ಹರೇಕಳ : ಆಕಸ್ಮಿಕ ಬೆಂಕಿ ಅವಘಡ, ಮನೆ ಸಂಪೂರ್ಣ ಭಸ್ಮ

ಉಳ್ಳಾಲ : ಹರೇಕಳ ಗ್ರಾಮದ ದೇರಿಕಟ್ಟೆ ನಿವಾಸಿಯಾದ ನೇಬಿಸ (ದಿವಂಗತ ಅಬ್ದುಲ್ ಖಾದರ್) ರ ಮನೆಯಲ್ಲಿ ಇಂದು ಮುಸ್ಸಂಜೆ 6.50ರ ವೇಳೆ ಅಡುಗೆ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ರಭಸಕ್ಕೆ ಮನೆಯು ಸಂಪೂರ್ಣವಾಗಿ ಕರಕಲವಾಗಿದ್ದು, ಯಾವುದೇ ಪ್ರಾಣ ಹಾನಿ ನೋವು ಸಂಭವಿಸಿರುವುದಿಲ್ಲ.

harekala fire news

ರಂಝಾನ್ ಉಪವಾಸದ ಪ್ರಯುಕ್ತ ಇಫ್ತಾರ್’ನಲ್ಲಿ ನಿರತವಾಗಿದ್ದ ಮನೆಯವರ ಸಮಯ ಪ್ರಜ್ಞೆಯಿಂದ ಯಾರಿಗೂ ಪ್ರಾಣ ಹಾನಿಯಾಗಿರುವುದಿಲ್ಲ, ಆದರೆ ಮನೆಯು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಮನೆಯ ಪೀಠೋಪಕರಣಗಳು, ಪಾತ್ರೆಗಳು, ವಿದ್ಯುತ್ ಉಪಕರಣಗಳು, ಗೃಹ ಉಪಯೋಗಿ ಪರಿಕರಗಳು, ಮಕ್ಕಳ ಶಾಲಾ ಪಠ್ಯ ಪುಸ್ತಕ ಇನ್ನಿತರ ವಸ್ತುಗಳು ಸಂಪೂರ್ಣ ಭಸ್ಮಗೊಂಡಿದೆ.

harekala fire news

ಘಟನಾ ಸ್ಥಳದ ಮಾಹಿತಿ ಪಡೆದು ಶಾಸಕ ಯು ಟಿ ಖಾದರ್ ಭೇಟಿ ನೀಡಿದ್ದು, ಅದೇ ರೀತಿ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳಾದ ರೆಹನ ನಝೀರ್, ಅನೀಸ್, ಹನೀಫ್, ರೆಹನ ಮುಹಮ್ಮದ್, ಅಬ್ದುಲ್ ಬಶೀರ್ ಮತ್ತಿತರು ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಮಾತುಗಳನ್ನಾಡಿದರು.

ಸ್ಥಳಕ್ಕೆ ಅಗ್ನಿಶಾಮಕದಳದ ಬೇಟಿ ನೀಡಿ , ಸ್ಥಳೀಯರೊಂದಿಗೆ ಸೇರಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Related Posts

Leave a Reply

Your email address will not be published.