Home Archive by category ಕರಾವಳಿ (Page 199)

ಬೆಳುವಾಯಿ ಕರಿಯನಂಗಡಿ ನಿವಾಸಿ ಗೋಪಾಲ್ ನಾಯ್ಕ್ (30ವ)ಕಾಣೆಯಾಗಿದ್ದಾರೆ

ಬೆಳುವಾಯಿ ಕರಿಯನಂಗಡಿ ನಿವಾಸಿ ಗೋಪಾಲ್ ನಾಯ್ಕ್ (30ವ) ಜು 2 ರಂದು ಕ್ರಿಕೆಟ್ ಆಡಿ ತಾಯಿ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಅವರ ಪತ್ನಿ ದೀಕ್ಷಿತಾ ಮೂಡುಬಿದಿರೆ ಪೋಲಿಸರಿಗೆ ದೂರು ನೀಡಿದ್ದಾರೆ. ತಮ್ಮನ ಬೈಕ್ ನಲ್ಲಿ ತೆರಳಿ ಬೇಳುವಾಯಿಗೆ ಡ್ರಾಪ್ ಪಡೆದ ಅವರನ್ನು ನಂತರ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ

ವಿಟ್ಲ : ನೀರಿನ ಟ್ಯಾಂಕ್ ಗೆ ಹಾರಿ ಮಹಿಳೆ ಆತ್ಮಹತ್ಯೆ

ವಿಟ್ಲ: ಮಹಿಳೆಯೊಬ್ಬರು ಆತ್ಯಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ನೆಕ್ಕರೆ ಮಠ ಎಂಬಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶಾಂತಲಾ (41) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಸಹೋದರ ನೀಡಿದ ದೂರಿನ ಅನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಪರೀತ ಸೊಂಟ ನೋವಿನಿಂದ ಬಳಲುತ್ತಿದ್ದು ಇದಕ್ಕೆ ಸ್ಥಳೀಯವಾಗಿ ಆಯುರ್ವೇದಿಕ್ ಚಿಕಿತ್ಸೆ ಮಾಡಿದರು ನೋವು ಕಡಿಮೆ ಯಾಗದಿರುವುದರಿಂದ ಜೀವನದಲ್ಲಿ

ಖಾವಿಧಾರಿಗಳಿಂದ ಜಾತ್ರೆಗಾಗಿ ಕಲೆಕ್ಷನ್ : ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಉಳ್ಳಾಲ: ಜಾತ್ರೆಗೆ ಸಹಾಯಹಸ್ತ ಬೇಕು ಎಂದು ಭಿಕ್ಷಾಟನೆಯಲ್ಲಿ ತೊಡಗಿದ್ದ ಯುವಕನನ್ನು ತೊಕ್ಕೊಟ್ಟುವಿನ ಕ್ಯಾಟರಿಂಗ್ ಸಂಸ್ಥೆ ಮಾಲೀಕ ರಾಜೇಶ್ ಎಂಬವರು ಸಂಶಯದ ಮೇರೆಗೆ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ. ತೊಕ್ಕೊಟ್ಟು ಕಾಪಿಕಾಡು ರಾಜ್ ಕೇಟರಸ್ ಬಳಿ ಬಂದಿದ್ದ ಖಾವಿ ತೊಟ್ಟ ಯುವಕ ಜಾತ್ರೆ ನಡೆಸಲು ದಾನ ನಡೆಸಬೇಕು ಎಂದು ಮಾಲೀಕ ರಾಜೇಶ್ ಎಂಬವರಲ್ಲಿ ಕೇಳಿದ್ದನು. ಸಂಸ್ಥೆ ಮಾಲೀಕರು ರಾತ್ರಿ ವೇಳೆ ಜಾತ್ರೆಗಾಗಿ ಹಣ ಕೇಳುವುದನ್ನು ಸಂಶಯ ವ್ಯಕ್ತಪಡಿಸಿ ವಿಚಾರಣೆ

