ಮಂಗಳೂರು: ಸ್ಟಾರ್ ಸುವರ್ಣದಲ್ಲಿ “ಸರ್ಕಸ್” ತುಳು ಚಿತ್ರದ ಪ್ರಸಾರ

ತುಳು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಬರೆದ ಸರ್ಕಸ್ ಸಿನಿಮಾ ಸೆಪ್ಟಂಬರ್ 10ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರಗೊಳ್ಳಲಿದೆ.

ಕೋಸ್ಟಲ್‌ವುಡ್‌ನಲ್ಲಿ ಸಿನಿ ಪ್ರೇಕ್ಷಕರನ್ನು ಮೋಡಿ ಮಾಡಿದ ಸಿನಿಮಾ ಎಂದರೆ ಅದು ಸರ್ಕಸ್ ಸಿನಿಮಾ. ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಅಭಿನಯದ ತುಳು ಸಿನಿಮಾವಾಗಿದ್ದು, ಯಶಸ್ವಿಯನ್ನು ಕಂಡಿದೆ. ಇದೀಗ ಅದೇ ಸಿನಿಮಾ ಟೀವಿಯಲ್ಲೂ ಪ್ರಸಾರ ಆಗುತ್ತಿದೆ. ಈ ಚಿತ್ರದ ಹಕ್ಕನ್ನು ಸ್ಟಾರ್ ಸುವರ್ಣ ಚಾನೆಲ್ ಖರೀದಿಸಿದ್ದು,

ಈ ಮೂಲಕ ತುಳು ಭಾಷೆಯ ಚಿತ್ರದ ಹಕ್ಕನ್ನು ಖರೀದಿಸಿದ ಮೊದಲ ಚಾನೆಲ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಸರ್ಕಸ್ ಸಿನಿಮಾ ಕರಾವಳಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಬಿಡುಗಡೆಗೊಂಡು ಹಂಗಾಮಾವನ್ನೇ ಸೃಷ್ಠಿ ಮಾಡಿತ್ತು. ಸೆಪ್ಟಂಬರ್ 10ರ ಭಾನುವಾರ ಸಂಜೆ 6 ಗಂಟೆಗೆ ಸರ್ಕಸ್ ತುಳು ಸಿನಿಮಾವು ಸ್ಟಾರ್ ಸುವರ್ಣದಲ್ಲಿ ಪ್ರಸಾರಗೊಳ್ಳಲಿದೆ.

Related Posts

Leave a Reply

Your email address will not be published.