡೆದುಕೊಂಡು ರಾಷ್ಟ್ರ- ಅಂತರಾಷ್ಟ್ರ ಮಟ್ಟದಲ್ಲಿ