Subramanya : ಭಾರೀ ಮಳೆಗೆ ಮುಳುಗಡೆಯಾದ ಸುಬ್ರಹ್ಮಣ್ಯ ಕುಮಾರಧಾರ ಸ್ನಾನಘಟ್ಟ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ಕುಮಾರ ಧಾರ ನದಿ ಉಕ್ಕಿ ಹರಿಯುತ್ತಿದೆ. ನದಿಯಲ್ಲಿ ರಭಸದಿಂದ ನೀರು ಹರಿಯುತ್ತಿರುವುರಿಂದ ಪವಿತ್ರ ಸ್ನಾನ ಘಟ್ಟ ಮುಳುಗಡೆಯಾಗಿದೆ.ಹೀಗಾಗಿ ಭಕ್ತಾದಿಗಳಿಗೆ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ದ.ಕ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಹಾನಿಯಾಗಿರುವ ಬಗ್ಗೆಯೂ ವರದಿಯಾಗಿದೆ.ಈಗಾಗ್ಲೆ ದ.ಕ. ಜಿಲ್ಲೆಯಲ್ಲಿ ಜಿಲ್ಲಾ ನೈಸರ್ಗಿಕ ವಿಕೋಪ ಮುನ್ಸೂಚನೆಯಂತೆ ಆರೆಂಜ್ ಅಲರ್ಟ್

ಪುರಸಭೆಯ ನಿರ್ಲಕ್ಷ್ಯ ಕೃಷಿ ಚಟುವಟಿಕೆಗಳಿಗೆ ಅಡ್ಡಿ: ಮಾಹಿತಿ ನೀಡಿದರೂ ಮೌನವಾದ ಅಧಿಕಾರಿಗಳು

ಕೃಷಿ ಚಟುವಟಿಕೆ ನಡೆಸಲು ಉತ್ತೇಜನ ನೀಡಬೇಕಾಗಿದ್ದ ಕಾಪು ಪುರಸಭೆಯಿಂದಲೇ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದು, ಈ ಬಗ್ಗೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದರ, ಅವರು ಮೌನಕ್ಕೆ ಶರಣಾಗಿದ್ದಾರೆ ಎಂಬುದಾಗಿ ಕಾಪುವಿನ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾಪು-ಮಲ್ಲಾರು ಮುಖ್ಯ ರಸ್ತೆ ಇಕ್ಕೆಲುಗಳನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಗಿಡಗಂಟಿಗಳನ್ನು, ಮಣ್ಣ ದಿಬ್ಬಗಳನ್ನು ತೆಗೆದ್ದರೂ ಅಲ್ಲಿಂದ ತೆರವು ಮಾಡದೆ ರಸ್ತೆ ಅಂಚಿನಲ್ಲೇ ಬಿಟ್ಟು ಹೋದ ಪರಿಣಾಮ,

ಬಂಟ್ವಾಳದ ನಂದಾವರ ಎಂಬಲ್ಲಿ ಗುಡ್ಡ ಕುಸಿತ : ಮಹಿಳೆ ಮೃತ್ಯು

ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ಗುಡ್ಡ ಕುಸಿತವಾಗಿದ್ದು, ಅದು ಮನೆಯೊಂದರ ಮೇಲೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಮಹಮ್ಮದ್ ಎಂಬವರ ಮನೆಯ ಮೇಲೆ ಇಂದು ಬೆಳಿಗ್ಗೆ ಗುಡ್ಡ ಕುಸಿದು ಬಿದ್ದಿದೆ. ಝರೀನಾ ಮತ್ತು ಸಫಾ ಎಂಬವರು ಸಿಲುಕಿಕೊಂಡಿದ್ದು ಸಫಾ ಅವರನ್ನು ರಕ್ಷಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಝರೀನಾ ಮನೆಯೊಳಗೆ ಅಸುನೀಗಿದ್ದಾರೆ. ಸ್ಥಳಕ್ಕೆ ಎನ್.ಡಿ.ಆರ್.ಎಫ್, ಅಗ್ನಿಶಾಮಕ ಸಿಬಂದಿ ಸ್ಥಳೀಯರೊಂದಿಗೆ ಸುರಿಯುವ ಮಳೆಯಲ್ಲೂ ರಕ್ಷಣಾ

ಹೊಸಂಗಡಿ-ವರ್ಕಾಡಿ-ಆನೆಕಲ್ಲು ರಸ್ತೆ ಬದಿ ಅಪಾಯಕಾರಿ ಮರಗಳು

ಮಂಜೇಶ್ವರ: ಹೊಸಂಗಡಿ – ವರ್ಕಾಡಿ – ಆನೆಕಲ್ಲು ರಸ್ತೆಯ ವಿವಿಧ ಕಡೆ ರಸ್ತೆ ಬದಿ ಬೃಹತ್ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ಇದ್ದು, ಇನ್ನು ಕೆಲವು ಕೊಂಬೆಗಳು ಮುರಿದು ಬೀಳುವ ಹಂತದಲ್ಲಿವೆ. ಮಳೆಗಾಲ ಆರಂಭಗೊಂಡ ಬಳಿಕ ಈಗಾಗಲೇ ಹಲವಾರು ಅನಾಹುತಗಳು ಸಂಭವಿದೆ. ಇಲಾಖೆ ಈ ಬಗ್ಗೆ ಎಚ್ಚರ ವಹಿಸದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಮಂಜೇಶ್ವರದ ಬಹುತೇಕ ಪ್ರದೇಶಗಳಲ್ಲೂ ಒಣಗಿದ, ರೋಗಗ್ರಸ್ತ ಮತ್ತು ಬೃಹತ್ ಮರಗಳು, ರೆಂಬೆಗಳನ್ನು ಮಳೆಗಾಲಕ್ಕೆ

