Home Archive by category ಕ್ರೈಮ್ (Page 18)

ಬ್ಯಾಂಕಿನಿಂದ 27 ಲಕ್ಷ ರೂ. ಎಗರಿಸಿದ ಆರೋಪಿಗೆ ಜೈಲು ಶಿಕ್ಷೆ

2017ರ ಡಿಸೆಂಬರ್ ತಿಂಗಳ 29ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಇರುವ (ಆಗಿನ) ವಿಜಯ ಬ್ಯಾಂಕ್‍ನಲ್ಲಿ ಕ್ಯಾಶಿಯರ್ ಅಗಿದ್ದ ವಿಕಾಸ್ ಶೆಟ್ಟಿ ರೂ. 27,29,875/- ಎಗರಿಸಿದ್ದರು. ಆ ಶಾಖೆಯ ಮ್ಯಾನೇಜರ್ 2017ರ ಡಿಸೆಂಬರ್ 28ರಿಂದ 30ರ ವರೆಗೆ ರಜೆಯಲ್ಲಿದ್ದರು. ಪ್ರಭಾರ ಮ್ಯಾನೇಜರ್ ಅವರ ಟ್ಯಾಲಿ ಸಾಫ್ಟ್‍ವೇರ್‍ನಲ್ಲಿ ಅಂತಿಮ ನಗದು

ವಿಟ್ಲಕಾರಿನಲ್ಲಿಅಕ್ರಮ ಗೋ ಸಾಗಾಟ ಪತ್ತೆ

ವಿಟ್ಲ: ಕೇಪು ಕಲ್ಲಂಗಳದಿಂದ ತೋರಣಕಟ್ಟೆ ಸಂಪರ್ಕ ರಸ್ತೆಯ ಒಳ ರಸ್ತೆಯೊಂದರಲ್ಲಿ ಕಾರಿನಲ್ಲಿ ದನ ಸಾಗಾಟ ಮಾಡುತ್ತಿದ್ದು ಪತ್ತೆಯಾಗಿದೆ.ಕಾರಿನ ಹಿಂಭಾಗದಲ್ಲಿ ಎರಡು ಗೋವಿದ್ದು, ಕಾರಿದ ಹಿಂಭಾಗ ಹಾಗೂ ಮುಂಭಾಗದ ಗಾಜು ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೋಲೀಸರು ತೆರಳಿದ್ದು, ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಈ ರಸ್ತೆ ಸಾರಡ್ಕ ಚೆಕ್ ಪೋಸ್ಟ್ ಸಂಪರ್ಕಹೊಂದಿದ್ದು, ಚೆಕ್ ಪೋಸ್ಟ್ ಮೂಲಕವೇ ಗೋವು ಸಾಗಾಟ ಮಾಡಲಾಗುತ್ತಿತ್ತಾ ಎಂಬ ಅನುಮಾನ ಮೂಡುತ್ತಿದೆ.

ಕಂಕನಾಡಿ ನಗರ ಠಾಣೆ : ಇಬ್ಬರು ರೌಡಿಗಳ ಮೇಲೆ ಗೂಂಡಾ ಕಾಯ್ದೆ

ಕಂಕನಾಡಿ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಇಬ್ಬರು ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ.ಪಡೀಲ್ ಜಲ್ಲಿಗುಡ್ಡೆ ನಿವಾಸಿ ಪ್ರೀತಂ ಪೂಜಾರಿ (26) ಮತ್ತು ಪಡೀಲ್ ಅಳಪೆ ನಿವಾಸಿ ಧೀರಜ್ (27) ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ. ಪ್ರೀತಂ ಪೂಜಾರಿ ವಿರುದ್ಧ ಕಂಕನಾಡಿ ನಗರ, ಗ್ರಾಮಾಂತರ, ಕದ್ರಿ, ಬಂದರು ಠಾಣೆಗಳಲ್ಲಿ ಕೊಲೆ ಯತ್ನ, ಕೊಲೆ ಬೆದರಿಕೆ, ಹಲ್ಲೆ, ದರೋಡೆ, ಗಾಂಜಾ ಸೇವನೆ ಸೇರಿ 12

ಕಟಪಾಡಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ

ಕಟಪಾಡಿ ಮಟ್ಟು ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಸುಮಾರು 45ರಿಂದ 50 ವರ್ಷ ವಯಸ್ಸಿನ ಗಂಡಸಿನ ಶವ ಕಟಪಾಡಿ ಮಟ್ಟು ಹೊಳೆಯಲ್ಲಿ ತೇಲಿ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು, ಬಾರೀ ಸೆಳೆತ ಹೊಂದಿದ ನೆರೆಯ ನೀರಿನಲ್ಲಿ ಸಾಹಸಮಯವಾಗಿ ತಡಕ್ಕೆ ಸೇರಿಸಿ ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದರು, ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಶವಾಗಾರಕ್ಕೆ ಸಾಗಿಸಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಸರಕಾರಿ ಕಚೇರಿಯಲ್ಲಿ ಫೋಟೋ ನಿರ್ಬಂಧ ಆದೇಶ ವಾಪಾಸು

ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಮಾಡದಂತೆ ಹೊರಡಿಸಿದ್ದ ಆದೇಶದ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ.ಯಾವುದೇ ರೀತಿಯ ನಿಷೇಧ ಆಗಬಾರದು, ಮೊದಲು ಇದ್ದಂತೆ ಇರಲಿ ಎಂಬ ಕಾರಣಕ್ಕೆ ಈ ಆದೇಶವನ್ನು ವಾಪಸು ಪಡೆಯುವ ತಾತ್ವಿಕ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೈಂದೂರು: ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಸಹಿತ ಇಬ್ಬರ ಆರೋಪಿಗಳ ಬಂಧನ

