HomeFresh Newsಬೆಂಗಳೂರು ; ಹೋಟೆಲ್ ನಲ್ಲಿ ಮಹಿಳಾ ಎಸ್ಐಗೆ ದಮ್ಕಿ ಹೋಟೆಲಿನ ಮೂವರ ಬಂಧನ

ಬೆಂಗಳೂರು ; ಹೋಟೆಲ್ ನಲ್ಲಿ ಮಹಿಳಾ ಎಸ್ಐಗೆ ದಮ್ಕಿ ಹೋಟೆಲಿನ ಮೂವರ ಬಂಧನ

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ತಡ ಇರುಳಿನ ಬಳಿಕ ಹೋಟೆಲ್ ನಡೆಸುತ್ತಿದ್ದವರನ್ನು ಸರಿಯಾಗಿ ಉತ್ತರಿಸದೆ ಮಹಿಳಾ ಪೋಲೀಸು ಜೊತೆಗೆ ಅನುಚಿತ ವರ್ತನೆ ತೋರಿಸಿದ್ದಕ್ಕಾಗಿ ಬಂಧಿಸಲಾಗಿದೆ.

ಮುಖ್ಯ ಆರೋಪಿ ಹೋಟೆಲ್ ಮಾಲಿಕ ಸಂಜೀವ್ ಗೌಡ, ಕ್ಯಾಶಿಯರ್ ಸಂದೀಪ್ ಮತ್ತು ಹೇಮಂತ್ ಬಂಧಿತರು. ತಡ ರಾತ್ರಿ ಹೀಗೆ ಹೋಟೆಲ್ ನಡೆಸುವಂತಿಲ್ಲ ಎಂದುದಕ್ಕೆ 50,000 ಲಂಚ ಕೇಳುತ್ತಿದ್ದೀರಾ ಎಂದು ಸಂಜೀವ್ ಗೌಡ ದಬಾಯಿಸಿದ್ದಾರೆ. ಹೋಟೆಲ್ ಪರವಾನಗಿ ಕೇಳಿದ್ದಕ್ಕೆ ಮಾಹಿತಿ ಹಕ್ಕಿನಡಿ ಕೇಳಿ ಎಂದಿದ್ದಾರೆ ಎಂದು ದೂರಲಾಗಿದೆ.

ಕೊನೆಗೆ ಎಸ್ಐ ಪ್ರತಿಮಾ ಅವರ ದೂರಿನ ಮೇಲೆ ಮೂವರನ್ನೂ ಬಂಧಿಸಿ ಸರಳಿನ ಹಿಂದೆ ಕೂರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments