ಬೈಂದೂರು: ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮ
ಬೈಂದೂರು ಪೊಲೀಸ್ ಠಾಣೆಯಲ್ಲಿ ಗಣಹೋಮ, ನಾಗದೇವರ ಪೂಜೆ, ಆಯುಧ ಪೂಜೆ ಹಾಗೂ ವಾಹನ ಪೂಜಾ ಕೈಂಕರ್ಯಗಳು ವಿಶೇಷ ಹೂವಿನ ಅಲಂಕಾರದೊಂದಿಗೆ ಅತ್ಯಂತ ವಿಶಿಷ್ಠವಾಗಿ ಆಚರಿಸಲಾಯಿತು.
ಸಮವಸ್ತ್ರಧಾರಿ ಇಲಾಖೆಯ ಸಿಬ್ಬಂದಿಗಳು ಪೂಜೆಯ ಅಂಗವಾಗಿ ಅಪ್ಪಟ ಭಾರತೀಯ ಶೈಲಿಯ ಉಡುಗೆಯನ್ನು ತೊಟ್ಟು ಗಮನ ಸೆಳೆದರು. ಠಾಣೆ ಸಿಬ್ಬಂದಿಗಳು ಭಾವೈಕ್ಯತೆ ಮೂಡಿಸುವ ಹಾಗೂ ಪರಸ್ಪರ ವಿಶ್ವಾಸ ಹೆಚ್ಚಿಸುವ ಕಲ್ಪನೆಯಲ್ಲಿ ಸಿಬ್ಬಂದಿಗಳು ಒಂದೇ ರೀತಿಯ ಸಮವಸ್ತ್ರ ಧರಿಸಿದರು.
ಠಾಣೆಯ ವೃತ್ತ ಇನ್ಸ್‍ಪೆಕ್ಟರ್ ಸವಿತ್ರ ತೇಜ್, ಠಾಣಾಧಿಕಾರಿ ನಿರಂಜನ್ ಗೌಡ ಹಾಗೂ ಅಪರಾಧ ವಿಭಾಗದ ಮಹೇಶ್ ಕಂಬಿ ಉಪಸ್ಥಿತರಿದ್ದರು. ಬಂದೂಕು ಮೊದಲಾದ ಆಯುಧ, ವಾಹನಗಳು, ಪೊಲೀಸ್ ಇಲಾಖೆಯ ವಾಹನಗಳಿಗೆ ಪೂಜೆ ಸಲ್ಲಿಸಿದ್ದರು.