Home ಕರಾವಳಿ Archive by category ಪುತ್ತೂರು (Page 65)

ಉಪ್ಪಳಿಗೆಯಲ್ಲಿ ಮನೆ ತಡೆಗೋಡೆ ಕುಸಿತ-ಲಕ್ಷಾಂತರ ರೂಪಾಯಿ ನಷ್ಟ

ಪುತ್ತೂರು: ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜು.16ರಂದು ಇರ್ದೆ ಗ್ರಾಮದ ಉಪ್ಪಳಿಗೆ ಎಂಬಲ್ಲಿ ಧನಂಜಯರವರ ಮನೆಯ ತಡೆಗೋಡೆ ಕುಸಿದು ಬಿದ್ದಿದೆ. ಮನೆ ಅಂಗಳದ ಬದಿಯಲ್ಲಿ ನಿರ್ಮಿಸಲಾದ ತಡಗೋಡೆಯು ಮುಂಜಾನೆಯ ವೇಳೆಗೆ ಹೂವಿನ ಗಾರ್ಡನ್ ಸಹಿತ ಕುಸಿದು ಬಿದ್ದಿದೆ. ಅಂಗಳದಲ್ಲಿ ಬಿರುಕು ಬಿಟ್ಟಿದ್ದು ಮತ್ತಷ್ಟು ಕುಸಿಯುವ ಅಪಾಯದಲ್ಲಿದೆ. ಘಟನೆಯಿಂದಾಗಿ

ಪುತ್ತೂರಿನ ಬೊಳ್ಳಾನದಲ್ಲಿ ಧರೆ ಕುಸಿತ: ಅಪಾಯದ ಸ್ಥಿತಿಯಲ್ಲಿ 2 ಮನೆಗಳು

ಪುತ್ತೂರು : ಭಾರಿ ಮಳೆಗೆ ಹಲವು ಕಡೆ ಮಣ್ಣು ಸಡಿಲಗೊಂಡು ಧರೆ ಕುಸಿತ ಹೆಚ್ಚಾಗಿದ್ದು ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿನ ಬೊಳ್ಳಾನ ಎಂಬಲ್ಲಿ ಧರೆಯೊಂದು ಕುಸಿತಗೊಂಡು ಎರಡು ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಬೊಳ್ಳಾನದಲ್ಲಿ ಧರೆಯ ಮೇಲ್ಭಾಗದಲ್ಲಿರುವ ಜಯಲಕ್ಷ್ಮೀ ಅವರ ಮನೆಯ ಸಮೀಪದ ಧರೆ ಕುಸಿತ ಗೊಂಡಿದ್ದರಿಂದ ಜಯಲಕ್ಷ್ಮೀ ಮತ್ತು ಕೆಳಭಾಗದಲ್ಲಿರುವ ನವೀನ್ ಎಂಬವರ ಮನೆ ಅಪಾಯದ ಸ್ಥಿತಿಯಲ್ಲಿದೆ. ವಿಷಯ ತಿಳಿದ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಸ್ಥಳೀಯ

ಪುತ್ತೂರು ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಮುಳುಗಡೆ

ಪುತ್ತೂರು : ಪುತ್ತೂರು ಪರ್ಲಡ್ಕ ಪಾಣಾಜೆ ರಸ್ತೆಯ ಚೆಲ್ಯಡ್ಕ ಸೇತುವೆ ಈ ಮಳೆಗಾಲದ ಅವಧಿಯಲ್ಲಿ ಮೊದಲ ಬಾರಿಗೆ ಜು.15 ರಂದು ಮಧ್ಯಾಹ್ನ ವೇಳೆ ಮುಳುಗಡೆಯಾಗಿದೆ. ಬೆಳಿಗ್ಗೆಯಿಂದಲೇ ವಿಪರೀತ ಮಳೆ ಸುರಿಯುತ್ತಿದ್ದ ಕಾರಣ ಮುಳುಗು ಸೇತುವೆಯೆಂದು ಹೆಸರಾದ ಈ ಸೇತುವೆ ಮುಳುಗಡೆಯಾಗಿದ್ದು ಆ ರಸ್ತೆಯಲ್ಲಿ ಚಲಿಸ ಬೇಕಾದ ವಾಹನಗಳಿಗೆ ಅಡಚಣೆ ಉಂಟಾಗಿ ಸಮಸ್ಯೆಯಾಯಿತು.ಸುತ್ತುವರಿದು ಚಲಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಬನ್ನೂರಿನಲ್ಲಿ ಕುಸಿದು ಬೀಳುವ ಹಂತದಲ್ಲಿರುವ ಮನೆ, ನೆರವಿನ ನಿರೀಕ್ಷೆಯಲ್ಲಿ ಬೀರ್ನಹಿತ್ಲುವಿನ ಬಡ ಮಹಿಳೆ

