ಸುಳ್ಯದಲ್ಲಿ ನೆಕ್ಸಾ ಕಾರುಗಳ ಪ್ರದರ್ಶನ ಮಳಿಗೆ ಮೇ 2ರಂದು ಉದ್ಘಾಟನೆಗೊಳ್ಳಲಿದೆ. ಸುಳ್ಯದ ಒಡಬೈಯಲ್ಲಿ ನೆಕ್ಸಾ ಕಾರುಗಳ ಪ್ರದರ್ಶನ ಮಳಿಗೆ ಆರಂಭಗೊಳ್ಳಲಿದೆ. ನೆಕ್ಸಾ ಕಾರುಗಳ ಪ್ರದರ್ಶನ ಮತ್ತು ಮಾರಾಟ, ಹಳೇ ಕಾರುಗಳ ವಿನಿಮಯ ಮತ್ತು ಮಾರಾಟ, ಇನ್ಶೂರೆನ್ ರಿನಿವಲ್ ಹಾಗೂ ಸುಲಭ ವಾಹನ ಸಾಲ ಸೌಲಭ್ಯಗಳು ಲಭ್ಯವಿದೆ ಹೆಚ್ಚಿನ ಮಾಹಿತಿಗಾಗಿ ನೆಕ್ಸಾ ಮಾಂಡೋವಿ ಮೋಟರ್ಸ್
Month: April 2024
ಬೈಂದೂರು:’ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾಕ್ಕ ಗೆದ್ದರೆ ಸಂವಿಧಾನ, ನಾರಾಯಣ ಗುರುಗಳ ವಿಚಾರಧಾರೆ, ಚಿಂತನೆಗಳು ಗೆದ್ದಂತೆ’ ಎಂದು ಕೆಪಿಸಿಸಿ ವಕ್ತಾರ ಹಾಗೂ ಚಿಂತಕರೂ ಆದ ನಿಖೇತ್ ರಾಜ್ ಮೌರ್ಯ ಹೇಳಿದರು. ತಾಲ್ಲೂಕಿನ ಕಿರಿಮಂಜೇಶ್ವರದಲ್ಲಿ ಮಂಗಳವಾರ ಆಯೋಜಿಸಿದ್ದ ಗೀತಾ ಶಿವರಾಜಕುಮಾರ ಪರ ಸಾತಯಾಚನೆ ಸಭೆ ಹಾಗೂ ಮಹಿಳಾ ಸಮಾವೇಶ
ನಮ್ಮ ದೇಹದ ತೂಕದ ಸುಮಾರು 60 ಶೇಕಡಾದಷ್ಟು ನೀರಿನಾಂಶ ಇದ್ದು, ದೇಹದ ಹೆಚ್ಚಿ ಎಲ್ಲಾ ಜೈವಿಕ ಕ್ರಿಯೆಗಳಿಗೆ ನೀರು ಅತೀ ಅಗತ್ಯ. ಸುಮಾರು 70 ಕೆ.ಜಿ ತೂಕದ ವ್ಯಕ್ತಿಯಲ್ಲಿ ಸರಿಸುಮಾರು 40 ಲೀಟರ್‍ಗಳಷ್ಟು ಅಂದರೆ ದೇಹದ ತೂಕದ 60 ಶೇಕಡಾದಷ್ಟು ನೀರು ಇರುತ್ತದೆ. ನಮ್ಮ ದೇಹದಲ್ಲಿನ ನೀರು ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ರೂಪದಲ್ಲಿ (ಬೆವರು, ಮೂತ್ರ ಇತ್ಯಾದಿಯಾಗಿ)
ಉತ್ತರಾಖಂಡ ಸರಕಾರವು ರಾಮದೇವ್ ಅವರ ಆಯುರ್ವೇದ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿ ರದ್ದು ಪಡಿಸಿದೆ. ಆ ಬಗೆಗೆ ಸಂಪೂರ್ಣ ಮಾಹಿತಿಯನ್ನು ಇಂದು ಬೆಳಿಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ. ದಿವ್ಯಾ ಫಾರ್ಮಸಿಯ ದೃಷ್ಟಿ ಐ ಡ್ರಾಪ್, ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೇಹ್, ಮುಕ್ತಾ ವಟಿ ಎಕ್ಸ್ಟ್ರಾ ಪವರ್, ಲಿಪಿಡಮ್,
ಸುಳ್ಯ: ನಾನು ಎಂಬ ಅಹಂಭಾವ ಹಾಗೂ ಆಸೆ ಇರುವಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಮಹಾಸ್ವಾಮೀಜಿ ಹೇಳಿದರು. ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ಆಯೋಜಿಸಲಾದ ಮೂರನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಅವರು
