ಜುಲೈ 16ರಂದು “ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್” ಭಕ್ತಿ ಗೀತೆ ಬಿಡುಗಡೆ
ಹಚ್ಚ ಹಸಿರಿನಲ್ಲಿ ಕಂಗೊಳಿಸುತ್ತಿರುವ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಅದ್ಯಪಾಡಿಯ ಬೀಬಿಲಚ್ಚಿಲ್ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ಜುಲೈ ೧೬ರಂದು “ಪುಣ್ಯ ಕ್ಷೇತ್ರ ಬೀಬಿಲಚ್ಚಿಲ್” ಎಂಬ ಭಕ್ತಿ ಗೀತೆಯು ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳ್ಳಲಿದೆ.
ಈ ಬಿಡುಗಡೆಯ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲ್‌ನ ಶ್ರೀ ಲಕ್ಮೀನಾರಾಯಣ ಅಸ್ರಣ್ಣ, ಶ್ರೀಮತಿ ಸೌಮ್ಯ ಭಟ್ ಕಟೀಲ್, ನಂದಗೋಕುಲ ಗಾಣದ ಕೊಟ್ಯದಪ್ರಶಾಂತ್ ಪೂಜಾರಿ,
ನೋಟರಿ ವಕೀಲರಾದ ವಿನೋದರ ಪೂಜಾರಿ, ರಾಜಲಕ್ಷ್ಮೀ ಟ್ರಾವೆಲ್ಸ್ ಪಡುವಿನ ಚಿತ್ತರಂಜನ್, ಪೇಜಾವರ ಸುಧಾಕರ ಕದ್ರಿ , ರಾಜೇಂದ್ರ ಬಲ್ಲಾಲ್ ಬೈಲು ಬೂಡು, ಕಿರಣ್ ಬಲ್ಲಾಲ್ ಬೈಲು ಬೂಡು, ಅಶ್ವಿನ್ ಬಲ್ಲಾಲ್ ಬೈಲು ಬೂಡು, ಶುಭೋದ್ ಬಲ್ಲಾಲ್ ಬೈಲು ಬೂಡು, ರಾಘವ ಸಪಲಿಗ ಬಂಟ್ವಾಳ, ರಾಜೇಶ್ ಸಪಲಿಗ ಮೆಲ್ಕಾರ್ ಅವರ ಉಪಸ್ಥಿಯಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.