ಪಾರ್ಸೆಲ್ ನೀಡುವ ನೆಪದಲ್ಲಿ ಮಹಿಳೆಯ ಸರ ಎಗರಿಸಿ ಪರಾರಿ

ಬಂಟ್ಬಾಳ: ಪಾರ್ಸೆಲ್ ನೆಪದಲ್ಲಿ ಮನೆಗೆ ಬಂದ ವ್ಯಕ್ತಿಯೊಬ್ಬ ಮಹಿಳೆಯ ಕತ್ತಿನಿಂದ ಕರಿಮಣಿ ಸರ ಕದ್ದು ಪರಾರಿಯಾದ ಘಟನೆ ಬಂಟ್ವಾಳದ ರಾಯರ ಚಾವಡಿ ಎಂಬಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನದ ವೇಳಗೆ ಮನೆ ಬಳಿಗೆ ಬಂದ ಕಳ್ಳ ಪಾರ್ಸೆಲ್ ನೀಡುವ ನೆಪದಲ್ಲಿ ಮಹಿಳೆಯ ಸಮೀಪಕ್ಕೆ ಬಂದು ಸುಮಾರು 4 ಪವನಿನ ಕರಿಮಣಿ ಸರ ಎಗರಿಸಿ ಸ್ಥಳದಿಂದ ಓಡಿ ಹೋಗಿದ್ದಾನೆ. ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳ ಸರ ಎಗರಿಸಿ ಓಡುವ ದೃಶ್ಯ ಎದುರಿನ ಮನೆಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.
