ಹಾವಂಜೆಯಲ್ಲಿ ಹಕ್ಕಿಗಳ ಮಾಹಿತಿ ಫಲಕ ಅನಾವರಣ
ಅಂತರಾಷ್ಟ್ರೀಯ ಜೀವವೈವಿದ್ಯ ದಿನಾಚರಣೆ ಮತ್ತು ಪರಿಸರ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯತಿ ಹಾವಂಜೆ ಇವರ ವತಿಯಿಂದ ಹಾವಂಜೆಯ ಹಕ್ಕಿಗಳ ಮಾಹಿತಿ ಫಲಕ ಅನಾವರಣ ಹಾಗೂ ಪಕ್ಷಿ ಸಂಕುಲಗಳ ವೀಕ್ಷಣೆ ಮತ್ತು ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ಹಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಜರುಗಿತು.
ಉಡುಪಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರಸನ್ನ ಎಚ್ ಹಕ್ಕಿಗಳ ಮಾಹಿತಿ ಫಲಕ ಅನಾವರಣಗೊಳಿಸಿ ಮಾತನಾಡಿ ಪರಿಸರ ಉಳಿಯಲು ಕಾರಣ ಜೀವ ಸಂಕುಲಗಳು.ಜನರು ನೆಟ್ಟ ಗಿಡಗಳಿಗಿಂತ ಹಕ್ಕಿಗಳ ಹಿಕ್ಕೆಯಿಂದ ಬಿದ್ದ ಬೀಜಗಳಿಂದ ಬೆಳೆದ ಹೆಮ್ಮರಗಳಿಂದ ಅನೇಕ ಜೀವ ಸಂಕುಲಗಳು ಉಳಿದು ಪ್ರಕೃತಿಯನ್ನು ಕಾಪಾಡಿದೆ ಎಂದರು.
ಹಾವಂಜೆಯ ಭಾವನಾ ಫೌಂಡೇಶನ್‍ನ ಡಾ , ಜನಾರ್ದನ ಹಾವಂಜೆ ಮತ್ತು ಮಣಿಪಾಲ ಬರ್ಡ್ರ್ಸ್ ಕ್ಲಭ್ ಸದಸ್ಯ ತೇಜಸ್ವಿ ಆಚಾರ್ಯ ಹಾವಂಜೆಯಲ್ಲಿರುವ 150 ಪ್ರಬೇಧದ ಹಕ್ಕಿಗಳ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಗಿಡಮೂಲಿಕೆಯ ನಾಟಿ ವೈದ್ಯರಾದ ಗುಣಪಾಲ ಶೆಟ್ಟಿ , ಸುಮತಿ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಹಾವಂಜೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದಿವ್ಯ ಎಸ್ , ಅಧ್ಯಕ್ಷ ಅಜಿತ್ ಗೋಳಿಕಟ್ಟೆ ,ಉಡುಪಿ ಶಾಸಕ ಯಶ್ಪಾಲ್ ಸುವರ್ಣ ,ಬ್ರಹ್ಮಾವರ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಚ್ ವಿ ಇಬ್ರಾಹಿಂಪುರ .ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್ ,ವಲಯ ಅರಣ್ಯಾಧಿಕಾರಿ ಅನುಷ ಭಟ್ ,ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸುಜಾತಾ ಶೆಟ್ಟಿ ಉಪಸ್ಥಿತರಿದ್ದರು.