Home Archive by category ಕ್ರೈಮ್ (Page 21)

ಇಂಜಿನಿಯರಿಂಗ್ ಕಾಲೇಜಿನಲ್ಲಿ ರ್‍ಯಾಗಿಂಗ್ ಆರೋಪ : ವಿದ್ಯಾರ್ಥಿಗಳು ಅಮಾನತು

ಮೂಡುಬಿದಿರೆ : ಇಲ್ಲಿನ ತೋಡಾರು ಸಮೀಪದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿ ಗುಂಪುಗಳ ಮಧ್ಯೆ ಗುರುವಾರ ಹೊಡೆದಾಟ ನಡೆದು ಇಬ್ಬರು ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆಆಸ್ಪತ್ರೆಗೆ ದಾಖಲಾದವರು. ಹೊಡೆದಾಟದಲ್ಲಿ ವಿದ್ಯಾರ್ಥಿಗಳಾದ ಸಹಾಝ್ ಮತ್ತು ಮಹಮ್ಮದ್ ಎಂಬವರು

ರೂಫಿಂಗ್ ಶೀಟ್ ಹಾಕುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ರಾಡ್ ಹಾಗೂ ಟೈಲ್ಸ್‍ನಿಂದ ಹಲ್ಲೆ

ಮಂಜೇಶ್ವರ: ಆವರಣ ಗೋಡೆಯನ್ನು ಕಬಳಿಸಿ ಮನೆ ಸಮೀಪದ ರೋಯಲ್ ಆರ್ಕೆಡ್ ಭಾವ ಹಿಂದೂಸ್ಥಾನಿ ಕಟ್ಟಡಕ್ಕೆ ರೂಫಿಂಗ್ ಶೀಟ್ ಹಾಕುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅಲ್ಲಿದ್ದ ತಂಡ ತಂದೆ ಹಾಗೂ ಅಪ್ರಾಪ್ತ ಬಾಲಕನಿಗೆ ರಾಡ್ ಹಾಗೂ ಟೈಲ್ಸ್ ತುಂಡುಗಳಿಂದ ಹಲೆಗೈದ ಘಟನೆ ನಡೆದಿದೆ. ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ವಾಸವಾಗಿರುವ ಅಬ್ದುಲ್ ರಶೀದ್ (46) ಹಾಗೂ ಪುತ್ರ ರಾಯಿಫ್ (16) ಹಲ್ಲೆಗೊಳಗಾಗಿದ್ದಾರೆ. ಇವರನ್ನು ಬಳಿಕ ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ

ಪುತ್ತೂರಿನಲ್ಲಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಆರೋಪಿ ವಿರುದ್ಧ ಪೊಕ್ಸೋ ಪ್ರಕರಣ ದಾಖಲು

ಪುತ್ತೂರು:ಬಡಗನ್ನೂರು ಗ್ರಾಮದ ಮೈಂದನಡ್ಕ ಸಮೀಪ ಅನ್ಯಕೋಮಿನ ಅಪ್ರಾಪ್ತ ಬಾಲಕಿಯೋರ್ವರಿಗೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ವರದಿಯಾಗಿದ್ದು ಆರೋಪಿ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮೈಂದನಡ್ಕ ನಿವಾಸಿ ಆದಂ(56ವ.)ಎಂಬಾತ, ಸ್ಥಳೀಯ ಬಾಲಕಿಯೋರ್ವರು ಬೀಡಿ ಬ್ರಾಂಚಿಗೆಂದು ಹೋಗುತ್ತಿದ್ದ ವೇಳೆ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.ಘಟನೆ ಕುರಿತು ಸಂಪ್ಯ ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿಯನ್ನು ಪೊಲೀಸರು