ಮದುವೆಯಾಗಲು ಒಪ್ಪದ ತರುಣಿಯನ್ನು ಮದುವೆಯಾಗಲು ಬಯಸಿದ್ದವನು ನಾಲ್ವರ ಜೊತೆಗೆ ಅಪಹರಿಸಿ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಹುಡುಗ ಹುಡುಗಿ ಮೊದಲಿನಿಂದ ಪರಿಚಿತರಿದ್ದರು. ಸರಕಾರಿ ಕೆಲಸ ಸಿಕ್ಕ ಮೇಲೆ ಹುಡುಗಿಯು ಬೆಂಗಳೂರಿನಲ್ಲಿ ಮಹಿಳಾ ಹಾಸ್ಟೆಲ್‍ನಲ್ಲಿ ನೆಲೆಸಿದ ಮೇಲೆ ಹಳ್ಳಿಯ ಸಂಪರ್ಕ ಕಡಿಮೆಯಾಯಿತು. ಅಂತಿಮವಾಗಿ ಯುವಕನು ತನ್ನ ಅಣ್ಣ,
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಬಿಜೆಪಿಯ ಒಂದಿಬ್ಬರ ಕೈವಾಡವಿದೆ ಎಂದು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದರು.ಬಿಜೆಪಿಗೆ ಹಾಸನದಲ್ಲಿ ಸ್ಥಳವಿಲ್ಲ ಮತ್ತು ಗೆಲುವು ಅಸಾಧ್ಯ ಎಂದು ತಿಳಿದ ಬಳಿಕ ಮಾಜೀ ಪ್ರಧಾನಿ ದೇವೇಗೌಡರ ಕುಟುಂಬದ ಹೆಸರನ್ನು ಕೆಡಿಸಲು ಈ ಸಂಚು ಮಾಡಲಾಗಿದೆ. ಪೆನ್ ಡ್ರಯ್ವ್ ತಯಾರಿಸಿ ಹಂಚುವ
ಒಂದಾದರೂ ಸತ್ಯ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ. ಆಳುವವರ ಸುಳ್ಳನ್ನು ಬಯಲು ಮಾಡುವುದು ಬುದ್ಧಿಜೀವಿಗಳ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿ. ವೈ. ಚಂದ್ರಚೂಡ್ ಕಳೆದ ವರುಷ ಹೇಳಿದ್ದರು. ಸರಕಾರಗಳು ಸುಳ್ಳು ಮತ್ತು ಸುಳ್ಳು ಸುದ್ದಿಗಳ ವಿರುದ್ಧ ಕಾವಲುಗಾರ ಆಗಿ ನಿಲ್ಲಬೇಕು ಎಂದೂ ಅವರು
ದಿಲ್ಲಿಯ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರೀವಾಲ್ ಮುಂದುವರಿಯಲಿದ್ದಾರೆ ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹೇಳಿದರು. ಅರವಿಂದ ಕೇಜ್ರೀವಾಲ್ ಅವರು ಮೌಲ್ಯದ ಪ್ರಶ್ನೆ ಬಂದಾಗ ಹತ್ತು ವರುಷದ ಹಿಂದೆ 49 ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಿಜೆಪಿಯ ರಾಜಕೀಯ ಸಂಚಿನ ಫಲವಾಗಿ ಕೇಜ್ರೀವಾಲ್ ಜೈಲಿನಲ್ಲಿ ಇದ್ದಾರೆ ಎಂದು ಸಂಜಯ್ ಸಿಂಗ್
ಸಂಸದ ಪ್ರಜ್ವಲ್ ರೇವಣ್ಣರಿಂದ ಶೋಷಿತರಾದ ಹೆಣ್ಣುಮಕ್ಕಳು ಹಿಂದೂಗಳಲ್ಲವೆ? ವಿದೇಶಕ್ಕೆ ಪರಾರಿಯಾಗಲು ಬಿಜೆಪಿ ನೆರವು ನೀಡಿದ್ದೇಕೆ ಎಂದಿತ್ಯಾದಿಯಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿನವರು ಪ್ರಶ್ನಿಸಿದರು. ಹೆಣ ಇಟ್ಟು ರಾಜಕೀಯ ಮಾಡುವ, ಹಿಂದೂ ಶಬ್ದದ ರಾಜಕೀಯ ಮಾಡುವ ಬಿಜೆಪಿಯವರಿಗೆ ಹಾಸನದಲ್ಲಿ ಅವರ ಮೈತ್ರಿ ಸಂಸದರಿಂದ ಅನ್ಯಾಯಕ್ಕೆ ಒಳಗಾದವರು