ಬೆಳ್ಮಣ್ : ಬೈಕ್ ಮೇಲೆ ಉರುಳಿದ ಬೃಹತ್ ಗಾತ್ರದ ಮರ

ಬೃಹತ್ ಗಾತ್ರ ಮರವೊಂದು ರಸ್ತೆಗೆ ಉರುಳಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಳ್ಮಣ್ ಪೇಟೆಯಲ್ಲಿ ನಡೆದಿದೆ. ಪಿಲಾರು ನಿವಾಸಿ ಪ್ರವೀಣ್ ಮೃತ ದುರ್ದೈವಿ. ಘಟನೆಯಲ್ಲಿ ಬೈಕ್ ಸವಾರ ಮರದಡಿಯಲ್ಲಿ ಸಿಲುಕಿಕೊಂಡಿದ್ದು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ.ಹಲವು ಗಂಟೆಗಳ ಕಾಲ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಬಳಿಕ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವುಗೊಳಿಸುವ ಕಾರ್ಯ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆ : ಕುಸಿತದ ಭೀತಿಯಲ್ಲಿ ಸಾಣೂರಿನ ಪಶು ಚಿಕಿತ್ಸಾಲಯ

ಕಾರ್ಕಳ-ಮೂಡಬಿದಿರೆ, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವಾಗ ಇಲಾಖಾ ಹಾಗೂ ಪ್ರಾಧಿಕಾರವು ಯಾವುದೇ ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ ತೋರಿದ ಪರಿಣಾಮವಾಗಿ ಸಾಣೂರು ಗ್ರಾಮದ ಏಕೈಕ ಪಶು ಚಿಕಿತ್ಸಾಲಯ ಸದ್ಯದಲ್ಲೇ ನೆಲಕ್ಕೆ ಉರುಳುವ ಸಂಭವವಿದೆ. ಸಾಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಸಾದ್ ರವರು ಮಾಧ್ಯಮದೊಂದಿಗೆ ಮಾತನಾಡಿ, ಯಾವುದೇ ಮುಂಜಾಗ್ರತೆ ಕ್ರಮ ವಹಿಸದೆ ಸಾಣೂರು ಪರಿಸರದಲ್ಲಿ ಗುಡ್ಡವನ್ನು ಜೆಸಿಬಿ ಯಂತ್ರದ ಮೂಲಕ

ಪುತ್ತೂರು : ನೋಡು ನೋಡುತ್ತಿದ್ದಂತೆ ಪಾತಾಳಕ್ಕೆ ಕುಸಿದ ಬಾವಿ

ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪುತ್ತೂರಿನಲ್ಲಿ ಭಾರೀ ಭೂಕುಸಿತ ಉಂಟಾದ ಘಟನೆ ನಡೆದಿದೆ. ಮನೆ ಮಂದಿ ನೋಡು ನೋಡುತ್ತಿದ್ದಂತೆ ಪಾತಾಳಕ್ಕೆ ಬಾವಿ ಕುಸಿದಿದ್ದು, ಪುತ್ತೂರು ನಗರಸಭಾ ವ್ಯಾಪ್ತಿಯ ಬಪ್ಪಳಿಕೆ ಎಂಬಲ್ಲಿ ಘಟನೆ ನಡೆದಿದೆ. ಬಾವಿ ಕುಸಿದ ಹಿನ್ನಲೆಯಲ್ಲಿ ಹೊಸ ಮನೆಯೂ ಕುಸಿಯುವ ಅಪಾಯದಲ್ಲಿದೆ. ಬಪ್ಪಳಿಕೆ ನಿವಾಸಿ ಸುಶೀಲ ಎಂಬವರಿಗೆ ಸೇರಿದ ಮನೆಯಾಗಿದ್ದು, ಭೂ ಕುಸಿತದಿಂದಾಗಿ ಪರಿಸರದ ಜನ ಆತಂಕದಲ್ಲಿದ್ದಾರೆ. ಅಗ್ನಿಶಾಮಕ ದಳ ದವರು ಮನೆ ಮಂದಿಯನ್ನು