Home ಕರಾವಳಿ Archive by category ಮಂಗಳೂರು (Page 148)

ಟೋಲ್‍ಗೇಟ್ ಸ್ಥಗಿತವಾಗುವವರೆಗೆ ವಿರಮಿಸುವುದಿಲ್ಲ: ಮುನೀರ್ ಕಾಟಿಪಳ್ಳ

ಸುರತ್ಕಲ್ ಅಕ್ರಮ ಟೋಲ್‍ಗೇಟ್ ತೆರವಿಗೆ ಆಗ್ರಹಿಸಿ ಹೋರಾಟವನ್ನು ಮತ್ತಷ್ಟು ತೀವೃತೆಯಿಂದ ಮುಂದುವರೆಸುತ್ತೇವೆ. ನಾಳೆಯೇ ಹೋರಾಟ ಸಮಿತಿಯ ಸಭೆ ಸೇರಿ ಮುಂದಿನ ಹೋರಾಟವನ್ನು ನಿರ್ಧರಿಸುತ್ತೇವೆ. ಟೋಲ್ ಸ್ಥಗಿತವಾಗುವವರೆಗೆ ವಿರಮಿಸುವುದಿಲ್ಲ ಎಂದು ಟೋಲ್‍ಗೇಟ್ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಈ ಪ್ರತಿಕ್ರಿಯೆ ನೀಡಿ

ನವರಾತ್ರಿ ಹುಲಿವೇಷ ಸ್ತಬ್ಧಚಿತ್ರದಿಂದ ಬಂದ ಹಣ ಅಶಕ್ತ ಕುಟುಂಬಗಳಿಗೆ ವಿತರಣೆ

ಬಿರುವೆರ್ ಫ್ರೆಂಡ್ಸ್ ಮಂಡಾಡಿ ಮತ್ತು ಮಹಾಮ್ಮಾಯಿ ಫ್ರೆಂಡ್ಸ್ ಮಂಡಾಡಿ ಇವರ ಸಹ ಭಾಗಿತ್ವದಲ್ಲಿ ನವರಾತ್ರಿಯ ಶಾರದಾ ಶೋಭಾಯಾತ್ರೆಗೆ ಹುಲಿವೇಶದ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಾಯಿತು. ಬಂದ ಹಣವನ್ನು ಅಶಕ್ತ ಕುಟುಂಬಗಳಿಗೆ ಧನದ ರೂಪದಲ್ಲಿ, ಮತ್ತು ಮಕ್ಕಳಿಗೆ ಪುಸ್ತಕದ ರೂಪದಲ್ಲಿ ವಿತರಿಸಲಾಯಿತು. ಅರ್ಬಿಗುಡ್ಡೆ ನಿವಾಸಿಗಳಾದ ಲೋಕೇಶ ಮತ್ತು ಶ್ರೀಮತಿ ಭವಾನಿ ಅವರ ಪುತ್ರ ಆಯುಷ್ ಎಂಬ ಬಾಲಕನ ವೈದ್ಯಕೀಯ ಚಿಕಿತ್ಸೆಗಾಗಿ ನೆರವನ್ನು ಸಂಸ್ಥೆಯ ಪದಾಧಿಕಾರಿಗಳ

ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಬಂಧನ ಖಂಡನೀಯ : ಎಸ್‌ ಡಿಪಿಐ

ಮಂಗಳೂರು: ಅನಧಿಕೃತ ಸುರತ್ಕಲ್ ಟೋಲ್ ಅನ್ನು ತೆರವುಗೊಳಿಸಲು ಆಗ್ರಹಿಸಿ ಟೋಲ್ ವಿರೋಧಿ ಹೋರಾಟ ಸಮಿತಿ ಇಂದು ಸುರತ್ಕಲ್ ಟೋಲ್ ಬಳಿ ಪ್ರತಿಭಟನೆ ನಡೆಸುತ್ತುದ್ದಾಗ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ ಘಟನೆಯನ್ನು ಎಸ್ ಡಿಪಿಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ತೀವ್ರವಾಗಿ ಖಂಡಿಸಿದ್ದಾರೆ. ಈ ದೇಶದ ಸಂವಿಧಾನವು ಅನ್ಯಾಯ, ಅನೀತಿ, ಅಕ್ರಮದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನೀಡಿದೆ ಆದರೆ ಬಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೀಬಿಲಚ್ಚಿಲ್ : 108 ದಿನದ ಸಂಧ್ಯಾ ಭಜನಾ ಸಂಕೀರ್ತನೆ