ಬೈಂದೂರು: ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ಅವರಿಗೆ ಬಂದ ಖಚಿತ ಮಾಹಿತಿಯಂತೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರ ಉಪಸ್ಥಿತಿಯಲ್ಲಿ ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಸಹಿತ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಬೈಂದೂರು ರಾಹುತನಕಟ್ಟೆ ಎಂಬಲ್ಲಿ ಮಂಗಳವಾರ ನಡೆದಿದೆ. ಭಟ್ಕಳ ನಿವಾಸಿ ಅಬ್ದುಲ್ ರೆಹಮಾನ್ (31), ಶಿರ್ವ ನಿವಾಸಿ ಅಬ್ದುಲ್ ಸಮದ್ (30) ಬಂಧಿತರಾಗಿದ್ದು, ಇವರಿಬ್ಬರು ಮಾದಕ ವಸ್ತುವನ್ನು ಸಲೀಮ್ ಮಂಚಿ ಎಂಬಾತನಿಂದ ಖರೀದಿಸಿ

ನೇತ್ರಾವತಿ ನದಿಯಲ್ಲಿ ನೀರುಪಾಲಾದ ಯುವಕನ ಶವ ಕೋಟೆಪುರದಲ್ಲಿ ಪತ್ತೆ

ಉಳ್ಳಾಲ: ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಈಜಲು ಹೋದ ಯುವಕ ಅಶ್ವಿತ್(೧೯) ನೀರುಪಾಲಾಗಿದ್ದು, ಆತನ ಮೃತದೇಹ ಬುಧವಾರ ಉಳ್ಳಾಲದ ಕೋಟೆಪುರ ಕೋಡಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಪೊಲೀಸ್, ಅಗ್ನಿಶಾಮಕ ದಳ ಸ್ಥಳೀಯರ ಸಹಾಯದಿಂದ ಹುಡುಕಾಟವನ್ನು ಸತತ ಮೂರು ದಿನಗಳಿಂದ ನಡೆಸಲಾಗುತ್ತಿತ್ತು. ಸಜಿಪಪಡುವಿನ ತಲೆಮೊಗರು ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ಮಗುವನ್ನ ತೊಟ್ಟಿಲು ತೂಗುವ ಸಮಾರಂಭ

ಪುತ್ತೂರು: ಹೆಬ್ಬಾವನ್ನು ಕೊಂದು ಕಟ್ಟಿ ಹಾಕಿದ ಪ್ರಕರಣ: ಇಬ್ಬರ ಬಂಧನ

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಯಲ್ಲಿರುವ ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಹೆಬ್ಬಾವನ್ನು ಕೊಂದು ಕಟ್ಟಿ ಹಾಕಿದ ಪ್ರಕರಣ ಪತ್ತೆ ಹಚ್ಚಿ ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿಗಳು ತಕ್ಷೀರು ದಾಖಲಿಸಿದ್ದಾರೆ. ಆರೋಪಿಗಳಾದ ಕೊಳ್ತಿಗೆ ಗ್ರಾಮದ ಶೇಡಿಗುರಿ ವಾಸಿ ಧನಂಜಯ(38 ವರ್ಷ) ಮತ್ತು ಜಯ(38 ವರ್ಷ) ರವರನ್ನು ಅರಣ್ಯ ಇಲಾಖೆ ಅಧಿಕಾರಿ ಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ಜುಲೈ 15 ರವರೆಗೆ

ಸರಳ ವಾಸ್ತು ಖ್ಯಾತಿಯ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಯ ಹತ್ಯೆ

ಸರಳ ವಾಸ್ತು ಖ್ಯಾತಿಯ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಹಾಡಹಗಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಉಣಕಲ್ಲ ಕೆರೆ ಬಳಿಯ ಖಾಸಗಿ ಹೋಟೆಲ್ ನ ಸ್ವಾಗತಕಾರರ ಕೌಂಟರ್ ಬಳಿ ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಗುರೂಜಿ ಮೇಲೆ ಏಕಾಏಕಿ ದಾಳಿ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಚಂದ್ರಶೇಖರ್ ಗುರೂಜಿ ಅವರನ್ನು ಮಾತನಾಡಿಸಿದವರಂತೆ

ಯುವಕನನ್ನು ಕತ್ತಿಯಿಂದ ಕಡಿದು ಕೊಲೆ : ಕೈಕಂಬದ ತಲಪಾಡಿಯಲ್ಲಿ ನಡೆದ ಘಟನೆ

ಬಂಟ್ವಾಳ: ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿಕೊಂಡು ಕತ್ತಿ ಯಿಂದ ಕಡಿದು ಕೊಲೆ ನಡೆಸಿದ ಘಟನೆ ಜುಲೈ 4 ರಂದು ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ಮಧ್ಯ ರಾತ್ರಿ ವೇಳೆ ನಡೆದಿದೆ. ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ. ಅತನ ಸ್ನೇಹಿತ ನೌಫಾಲ್ ಮತ್ತು ಇನ್ನೊಬ್ಬ ನ ಹೆಸರು ಸಿಕ್ಕಿಲ್ಲ ಇಬ್ಬರು ಸೇರಿ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ.ಇವರು ಗಾಂಜ ಗಿರಾಕಿಗಳಾಗಿದ್ದು , ತಲಪಾಡಿ ರಾಷ್ಟ್ರೀಯ ಹೆದ್ದಾರಿ