Home ಕರಾವಳಿ Archive by category ಮಂಗಳೂರು (Page 267)

ಸರ್ಕಾರ ಇದೆಯೋ ಇಲ್ಲವೊ ಅಥವಾ ಸರ್ಕಾರ ಇಲ್ಲದೇ ಜನರು ಜೀವನ ನಡೆಸುತ್ತಾ ಇದ್ದಾರಾ..? : ಎನ್‍ಎಸ್‍ಯುಐನ ಮನೀಷ್ ಜಿ ರಾಜ್

ಕೊರೋನಾದಿಂದ ದೇಶದಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಸರ್ಕಾರ ಇದೆಯೋ ಇಲ್ಲವೊ ಅಥವಾ ಸರ್ಕಾರ ಇಲ್ಲದೇ ಜನರು ಜೀವನ ನಡೆಸುತ್ತಾ ಇದ್ದಾರಾ..? ಎಂದು ಎನ್‍ಎಸ್‍ಯುಐ ಜನರಲ್ ಸೆಕ್ರೆಟರಿ ಮನೀಷ್ ಜಿ ರಾಜ್ ಹೇಳಿದರು. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಶಿಕ್ಷಣ ಸಚಿವರು ಇತ್ತೀಚಿಗೆ ಪಿಯು ವಿದ್ಯಾರ್ಥಿಗಳ ಪರೀಕ್ಷೆ

ಕೋವಿಡ್ ಸಂಕಷ್ಟದ ಮಧ್ಯೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ: ಶಾಹುಲ್ ಹಮೀದ್

ಕೊರೋನಾ ಸಂಕಷ್ಟದ ಮಧ್ಯೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ರಾಜ್ಯದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್ ಒತ್ತಾಯಿಸಿದ್ದಾರೆ. ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,2020-21 ಸಾಲಿನಲ್ಲಿ ಕಡಿತ ಗೊಳಿಸಿ 152 ಕೋಟಿ ಮೀಸಲಿಡಲಾಗಿದೆ. ಇದರಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪರಿತಾಪಿಸುವಂತಾಗಿದೆ.

ಮಂಗಳೂರಿನಲ್ಲಿ ದಂಪತಿ ಆತ್ಮಹತ್ಯೆ

ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಆರ್ಥಿಕ ನಷ್ಟದಿಂದಾಗಿ ದಂಪತಿ ಆತ್ಮಹತ್ಯೆ ಮಾಡಿರುವ ಘಟನೆ ಮಂಗಳೂರಲ್ಲಿ ನಡೆದಿದೆ. ಕಳೆದ 2 ತಿಂಗಳಿಂದ ಕೆಲಸವಿಲ್ಲದೇ ಮನೆಯಲ್ಲಿ ಇದ್ದ ದಂಪತಿ ತೀರಾ ಹಣಕಾಸಿನ ಮುಗ್ಗಟ್ಟಿಗೆ ಬಿದ್ದು, ಆತ್ಮಹತ್ಯೆಗೆ ಶರಣಾರಾಗಿದ್ದಾರೆ. ಈ ಘಟನೆ ಪತಿಯು ಕಲಾವಿದರು ಆಗಿದ್ದು, ಇದೀಗ ಅವರ ಸಾವು ಕಲಾವಿದರಿಗೆ ತಲ್ಲಣಗೊಳ್ಳಿಸಿದೆ. ಪಿಂಟೋಸ್ ಲೇನ್ ನಿವಾಸಿ 55 ವರ್ಷದ ಸುರೇಶ್ ಮತ್ತು ವಾಣಿಶ್ರೀ ಮೃತಪಟ್ಟವರು. ಸುರೇಶ್ ಅವರ ಮೃತದೇಹ ಬಾವಿಯಲ್ಲಿ

ಬ್ಯ್ಲಾಕ್ ಫಂಗಸ್ ರೋಗಕ್ಕೆ ಔಷಧ ಮಂಗಳೂರಿಗೆ : ಶಾಸಕ ಡಾ.ವೈ ಭರತ್ ಶೆಟ್ಟಿಯವರ ವಿಶೇಷ ಪ್ರಯತ್ನದ ಫಲ

ಮಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಔಷಧದ ಕೊರತೆ ಇರುವುದನ್ನು ಮನಗಂಡ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಮಾಡಿದ ವಿಶೇಷ ಪ್ರಯತ್ನದ ಫಲವಾಗಿ Association of Oral and Maxillofacial Surgeons of India ( AOMSI) ಸಂಘಟನೆಯ ಮಾಜಿ ಅಧ್ಯಕ್ಷರಾದ ಡಾ.ಕೃಷ್ಣಮೂರ್ತಿ ಬೊನತಾಯ ಹಾಗೂ ಡಾ.ಬದ್ರಿ ಅವರು ಯುನೈಟೆಡ್ ಕಿಂಗಡಂನಿಂದ ಬ್ಲ್ಯಾಕ್ ಫಂಗಸ್ ಗೆ ಬೇಕಾಗಿರುವ Amphotericin ಔಷಧವನ್ನು ಭಾರತಕ್ಕೆ ತರಿಸಿದ್ದು ಅದನ್ನು ಮಂಗಳೂರಿನ

ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಕೊಟ್ಟ ದೂರಿನ ಶೀಘ್ರ ತನಿಕೆಗೆ ಸಿಪಿಐ ಒತ್ತಾಯ