ಕೊರೊನಾ ಪಾಸಿಟೀವ್ ಪ್ರಕರಣಗಳು ರಾಜ್ಯಲ್ಲಿ ಕೊಂಚ ಇಳಿಮುಖವಾಗುತ್ತಿರುವ ನಡುವೆಯೇ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲೂ ಪ್ರಯತ್ನಗಳು ಆರಂಭಗೊಂಡಿದೆ. ಒಂದು ವೇಳೆ ಶಾಲೆ ಪ್ರಾರಂಭವಾದಲ್ಲಿ ತನ್ನ ಮಗುವಿಗೆ ಹೇಗೆ ಶಿಕ್ಷಣ ನೀಡಲಿ ಎನ್ನುವ ತಳಮಳದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಡ ತಾಯಿಯೊಬ್ಬರಿದ್ದಾರೆ. ಈಕೆಯ ಮನೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಕೂಲಿ-ನಾಲಿ ಮಾಡಿ ತನ್ನ ಅನಾರೋಗ್ಯ ಪೀಡಿತ ಮಗುವಿನೊಂದಿಗೆ

ಪುತ್ತೂರಿನಲ್ಲಿ ಮನದಾಳವನ್ನು ಬಿಚ್ಚಿಟ್ಟ ’ಗಿಣಿರಾಮ’ ಖ್ಯಾತಿಯ ರಿತ್ವಿಕ್ ಮಠದ್

ಪುತ್ತೂರು: ತಮ್ಮ ರಗಡ್ ಲುಕ್, ’ಮಾಸ್ತರ ಮಗಳೇ’ ಎಂಬ ಗಡಸು ದನಿಯ ಡೈಲಾಗ್ ನಿಂದಲೇ ಕನ್ನಡಿಗರ ಮನಗೆದ್ದ ’ಗಿಣಿರಾಮ’ ಧಾರವಾಹಿ ಖ್ಯಾತಿಯ ಶಿವರಾಮ್ ಅಲಿಯಾಸ್ ರಿತ್ವಿಕ್ ಮಠದ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದಿದ್ದು, ಕ್ಯಾಮರಾ ಮುಂದೆ ಒಂದಿಷ್ಟು ಮನಬಿಚ್ಚಿ ಮಾತನಾಡಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಆರಾಧ್ಯ ಭಕ್ತರಾಗಿರುವ ರಿತ್ವಿಕ್ ಮಠದ್ ಅವರು ಇದು ನಾಲ್ಕನೇ ಬಾರಿ ಪುತ್ತೂರಿನೊಡೆಯ ಮಹಾಲಿಂಗೇಶ್ವರನ ದರ್ಶನ ಮಾಡಿರೋದಂತೆ. ’ತಮ್ಮ

ಪ್ರವಾಸೋದ್ಯಮಕ್ಕೆ ಪೂರಕವಾಗಿ ರೈಲ್ವೇ ಸೌಲಭ್ಯಗಳು ಮೇಲ್ದರ್ಜೆಗೆ: ಶಾಸಕ ಸಂಜೀವ ಮಠಂದೂರು

ಪುತ್ತೂರು: ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈಲ್ವೇ ಇಲಾಖೆಯು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಪ್ರವಾಸೋದ್ಯಮಕ್ಕೆ ಪೂರಕವಾಗಿ ರೈಲ್ವೇ ಸಂಚಾರ ವ್ಯವಸ್ಥೆಯಲ್ಲಿ ಪ್ರಯಾಣಿಕ ರೈಲುಗಳಿಗೆ ಅತ್ಯಾಧುನಿಕ ಮಾದರಿಯ ಹವಾ ನಿಯಂತ್ರಿಣ ವಿಸ್ಟಾ ಡೋಂ ಬೋಗಿಗಳನ್ನು ಅಳವಡಿಸಲಾಗುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಭಾನುವಾರ ಕಬಕ ಪುತ್ತೂರು ಆದರ್ಶ ರೈಲು ನಿಲ್ದಾಣದಲ್ಲಿ ಎಸ್ಟಾ ಡೋಂ ಬೋಗಿಗಳನ್ನು ಅಳವಡಿಸಿದ

ವಲ್ಡ್ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಆಯ್ಕೆ ಪ್ರಕ್ರಿಯೆ- ಇಬ್ರಾಹಿಂ ಗೋಳಿಕಟ್ಟೆ

