Home 2023 November

ಖ್ಯಾತ ಗಾಯಕ ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ “ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ 2023”

ಅಂತರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಕಲಾವಿದರಾದ ಪದ್ಮಶ್ರೀ ಪುರಸ್ಕೃತ ಡಾ.ಕದ್ರಿ ಗೋಪಾಲನಾಥ್ ರವರ ಹೆಸರಿನಲ್ಲಿ ನಡೆಯುತ್ತಿರುವ “ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ (ರಿ)” ವತಿಯಿಂದ ದಿನಾಂಕ : 23.12.2023 ರಂದು ” ಕದ್ರಿ ಸಂಗೀತ ಸೌರಭ 2023″ ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನ, ಉರ್ವ ಸ್ಟೋರ್ಸ್,

ಮಂಗಳೂರು: ಡಿ.24 ಮತ್ತು 25 ರಂದು ಕೃಷ್ಣಾಪುರದಲ್ಲಿ ಕ್ರಿಕೆಟ್ ಗ್ರೂಪ್ ಹಬ್ಬ

ಕ್ರಿಕೆಟ್ ಗ್ರೂಪ್‌ನ 6ನೇ ವಾರ್ಷಿಕೋತ್ಸವದ ಅಂಗವಾಗಿ ಕ್ರಿಕೆಟ್ ಗ್ರೂಪ್ ಹಬ್ಬ ಎನ್ನುವ ಲೀಗ್ ಮಾದರಿಯ ಪಂದ್ಯಾಕೂಟವು ಡಿ.24 ಮತ್ತು 25 ರಂದು ಕೃಷ್ಣಾಪುರ ಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಾಟದಲ್ಲಿ ಬಿಎಂಆರ್ ಸ್ಟ್ರೈಕರ್‍ಸ್, ರೂಫ್‌ಟೆಕ್, ಕೆಕೆಆರ್ ಕೃಷ್ಣಾಪುರ, ಟ್ರೆಸ್ಕಾನ್, ಜಿ ಗೈಸ್, ಟೀಮ್, ಫಿಫ್ತ್ ಲೆವೆಲ್ ಹೀಗೆ 6 ಮಾಲಕರ ತಂಡದ ಕ್ರಿಕೆಟ್

ಸಾವಿರಾರು ಕಟ್ಟಡ ಕಾರ್ಮಿಕರಿಂದ ಕಲ್ಯಾಣ ಮಂಡಳಿ ಮುತ್ತಿಗೆ

ಶೈಕ್ಷಣಿಕ ಸಹಾಯಧನ ಕಡಿತ ವಿರೋಧಿಸಿ ಹಾಗೂ ವೈದ್ಯಕೀಯ ತಪಾಸಣೆ ಯೋಜನೆ ಕೈಬಿಡಲು ಒತ್ತಾಯಿಸಿ ಬುಧವಾರ ನೂರಾರು ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಯ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯು ನೋಂದಾಯಿತ ಕಟ್ಟಡ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡುವ ಕಲಿಕಾ

ಮಹಾಮಾರಿ ಏಡ್ಸ್

ಏನಿದು ಏಡ್ಸ್ ?ಏಡ್ಸ್ ಎನ್ನುವುದು ಎಚ್.ಐ.ವಿ ಎಂಬ ವೈರಾಣುವಿನ ಸೋಂಕಿನಿಂದ ಉಂಟಾಗುವ ರೋಗ ಲಕ್ಷಣಗಳ ಗುಚ್ಚವಾಗಿರುತ್ತದೆ. ಎಚ್.ಐ.ವಿ ಎಂದರೆ ಹ್ಯೂಮನ್ ಇಮ್ಯೂನೋ ಡೆಫಿಷಿಯನ್‍ಸ್ಸಿ ವೈರಸ್ ಆಗಿರುತ್ತದೆ. ಈ ಎಚ್.ಐ.ವಿ ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೇಂದಿಲ್ಲ. ಆದರೆ ಏಡ್ಸ್ ಇರುವವರೆಲ್ಲಾ ಎಚ್.ಐ.ವಿ

ಮನುಕುಲವನ್ನು ಬೆಚ್ಚಿ ಬೀಳಿಸಿದ ಮಹಾಮಾರಿ ಏಡ್ಸ್

ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಎಚ್.ಐ.ವಿ ಎಂಬ ವೈರಸ್‍ನಿಂದ ಉಂಟಾಗುವ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 1988ರಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು,ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದ ಒಳಗೆ ಬರುವ ಏಡ್ಸ್‍ರೋಗ ಮನುಕುಲದ ಬಹುದೊಡ್ಡ ಶತ್ರು.

ಛಾಯಾಚಿತ್ರಗಳ ಮೂಲಕ ಇತಿಹಾಸಕಟ್ಟುವ ಕೆಲಸ : ಡಾ.ತುಕರಾಮ ಪೂಜಾರಿ

ಮಂಗಳೂರು : ಛಾಯಚಿತ್ರಗಳ ಮೂಲಕ ಇತಿಹಾಸವನ್ನು ಕಟ್ಟಿಕೊಡುವ ಅಪೂರ್ವ ಕೆಲಸವನ್ನು ಮಾಡಲು ಸಾಧ್ಯವಿದೆ ,ಇಂತಹ ಪರಿಶ್ರಮ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ ಎಂದು ರಾಣಿ ಅಬ್ಬಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಹೇಳಿದರು.ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಆಶ್ರಯದಲ್ಲಿ ನಡೆದ ‘ಛಾಯಾ

ಕುಂದಾಪುರ : ತಹಸಿಲ್ದಾರ್ ಶೋಭಾ ಲಕ್ಷ್ಮಿಯವರ ಮೇಲೆ ಕ್ರಮಕ್ಕೆ ಕಂದಾಯ ಸಚಿವರಿಗೆ ದೂರು ನೀಡಿದ ಅಂತರಾಷ್ಟ್ರೀಯ ಪವರ್ ಲಿಪ್ಟರ್ ಸತೀಶ್ ಖಾರ್ವಿ

ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಪಡೆಯಬೇಕಾದ ದಾಖಲೆಗಳನ್ನು ಪಡೆಯದೇ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರರು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಸತೀಶ್ ಖಾರ್ವಿ ಕುಂದಾಪುರ, ಕಂದಾಯ ಸಚಿವರಾದ ಕೃಷ್ಣೆ ಬೈರೇಗೌಡರಿಗೆ ದೂರು ನೀಡಿದ್ದಾರೆ. ಕುಂದಾಪುರ ಕಸ್ಟಾ ಗ್ರಾಮದ ಜಯಾನಂದ ಎಂಬುವರು RD

ಚಿನ್ನದ ನವಿಲು ಗೆದ್ದ ಎಂಡ್‌ಲೆಸ್ ಬಾರ್ಡರ್ಸ್‌, ಡ್ರಿಫ್ಟ್‌ಗೆ ಯುನೆಸ್ಕೋ ಗಾಂಧಿ ಪ್ರಶಸ್ತಿ, ರಿಷಬ್ ಶೆಟ್ಟಿಗೆ ತೀರ್ಪುಗಾರರ ಪ್ರಶಸ್ತಿ

ಗೋವಾದ ಪಣಜಿಯ ಐನಾಕ್ಸ್‌ನಲ್ಲಿ ನಡೆದ ಎಂಟು ದಿನದ 54ನೇ ಚಲನಚಿತ್ರೋತ್ಸವ ಮುಗಿದಿದ್ದು, ಪರ್ಶಿಯಾದ ಅಬ್ಬಾಸ್ ಅಮಿನಿ ಅವರ ಎಂಡ್‌ಲೆಸ್ ಬಾರ್ಡರ್ಸ್ ಚಿತ್ರವು ಬಂಗಾರದ ನವಿಲು ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ಗಳಿಸಿತು. ಆಂಟನಿ ಚೆನ್ ಅವರ ಡ್ರಿಫ್ಟ್ ಚಲನಚಿತ್ರವು ಯುನೆಸ್ಕೋ ಗಾಂಧಿ ಪ್ರಶಸ್ತಿಯನ್ನು ಪಡೆಯಿತು. ಕಾಂತಾರಕ್ಕಾಗಿ ರಿಷಬ್ ಶೆಟ್ಟಿ ತೀರ್ಪುಗಾರರ ವಿಶೇಷ

ಸಂಗಮ ತುಳು ದ್ರಾವಿಡಕ್ಕೆ ಸಾಕ್ಷಿಯಲ್ಲ

ಸಂಗಮ ಮತ್ತು ಮಂಗಲ ಬೆರೆತ ಊರುಗಳೆಲ್ಲ ನದಿ ತೊರೆಗಳ ಕೂಡು ಸ್ಥಳಗಳಾಗಿವೆ. ಕೋರಮಂಗಲ, ಪಾಣೆಮಂಗಳೂರು, ನೆಲಮಂಗಲಗಳೂ ಅದಕ್ಕೆ ಹೊರತಲ್ಲ. ಆದರೆ ಕೂಡಲ ದ್ರಾವಿಡ ನುಡಿ ಎನಿಸಿದವುಗಳಲ್ಲ. ಕುಡಲ ಕುಡ್ಲ ಯಾವುದು ಸರಿ ಎಂಬ ಪ್ರಶ್ನೆ ಸಹಜ. ಇವು ಎರಡೂ ಸರಿಯಾದರೂ ಅವು ಮೂಲ ಅಲ್ಲ.ಕೂಡು ಅಲ> ಕೂಡಾಲ> ಕೂಡಲ> ಕುಡಲ> ಕುಡ್ಲ > ಎಂಬ ದಾರಿಯಲ್ಲಿ ಇದು ಬಂದಿದೆ.

ಶಂಕರನಾರಾಯಣ ಹೊಕ್ಕ ಮೂರು ಜಿಲ್ಲೆಯ ಕಳ್ಳರು

ಮೂರು ಜಿಲ್ಲೆಗಳ ಮೂವರು ಕಳ್ಳರು ಸೇರಿ ಕುಂದಾಪುರ ತಾಲೂಕಿನ ಶಂಕರನಾರಾಯಣದ ಗೋಳಿಕಟ್ಟೆಯಲ್ಲಿನ ಬಿಎಸ್ಎನ್ಎಲ್ ಟವರ್ ಹೊಕ್ಕು ಬ್ಯಾಟರಿ ಬಾಕ್ಸ್ ಕದ್ದಿದ್ದರು. ಮೂವರನ್ನೂ ಬಂಧಿಸಿದ ಪೋಲೀಸರು ಕುಂದಾಪುರ ನ್ಯಾಯಾಲಯದಲ್ಲಿ ನಿಲ್ಲಿಸಿ, ಜೈಲಿಗೆ ಕಳುಹಿಸಿದ್ದಾರೆ. ಉಡುಪಿ ಉದ್ಯಾವರ ಪಿತ್ರೋಡಿಯ 45ರ ಬಾಲಕೃಷ್ಣ, ಬಂಟ್ವಾಳ ಫರಂಗಿಪೇಟೆಯ 38ರ ಬದ್ರುದ್ದೀನ್, ಹೊನ್ನಾವರ