ಉಳ್ಳಾಲ: ಗ್ರಾಮೀಣ ಭಾಗದಲ್ಲಿ ವಿಶೇಷ ಸಾಮಾಜಿಕ ಕಳಕಳಿಯೊಂದಿಗೆ ಬಾಳಿ ಇತರರಿಗೆ ಮಾದರಿಯಾದವರು. ಅವರ ಹೆಸರಿನಲ್ಲಿ ಮಕ್ಕಳು ಸಮಾಜಕ್ಕೆ ಬಸ್ಸು ನಿಲ್ದಾಣವನ್ನು ಕೊಟ್ಟಿರುವುದು ಹೆತ್ತವರಿಗೆ ಕೊಡುವ ಬಹುದೊಡ್ಡ ಗೌರವವಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ಮಂಜನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೈಗೋಳಿಯಲ್ಲಿ ದಿ| ಪಟ್ಟೋರಿ ಮೊಯ್ದೀನ್
ಕೋಟೆಕಾರು ಅಯ್ಯಪ್ಪ ಮಂದಿರದ ಗರುಸ್ವಾಮಿ ದಿವಂಗತ ಪ್ರಭಾಕರನ್ ಅವರ ಸ್ಮರಣಾರ್ಥ ವಿಷನ್ ಕುಡ್ಲದ ವತಿಯಿಂದ ಅಸೈಗೋಳಿಯಲ್ಲಿರುವ ಅಭಯಾಶ್ರಮದ ವಾಸಿಗಳಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಷನ್ ಕುಡ್ಲದ ಅಧ್ಯಕ್ಷರಾದ ಜಿತೇಂದ್ರ, ಕಾರ್ಯದರ್ಶಿ ಸಂತೋಷ್ ಕುಮಾರ್, ಖಜಾಂಜಿ ರಾಮಚಂದ್ರ, ಉದಯ ಕುಮಾರ್, ಪ್ರಸನ್ನ, ಪ್ರವೀಣ್ ಮಯ್ಯ, ಪ್ರದೀಪ್, ಲೈನಲ್, ಅಭಯಾಶ್ರಮದ ಕಾರ್ಯದರ್ಶಿ ರವಿ ಕುಮಾರ್ ರೈ ಅವರು ಉಪಸ್ಥಿತರಿದ್ದರು.