ಮಂಗಳೂರಿನ ಪ್ರಖ್ಯಾತ ವೈದ್ಯ ಡಾ| ಬಿ ಶ್ರೀನಿವಾಸ ಕಕ್ಕಿಲ್ಲಾಯರು ಮತ್ತು ಜಿಮ್ಮೀಸ್ ಮಾರ್ಕೇಟಿನ ಸಿಬ್ಬಂದಿ ಮಧ್ಯೆ ನಡೆಯಿತೆನ್ನಲಾದ ಮಾತುಕತೆಗಳ ರಹಸ್ಯ ಸಿಸಿ ಟಿವಿ ದೃಶ್ಯವನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಜಿಮ್ಮೀಸ್ ಸುಪರ್ ಮಾರ್ಕೇಟ್ ಮಾಲಕರ ವಿರುದ್ಧ ಹಾಗೂ ಜಿಮ್ಮೀಸ್ ಮಾಲಕ ಮತ್ತು ಪೈ ಎಂಬವರು ಡಾ| ಕಕ್ಕಿಲ್ಲಾಯರನ್ನು, ಕಮ್ಯುನಿಷ್ಟ್ ಪಕ್ಷವನ್ನು, ಡಾಕ್ಟರರ ತಂದೆ ಬಿ ವಿ ಕಕ್ಕಿಲ್ಲಾಯರನ್ನು ದೂಷಿಸುತ್ತಾ ಫೋನು ಮಾತುಕತೆ

ಎಸೆದರೆ ಚಿಗುರುವ ಮಾಸ್ಕ್..!

ಕೊರೊನಾ ಸೋಂಕಿನ ನಿಯಂತ್ರಣದ ಸಲುವಾಗಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಾಸ್ಕ್ ಗಳು ಬಂದಿವೆ. ಮಂಗಳೂರು ಸಮೀಪದ ಗ್ರಾಮಾಂತರ ಪ್ರದೇಶದ ಯುವಕನೊಬ್ಬ ಪರಿಸರ ಸ್ನೇಹಿ ಮಾಸ್ಕ್ ನಿರ್ಮಿಸಿ ದೇಶದಾದ್ಯಂತ ಗಮನ ಸೆಳೆದಿದ್ದಾನೆ. ಈ ವಿನೂತನ ಮಾಸ್ಕ್ ನಲ್ಲಿ ಸಸ್ಯದ ಬೀಜಗಳನ್ನು ಅಳವಡಿಸಲಾಗಿದ್ದು, ಮಾಸ್ಕ್ ಬಳಸಿ ಬಿಸಾಡಿದಾಗ ಮಾಸ್ಕಿನಲ್ಲಿ ಅಳವಡಿಸಲಾದ ತರಕಾರಿ ಬೀಜಗಳು ಗಿಡವಾಗಿ ಬೆಳೆಯುತ್ತವೆ. ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಬಳಕೆಗೆ ಶಿಫಾರಸು ಮಾಡಲಾಗಿದೆ.

ಮಾಡೆಲಿಂಗ್: ಆಕಾಶ್ ಪ್ರಭು ’ಮಿಸ್ಟರ್ ಸುಪ್ರಾನೇಶನಲ್ ಇಂಡಿಯಾ’ ಅಂತಿಮ ಸುತ್ತಿಗೆ ಆಯ್ಕೆ

ಮಂಗಳೂರು ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಆಕಾಶ್ ಪ್ರಭು ಅವರು ಈ ವರ್ಷ ಮಿಸ್ಟರ್ ಸುಪ್ರಾನೇಶನಲ್ ಇಂಡಿಯಾ 2021 ರ ಫೈನಲಿಸ್ಟ್ (ಟಾಪ್ 10) ಆಗಿ ಅರ್ಹತೆ ಪಡೆದಿದ್ದು, ಪೋಲೆಂಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಕಾಶ್ ಪ್ರಭು ಅವರು, ಮಿಸ್ಟರ್ ಇಂಡಿಯಾ 2017 ರ ಬೆಂಗಳೂರು ಫೈನಲಿಸ್ಟ್ ಆಗಿದ್ದರು. ಈ ವರ್ಷ ಅವರು ಮಿಸ್ಟರ್ ಸುಪ್ರಾನೇಶನಲ್ ಇಂಡಿಯಾ 2021 ರ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. 25ರ ಹರೆಯದ ಆಕಾಶ್ ಪ್ರಭು, ಮೆಕ್ಯಾನಿಕಲ್ ಎಂಜಿನಿಯರ್

ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

ಮಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ವತಿಯಿಂದ ಪ್ರತಿಭಟನೆ ನಡೆಸಿದರು.ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪ್ರಧಾನಿ ಮೋದಿ ನೇತೃತ್ವದ ಸರಕಾರ

ಶಾಸಕ ಡಾ.ಭರತ್ ಶೆಟ್ಟಿ ವಿಶೇಷ ಪ್ರಯತ್ನ; ಲೋಕೇಶ್ ಕುಂದರ್ ಕುಟುಂಬಕ್ಕೆ 6 ಲಕ್ಷ ಪರಿಹಾರ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಇಡ್ಯಾದ ಗುಡ್ಡೆಕೊಪ್ಲ ನಿವಾಸಿ ಲೋಕೇಶ್ ಕುಂದರ್ ಅವರು ಕಳೆದ ಡಿಸೆಂಬರ್ ನಲ್ಲಿ ಮನೆಯ ಬಳಿಯ ಸಮುದ್ರ ತೀರದಲ್ಲಿ ಸಾಂಪ್ರದಾಯಿಕವಾಗಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಟ್ಯೂಬ್ ಹತೋಟಿ ತಪ್ಪಿ ದೂರ ಸರಿದು ನೀರಿಗೆ ಹಾಕಿದ ಬಲೆ ಕಾಲಿಗೆ ಸಿಲುಕಿ ಈಜಾಡಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಆ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು