ಕೋಟಿ ಕೋಟಿ ವೆಚ್ಚದಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾಮಗಾರಿ : ಮಳೆಗೆ ಕೊಚ್ಚಿ ಹೋದ ರಸ್ತೆಯ ಇಂಟರ್ ಲಾಕ್
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಂದಿರುವ ಸಾವಿರಾರು ಕೋಟಿ ರೂ.ಹಣವನ್ನು ಕೇವಲ ರಸ್ತೆ ಅಭಿವ್ರದ್ದಿಗೆ ವಿನಿಯೋಗಿಸಿದರೂ ರಸ್ತೆಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಬಲ್ಮಠದ ಜಿಲ್ಲಾಧಿಕಾರಿಗಳ ನಿವಾಸದ ಪಕ್ಕದಲ್ಲೇ ಎಸ್.ಸಿ.ಎಸ್ ಆಸ್ಪತ್ರೆಯ ಕಡೆಗೆ ಹಾದು ಹೋಗುವ ಮುಖ್ಯ ರಸ್ತೆಯು ಕಳೆದ ಹಲವಾರು ತಿಂಗಳಿನಿಂದ ಶೋಚನೀಯ ಪರಿಸ್ಥಿತಿಯಲ್ಲಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳು ದಿವ್ಯ ಮೌನ ವಹಿಸಿರುವುದು ಶೋಚನೀಯವಾಗಿದೆ. ಮಳೆ ನೀರು ಹೋಗಲು ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಹರಿದಾಡುವ ನೀರಿನಿಂದಾಗಿ ಇಂಟರ್ ಲಾಕ್ ಗಳೇ ಕೊಚ್ಚಿಕೊಂಡು ಹೋಗಿದೆ.