Home Posts tagged #mangalore (Page 246)

ಹೆಚ್ಚುತ್ತಿರುವ ಲವ್ ಜಿಹಾದ್‍ : ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ

ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಮತ್ತು ಉಗ್ರಾಗಾಮಿಗಳ ಕೃತ್ಯದ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣದ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನು ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಗಣರಾಜ್ ಭಟ್ ಕೆದಿಲ ಅವರು

ಬೈಕಂಪಾಡಿ : ಕಮಿಷನರ್ ಗೆ ಮೆಸೇಜ್‌ ಮಾಡಿ ದಂಪತಿ ಆತ್ಮಹತ್ಯೆ

ಚಿತ್ರಾಪುರ ಬೈಕಂಪಾಡಿ ಅಪಾರ್ಟ್‌ಮೆಂಟ್‌ವೊಂದರ ನಿವಾಸಿಗಳಾದ ಆರ್ಯ ಸುವರ್ಣ(45) ಮತ್ತು ಗುಣ ಸುವರ್ಣ(35) ಆತ್ಮಹತ್ಯೆ ಮಾಡಿಕೊಂಡವರು. ಇವರು ಮೂಲತಃ ಪಡುಬಿದ್ರಿ ನಿವಾಸಿಗಳು. ಆರ್ಯ ಸುವರ್ಣ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಗುಣ ಆರ್. ಸುವರ್ಣ ಡೆತ್ ನೋಟ್ ಬರೆದಿದ್ದು ಅದರಲ್ಲಿ ತಾವು ಆತ್ಮಹತ್ಯೆ ಮಾಡಲು ಕಾರಣವನ್ನು ಬರೆದಿದ್ದಾರೆ. ಸುಮಾರು 10ದಿನಗಳಿಂದ ಕೋವಿಡ್  ಬಾಧಿಸಿದ್ದು, ಅದು ವಿಕೋಪಕ್ಕೆ ಹೋಗಿ ಬ್ಲಾಕ್ ಫಂಗಸ್ ಭಯ ಕಾಡಿದೆ. ಗಂಡನಿಗೂ 3 ದಿನದಿಂದ

ನೆಹರೂರನ್ನು ಅವಮಾನಿಸಿದ ಸಿ.ಟಿ ರವಿ ದೇಶದ್ರೋಹಿ: ಮಾಜಿ ಸಚಿವ ರಮಾನಾಥ್ ರೈ ಕಿಡಿ

ದೇಶಕ್ಕಾಗಿ ಜೈಲಿಗೆ ಹೋದವರು ಮತ್ತು ಹುತಾತ್ಮರಾದವರ ಬಗ್ಗೆ ಹಗುರವಾಗಿ ಮಾತನಾಡುವ ಸಿ.ಟಿ ರವಿಯಂತಹವರೇ ನಿಜವಾದ ದೇಶದ್ರೋಹಿ ಎಂದು ಮಾಜಿ ಸಚಿವ ಬಿ.ರಮಾನಾಥ್ ರೈ ಕಿಡಿಕಾರಿದ್ದಾರೆ. ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಿ.ಟಿ.ರವಿ, ಈಶ್ವರಪ್ಪರಂತಹವರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರನ್ನು, ಕೊಡುಗೆಗಳನ್ನು ನೀಡಿದವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ದೇಶದ ಪ್ರಪ್ರಥಮ

ಆಪಲ್ ಮೊಬೈಲ್ ಶೋರೂಂನಿಂದ ಕಳವು ಪ್ರಕರಣ: ಓರ್ವ ಆರೋಪಿ ಸೆರೆ, 40ಮೊಬೈಲ್ ವಶಕ್ಕೆ

 ಮಂಗಳೂರಿನ ಆಪಲ್ ಮೊಬೈಲ್ ಶೋರೂಂ ಒಂದರಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಮಂಗಳೂರು ಪೊಲೀಸರು ಓರ್ವ ಆರೋಪಿ ಸಹಿತ ಕಳವಾದ 40 ಮೊಬೈಲ್‌ಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಯನ್ನು ಮುಂಬೈನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದು, ಸುಮಾರು 41 ಲಕ್ಷ ರೂ. ವೌಲ್ಯದ ಕಳವಾದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕಮಾರ್ ಹೇಳಿದ್ದಾರೆ. ಈ ಕುರಿತು

ಸ್ಟ್ರೆಚರ್‌ನಲ್ಲಿ ಆರೋಪಿಯನ್ನು ಕೋರ್ಟ್‌ಗೆ ಹಾಜರು: ಪೊಲೀಸರ ಮೇಲೆ ನ್ಯಾಯಾಧೀಶರು ಗರಂ

ಮಂಗಳೂರು: ಕೊಲೆ, ದೊಂಬಿ ಪ್ರಕರಣದ ಆರೋಪಿಯನ್ನು ಸ್ಟ್ರೆಚರ್‌ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇದನ್ನ ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅಡ್ಡೂರಿನ ಮಹಮ್ಮದ್ ಎಂಬಾತನ ಮೇಲೆ ಹಲವು ವರ್ಷಗಳ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.   ಈ ಪ್ರಕರಣದಲ್ಲಿ ಅತನಿಗೆ ಕೋರ್ಟ್‌ಗೆ ಹಾಜರಾಗುವಂತೆ ವಾರಂಟ್ ಹೊರಡಿಸಲಾಗಿತ್ತು. ಆರೋಪಿ ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದ. ಕುಟುಂಬ ವರ್ಗದಿಂದ

