Header Ads
Breaking News

ಪುತ್ತೂರು : ಗರ್ಭಿಣಿಯರನ್ನುಕೋವಿಡ್ ಪರೀಕ್ಷೆಗೆ ಒಳಪಡಿಸದೆ ಸಿಬ್ಬಂದಿಗಳ ಉಡಾಫೆ

ಖಾಸಗಿ ಆಸ್ಪತೆಗಳಿಂದ ಶಿಫಾರಸು ಪತ್ರ ಪಡೆದುಕೊಂಡು ಬಂದ ಗರ್ಭಿಣಿಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ ಸಿಬ್ಬಂದಿಗಳು ಗಂಭೀರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಇಂದು ನಡೆದ ಪುತ್ತೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗಂಭೀರ ಆರೋಪ ಮಾಡಲಾಯಿತು.
ತಾಪಂ ಅಧ್ಯಕ್ಷ ರಾಧಾಕೃ? ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಹರೀಶ್ ಬಿಜತ್ರೆ ಈ ವಿ?ಯ ಪ್ರಸ್ತಾಪಿಸಿದರು. ಎಲ್ಲ ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಿಣಿ ಪರೀಕ್ಷೆ, ಸ್ಕ್ಯಾನಿಂಗ್ ಇತ್ಯಾದಿ ಮಾಡಿಸಿಕೊಳ್ಳುತ್ತಿರುವವರು ಕೋವಿಡ್ ಪರೀಕ್ಷೆಗೆಂದು ಸರಕಾರಿ ಆಸ್ಪತೆಗೆ ಬಂದಾಗ ಇಲ್ಲಿನ ಸಿಬ್ಬಂದಿಗಳು ಉಡಾಫೆಯಾಗಿ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ನಿಮಗೆ ಹೆರಿಗೆ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆ ಬೇಕು. ಕೊರೊನಾ ತಪಾಸಣೆಗೆ ಮಾತ್ರ ಇಲ್ಲಿ ಬಂದು ಅವಸರ ಮಾಡುತ್ತೀರಿ ಎಂದು ಹಂಗಿಸುತ್ತಿದ್ದಾರೆ. ಇದು ಸರಿಯಲ್ಲ ಎಂದವರು ನುಡಿದರು.
ಇದು ಅಕ್ಷಮ್ಯ. ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಸಭಾಧ್ಯಕ್ಷರು ನುಡಿದರು. ಸರಕಾರಿ ಆಸ್ಪತರೆಯನ್ನು ಪ್ರತಿನಿಧಿಸಿದ್ದ ವೈದ್ಯರು ಉತ್ತರಿಸಿ, ಬಂದವರೆಲ್ಲರಿಗೂ ತಪಾಸಣೆ ಮಾಡ್ತೀನಿ. ಆರ್‌ಟಿಪಿಸಿಆರ್ ಪರೀಕ್ಷೆ ಮಾಡ್ತೀವಿ. ಕೆಲವೊಮ್ಮೆ ಕಿಟ್ ಅಭಾವವಿದ್ದಾಗ ತಪಾಸಣೆ ವಿಳಂಬವಾಗಿರಬಹುದು ಎಂದರು.

ಈ ರೀತಿಯ ದೂರುಗಳು ಬಾರದಂತೆ ನೋಡಿಕೊಳ್ಳಿ. ಕಿಟ್ ಅಭಾವ ಇತ್ಯಾದಿ ಸಮಸ್ಯೆಯಿದ್ದರೆ ಆರೋಗ್ಯ ರಕ್ಷಾ ಸಮಿತಿಯ ಮುಂದಿಟ್ಟು ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದರು. ಇದೇ ವೇಳೆ ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃ ಷ್ಣ ಆಳ್ವಾ, ತಹಸೀಲ್ದಾರ್ ರಮೇಶ್ ಬಾಬು ವೇದಿಕೆಯಲ್ಲಿದ್ದರು. ತಾಪಂ ಸದಸ್ಯರು, ಇಲಾಖಾ ಅಧಿಕಾರಿಗಳು ಹಾಜರಿದ್ದರು.

Related posts

Leave a Reply

Your email address will not be published. Required fields are marked *