ಬ್ರಹ್ಮಾವರ ; ಅಟೋ ಚಾಲಕರು ಸೂಕ್ತ ದಾಖಲೆ ಅಟೋದಲ್ಲಿರಿಸಿಕೊಳ್ಳಿ – ಠಾಣಾಧಿಕಾರಿ ರಾಜಶೇಖರ
ಬ್ರಹ್ಮಾವರ ರಥ ಬೀದಿಯ ಬಳಿ ಆರ್. ಕೆ. ಶೆಟ್ಟಿಯರಿಂದ ಕೊಡುಗೆಯಾಗಿ ನೂತನವಾಗಿ ರಚನೆಯಾದ ಅಯ್ಯಪ್ಪ ರಿಕ್ಷಾ ನಿಲ್ದಾಣವನ್ನು ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ರಾಜಶೇಖರ ವಂದಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಆಟೋ ಚಾಲಕರು ಯಾವತ್ತೂ ಸೂಕ್ತ ದಾಖಲೆಯನ್ನು ಅಟೋದಲ್ಲಿ ಇರಿಸಿಕೊಳ್ಳಿ. ದೇಶದ ಬಹತೇಕ ಜನರು ಅಟೋ ರಿಕ್ಷಾವನ್ನು ನಂಬಿಕೊಂಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ನಿಮ್ಮ ಕುಟುಂಬದ ಸುರಕ್ಷೆಗೆ ಇದು ಸಹಕಾರಿ ಎಂದರು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಬಿರ್ತಿ ರಾಜೇಶ್ ಶೆಟ್ಟಿ ,ವಾರಂಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗವೇಣಿ , ಅಭಿವೃದ್ಧಿ ಅಧಿಕಾರಿ ಫರಝಾನಾ , ಕಾರ್ಯದರ್ಶಿ ಶೇಖರ ನಾಯ್ಕ್ , ಅಯ್ಯಪ್ಪ ಸ್ವಾಮೀ ದೇವಸ್ಥಾನದ ಅರ್ಚಕ ಶೇಷ ಗುರುಸ್ವಾಮಿ ಮತ್ತು ಆರ್ ಕೆ ಶೆಟ್ಟಿ ಉಪಸ್ಥಿತರಿದ್ದರು.