ಕರ್ಕೇರ ಮೂಲಸ್ಥಾನದ ದೈವಸ್ಥಾನದಲ್ಲಿ ನಡೆದ ಕಳ್ಳತನ ಯತ್ನ ಪ್ರಕರಣ : ಆರೋಪಿ ಬಂಧನ

ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯಲ್ಲಿರುವ ಕರ್ಕೇರ ಮೂಲಸ್ಥಾನದ ದೈವಸ್ಥಾನದಲ್ಲಿ ನಡೆದ ಕಳ್ಳತನ ಯತ್ನ ಹಾಗೂ ದೈವಸ್ಥಾನದ ಮೂರ್ತಿಗಳನ್ನು ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಳಾಯಿ ನಿವಾಸಿ ರೋಹಿತಾಶ್ವ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೈಕಂಪಾಡಿ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಈ ಆರೋಪಿ ದೈವಸ್ಥಾನದಲ್ಲಿ ಚಿನ್ನ ಬೆಳ್ಳಿ ಆಭರಣ, ಹಣದ ಆಸೆಗೆ ಕಳ್ಳತನಕ್ಕೆ ಮುಂದಾಗಿದ್ದು, ಅಲ್ಲಿ ಏನೂ ಸಿಗದಾಗ

ಕೂಳೂರು : ಕಿಡಿಗೇಡಿಗಳಿಂದ ನಾಗನ ಕಟ್ಟೆ ಧ್ವಂಸ

ಮಂಗಳೂರು: ನಗರದ ಕೂಳೂರು ವಿ ಆರ್ ಎಲ್ ಬಳಿ ಇರುವ ನಾಗನ ಕಟ್ಟೆಯನ್ನು ಕಿಡಿಗೇಡಿಗಳು ದ್ವಂಸ ಮಾಡಿರುವ ಘಟನೆ ನಡೆದಿದೆ.ಹಲವಾರು ವರುಷಗಳಿಂದ ನಾಗನ ಕಟ್ಟೆ ಈ ಸ್ಥಳದಲ್ಲಿದ್ದು ಪೂಜೆ ಕೈಂಕರ್ಯ ನಡೆಯುತ್ತಿತ್ತು. ಆದರೆ ಯಾರೋ ಕಿಡಿಗೇಡಿಗಳು ಕಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕೃತ್ಯದ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸುಳ್ಳು ದೂರು ನೀಡಿದ್ದ ಪತ್ನಿ ಸೇರಿ ಐವರು ಅರೆಸ್ಟ್!

ಕುಂದಾಪುರ: ಇಲ್ಲಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಅಂಪಾರಿನಲ್ಲಿ ಮಂಗಳವಾರದಂದು ಬೆಳಕಿಗೆ ಬಂದಿದ್ದ ವಿವಾಹಿತನೋರ್ವನ ಆತ್ಮಹತ್ಯೆ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಂಪಾರು ಗ್ರಾಮದ ಮೂಡುಬಗೆಯ ವಿವೇಕ ನಗರದ ನಿವಾಸಿ ನಾಗರಾಜ (36) ಕೊಲೆಯಾದ ದುರ್ದೈವಿ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್ ಅವರ ಪತ್ನಿ ಸೇರಿದಂತೆ ಐವರನ್ನು ಶಂಕರನಾರಾಯಣ ಪೊಲೀಸರು ಬಂಧಿಸುವಲ್ಲಿ