ಮಂಗಳೂರು ತಾಲೂಕಿನ ಅದ್ಯಪಾಡಿ ಬೈಲು ಮಾಗಣೆಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೀಬಿಲಚ್ಚಿಲ್ ಇಲ್ಲಿ ನಡೆಯಲಿರುವ ಬ್ರಹ್ಮಲಕಶೋತ್ಸವ ಹಾಗೂ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಪ್ರಯುಕ್ತ ಅಕ್ಟೋಬರ್ 17ರಿಂದ 2023 ಜನವರಿ 31ರ ವರೆಗೆ 108 ದಿನದ ಸಂಧ್ಯಾ ಭಜನಾ ಸಂಕೀರ್ತನೆ ನಡೆಯಲಿದೆ. ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 2023ರ ಫೆಬ್ರವರಿ 1ರಿಂದ ಸೂರ್ಯೋದಯದಿಂದ ಫೆಬ್ರವರಿ 2, 2023ರ ಸೂರ್ಯೋದಯದವರೆಗೆ ಏಕಹಾ ಭಜನಾ ಮಂಗಳೋತ್ಸವ ನಡೆಯಲಿದೆ. ನಿನ್ನೆಯಿಂದ

ಹೆಜಮಾಡಿ : ಗುದ್ದಲಿ ಪೂಜೆ ನಡೆದು ಏಳು ತಿಂಗಳಾದರೂ ದುರಸ್ಥಿಯಾಗದ ರಸ್ತೆ

ಹೆಜಮಾಡಿ ಗುಂಡಿ ರಸ್ತೆ ದುರಸ್ತಿಗಾಗಿ ಕಳೆದ ಏಳು ತಿಂಗಳ ಹಿಂದೆ ಶಾಸಕರು ಗುದ್ದಲಿ ಪೂಜೆ ನಡೆಸಿದ್ದರಾದರೂ, ಈ ವರೆಗೂ ದುರಸ್ತಿ ಕಾಣದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವ ಎಚ್ಚರಿಕೆ ನೀಡಿದ್ದಾರೆ. ಗ್ರಾಮಸ್ಥ ಯೋಗೀಶ್ ಶೆಣೈ ಮಾತನಾಡಿ, ನಮ್ಮ ಬಲು ಬೇಡಿಕೆಯ ಗುಂಡಿ ರಸ್ತೆ ದುರಸ್ತಿಗಾಗಿ ಅದೆಷ್ಟೋ ಮನವಿಗಳ ಬಳಿಕ ಕಳೆದ ಏಳು ತಿಂಗಳ ಹಿಂದೆ ಗುದ್ದಲಿ ಪೂಜೆ ನಡೆಸಲಾಗಿದ್ದು, ಗುದ್ದಲಿ ಪೂಜೆ ನಡೆದು ಎರಡು ತಿಂಗಳ ಬಳಿಕ

ಮಹಡಿಯಿಂದ ಬಿದ್ದು ಯುವಕ ಮೃತ್ಯು

ಮಂಗಳೂರು: ಯುವಕನೋರ್ವ ಆಕಸ್ಮಿಕವಾಗಿ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಕುದ್ರೋಳಿಯ ಟಿಪ್ಪು ಸುಲ್ತಾನ್ ನಗರದಲ್ಲಿ ರಾತ್ರಿ ನಡೆದಿದೆ. ಕುದ್ರೋಳಿ ಸಮೀಪದ ಕಂಡತ್‌ ಪಳ್ಳಿ ಬಳಿಯ ಟಿ.ಕೆ.ಎಚ್. ಖಾದರ್ ಎಂಬವರ ಪುತ್ರ ಮುಹಮ್ಮದ್ ರಿಯಾಝ್ (33) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ. ರಿಯಾಝ್ ಮನೆಯ ಮಹಡಿ ಹತ್ತಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ತಕ್ಷಣ  ಅವರನ್ನು  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ

ಟೋಲ್‌ ಗೇಟ್‌ ಮುತ್ತಿಗೆ ಸಂದರ್ಭ ಪೋಲಿಸ್‌ ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ : ಪೊಲೀಸರಿಂದ ಲಾಠಿ ಪ್ರಯೋಗ