ಶ್ರೀನಿವಾಸ ವಿವಿ ವತಿಯಿಂದ ಕ್ಯಾಂಪಸ್ ಸಂದರ್ಶನ

ಕೋವಿಡ್‍ನ ಈ ಸಂಕಷ್ಟದ ಕಾಲದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯವು ಕ್ಯಾಂಪಸ್ ಸಂದರ್ಶನಕ್ಕೆ ಅತ್ಯಂತ ಮಹತ್ವ ನೀಡಿದ್ದು, ಪ್ರಥಮ ವರ್ಷದಿಂದ ಅಂತಿಮ ವರ್ಷದ ವಿದಯಾರ್ಥಿಗಳಿಗೆ ಆನ್‍ಲೈನ್ ಮತ್ತು ಆಫ್ ಲೈನ್ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳನ್ನು ಉದ್ಯೋಗಕ್ಕಾಗಿ ಸಿದ್ದರಾಗುವಂತೆ ತಯಾರು ಮಾಡಿ ಯಶಸ್ಸನ್ನು ಕಂಡಿದ್ದೇವೆ ಎಂದು ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮೇಶನ್ ಸೈನ್ಸ್ ತರಬೇತಿ ಹಾಗೂ ಪ್ಲೇಸ್ಮೆಂಟ್ ಅಧಿಕಾರಿ, ಪ್ರೊ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವಾರವೂ ವೀಕೆಂಡ್ ಕರ್ಫ್ಯೂ

ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ವಸ್ತುಗಳ ಖರೀದಿಗೆ ಈ ಎರಡೂ ದಿನ ಮಧ್ಯಾಹ್ನ 2ರವರೆಗೆ ಅವಕಾಶ ಕಲ್ಪಿಸಲಾಗಿದೆ. ಕೇರಳದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಾಣದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆಯ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರ ವಿಧಿಸಿದಂತೆ ಈ ವಾರವೂ (ಆ.14,15) ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

ಮಂಗಳೂರಿನಲ್ಲಿ ಎನ್‍ಐಎ ಕಚೇರಿ ಆರಂಭ ವಿಚಾರ : ಸಿಎಂ ಬಸವರಾಜ್ ಬೊಮ್ಮಾಯಿ

ಮಂಗಳೂರು: ಕರಾವಳಿಯಲ್ಲಿ ಉಗ್ರರ ನಂಟಿನ ಬಗ್ಗೆ ಎನ್‍ಐಎ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ ಬಳಿಕ ಮಂಗಳೂರಿನಲ್ಲಿ ಎನ್‍ಐಎ ಕಚೇರಿ ಆರಂಭಿಸಲು ಆಗ್ರಹ ಕೇಳಿ ಬಂದಿತ್ತು. ಇದೀಗ ಮಂಗಳೂರಿನಲ್ಲಿ ಎನ್‍ಐಎ ಕಚೇರಿ ಆರಂಭಿಸುವ ಕುರಿತಂತೆ ಸಭೆಗಳು ನಡೆದಿವೆ ಎಂದು ಎನ್‍ಐಎ ಕಚೇರಿ ಆರಂಭಿಸುವ ಸಾಧ್ಯತೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಈಗಾಗಲೇ ಒಬ್ಬ ದಕ್ಷ ಗೃಹ ಸಚಿವರನ್ನು ಮಾಡಲಾಗಿದೆ. ಎನ್‍ಐಎ ಕುರಿತಂತೆ ಅವರು

ಮುಖ್ಯಮಂತ್ರಿಯವರಿಂದ ವೆನ್ಲಾಕ್ ಮೆಡಿಸನ್ ವಿಭಾಗದಲ್ಲಿ ನೂತನ ಐಸಿಯು ಘಟಕ ಉದ್ಘಾಟನೆ

ಮುಖ್ಯಮಂತ್ರಿಯಾದ ಬಳಿಕ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟಿದ್ದಾರೆ. ಇಂದು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆಯಲ್ಲಿ ಸಿಎಂ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಬೊಮ್ಮಾಯಿ ಅವರಿಗೆ ಆರತಿ ಬೆಳಗಿ ಹಣೆಗೆ ತಿಲಕ ಇಟ್ಟು ಶುಭ ಕೋರಿದರು. ತದ ನಂತರ ನಗರದ ವೆನ್‍ಲಾಕ್ ಜಿಲ್ಲಾಆಸ್ಪತ್ರೆಗೆ ಭೇಟಿ ನೀಡಿದ ಅವರು ಆಸ್ಪತ್ರೆಯ ಮೆಡಿಸನ್

ಕೋವಿಡ್ ಹಿನ್ನೆಲೆ ಗಡಿ ಜಿಲ್ಲೆಯಲ್ಲಿ ಜಾಗ್ರತೆ ವಹಿಸಬೇಕು : ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿ ಪ್ರದೇಶದ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಇಂದು ಮಂಗಳೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ್ದಾರೆ. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗಡಿ ಜಿಲ್ಲೆಯಲ್ಲಿಜಾಗ್ರತೆವಹಿಸಬೇಕು, ಪಕ್ಕದ ರಾಜ್ಯದವರಿಗೆ ಟೆಸ್ಟ್ ಮಾಡಬೇಕು, ಈಗಾಗಲೇ ಎಲ್ಲಾ ಗಡಿ ಜಿಲ್ಲೆಗಳಿಗೆ ನಾನು ಭೇಟಿ ಕೊಡ್ತಾ ಇದ್ದೇನೆ, ಮೈಸೂರು