ಪುತ್ತೂರಿನಲ್ಲಿ ವಿದ್ಯಾರ್ಥಿಗೆ ಹಲ್ಲೆ ಆರೋಪ: ಬೈಕ್ ಸವಾರರು ಪೊಲೀಸ್ ವಶಕ್ಕೆ

ಪುತ್ತೂರು: ಕಾಲೇಜು ಬಿಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಬೈಕ್ ಡಿಕ್ಕಿ ಹೊಡೆದುದನ್ನು ವಿಚಾರಿಸಿದ ವೇಳೆ ಆತನಿಗೆ ಹಲ್ಲೆ ನಡೆಸಿದ ಮತ್ತು ಇದನ್ನು ವಿಚಾರಿಸಲು ಬಂದಾತನಿಗೂ ಬೈಕ್ ಸವಾರರು ಹಲ್ಲೆ ನಡೆಸಿದ ಘಟನೆ ಅ.21ರಂದು ಸಂಜೆ ವೇಳೆ ಕೊಂಬೆಟ್ಟು ಸ.ಪ.ಪೂ ಕಾಲೇಜು ಬಳಿ ನಡೆದಿದೆ. ತಾರಿಗುಡ್ಡೆ ಅಬ್ದುಲ್ ರಜಾಕ್‍ರವರ ಪುತ್ರ, ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮಹಮ್ಮದ್ ಜಿಯಾದ್(16.ವ.) ಹಾಗೂ ಆತನ

ಉಳ್ಳಾಲ: ಪೊಲೀಸರಿಗೆ ತಲವಾರು ತೋರಿಸಿದ ರೌಡಿಶೀಟರ್

ಉಳ್ಳಾಲ: ವಾರೆಂಟ್ ಆರೋಪಿಯನ್ನು ಹಿಡಿಯಲು ಹೋದ ಉಳ್ಳಾಲ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಗೆ ರೌಡಿಶೀಟರ್ ತಲವಾರು ತೋರಿಸಿ ಪರಾರಿಯಾದ ಘಟನೆ ಉಳ್ಳಾಲದ ಧರ್ಮನಗರದಲ್ಲಿ ನಡೆದಿದೆ. ಧರ್ಮನಗರ ನಿವಾಸಿ ಮುಕ್ತಾರ್ ಮುಕ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಈತನ ಮೇಲೆ ಹತ್ತಕ್ಕೂ ಹೆಚ್ಚು ಕೇಸುಗಳಿದ್ದು, ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಉಳ್ಳಾಲ ಪೊಲೀಸರು ಕೋರ್ಟಿನಿಂದ ವಾರಂಟ್ ಪಡೆದು ಇಂದು ಬೆಳಗ್ಗೆ ಬಂಧಿಸಲು

ವಕೀಲನ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ

ಮಂಗಳೂರು: ಇಂಟರ್ನ್‍ಶಿಪ್ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಖ್ಯಾತ ವಕೀಲ ಕೆ .ಎಸ್.ಎನ್.ರಾಜೇಶ್ ಭಟ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಸಂತ್ರಸ್ತ ವಿದ್ಯಾರ್ಥಿನಿಯು ವಕೀಲರ ವಿರುದ್ಧ ನಿನ್ನೆ ರಾತ್ರಿ ನೀಡಿದ ದೂರಿನ ಮೇರೆಗೆ ಮಂಗಳೂರು ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ವಕೀಲ ರಾಜೇಶ್ ಭಟ್ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಎಲ್ ಎಲ್ ಬಿ

ಲಾಡ್ಜ್ ವೊಂದರಲ್ಲಿ ಯುವಕನ ಕೊಲೆ ಪ್ರಕರಣ : ಐವರ ಬಂಧನ

ನಗರದ ಪಂಪ್‌ವೆಲ್‌ನ ಲಾಡ್ಜ್ ಒಂದರಲ್ಲಿ ದಸರಾ ಪಾರ್ಟಿ ಮಾಡುತ್ತಿದ್ದ ವೇಳೆ ಯುವಕರ ನಡುವಿನ ಜಗಳದ ಸಂದರ್ಭ ನಡೆದ ಕೊಲೆ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುರತ್ಕಲ್‌ನ ಜಾಯ್ಸನ್ ಯಾನೆ ಜೇಸನ್ (21), ಜೆಪ್ಪು ಬಪ್ಪಾಲ್‌ನ ಪ್ರಮೀತ್ ಡಿ (24), ವಾಮಂಜೂರಿನ ಕಾರ್ತಿಕ್ (21), ಪಚ್ಚನಾಡಿಯ ಪ್ರಜ್ವಲ್ (22), ದುರ್ಗೇಶ್ (22) ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