ಸುರತ್ಕಲ್:‌ ಸುರತ್ಕಲ್ ಟೋಲ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ವಿರೋಧಿ ಹೋರಾಟಗಾರರ ಸಮಿತಿ ಕರೆ ನೀಡಿರುವ ಪ್ರತಿಭಟನೆ. ಟೋಲ್‌ ಗೇಟ್‌ ಮುತ್ತಿಗೆ ಸಂದರ್ಭ ಪೋಲಿಸ್‌ ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಾಕಾರರಿಗೆ ಲಾಠಿ ಪ್ರಯೋಗ ಮಾಡಿರುವುದಾಗಿ ಎಂದು ತಿಳಿದು ಬಂದಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪ್ರತಿಭಟನಾಕಾರ ಅಬ್ದುಲ್‌ ಖಾದರ್‌ ಎಂಬವರ ಕಣ್ಣಿಗೆ ಲಾಠಿ ತಾಗಿ

ಸಂಸದರಿಂದ ಮಹಾವೀರ ವೃತ್ತ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಮಂಗಳೂರು,ಅ.18(ಕ.ವಾ):- ಪಂಪ್ ವೆಲ್ ನಲ್ಲಿ ಕರ್ನಾಟಕ ಬ್ಯಾಂಕ್ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಮಹಾವೀರ ವೃತ್ತ ಅಭಿವೃದ್ಧಿ ಕಾಮಗಾರಿಗೆ ಅ.18ರಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಸ್ಮಾರ್ಟ್ ಸಿಟಿ, ಕರ್ನಾಟಕ ಬ್ಯಾಂಕ್ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಇತರೆ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸುರತ್ಕಲ್ ಟೋಲ್ ಗೇಟ್ : ಸಮಾನಮನಸ್ಕರು ಇಂದು ಬೆಳಗ್ಗೆ ಪ್ರತಿಭಟನಾ ಧರಣಿ ಆರಂಭ

ಟೋಲ್ ಗೇಟ್ ಎದುರು ಜಮಾಯಿಸಿರುವ ಪ್ರತಿಭಟನಾಕಾರರು ಬಿಜೆಪಿ ಸರ್ಕಾರ, ಸಂಸದ, ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.ಸುರತ್ಕಲ್ ಟೋಲ್ ಗೇಟ್ ಅನ್ನು ಅಕ್ಟೋಬರ್ 18 ರೊಳಗೆ ರದ್ದುಪಡಿಸುವಂತೆ ಸೆ.13 ರಂದು ಸರ್ಕಾರಕ್ಕೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಗಡುವು ನೀಡಿತ್ತು, ಸರ್ಕಾರ ತಮ್ಮ ಮನವಿಗೆ ಮಣಿಯದಿದ್ದರೆ ಅಕ್ಟೋಬರ್ 18 ರಂದು ಟೋಲ್ ಗೇಟ್‌ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದು, ಇಮ್ದು ಪ್ರತಿಭಟನೆ ನಡೆಸುತ್ತಿದ್ದಾರೆ.ಈ ವೇಳೆ ಸುರತ್ಕಲ್

ಮಂಗಳೂರು ಬಂದರ್‌ನಿಂದ ಮುನವಳ್ಳಿಗೆ ಕೋಲ್ ಸಾಗಾಟ ಮಾಡುತ್ತಿದ್ದ ಟ್ರಕ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ

ಮಂಗಳೂರು ಬಂದರ್‌ನಿಂದ ಮುನವಳ್ಳಿಗೆ ಕೋಲ್ ಸಾಗಾಟ ಮಾಡುತ್ತಿದ್ದ ಟ್ರಕ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ಸಿಬಂದಿಗಳ‌ ಸಕಾಲಿಕ ಕಾರ್ಯಾಚರಣೆಯಿಂದಾಗಿ ಭಾರಿ ಅವಘಡವೊಂದು ತಪ್ಪಿದಂತಾಗಿದೆ.  ಟ್ರಕ್‌ನಲ್ಲಿ ತುಂಬಿದ್ದ ಕೋಲ್‌ನಲ್ಲಿ ಘರ್ಷಣೆಯುಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು ಟ್ರಕ್ ಚಾಲಕ ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಉಡುಪಿ ಅಗ್ನಿಶಾಮಕದಳಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