ಪುತ್ತೂರು: ಫೆಡರೇಶನ್ ಆಫ್ ಇಂಟರ್‌ನ್ಯಾಶನಲ್ ವಾಲಿಬಾಲ್ ಇವರ ಆಶ್ರಯದಲ್ಲಿ ಆ. 24ರಿಂದ ಸೆ. 2ರವರೆಗೆ ಇರಾನಿನ ತೆಹ್ರಾನ್‌ನಲ್ಲಿ 19 ವರ್ಷ ವಯೋಮಿತಿಯ ಹುಡುಗರ ವರ್ಲ್ಡ್ ವಾಲಿಬಾಲ್ ಚಾಂಪಿಯನ್‌ಶಿಪ್ ನಡೆಯಲಿದೆ. ಇದರಲ್ಲಿ ಭಾಗವಹಿಸುವ ಭಾರತೀಯ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಒಡಿಸ್ಸಾದ ಭುವನೇಶ್ವರದ ಕಿಟ್ಟ್ ಯುನಿವರ್ಸಿಟಿಯಲ್ಲಿ ಜುಲೈ 22 ಮತ್ತು 23ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಅರ್ಹ

ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್:ರೋಗಿಯನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್‌ಗೆ ಅಡ್ಡಿ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕ್ ಮಾಡಿದ ಹಿನ್ನಲೆಯಲ್ಲಿ ತುರ್ತಾಗಿ ಹೋಗುವ ಆಂಬ್ಯುಲೆನ್ಸ್‌ಗೆ ಅಡ್ಡಿಯಾದ ಘಟನೆ ನಡೆದಿದೆ. ಪುತ್ತೂರು ಸರಕಾರಿ ಆಸ್ಪತ್ರೆಯ ಬಳಿ ಒಂದು ಕಡೆ ಕೋವಿಡ್ ಲಸಿಕೆ ನೀಡಿಕೆ ಮತ್ತೊಂದು ಕಡೆ ಉತ್ತಮ ಸೇವೆ ಸಿಗುವ ಹಿನ್ನಲೆಯಲ್ಲಿ ಸರಕಾರಿ ಆಸ್ಪತ್ರೆಗೆ ದಿನದಿಂದ ದಿನಕ್ಕೆ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿದು, ಆಸ್ಪತ್ರೆಗೆ ಬರುವವರು ಆಸ್ಪತ್ರೆಯ ವಠಾರದ ದಾರಿಯಲ್ಲೆ ಅಡ್ಡಾದಿಡ್ಡಿ ವಾಹನ

ಪುತ್ತೂರಿನ ಬಹುಮುಖ ಸಾಧಕ ವಿದ್ವಾನ್ ಮಂಜುನಾಥ್‌ಗೆ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣಪತ್ರ

ಪುತ್ತೂರು: ಸಂಗೀತ, ನೃತ್ಯ, ಬರೆಹ, ಹಾಡುಗಾರಿಕೆ, ಕಥೆ, ಕವನ, ಯಕ್ಷಗಾನ ಹೀಗೆ ಬಹುಮುಖ ಪ್ರತಿಭೆಯಾಗಿರುವ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅವರ ಪ್ರತಿಭೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ದಾಖಲಿಸಿಕೊಂಡಿದೆ. ಭರತನಾಟ್ಯದಲ್ಲಿ ವಿಶಿಷ್ಟ ಆಸಕ್ತಿಯನ್ನು ಹೊಂದಿರುವ ಅವರು 23 ನಿಮಿಷದಲ್ಲಿ 20 ವಿಭಿನ್ನ ತಾಳ ಭರತನಾಟ್ಯದಲ್ಲಿ ಹಲವು ಪರಿಕಲ್ಪನೆಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವ ಮಂಜುನಾಥ ಅವರು ಎರಡು ಕೈಗಳಿಂದ

ಪುತ್ತೂರಿನಲ್ಲಿ ಅಮರ್ ಜವಾನ್ ಜ್ಯೋತಿಗೆ ಹಾನಿ: ದೂರು ದಾಖಲು

ಪುತ್ತೂರು: ಪುತ್ತೂರಿನ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಜ್ಯೋತಿಗೆ ಹಾನಿ ಆಗಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಪುತ್ತೂರಿನ ನಟ್ಟೋಜ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮುಂದಾಳತ್ವದ ಅಂಬಿಕಾ ವಿದ್ಯಾಲಯದ ಆಶ್ರಯದಲ್ಲಿ ಭಾರತೀಯ ವೀರ ಯೋಧರ ಸ್ಮರಣಾರ್ಥ 2017 ರಲ್ಲಿ ಲೋಕಾಪರ್ಣೆಗೊಂಡ ಅಮರ್ ಜವಾನ್ ಜ್ಯೋತಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಅಂಬಿಕಾ ವಿದ್ಯಾಸಂಸ್ಥೆಯ ಮೆನೇಜರ್ ರವೀಂದ್ರರವರು ಸ್ಮಾರಕದ ಶುಚಿತ್ವಕ್ಕೆ